ಮರಾಟಿ ಸಮಾಜ ಸೇವಾ ಸಂಘ ಬೆಳ್ಳಿ ಹಬ್ಬ ಆಚರಣೆ


Team Udayavani, Mar 26, 2018, 5:22 PM IST

26-March-19.jpg

ಸುಳ್ಯ: ಆಯಾ ಸಮುದಾಯದ ಜನರು ಸ್ವ ಜಾತಿಗೆ ಸೀಮಿತಗೊಳ್ಳದೆ, ಒಟ್ಟು ಸಮಾಜದ ವ್ಯಕ್ತಿಯಾಗಿ ರೂಪುಗೊಳ್ಳುವ ಆವಶ್ಯಕತೆ ಇದೆ ಎಂದು ಶಾಸಕ ಎಸ್‌. ಅಂಗಾರ ಅಭಿಪ್ರಾಯಪಟ್ಟರು.

ಸುಳ್ಯ ಮರಾಟಿ ಸಮಾಜ ಸೇವಾ ಸಂಘದ 25ನೇ ವರ್ಷಾಚರಣೆ ಪ್ರಯುಕ್ತ ರವಿವಾರ ನಗರದ ಅಂಬೆಟೆಡ್ಕ ಮರಾಟಿ ಸಮಾಜ ಸೇವಾ ಮಂದಿರದಲ್ಲಿ ನಡೆದ ಬೆಳ್ಳಿ ಹಬ್ಬ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿಯಲ್ಲಿ ಸಂಸ್ಕೃತಿ, ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜಾತಿಯೊಳಗೆ ಕಳೆದು ಹೋಗದೆ, ಇಡೀ ಸಮಾಜ ಗುರುತಿಸುವಂತಹ ಕೆಲಸ ಮಾಡಬೇಕು. ಆ ಮೂಲಕ ವ್ಯಕ್ತಿಗತವಾಗಿಯೂ ಗಟ್ಟಿಗೊಳ್ಳಬೇಕು ಎಂದು ನುಡಿದರು.

ಅಧಿಕಾರ, ಆಸ್ತಿಯಿಂದ ಅಂತಸ್ತು ಅಳೆಯಲು ಸಾಧ್ಯವಿಲ್ಲ. ಅದರ ಬದಲಾಗಿ ಸಮಾಜಮುಖೀ ಚಿಂತನೆ, ನೆರವಿನ ಗುಣ
ಗಳನ್ನು ರೂಢಿಸಿಕೊಂಡು ಪರೋಪಕಾರಿಯಾಗಿ ಬಾಳಬೇಕು. ಸ್ವಾವಲಂಬಿ, ಸ್ವಾಭಿಮಾನಿಗಳಾಗಿ ಜೀವನ ಸಾಗಿಸಬೇಕು ಎಂದರು.

ಕರ್ನಾಟಕ ಮರಾಟಿ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಮತಿ ಟಿ. ಮಾತನಾಡಿ, ಹಿಂದುಳಿದ ಸಮಾಜ ಬಲಿಷ್ಠ
ಗೊಳ್ಳಲು ನಾವು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು. ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಜಿ. ದೇವಪ್ಪ ನಾಯ್ಕ ಮಾತನಾಡಿ, ಸಂಘಟನೆಯ ಮೇಲೆ ಅನುಮಾನ ಪ್ರವೃತ್ತಿ ಬೇಡ. ಅಭಿಮಾನ ಹೊಂದಿ ಎಂದರು.

ಜಿಲ್ಲಾ ಮರಾಟಿ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ ಈಶ್ವರ್‌ ನಾಯ್ಕ ಮುಂಡೋವುಮೂಲೆ ಮಾತನಾಡಿ, ಒಕ್ಕೂಟ ವ್ಯವಸ್ಥೆಯ ಮೂಲಕ ಮರಾಟಿ ಸಂಘಟನೆಗಳು ಬಲಾಡ್ಯಗೊಳ್ಳಬೇಕು. ಕೇರಳದಲ್ಲಿರುವಂತಹ ಬಲಿಷ್ಠ ಸಂಘಟನ ಶಕ್ತಿ ನಮ್ಮಲ್ಲೂ ಆಗಬೇಕು. ಅದಕ್ಕೆ ಬೇಕಾದಂತಹ ನಿಯಮ ರೂಪಿಸುವ ಅಗತ್ಯವಿದೆ ಎಂದರು.

ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಯು.ಕೆ. ನಾಯ್ಕ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಮರಾಟಿ ಸಮಾಜ ಎಲ್ಲ ರಂಗಗಳಲ್ಲಿ ಸಾಧನೆ ತೋರಬೇಕು. ಪ್ರತಿ ಮನೆಯಲ್ಲಿ ಹೆತ್ತವರು ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು. ನಮ್ಮ ಸಮಾಜ, ನಮ್ಮ ಸಂಘ ಎಂಬ ಭಾವನೆ ಎಲ್ಲರಲ್ಲೂ ಇರಬೇಕು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಮರಾಟಿ ಸಮಾಜ ಸೇವಾ ಸಂಘದ ಬೆಳ್ಳಿಹಬ್ಬ ಆಚರಣ ಸಮಿತಿ ಅಧ್ಯಕ್ಷ ಎ.ಕೆ. ನಾಯ್ಕ ಮಾತನಾಡಿ, ಸುಂದರ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲ ಹಂತದಲ್ಲಿಯೂ ಬೆಂಬಲ ನೀಡಿದವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

ಸಂಘಕ್ಕೆ ಸಹಕಾರ ನೀಡಿದ ಶಾಸಕ ಎಸ್‌. ಅಂಗಾರ, ರಾಜ್ಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ|
ಕೆ. ಸುಂದರ ನಾಯ್ಕ, ಸ್ವಾವಲಂಬಿ ಬದುಕು ಸಾಗಿಸಿದ ಐತ್ತಪ್ಪ ನಾಯ್ಕ ಕಜೆ, ಚೊಕ್ಕಾಡಿ ಅವರನ್ನು ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ನ.ಪಂ. ಸದಸ್ಯೆ ಮೀನಾಕ್ಷಿ ಭಸ್ಮಡ್ಕ, ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸೀತಾನಂದ
ಬೇರ್ಪಡ್ಕ, ಬೆಳ್ಳಿಹಬ್ಬ ಆಚರಇ ಸಮಿತಿ ಕಾರ್ಯಾಧ್ಯಕ್ಷ ದಾಮೋದರ ಮಂಚಿ, ಮಹಿಳಾ ವೇದಿಕೆ ಉಪಾಧ್ಯಕ್ಷೆ ಕುಸುಮಾ ಜನಾರ್ದನ, ಮರಾಟಿ ಸಂಘದ ಪೆರುವಾಜೆ ಗ್ರಾಮ ಸಮಿತಿ ಅಧ್ಯಕ್ಷ ಕೃಷ್ಣಪ್ಪ ನಾಯ್ಕ ದೇವುಮೂಲೆ, ಬಾಳಿಲ ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ಚಾಕೋಟೆತಡ್ಕ, ಉಬರಡ್ಕ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ ಉಪಸ್ಥಿತರಿದ್ದರು. 

ರಾಜ್ಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ. ಸುಂದರ ನಾಯ್ಕ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮರಾಟಿ ಸಮಾಜ ಸೇವಾ ಸಂಘ ಯುವ ವೇದಿಕೆ ಅಧ್ಯಕ್ಷ ಭವಾನಿಶಂಕರ ಕಲ್ಮಡ್ಕ ವಂದಿಸಿದರು. ಕೃಷ್ಣರಾಜ್‌ ಕೇರ್ಪಳ, ದಯಾನಂದ ಪತ್ತುಕುಂಜ, ಈಶ್ವರ್‌ ವಾರಣಾಸಿ ನಿರೂಪಿಸಿದರು.

ವಿಚಾರಗೋಷ್ಠಿ
ಸಭಾ ಕಾರ್ಯಕ್ರಮದ ಅನಂತರ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ರಂಗಗಳಲ್ಲಿ ಮರಾಟಿ ಜನಾಂಗದವರ ಪಾತ್ರ ಕುರಿತು ಕೃಷಿ ಇಲಾಖೆಯ ನಿವೃತ್ತ ನಿರ್ದೇಶಕ ಡಾ| ಬಿ.ಜಿ ನಾಯ್ಕ, ಶ್ರೀ ಮಹಮ್ಮಾಯಿ ಗೋಂದೋಳು ಪೂಜೆ ಆಚರಣೆ ಕುರಿತು ಕಾಸರಗೋಡು ಮರಾಟಿ ಯೂತ್‌ ಜನರೇಶನ್‌ ಕ್ಲಬ್‌ ಸ್ಥಾಪಕಾಧ್ಯಕ್ಷ ಟಿ.ಸುಬ್ರಾಯ ನಾಯ್ಕ ಅವರು ವಿಚಾರ ಮಂಡಿಸಿದರು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಟಾಪ್ ನ್ಯೂಸ್

14-sky

Subramanya: ಕುಕ್ಕೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

Hospital: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

13-thirthahalli

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿ ಬಿಟ್ಟು ವ್ಯಕ್ತಿ ನದಿಗೆ; ಶಂಕೆ

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

12

Udupi: ವಿಸಿಲ್‌ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್‌ ನಿರ್ವಹಣೆ!

15-uv-fusion

Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ

11

Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!

Bangalore Premier League: ಡಿಸೆಂಬರ್‌ 12ರಿಂದ ಬಿಪಿಎಲ್‌ ಟೂರ್ನಿ

Bengaluru Premier League: ಡಿಸೆಂಬರ್‌ 12ರಿಂದ ಬಿಪಿಎಲ್‌ ಟೂರ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.