ಕ್ಷಯರೋಗ ನಿರ್ಲಕ್ಷಿಸದಿರಿ : ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ
Team Udayavani, Mar 27, 2018, 11:05 AM IST
ಮಡಿಕೇರಿ: ಕ್ಷಯ ರೋಗದ ಲಕ್ಷಣಗಳ ಬಗ್ಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾಹಿತಿ ಸಿಗಬೇಕು ಎಂದು ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ತಿಳಿಸಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ಕ್ಷಯ ರೋಗ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕ್ಷಯ ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಜೀವನ ನಡೆಸಲು ಅವಕಾಶ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷಿಸಸಬಾರದು, ಸರ್ಕಾರ ಕ್ಷಯ ರೋಗಿಗಳಿಗೆ 500 ರೂ. ಸಹಾಯ ಧನ ನೀಡುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎ.ಸಿ.ಶಿವಕುಮಾರ್ ಅವರು ಮಾತನಾಡಿ ರಾಷ್ಟ್ರದಲ್ಲಿ 6 ಸಾವಿರ ಜನ ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಪ್ರತಿ ದಿನ 600 ಮಂದಿ ಸಾಯುತ್ತಿದ್ದಾರೆ. ಈ ಕಾಯಿಲೆಯು ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ರೋಗವಾಗಿದೆ. ಆದ್ದರಿಂದ ಕ್ಷಯರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಅವರು ಸಲಹೆ ಮಾಡಿದರು. ಕ್ಷಯರೋಗದಲ್ಲಿ ಎರಡು ರೀತಿ ಇದೆ ಶ್ವಾಸಕೋಶದ ಕ್ಷಯರೋಗ, ಶ್ವಾಸಕೋಶೆತರ ಕ್ಷಯರೋಗ. ಸತತ ಕೆಮ್ಮು, ಸಂಜೆ ವೇಳೆ ಜಠರ ಕಫದಲ್ಲಿ ರಕ್ತ ಮತ್ತು ಎದೆ ನೋವು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ದೇಹದ ತೂಕ ಕ್ಷಿಣಿಸುವುದು ಕ್ಷಯರೋಗದ ಲಕ್ಷಣಗಳಾಗಿವೆ ಎಂದು ಡಾ.ಶಿವಕುಮಾರ್ ಅವರು ಮಾಹಿತಿ ನೀಡಿದರು.
ಕ್ಷಯ ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎರಡು ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಫದಲ್ಲಿ ಕ್ರಿಮಿನಾಶಕಗಳು ಕಂಡುಬರುತ್ತದೆ. ಕ್ಷ ಕಿರಣ ಪರೀಕ್ಷೆಯ ಮೂಲಕ ರೋಗವನ್ನು ಕಂಡು ಹಿಡಿಯಬಹುದು. ಪರೀಕ್ಷೆಗೆ ತಡ ಮಾಡಿದರೆ ರೋಗವು ಇನ್ನೊಬ್ಬರಿಗೂ ಹರಡುವ ಸಾಧ್ಯತೆ ಇರುತ್ತದೆ. ಕ್ಷಯ ರೋಗವು ಗೋತ್ತಾದ ತಕ್ಷಣ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಗುಣಮುಖರಾಗಬಹುದು ಎಂದರು.
2017 ರಲ್ಲಿ 412 ರೋಗಿಗಳನ್ನು ಪತ್ತೆಮಾಡಲಾಗಿದೆ ಎಚ್.ಐ.ವಿ ಸೋಂಕಿತರು ಜಿಲ್ಲೆಯಲ್ಲಿ 32 ಜನರು ಇದ್ದಾರೆ. ಕ್ಷಯರೋಗಿಗಳು ಸಂಪೂರ್ಣ ಚಿಕಿತ್ಸೆ ಪಡೆಯಬೇಕು ಎಂದು ಡಾ.ಶಿವಕುಮಾರ್ ಅವರು ಹೇಳಿದರು. 2018ರ ಕ್ಷಯರೋಗದ ಘೋಷಣೆ ನಾಯಕರು ಬೇಕಾಗಿದ್ದಾರೆ. ಕ್ಷಯರೋಗ ಮುಕ್ತ ವಿಶ್ವ ನಿರ್ಮಾಣಕ್ಕೆ ಕ್ಷಯರೋಗವನ್ನು ನಿರ್ಮೂಲನೆಗೊಳಿಸಿ, ಇತಿಹಾಸ ನಿರ್ಮಿಸಿ ಎಂಬ ತತ್ವವನ್ನು ತಿಳಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ಮಾತನಾಡಿ ಕ್ಷಯ ರೋಗ ನಿಯಂತ್ರಣಕ್ಕೆ ಉತ್ತಮ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗಬಹುದು. ಕ್ಷಯರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಆನಂದ ಮಾತನಾಡಿ ಕ್ಷಯರೋಗ ದಿನದ ಆಚರಣೆ ಒಂದು ದಿನಕ್ಕೆ ಸಿಮೀತವಾಗಬಾರದು. ರೋಗವನ್ನು ನಿರ್ಮೂಲನೆ ಮಾಡಲು ಪಣತೊಡಬೇಕು. ರೋಗಿಗಳನ್ನು ತಾರತಮ್ಯ ನೋಡಬೇಡಿ, ಕ್ಷಯರೋಗವನ್ನು ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಬೇಕು. ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಕಾರ್ಯಪ್ಪ, ಸಮುದಾಯ ಆರೋಗ್ಯ ವಿಭಾಗದದ ಮುಖ್ಯಸ್ಥರಾದ ರಾಮಚಂದ್ರ ಕಾಮತ್ ಇತರರು ಹಾಜರಿದ್ದರು.
ಕ್ಷಯರೋಗ ದಿನಾಚರಣೆಯ ಪ್ರಯುಕ್ತ ನಗರದ ಬಾಲಮಂದಿರದಿಂದ ಜಾಥ ಏರ್ಪಡಿಸಲಾಗಿತ್ತು. ನಗರದ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ, ಇಂದಿರಾ ಗಾಂಧಿ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತದಿಂದ ಕಾವೇರಿ ಕಲಾಕ್ಷೇತ್ರಕ್ಕೆ ಜಾಥಾ ನಡೆಯಿತು. ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಬಾರ ಅಧಿಕಾರಿ ಡಾ.ಆನಂದ ಜಾಥಾಗೆ ಚಾಲನೆ ನೀಡಿದರು. ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎ.ಸಿ ಶಿವಕುಮಾರ್, ಸಮುದಾಯ ಆರೋಗ್ಯ ವಿಭಾಗದದ ಮುಖ್ಯಸ್ಥ ರಾಮಚಂದ್ರ ಕಾಮತ್, ಕ್ಷಯರೋಗ ನಿಯಂತ್ರಣ ವಿಭಾಗದ ಮಹದೇವಪ್ಪ ಜಿಲ್ಲಾ ಆರೋಗ್ಯ ಶಿಕ್ಷಣ ಇಲಾಖೆಯ ರಮೇಶ್ ಮೂವಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.