ಕ್ಷೇತ್ರದ ಅಭಿವೃದ್ಧಿಗಾಗಿ ಸ್ಪರ್ಧೆ
Team Udayavani, Mar 27, 2018, 6:55 AM IST
ಸ್ಪರ್ಧೆ ಏಕೆ ?
ಕಳೆದ 40 ವರ್ಷಗಳಿಂದ ಕುಂದಾಪುರ ಒಂದೇ ಕುಟುಂಬದ ವರ ಆಡಳಿತದಲ್ಲಿದೆ. ಕಳೆದ 20 ವರ್ಷಗಳಿಂದ ಅಭಿವೃದ್ಧಿ ನಿಂತ ನೀರಾಗಿದೆ. ಸಮಸ್ಯೆಗಳನ್ನು ಕೇಳುವವರೇ ಇಲ್ಲ ಎಂದಾಗಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಇಲ್ಲ. ವಾರಾಹಿ ಯೋಜನೆಗೆ ಶಾಸಕರು ಹಾಗೂ ಅವರ ಸಂಬಂಧದವರದ್ದೇ ತಂಡ. ಮತ್ತೆ ಹೇಗೆ ಅದು ಜನರಿಗೆ ಉಪಯೋಗ ಆಗುವುದು! ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಪರ್ಧೆ ಅನಿವಾರ್ಯ.
ಸಾಕಷ್ಟು ಅಭಿವೃದ್ಧಿಯಾಗಿದೆ ಎನ್ನುತ್ತಾರೆ ಶಾಸಕರು?
ಮನೆಗೆ ಬಂದವರಿಗೆ ಸಕ್ಕರೆ ಬಾಳೆಹಣ್ಣು ಕೊಟ್ಟ ಕೂಡಲೇ ಸಮಸ್ಯೆ ನಿವಾರಣೆಯಾಗುವುದಿಲ್ಲ. ಒಂದೇ ಒಂದು ಕಾರ್ಖಾನೆ ಸ್ಥಾಪನೆಯಾಗಿಲ್ಲ. ಅವರಿಗೆ ಕ್ಷೇತ್ರದ ಸಮಸ್ಯೆಗಳ ಅರಿವೇ ಇಲ್ಲ. ಹೆಚ್ಚೇಕೆ, ಅವರಿಗೆ ಕ್ಷೇತ್ರದಲ್ಲಿ ಎಷ್ಟು ಚುನಾವಣಾ ಬೂತ್‌ಗಳಿವೆ ಎಂದು ಕೂಡ ಗೊತ್ತಿರಲಿಕ್ಕಿಲ್ಲ.
ಹಾಗಾದರೆ ಅವರೇನೂ ಮಾಡಿಲ್ಲವೇ?
ಮಾಡಿದ್ದಾರೆ. ಸಚಿವ ಸ್ಥಾನ ದೊರೆಯಲಿಲ್ಲ ಎಂದು ಬೆಂಬಲಿಗರ ಮೂಲಕ ಕುಂದಾಪುರದಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿಸಿ ದ್ದಾರೆ. ಅದು ಅವರ ಸ್ವಾರ್ಥ. ಪಕ್ಷದ ಸಿದ್ಧಾಂತವೇ ಇಲ್ಲ. ಕಾರ್ಯಕರ್ತರನ್ನು ಬೆಳೆಸಿಲ್ಲ.
ಪ್ರಬಲ ಪಕ್ಷಗಳಿಗೆ ಹೋಲಿಸಿ ಜೆಡಿಯು ಸ್ಥಿತಿ ಹೇಗಿದೆ?
ಪಕ್ಷ ಗಟ್ಟಿಯಾಗಿದೆ. ಗೆಲುವು ನಮ್ಮದೇ. ನಾನು ಜುಲೈಯಲ್ಲಿ ಹುದ್ದೆ ಪಡೆದೆ. 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸದಸ್ಯ ರಾಗಿಸಿದೆ, ಅಂದಿನಿಂದಲೇ ಪಕ್ಷದ ಕಾರ್ಯಕರ್ತರನ್ನು ಸಜ್ಜು ಮಾಡಿದೆ. ನಿರಂತರ ತಿರುಗಾಟದ ಮೂಲಕ ಪಕ್ಷ ಸಂಘಟನೆ ಮಾಡಿದೆ. ಹಾಗಾಗಿ ಸ್ಪರ್ಧೆ ನೀಡಲು ಹಿಂಜರಿಕೆಯೇ ಇಲ್ಲ.
ಜೆಡಿಯುವನ್ನು ಜನ ಮರೆತಿಲ್ಲವೇ?
ನಾನು 1983ರಿಂದ ಪಕ್ಷದಲ್ಲಿದ್ದೇನೆ. ವಿದ್ಯಾರ್ಥಿ ಜನತಾ ದಳದಲ್ಲಿದ್ದೆ. ಯುವ ಜನತಾದಳದ ರಾಜ್ಯ ಕಾರ್ಯದರ್ಶಿಯಾಗಿದ್ದೆ. 1994ರಲ್ಲಿ ನಾನು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೆ. ಊರಿಗೆ ತಲುಪಿದಾಗ ಜನತಾದಳ ಇಬ್ಭಾಗವಾದ ಸುದ್ದಿ ಬಂತು. ಆದರೆ ಪಕ್ಷದ ಸೂಚನೆಯಂತೆ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಬೆಂಬಲ ಕೊಟ್ಟು ಕೆಲಸ ಮಾಡಿದ್ದೆ. ಆದರೂ ಪಕ್ಷ ತೊರೆಯಲಿಲ್ಲ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡರು ಈ ಬಾರಿ ಸ್ಪರ್ಧೆ ಮಾಡಲು ಹೇಳಿದ್ದಾರೆ.
ಜನತೆಗೆ ಏನು ಭರವಸೆ ಕೊಡುತ್ತೀರಿ?
ಈಗಿನ ಸರಕಾರದ ಎಲ್ಲ ಕಾರ್ಯಕ್ರಮಗಳೂ ರಾಮಕೃಷ್ಣ ಹೆಗಡೆ ಕಾರ್ಯಕ್ರಮಗಳು. ಹೆಸರು ಮಾತ್ರ ಬದಲಾಯಿಸಿದ್ದಾರೆ. ಹಾಗಾಗಿ ಯುವಜನತೆಯ ಮನದಲ್ಲಿ ಹೆಗಡೆಯವರಿದ್ದಾರೆ. ಅವರ ಫೋಟೋ ಹಿಡಿದು ಮತ ಕೇಳುತ್ತೇನೆ, ಜನ ಬೆಂಬಲಿಸುತ್ತಾರೆ.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.