ಇನ್ನೂ ಅಪ್‌ಡೇಟ್‌ ಆಗಿಲ್ಲ R.T.O. ವಾಹನ-4


Team Udayavani, Mar 27, 2018, 9:30 AM IST

New-Vehicle-26-3.jpg

ಮಂಗಳೂರು: ದ. ಕನ್ನಡ ಜಿಲ್ಲಾ ವ್ಯಾಪ್ತಿಯ ಮಂಗಳೂರು ಹಾಗೂ ಪುತ್ತೂರು R.T.O. ನೋಂದಣಿ ವಿಭಾಗದಲ್ಲಿ ‘ವಾಹನ-4’ ಸಾಫ್ಟ್‌ವೇರ್‌ ಅನುಷ್ಠಾನ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೊಸ ವಾಹನಗಳ ನೋಂದಣಿ ಪ್ರಕ್ರಿಯೆ ಹಾಗೂ ಮಾರಾಟ ವಹಿವಾಟು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ನೂತನ ವಾಹನ ಖರೀದಿದಾರರು ಮತ್ತು ಮಾರಾಟಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಮಾ. 19ರಿಂದ ವಾಹನ ನೋಂದಣಿಯನ್ನೇ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಮಾ. 26ರೊಳಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ ಪೂರ್ಣಗೊಳಿಸಿ, ಮಾ. 27ರಿಂದ ಹೊಸ ವಾಹನಗಳ ನೋಂದಣಿ ಪ್ರಾರಂಭಿಸಲಾಗುವುದು ಎಂದು R.T.O. ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ‘ವಾಹನ-4’ ಸಾಫ್ಟ್‌ ವೇರ್‌ ಅಪ್‌ಡೇಟ್‌ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಕಳೆದ ಒಂದು ವಾರದಿಂದ ಸ್ಥಗಿತವಾಗಿದ್ದ ವಾಹನಗಳ ನೋಂದಣಿ ಕಾರ್ಯ ಮತ್ತಷ್ಟು ವಿಳಂಬವಾಗಲಿದೆ. ಜಿಲ್ಲೆಯಲ್ಲಿರುವ ಹೊಸ ವಾಹನ ಮಾರಾಟ ಡೀಲರ್‌ಗಳು ನೋಂದಣಿ ಪ್ರಕ್ರಿಯೆ ಸಾಧ್ಯವಾಗದ ಹಿನ್ನೆಲೆಯಲ್ಲಿ ವಹಿವಾಟಿನಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದು ಸಹಜವಾಗಿ ವಾಹನ ಉದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡುತ್ತಿದೆ.

ಈ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿರುವ R.T.O. ಕಚೇರಿ ಮೂಲಗಳು, ವಾಹನ 4 ಸಾಫ್ಟ್‌ ವೇರ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಮಂಗಳವಾರದಿಂದ ನೂತನ ಸಾಪ್ಟ್ವೇರ್‌ ಆಧಾರಿತ ಕೆಲಸ ಆರಂಭವಾಗುವ ನಿರೀಕ್ಷೆ ಇದೆ. ಆದರೆ ಹೊಸ ಸಾಫ್ಟ್‌ವೇರ್‌ ಮೂಲಕ ಆನ್‌ಲೈನ್‌ ಅರ್ಜಿ, ಹಣ ಪಾವತಿ ಪ್ರಕ್ರಿಯೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಮಂಗಳವಾರದಿಂದ ಆರ್‌ಟಿಒದಲ್ಲಿ ಈ ಹಿಂದೆ ಬಳಕೆಯಲ್ಲಿದ್ದ ಕ್ರಮದಂತೆ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಯಲಿದೆ ಎಂದಿದ್ದಾರೆ. ಈ ಮಧ್ಯೆ R.T.O. ಕಚೇರಿಯಲ್ಲಿ ಸಿಬಂದಿ ಕೊರತೆ ಇರುವ ಕಾರಣದಿಂದ ‘ವಾಹನ 4’ ಮಾದರಿ ಪೂರ್ಣವಾಗಿ ಕಾರ್ಯಾರಂಭಿಸಿದ ಬಳಿಕವಷ್ಟೇ ಅರ್ಜಿ ಸ್ವೀಕಾರಕ್ಕೆ ಉದ್ದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೂತನ ಸಾಫ್ಟ್‌ವೇರ್‌ ಬಳಕೆಯೊಂದಿಗೆ ಮಂಗಳವಾರದಿಂದ ಹೊಸ ವ್ಯವಸ್ಥೆಯೊಂದಿಗೆ ವಾಹನ ನೋಂದಣಿ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಒಂದು ವಾರದ ಹಿಂದೆ ತಿಳಿಸಿತ್ತು. ಆದರೆ ಸದ್ಯದ ಮಾಹಿತಿಯ ಪ್ರಕಾರ ಸಾಫ್ಟ್‌ ವೇರ್‌ ಅಳವಡಿಕೆ ಇನ್ನೂ ಕೂಡ ಪೂರ್ಣಗೊಳ್ಳದ ಕಾರಣದಿಂದ ಮಾ. 29ರಿಂದ ನೂತನ ವ್ಯವಸ್ಥೆ ಆರಂಭಗೊಳ್ಳುವುದು ಬಹುತೇಕ ಕಷ್ಟ. ಎರಡು ದಿನದೊಳಗಡೆ ಹೊಸ ಸಾಫ್ಟ್ ವೇರ್‌ ಅಳವಡಿಕೆ ಕಾರ್ಯ ಪೂರ್ಣಗೊಳ್ಳದಿದ್ದಲ್ಲಿ ಮಾರ್ಚ್‌ ಅಂತ್ಯದಲ್ಲಿ ಸಾಲು ರಜೆಗಳಿರುವುದರಿಂದ ವಾಹನ ನೋಂದಣಿಗೆ ಖರೀದಿದಾರರು ಇನ್ನೂ ಒಂದು ವಾರ ಕಾಯಬೇಕಾಗಬಹುದು.

ಹೊಸ ಸಾಫ್ಟ್‌ವೇರ್‌ ಆಗಿರುವುದರಿಂದ ಇನ್ನುಮುಂದೆ R.T.O. ಪ್ರಕ್ರಿಯೆಗಳನ್ನು ನಿರ್ವಹಿಸುವುದಕ್ಕೆ ಸಿಬಂದಿಗೂ ಸೂಕ್ತ ಮಾರ್ಗದರ್ಶನ ಬೇಕಾಗುತ್ತದೆ. ಹೀಗಾಗಿ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವುದಕ್ಕೆ ಕಾಲಾವಕಾಶ ಬೇಕಾಗಬಹುದು. ಸದ್ಯ ರಾಮನಗರ ಜಿಲ್ಲೆಯಲ್ಲಿ ಈ ಸಾಫ್ಟ್‌ವೇರ್‌ ಅಳವಡಿಕೆ ಆಗಿದ್ದರೂ ಅಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾದ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಹೊಸ ವ್ಯವಸ್ಥೆ ಪೂರ್ಣ ಕಾರ್ಯಾರಂಭಕ್ಕೆ ಇನ್ನೂ ಕೆಲವು ದಿನ ಬೇಕಾಗಬಹುದು ಎನ್ನುವುದು ವಾಹನ ಡೀಲರ್‌ಗಳ ವಾದ. ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ದಿನಗಳಾಗಿರುವುದರಿಂದ ಈಗ ಸಾಫ್ಟ್‌ವೇರ್‌ ಅಳವಡಿಕೆಯ ನೆಪದಲ್ಲಿ ವಾಹನ ನೋಂದಣಿಯನ್ನು ಸ್ಥಗಿತಗೊಳಿಸುವುದರಿಂದ ವಾಣಿಜ್ಯ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳುವುದು ನಿಶ್ಚಿತ ಎಂದು ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ವತಿಯಿಂದ ರಾಜ್ಯ ಸಾರಿಗೆ ಇಲಾಖೆಗೆ ಮನವಿ ಕೂಡ ಮಾಡಲಾಗಿತ್ತು.

ನೋಂದಣಿ ನವೀಕರಣಕ್ಕೂ ಆತಂಕ
ನೋಂದಣಿ ನವೀಕರಣ ಪ್ರಕ್ರಿಯೆಯನ್ನು ಸಕಾಲದಲ್ಲಿ ಮಾಡಿಸದಿದ್ದರೆ ಸಾರಿಗೆ ವಾಹನಗಳಿಗೆ ದಿನಕ್ಕೆ 50 ರೂ. ನಂತೆ ಮತ್ತು ಸಾರಿಗೇತರ ವಾಹನಗಳಾದ ಕಾರುಗಳಿಗೆ ದಿನಕ್ಕೆ 500 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ ದಿನಕ್ಕೆ 300 ರೂ.ಗಳಂತೆ ಸಾರಿಗೆ ಇಲಾಖೆ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡುತ್ತಿದೆ. ಆದರೆ ಈಗ ಇಲಾಖೆಯೇ ನೋಂದಣಿ ನವೀಕರಣವನ್ನು ತಡೆ ಹಿಡಿದಿದೆ. ಮಾ. 19ರಿಂದ 26ರ ತನಕ ಲೈಸೆನ್ಸ್‌ ನವೀಕರಣ ಮಾಡಿಲ್ಲ. ಮಾ. 31ರ ತನಕ ನೋಂದಣಿ ಅನುಮಾನ. ಈ ಅವಧಿಯಲ್ಲಿ ಬಹಳಷ್ಟು ಮಂದಿಯ ಲೈಸೆನ್ಸ್‌ ನವೀಕರಣ ಮಾಡಲೇಬೇಕಾದ ಅನಿವಾರ್ಯತೆ ಇರಬಹುದಾಗಿದ್ದು, ಅವರೆಲ್ಲರೂ ಇಲಾಖೆಯ ಎಡವಟ್ಟಿನಿಂದಾಗಿ ದಂಡ ಪಾವತಿಸಬೇಕಾಗಬಹುದು ಎಂಬ ಆತಂಕದಲ್ಲಿದ್ದಾರೆ.

ವಾಹನ 4 ಸಾಫ್ಟ್‌ವೇರ್‌
ರಾಷ್ಟ್ರಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಒಂದೇ ತಂತ್ರಾಂಶದಡಿ ತರುವ ಉದ್ದೇಶದೊಂದಿಗೆ ವಾಹನ್‌ 4 ವ್ಯವಸ್ಥೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ದ.ಕ. ಜಿಲ್ಲೆಯ ಮಂಗಳೂರು ಹಾಗೂ ಬಂಟ್ವಾಳ ವಿಭಾಗದಲ್ಲಿ ಇದನ್ನು ಅನುಷ್ಠಾನಿಸುವ ಸಂಬಂಧ ಸಾಫ್ಟ್ವೇರ್‌ ಅಳವಡಿಕೆ ಕಾರ್ಯ ಕಳೆದ ಒಂದು ವಾರದಿಂದ ನಡೆಯುತ್ತಿದೆ. ಕೇಂದ್ರದ ಎನ್‌ಐಸಿ (ನ್ಯಾಷನಲ್‌ ಇನ್ಫ್ಯಾರ್ಮೆಟಿಕ್ಸ್‌ ಸೆಂಟರ್‌) ಈ ಸಾಫ್ಟ್ವೇರನ್ನು ಅಭಿವೃದ್ಧಿಪಡಿಸುತ್ತಿದೆ.

ಸಾಫ್ಟ್‌ವೇರ್‌ ಅಳವಡಿಕೆ ಪೂರ್ಣವಾಗಿಲ್ಲ
‘ವಾಹನ-4’ ಸಾಫ್ಟ್‌ವೇರ್‌ ಅನುಷ್ಠಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಡಿಎಲ್‌ ಹಾಗೂ ಎಲ್‌ಎಲ್‌ಆರ್‌ ಹೊರತುಪಡಿಸಿ ವಾಹನ ನೋಂದಣಿಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯ ಸೂಚನೆಯ ಮೇರೆಗೆ ನೋಂದಣಿ ನಡೆಸುತ್ತಿಲ್ಲ. ಮಾ. 27ರಿಂದ ಆರ್‌ಟಿಒ ಕಚೇರಿಯಲ್ಲಿ ವಾಹನ-4 ಸಾಫ್ಟ್‌ವೇರ್‌ನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವ ಬಗ್ಗೆ ತಿಳಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಗೆ ಇನ್ನೂ ಒಂದೆರಡು ದಿನ ತಗಲುವ ನಿರೀಕ್ಷೆ ಇದೆ.
– ಜಿ.ಎಸ್‌. ಹೆಗಡೆ, ಪ್ರಾದೇಶಿಕ ಸಾರಿಗೆ ಆಯುಕ್ತರು (ಪ್ರಭಾರ), ಮಂಗಳೂರು.
 
ಅಟೋಮೊಬೈಲ್‌ ಕ್ಷೇತ್ರಕ್ಕೆ ದೊಡ್ಡ  ಹೊಡೆತ
“ವಾಹನ-4′ ಸಾಫ್ಟ್ವೇರ್‌ ಅನುಷ್ಠಾನ ಸ್ವಾಗತಾರ್ಹ. ಆದರೆ ಈ ನೆಪದಿಂದ ಆರ್ಥಿಕ ವರ್ಷದ ಕೊನೆಯಲ್ಲಿ ವಾಹನ ನೋಂದಣಿಯನ್ನೇ ಸ್ಥಗಿತಗೊಳಿಸಿರುವುದರಿಂದ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ. ಹೊಸ ವ್ಯವಸ್ಥೆಯಿಂದ ಉಪಕಾರ ಆಗುವುದಾದರೂ ಒಂದು ವಾರ ನೋಂದಣಿಯೇ ಆಗದಿರುವುದರಿಂದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಬಹಳಷ್ಟು ಕೆಟ್ಟ ಪರಿಣಾಮವನ್ನು ನಾವು ಎದುರಿಸುವಂತಾಗಿದೆ.
– ವತಿಕಾ ಪೈ, ಅಧ್ಯಕ್ಷರು, ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ 

ಟಾಪ್ ನ್ಯೂಸ್

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

9

Mangaluru: ಬೊಂದೇಲ್‌-ಕಾವೂರು ರಸ್ತೆಯಲ್ಲಿಲ್ಲ ಫುಟ್‌ಪಾತ್‌

5

Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ

4

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

MUST WATCH

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

ಹೊಸ ಸೇರ್ಪಡೆ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.