ನೀನ್ ಕರೆದ್ರೆ ಮಾತ್ರ ಮದ್ವೇಗ್ ಬರ್ತೇನೆ!
Team Udayavani, Mar 27, 2018, 5:50 PM IST
ಹಲೋ ಡಾರ್ಲಿಂಗ್!
ಏನ್ ಹೀಗೆಲ್ಲಾ ಕರೀತಿದ್ದಾನಲ್ಲ ಅಂತ ಸಿಟ್ಟು ಮಾಡ್ಕೊಳ್ತಾ ಇದೀಯ? ಪರ್ವಾಗಿಲ್ಲ, ಸ್ವಲ್ಪ ಅಡ್ಜಸ್ಟ್ ಮಾಡ್ಕೊ. ನಮ್ಮಿಬ್ರದ್ದು ಸ್ನೇಹಾನಾ, ಪ್ರೀತೀನಾ ಅಥವಾ ಬರಿ ಕ್ರಷ್ ಮಾತ್ರಾನಾ? ನಂಗಂತೂ ಗೊತ್ತಿಲ್ಲ ಕಣೇ. ಆದ್ರೆ ನಾನಂತೂ ನಿನ್ನನ್ನ ತುಂಬಾ ಅಂದ್ರೆ ತುಂಬಾ ಹಚ್ಚಿಕೊಂಡಿದ್ದೀನಿ. ನಿಜ ಹೇಳಾ? ನೀನು ಮೊನ್ನೆ “ನನ್ ಮದ್ವೆ ಫಿಕ್ಸ್ ಆಯ್ತು ಕಣೋ’ ಅಂದೆಯಲ್ಲ, ಆಗ ಒಂದರೆಕ್ಷಣ ನನ್ ಹಾರ್ಟ್ ಬೀಟ್ ಹಾಗೇ ನಿಂತು ಮತ್ತೆ ವಾಪಸ್ ಬಂತು ಕಣೇ. ನೀನು ನೋಡಿದ್ರೆ ಫ್ರೆಂಡ್‌ಶಿಪ್ ಅನ್ಕೊಂಡಿದೀಯ. ನಾನು ಮಾತ್ರ ನಮ್ಮ ಮಧ್ಯೆ ಇರೋದು ಫ್ರೆಂಡ್‌ಶಿಪ್ ಕಮ್ ಪ್ಯೂರ್ ಲವ್ ಅನ್ಕೊಂಡಿದೀನಿ.
ಹೋಗ್ಲಿ ಬಿಡು, ಈ ವಿಷಯಕ್ಕೋಸ್ಕರ ನಾವಿಬ್ರೂ ಯಾಕ್ ಕಿತ್ತಾಡ್ಕೊàಬೇಕು ಅಲ್ವಾ? ಒಂದಂತೂ ನಿಜ, ನಿನ್ನ ಬಿಟ್ಟು ಬದುಕೋ ಶಕ್ತೀನಾ ಆ ದೇವರು ನಂಗೆ ಕೊಟ್ಟಿಲ್ಲ ಕಣೇ. ಆದ್ರೆ ವಿಧಿಯಾಟ. ಏನೂ ಮಾಡೋಕಾಗಲ್ಲ, ನೀನು ಬೇರೆಯವ್ರನ್ನ ಮದುವೆಯಾಗಿ ಅವ್ರ ಮನೆ ನಂದಾದೀಪ ಬೆಳಗೋಳು. ಅದಕ್ಕೆ ನಂಗೇನೂ ಬೇಜಾರಿಲ್ಲ. ಹೆಂಗೋ ನನ್ ಮದ್ವೆ ಆಗೋವರೆಗೂ ನಿನ್ ನೆನಪಲ್ಲೇ ಇರ್ತೀನಿ. ಇಷ್ಟು ದಿನ ಒಬ್ರಿಗೊಬ್ರು ಮಾತಾಡ್ತಾ ಫೀಲಿಂಗ್ಸ್‌ನ ಶೇರ್ ಮಾಡ್ತಾ ಹಾಯಾಗಿದ್ವಿ. ಆದ್ರೆ ನಾನೇ ನಿನ್ನ ಸ್ನೇಹಾನ ತಪ್ಪಾಗಿ ಅರ್ಥೈಸಿಕೊಂಡಿºಟ್ಟೆ ಅನ್ಸುತ್ತೆ.
ಪರ್ವಾಗಿಲ್ಲ ಬಿಡು. ನೀನು ಎಲ್ಲೇ ಇದ್ರೂ ಚೆನ್ನಾಗಿರು. ಅಷ್ಟೇ ನಾನು ಬಯಸೋದು. ನಿನ್ ಮದ್ವೆಗೆ ಕರೆದ್ರೆ ಮಾತ್ರ ಬಂದು ಅಕ್ಷತೆ ಹಾಕಿ, ಊಟ ಮಾಡ್ಕೊಂಡು ಹೋಗ್ತಿàನಿ. ಗಿಫ್ಟ್ ಮಾತ್ರ ಏನು ತರಲ್ಲ. ಯಾಕೆ ಗೊತ್ತ? ಗಿಫ್ಟ್ ತಂದರೆ ಅದನ್ನು ಕೊಡುವ ನೆಪದಲ್ಲಿ ನಿಮ್ಮಿಬ್ಬರನ್ನು ನೋಡಬೇಕಾಗುತ್ತೆ. ಆಗ ಸಹಜವಾಗಿಯೇ ನನಗೆ ಸಂಕಟವಾಗುತ್ತೆ. ನಾನೇನೋ ಹುಡುಗ. ಹೇಗೋ ಸಂಕಟವನ್ನು ಹಲ್ಲು ಕಚ್ಚಿ ತಡ್ಕೊಂಡು ಸುಮ್ಮನಿರಿ¤àನಿ. ಆ ಕ್ಷಣದಲ್ಲಿ ಅಕಸ್ಮಾತ್ ನೀನೇ ಭಾವುಕಳಾಗಿ ಕಣ್ತುಂಬಿಕೊಂಡು ಬಿಕ್ಕಳಿಸಿಬಿಟ್ರೆ…ನಿನ್ನ ಸುಕೋಮಲ ಕೆನ್ನೆಯ ಮೇಲಿಂದ ಜಾರಿದ ಹನಿಗಳು ಠಪ್ಪಂತ ಬಿದ್ದುಬಿಟ್ರೆ.. ಉಹೂಂ, ಅಂಥದೊಂದು ಸೀನ್ ನೋಡಿಬಿಟ್ರೆ ಆಮೇಲೆ ನನ್ನ ನೆಮ್ಮದಿ ಪೂರ್ತಿ ಹಾಳಾಗಿಬಿಡುತ್ತೆ. ಇದೇ ಕಾರಣಕ್ಕೆ ಗಿಫ್ಟ್ ತರಲ್ಲ ನಾನು.. ಆಯ್ತಾ?
ನಿನ್ ಪಾಪಚ್ಚಿ
ವೆಂಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.