ಈಗ ಸ್ಮಾರ್ಟ್‌ ಆಗುವುದು ಟಿವಿ ಸರದಿ!


Team Udayavani, Mar 26, 2018, 12:47 PM IST

Smart-TV-26-3.jpg

ಸ್ಮಾರ್ಟ್‌ ಟಿವಿ ಚಾಲ್ತಿಗೆ ಬರುತ್ತಿರುವ ಈ ಸಮಯ ಒಂದು ರೀತಿಯ ಸಂಕ್ರಮಣ ಕಾಲ. ಕಳೆದ ಒಂದೆರಡು ವರ್ಷಕ್ಕೆ ಹೋಲಿಸಿದರೆ ಈಗ ಬ್ರಾಡ್‌ಬ್ಯಾಂಡ್‌ ಹಾಗೂ ಮೊಬೈಲ್‌ ಡೇಟಾ ದರ ಇಳಿಯುತ್ತಿದ್ದಂತೆ ಮನರಂಜನೆಯ ವಿಧಾನ ಬದಲಾಗಿದೆ. ಟಿವಿಯಲ್ಲಿ ಪ್ರಸಾರವಾಗುವ ಅಳುಮುಂಜಿ ಧಾರಾವಾಹಿಗಳ ಬದಲಿಗೆ, ಜನರಿಗೆ ಮೊಬೈಲ್‌ನಲ್ಲೇ ಸಿಗುವ ವೈವಿಧ್ಯಮಯ ವೀಡಿಯೋ ನೋಡುವುದು ಮಜವಾಗಿ ಕಂಡಿದೆ.

ಟಿವಿ ಸ್ಪೀಕರ್‌ನಿಂದ ಹೊರಡುವ ಧ್ವನಿಯನ್ನಷ್ಟೇ ಕೇಳಿಸಿಕೊಂಡು ಟಿವಿ ಎದುರು ಕುಳಿತುಕೊಳ್ಳುವ ಕಾಲ ಈಗ ಮುಗೀತು. ಕೈಯಲ್ಲೊಂದು ರಿಮೋಟ್‌ ಹಿಡ್ಕೊಂಡು ನಾವು ಮಾತಾಡೋದು, ಅದನ್ನ ಟಿವಿ ಕೇಳಿಸ್ಕೊಂಡು ಸ್ಕ್ರೀನ್‌ ಮೇಲೆ ತೋರಿಸೋ ಕಾಲ ಇದು. ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ದೊಡ್ಡದಾಗಲೀ, ಸಣ್ಣದಾಗಲೀ ಟಿವಿ ನೋಡುವ ಹುಚ್ಚಿಗೆ ಇನ್ನೂ ಚ್ಯುತಿ ಬಂದಿಲ್ಲ. ಆದರೆ ಟಿವಿ ವೀಕ್ಷಣೆಯ ವಿಧಾನ ಬದಲಾಗಿದೆ. ಈ ಹಿಂದೆ ಟಿವಿಯಲ್ಲಿ ತೋರಿಸಿದ್ದಷ್ಟನ್ನೇ ನಾವು ನೋಡುತ್ತಿದ್ದೆವು. ಆದರೆ ಈಗ ಟಿವಿ ನಾವು ಹೇಳಿದ್ದನ್ನು ತೋರಿಸಬೇಕು ಅಂತ ಬಯಸುತ್ತಿದ್ದೇವೆ. ದೇಶದಲ್ಲಿ ಸುಮಾರು 900ಕ್ಕೂ ಹೆಚ್ಚು ಟಿವಿ ಚಾನೆಲ್‌ ಗ‌ಳಿವೆ. ಆದರೆ ಅದರಲ್ಲಿ ಬರುತ್ತಿರುವ ಕಂಟೆಂಟ್‌ ಹುಡುಕೋ ಸಮಸ್ಯೆಯ ಜತೆಗೆ ನಮಗೆ ಏನು ಬೇಕೋ ಅದನ್ನು ಅವು ಪ್ರಸಾರ ಮಾಡುತ್ತಿರುವುದಿಲ್ಲ. ನಮಗೆ ಬೇಕಾದ್ದನ್ನು ಪ್ರಸಾರ ಮಾಡುವ ಸಮಯಕ್ಕೆ ನಾವು ಟಿವಿ ಮುಂದೆ ಇರುವುದಿಲ್ಲ. ಹೀಗಾಗಿ ನಮಗೆ ಬೇಕಾದ ಸಮಯಕ್ಕೆ ನಾವೇ ಪ್ಲೇ ಮಾಡಿಕೊಂಡು ನೋಡಬಹುದಾದ ಕಂಟೆಂಟ್‌ ನಮಗೆ ಬೇಕು. ಅಂದರೆ ನಮಗೆ ಕಸ್ಟಮೈಸ್‌ ಆದ ಕಂಟೆಂಟ್‌ ಬೇಕಿದೆ. ಇಂಥದ್ದೊಂದು ಟ್ರೆಂಡ್‌ ಈಗ ಸೃಷ್ಟಿಯಾಗಿದೆ. ಇದಕ್ಕೆ ಸ್ಮಾರ್ಟ್‌ ಫೋನ್‌ ಗಳೇ ಸ್ಪೂರ್ತಿ. ಅಲ್ಲಿ ಯೂಟ್ಯೂಬ್‌ ಇದೆ, ಅದೇ ಥರದ ಸಾವಿರಾರು ಕಂಟೆಂಟ್‌ ನೀಡುವ ಅಪ್ಲಿಕೇಶನ್‌ ಗಳಿವೆ. ಆದರೆ ನಮ್ಮ ಮನೆಯೊಳಗಿರುವ ಟಿವಿಗಳು ಇನ್ನೂ ಸ್ಮಾರ್ಟ್‌ ಆಗಿರಲಿಲ್ಲ. ಅವುಗಳಿಗೆ ಸೆಟಲೈಟ್‌ ಕನೆಕ್ಷನ್‌ ಇತ್ತಾದರೂ, ಡೇಟಾ ಕನೆಕ್ಷನ್‌ ಇರಲಿಲ್ಲ.

ಈಗ ಟಿವಿಗಳು ಸ್ಮಾರ್ಟ್‌ ಆಗುತ್ತಿವೆ. ಇಂಟರ್ನೆಟ್‌ ವೇಗ ಹೆಚ್ಚಿದೆ. ಟಿವಿಗಳೂ ವೈಫೈ ಸಿಗ್ನಲ್‌ಗೆ ಕನೆಕ್ಟ್ ಆಗುತ್ತವೆ. ಕಳೆದ ಒಂದು ತಿಂಗಳಲ್ಲೇ ಭಾರತದಲ್ಲಿ ಕನಿಷ್ಠ ಮೂರು ಕಂಪನಿಗಳು ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿವೆ. ಚೀನಾ ಮೂಲದ ಶಿಯೋಮಿ, ಅಮೆರಿಕ ಮೂಲದವು ಹಾಗೂ ಕೊಡಾಕ್‌ ಕಂಪನಿಗಳು ಸ್ಮಾರ್ಟ್‌ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಈ ಎಲ್ಲ ಟಿವಿಗಳ ಸ್ಪೆಸಿಫಿಕೇಶನ್‌ಗಳಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ. ಥೇಟ್‌ ಸ್ಮಾರ್ಟ್‌ಫೋನ್‌ನಂತೆಯೇ ಕೆಲಸ ಮಾಡುತ್ತವೆ. ಟಿವಿಯಲ್ಲಿ ಟೈಪ್‌ ಮಾಡುವ ಅನನುಕೂಲ ತಪ್ಪಿಸುವುದಕ್ಕೆಂದೇ ಇವುಗಳಲ್ಲಿ ವಾಯ್ಸ್ ಕಂಟ್ರೋಲ್‌ ವ್ಯವಸ್ಥೆ ಇದೆ. ಈ ಸ್ಮಾರ್ಟ್‌ ಟಿವಿಗಳ ರಿಮೋಟ್‌ನಲ್ಲಿರುವ ವಾಯ್ಸ್ ಬಟನ್‌ ಒತ್ತಿ ನೀವು ಮಾತನಾಡಿದರೆ ಸಾಕು. ಯೂಟ್ಯೂಬ್‌ನಲ್ಲಿರುವ ವೀಡಿಯೋವನ್ನು ಸ್ಕ್ರೀನ್‌ ಮೇಲೆ ತೋರಿಸುತ್ತದೆ. ಬರಿ ಯೂಟ್ಯೂಬ್‌ ಮಾತ್ರವಲ್ಲ, ಟಿವಿಯಲ್ಲಿ ಇನ್‌ಸ್ಟಾಲ್‌ ಆಗಿರುವ ಅಪ್ಲಿಕೇಶನ್‌ಗಳ ಪೈಕಿ ಯಾವ ಅಪ್ಲಿಕೇಶನ್‌ ವಾಯ್ಸ್ ಸಪೋರ್ಟ್‌ ಮಾಡುತ್ತವೋ ಅವೆಲ್ಲವುಗಳಲ್ಲಿ ನಿಮಗೆ ಬೇಕಾದ್ದನ್ನು ತೆರೆದಿಡುತ್ತದೆ. ಅದನ್ನು ನೀವು ಸೆಲೆಕ್ಟ್ ಮಾಡಿ ಪ್ಲೇ ಮಾಡಿದರೆ ಆಯಿತು. ಗೂಗಲ್‌ನ ವಾಯ್ಸ್ ಸಪೋರ್ಟ್‌ ಶೇ.99ರಷ್ಟು ನಿಖರವಾಗಿ ನಮ್ಮ ಮಾತುಗಳನ್ನು ಪಠ್ಯಕ್ಕಿಳಿಸಲಿದೆ. ಅಂದಹಾಗೆ, ಗೂಗಲ್‌ ವಾಯ್ಸ್ ಸಪೋರ್ಟ್‌ನಲ್ಲಿ ಇಂಗ್ಲೀಷ್‌ ಮಾತ್ರವಲ್ಲ, ಕನ್ನಡದಲ್ಲೂ ಮಾತನಾಡಿ ಸರ್ಚ್‌ ಮಾಡಬಹುದು.

ಮಾರ್ಚ್‌ 16ರಂದು ಶಿಯೋಮಿ ತನ್ನ ಎಂಐ ಬ್ರಾಂಡ್‌ನ‌ಲ್ಲಿ ಟಿವಿ 4ಎ ಬಿಡುಗಡೆ ಮಾಡುತ್ತಿದ್ದಂತೆಯೇ ಸ್ಮಾರ್ಟ್‌ ಟಿವಿ ಮಾರುಕಟ್ಟೆಗೆ ಎಲ್ಲಿಲ್ಲದ ಹುರುಪು ಬಂದಂತಿದೆ. ಅದಕ್ಕೂ ಮೊದಲೇ ವರ್ಷಗಳಿಂದಲೂ ಭಾರತದ್ದೇ ಕಂಪನಿ ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ ಟಿವಿ ಮಾರುಕಟ್ಟೆಗೆ ಕಾಲಿಟ್ಟಿತ್ತು. ಅಷ್ಟೇ ಅಲ್ಲ, ವು (Vu) ಕೂಡ ಸ್ಮಾರ್ಟ್‌ ಟಿವಿ ಮಾಡೆಲ್‌ ಬಿಡುಗಡೆ ಮಾಡಿತ್ತು. ಅವು ಯಾಕೋ ಜನರಿಗೆ ಅಷ್ಟೇನೂ ರುಚಿಸಿರಲಿಲ್ಲ. ಶಿಯೋಮಿಯ ಟಿವಿ4ಎ ಸದ್ಯ ಮೂರು ವಿಧದಲ್ಲಿ ಲಭ್ಯವಿದೆ. 55 ಇಂಚು, 43 ಇಂಚು ಹಾಗೂ 32 ಇಂಚುಗಳ ಟಿವಿ ಈಗ ಮಾರುಕಟ್ಟೆಯಲ್ಲಿದೆ. ಇನ್ನು ವು ಕೂಡ 43 ಇಂಚು, 49 ಇಂಚು ಮತ್ತು 55 ಇಂಚು ಟಿವಿಗಳನ್ನು ಮಾರಾಟ ಮಾಡುತ್ತಿದೆ, ಆಂಡ್ರಾಯ್ಡ್ ಫೋನ್‌ಗಳಲ್ಲಿರುವಂತೆಯೇ ಇವುಗಳಲ್ಲಿ ಪ್ರೋಸೆಸರ್‌ಗಳು, RAM ಹಾಗೂ ಸ್ಟೊರೇಜ್‌ ಇವೆ. 32 ಇಂಚಿನ ಶಿಯೋಮಿ ಸ್ಮಾರ್ಟ್‌ ಟಿವಿ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದರೆ, 43 ಇಂಚಿನ ಎಂಐಟಿವಿ 4ಎ ಫ‌ುಲ್‌ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಇದರಲ್ಲಿ 1.5 ಗಿಗಾಹರ್ಟ್ಸ್ ಕ್ವಾಡ್‌ ಕೋರ್‌ ಪ್ರೋಸೆಸರ್‌ ಇವೆ. 1 ಜಿಬಿ ರ್ಯಾಮ್‌ ಮತ್ತು 8 ಜಿಬಿ ಸ್ಟೊರೇಜ್‌ ಇವೆ. ವೈಫೈ ಹಾಗೂ ಬ್ಲೂಟೂತ್‌ ಸಂಪರ್ಕ ಸೌಲಭ್ಯವಿದ್ದರೆ, ಇದು ಡಿಟಿಎಸ್‌ ಆಡಿಯೋವನ್ನು ಸಪೋರ್ಟ್‌ ಮಾಡುತ್ತದೆ.

ಇನ್ನು ‘ವು’ ಕೂಡ ಬಹುತೇಕ ಇದೇ ಸ್ಪೆಸಿಫಿಕೇಶನ್‌ ಹೊಂದಿದ್ದು, ಉನ್ನತ ಗುಣಮಟ್ಟ ಐಪಿಎಸ್‌ ಪ್ಯಾನೆಲ್‌ ಹೊಂದಿದೆ. ಶಿಯೋಮಿ ಸ್ಮಾರ್ಟ್‌ ಟಿವಿಗಳು ಎಸ್‌-ವಿಎ ಪ್ಯಾನೆಲ್‌ ಹೊಂದಿದೆ. ಆದರೆ “ವು’ ಸ್ಮಾರ್ಟ್‌ ಟಿವಿಗಳ ಬೆಲೆ ಹೆಚ್ಚಿದೆ. ಹೀಗಾಗಿ, ನಿಜವಾದ ಸ್ಮಾರ್ಟ್‌ ಟಿವಿ ಅನುಭವ ಯಾವ ಟಿವಿಯಲ್ಲಾದರೂ ಸಿಕ್ಕೇ ಸಿಗುತ್ತದೆ. ಸದ್ಯಕ್ಕೆ ಭಾರತದ ಸ್ಮಾರ್ಟ್‌ ಟಿವಿ ಮಾರುಕಟ್ಟೆಯಲ್ಲಿ ವು ಮತ್ತು ಶಿಯೋಮಿ ನೇರವಾಗಿ ಹಣಾಹಣಿಗೆ ಇಳಿದಿದ್ದರೆ, ಕೊಡಾಕ್‌ ಹಾಗೂ ಮೈಕ್ರೊಮಾಕ್ಸ್‌ ಸೇರಿದಂತೆ ಇತರ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ರೇಸ್‌ನಲ್ಲಿರಿಸಿವೆ.

ಈ ಸ್ಮಾರ್ಟ್‌ ಟಿವಿಗಳು ಮಾರುಕಟ್ಟೆಯಲ್ಲಿ ಜನಪ್ರಿಯವಾಗುವುದಕ್ಕೂ ಮೊದಲು ಸ್ಟ್ರೀಮಿಂಗ್‌ ಸಾಧನಗಳು ಮಿಂಚುತ್ತಿದ್ದವು. ಈಗ ಒಂದೆರಡು ವರ್ಷಗಳಿಂದ ಎಲ್ಲ ಸ್ಟ್ರೀಮಿಂಗ್‌ ಸಾಧನಗಳೂ ಮಂಕಾಗಿವೆ. ಆಪಲ್‌ ಹಾಗೂ ರೊಕು ಸ್ಟ್ರೀಮಿಂಗ್‌ ಸಾಧನಗಳು ಈಗ ಸ್ಮಾರ್ಟ್‌ ಟಿವಿಗಳು ಯಾವ್ಯಾವ ಕೆಲಸ ಮಾಡುತ್ತಿವೆಯೋ ಅವೆಲ್ಲವನ್ನೂ ಮಾಡುತ್ತಿದ್ದವು. ಗೂಗಲ್‌ನ ಕ್ರೋಮ್‌ಕಾಸ್ಟ್‌ ಕಡಿಮೆ ಬೆಲೆಯದ್ದಾಗಿದ್ದರೆ, ಶಿಯೋಮಿ ಕೂಡ ಎಂಐ ಬಾಕ್ಸ್‌ ಎಂಬ ಸ್ಟ್ರೀಮಿಂಗ್‌ ಸಾಧನವನ್ನು ಮಾರಾಟ ಮಾಡುತ್ತಿದೆ. ಆದರೆ ಯಾವಾಗ ಟಿವಿ ಕಂಪನಿಗಳು ಸ್ಮಾರ್ಟ್‌ ಟಿವಿಯತ್ತ ಸಾಗಿದವೋ ಆಗ, ಈ ಸ್ಟ್ರೀಮಿಂಗ್‌ ಡಿವೈಸ್‌ಗಳು ವೈಫೈ ಬಟನ್‌ ಆಫ್ ಮಾಡಿ ಕೂತಿವೆ. ಆಸಕ್ತಿಕರ ಸಂಗತಿಯೆಂದರೆ ಎಲೆಕ್ಟ್ರಾನಿಕ್‌ ಉದ್ಯಮದಲ್ಲಿ ಹಲವು ಸಾಧನಗಳು ತಂತ್ರಜ್ಞಾನ ಬದಲಾಗುತ್ತಿದ್ದಂತೆ ಹಾಗೂ ಜನರ ಬೇಡಿಕೆಗಳು ಬದಲಾಗುತ್ತಿದ್ದಂತೆ ಜಂಕ್‌ ಆಗುತ್ತವೆ. ಕೆಲವು ಜನಪ್ರಿಯತೆಯ ಉತ್ತುಂಗಕ್ಕೇರಿ ಕಣ್ಮರೆಯಾದರೆ ಕೆಲವು ಇನ್ನೇನು ಜನಪ್ರಿಯತೆಯ ಹಾದಿಯಲ್ಲಿದ್ದಾಗಲೇ ಮರೆಯಾಗುತ್ತವೆ. ಇವುಗಳ ಸಾಲಿಗೆ ಈಗ ಸ್ಟ್ರೀಮಿಂಗ್‌ ಡಿವೈಸ್‌ಗಳು ಸೇರಿದಂತಾಗಿವೆ.

ಸ್ಮಾರ್ಟ್‌ ಟಿವಿ ಚಾಲ್ತಿಗೆ ಬರುತ್ತಿರುವ ಈ ಸಮಯ ಒಂದು ರೀತಿಯ ಸಂಕ್ರಮಣ ಕಾಲ. ಕಳೆದ ಒಂದೆರಡು ವರ್ಷಕ್ಕೆ ಹೋಲಿಸಿದರೆ ಈಗ ಬ್ರಾಡ್‌ಬ್ಯಾಂಡ್‌ ಹಾಗೂ ಮೊಬೈಲ್‌ ಡೇಟಾ ದರ ವಿಪರೀತ ಇಳಿದಿದೆ. ಹಾಗೆ ಡೇಟಾ ದರ ಇಳಿಯುತ್ತಿದ್ದಂತೆ ಮನರಂಜನೆಯ ವಿಧಾನ ಬದಲಾಗಿದೆ. ಟಿವಿಯಲ್ಲಿ ಪ್ರಸಾರವಾಗುವ ಅದೇ ಹಳೆಯ ಅಳುಮುಂಜಿ ಧಾರಾವಾಹಿಗಳ ಬದಲಿಗೆ, ಜನರಿಗೆ ಮೊಬೈಲ್‌ನಲ್ಲೇ ಸಿಗುವ ವೈವಿಧ್ಯಮಯ ವೀಡಿಯೋ ನೋಡುವುದು ಮಜವಾಗಿ ಕಂಡಿದೆ. ಇದನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಲು ಸರಿಯಾದ ಸಮಯಕ್ಕೆ ಕಂಟೆಂಟ್‌ ಆಪ್‌ಗ್ಳು ಶುರುವಾಗಿವೆ. ಈಗಂತೂ, ವಿವಿಧ ರೀತಿಯ ಕಂಟೆಂಟ್‌ ಒದಗಿಸುವ ಜನಪ್ರಿಯ ಅಪ್ಲಿಕೇಶನ್‌ಗಳು ಆ್ಯಪ್‌ ಸ್ಟೋರ್‌ ನಲ್ಲಿ ಸಿಗುತ್ತವೆ. ಈ ಪೈಕಿ ಮುಂಚೂಣಿಯಲ್ಲಿ ಹಾಟ್‌ಸ್ಟಾರ್‌, ಜಿಯೋ ಸಿನೆಮಾ, ವೂಟ್‌, ಹಾಗೂ ಅಮೇಜಾನ್‌ ಪ್ರೈಮ್‌ ವೀಡಿಯೋಗಳಿದ್ದರೆ, ಅಮೆರಿಕದ ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಕೊಂಚ ಜೇಬು ಗಟ್ಟಿಯಿದ್ದವರ ಅಪ್ಲಿಕೇಶನ್‌ ಆಗಿದೆ. ಈ ಪೈಕಿ ಕೆಲವು ಫ್ರೀಯಾಗಿದ್ದರೆ, ಇನ್ನು ಕೆಲವು ಮಾಸಿಕ, ವಾರ್ಷಿಕ ಚಂದಾದಾರಿಕೆ ಆಧರಿಸಿದ ಅಪ್ಲಿಕೇಶನ್‌ಗಳಾಗಿವೆ.
ಕೆಲವು ವರ್ಷಗಳ ಹಿಂದೆ ಕಂಟೆಂಟ್‌ ಅಪ್ಲಿಕೇಶನ್‌ಗಳು ಭಾರತದಲ್ಲಿ ಮೊದಲ ಹೆಜ್ಜೆಯಿಡುತ್ತಿದ್ದಾಗ, ಅಮೆರಿಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ನೆಟ್‌ಫ್ಲಿಕ್ಸ್‌ ಭಾರತಕ್ಕೆ ಕಾಲಿಟ್ಟಿತ್ತು. ಆಗಿನ್ನೂ ಒಂದು ಜಿಬಿ ಡೇಟಾಗೆ 250 ರೂ.ಗಿಂತ ಕಡಿಮೆ ಇರಲಿಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಒಂದು ಸಿನಿಮಾ ನೋಡಿದರೆ ಒಂದು ಜಿಬಿ ಡೇಟಾ ಖಾಲಿಯಾಗುತ್ತಿತ್ತು. 

ಮಾಸಿಕ ಕನಿಷ್ಠ 500 ರೂ. ಕೊಟ್ಟು ಸಬ್‌ಸ್ಕ್ರಿಪ್ಷನ್‌ ಪಡೆದು, 250 ರೂ. ಕೊಟ್ಟು ಒಂದು ಸಿನಿಮಾ ನೋಡುವವನು ಭಾರಿ ಕಾಸಿದ್ದವನೇ ಇರಬೇಕು ಎಂದು ಯೋಚಿಸಿದ್ದೆವು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇದೇ 250-300 ರೂ.ಗೆ ತಿಂಗಳಿಗೆ ಕನಿಷ್ಠ 28 ಜಿಬಿ ಡೇಟಾ ಸಿಗುತ್ತದೆ. ಇದರಲ್ಲಿ ದಿನಕ್ಕೆ ಕನಿಷ್ಠ 2-3 ತಾಸು ವೀಡಿಯೋ ನೋಡಬಹುದು. ಮೊಬೈಲ್‌ನಂಥ ಸಣ್ಣ ಸ್ಕ್ರೀನ್‌ನಲ್ಲಿ ಬಾಹುಬಲಿಯಂಥ ಸಿನಿಮಾ ನೋಡುವುದು ಕೆಲವರಿಗೆ ಮನರಂಜನೆ ಕೊಡದಿರಬಹುದು. ಇಂಥ ವೇಳೆಯೇ ಮಾರುಕಟ್ಟೆಗೆ ಸ್ಮಾರ್ಟ್‌ ಟಿವಿಗಳು ಬಂದಿವೆ. ಅಷ್ಟಕ್ಕೂ ಈಗ ಹೊಸದಾಗಿ ಟಿವಿ ಖರೀದಿ ಮಾಡುವವರಿಗೆ ಎಲ್‌ಇಡಿ ಟಿವಿಗಳಿಗೂ ಸ್ಮಾರ್ಟ್‌ ಟಿವಿಗಳಿಗೂ ಬೆಲೆಯಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ.

— ಕೃಷ್ಣ ಭಟ್‌

ಟಾಪ್ ನ್ಯೂಸ್

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.