ಮದ್ದಡ್ಕ: ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್‌ ಸಮಸ್ಯೆ

Team Udayavani, Mar 27, 2018, 7:34 PM IST

Bio-Metric-27-3.jpg

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಮಹಿಳಾ ವಿವಿಧೋದ್ದೇಶ ಸೊಸೈಟಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಪಿಲಿಚಂಡಿಕಲ್ಲು ಮತ್ತು ಮದ್ದಡ್ಕದಲ್ಲಿ ಸೊಸೈಟಿಯನ್ನು ತೆರೆಯಲಾಗಿತ್ತು. ಬಯೋ ಮೆಟ್ರಿಕ್‌ ಕಡ್ಡಾಯ ಆದ ಮೇಲೆ ಜನರು ಸಮಸ್ಯೆಗೆ ಗುರಿಯಾಗಿದ್ದಾರೆ.ಈ ಪೈಕಿ ಪಿಲಿಚಂಡಿಕಲ್ಲು ಸೊಸೈಟಿಯಲ್ಲಿ ಮಾತ್ರ ಬಯೋಮೆಟ್ರಿಕ್‌ ಯಂತ್ರ ಅಳವಡಿಸಲಾಗಿದೆ. ಇದರಿಂದ ಮದ್ದಡ್ಕ ಭಾಗದ ಜನರಿಗೆ ಸಮಸ್ಯೆಯಾಗಿದೆ.

ಬೆರಳಚ್ಚು ಒಂದು ಕಡೆ, ರೇಷನ್‌ ಇನ್ನೊಂದು ಕಡೆ
ಪಿಲಿಚಂಡಿಕಲ್ಲು ಮುಖ್ಯ ಸೊಸೈಟಿಯಲ್ಲಿ ಬಯೋಮೆಟ್ರಿಕ್‌ ಯಂತ್ರ ಅಳವಡಿಸಲಾಗಿದ್ದು, ಮದ್ದಡ್ಕದ ಜನರು ಪಿಲಿಚಂಡಿಕಲ್ಲು ಸೊಸೈಟಿಗೆ ಬಂದು, ಬೆರಳಚ್ಚು ನೀಡಿ, ಮತ್ತೆ ಪಡಿತರ ಪಡೆಯಲು ಮದ್ದಡ್ಕ ಸೊಸೈಟಿಗೆ ಹೋಗಬೇಕು.  ಪಿಲಿಚಂಡಿ ಕಲ್ಲು ಸೊಸೈಟಿಗೆ ಸಂಬಂಧಿಸಿ 600 ಹಾಗೂ ಮದ್ದಡ್ಕ ಸೊಸೈಟಿಗೆ ಸಂಬಂಧಿಸಿ 390 ಪಡಿತರ ಚೀಟಿಗಳಿವೆ.  ತಿಂಗಳಲ್ಲಿ 10 ದಿನ ಮಾತ್ರ ರೇಷನ್‌ ನೀಡುವ ಕಾರಣ ಜನಜಂಗುಳಿ ಇರುತ್ತದೆ.

ಸರ್ವರ್‌ – ರೇಷನ್‌ ಇಲ್ಲ
ಬಯೋಮೆಟ್ರಿಕ್‌ ಆದ ಕಾರಣ ಡಾಟಾದಲ್ಲಿ ದಾಖಲಾಗದೆ ರೇಷನ್‌ ಕೊಡುವಂತಿಲ್ಲ. ಮದ್ದಡ್ಕ ಜನರು ರೇಷನ್‌ಗಾಗಿ ತಮ್ಮ ಬೆರಳಚ್ಚು ನೀಡಲು ಪಿಲಿಚಂಡಿ ಕಲ್ಲು ಸೊಸೈಟಿಗೆ ಹೋದರೆ ಅಲ್ಲಿ ಸರ್ವರ್‌ ಸಮಸ್ಯೆ. ದಿನವಿಡೀ ಕಾದು ಬರಿಗೈಯಲ್ಲಿ ಮರಳುವ ಸ್ಥಿತಿ. ರೇಷನ್‌ಗಾಗಿ ರಜೆ ಮಾಡಿದರೆ ಅಂದಿನ ಕೂಲಿಯೂ ಹೋಯಿತು, ಮದ್ದಡ್ಕದಿಂದ ಹೋಗಲು ಆಟೋ ಬಾಡಿಗೆಯೂ ಖರ್ಚಾಯಿತು ಎನ್ನುತ್ತಾರೆ ಸ್ಥಳೀಯರು.

ಬಯೋಮೆಟ್ರಿಕ್‌ ರದ್ದು ಮಾಡಲಿ
ಮದ್ದಡ್ಕದ 400 ಪಡಿತರ ಚೀಟಿದಾರರು ಪ್ರತೀ ತಿಂಗಳು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಪಿಲಿಚಂಡಿಕಲ್ಲು ಸೊಸೈಟಿಯಲ್ಲೇ ಅಕ್ಕಿ, ಬೇಳೆ ವಿತರಿಸಿದರೆ ತಕ್ಕಮಟ್ಟಿಗೆ ಅನುಕೂಲವಾಗಬಹುದು. ಬಯೋಮೆಟ್ರಿಕ್‌ನಿಂದ ಗ್ರಾಮೀಣ ಭಾಗದ ಎಲ್ಲೆಡೆ ಸಮಸ್ಯೆಯಾಗುತ್ತಿದೆ. ಸರಕಾರ ಇದನ್ನು ರದ್ದು ಮಾಡಬೇಕು ಎನ್ನುವುದು ಜನರ ಅಭಿಪ್ರಾಯ. ಮದ್ದಡ್ಕ ಅಂಗನವಾಡಿ ಕೇಂದ್ರದಲ್ಲಿ ಅಧಿಕಾರಿಗಳು ಮಕ್ಕಳ ಆಧಾರ್‌ ಕಾರ್ಡ್‌ ವಿವರಗಳನ್ನು ಆಂಗ್ಲಭಾಷೆಯಲ್ಲಿ ಎಂಟ್ರಿ ಮಾಡಿದ್ದಾರೆ. ರೇಷನ್‌ ಕಾರ್ಡ್‌ ಎಂಟ್ರಿ ಮಾಡಲು ಹೋದಾಗ ಆಂಗ್ಲಭಾಷೆಯಲ್ಲಿ ಇದ್ದದ್ದು ಆಗುವುದಿಲ್ಲ ಎನ್ನುತ್ತಾರೆ. ಆಹಾರ ಇಲಾಖೆಯಲ್ಲಿ ಕೇಳಿದರೆ ಪಂಚಾಯತ್‌ ನಿಂದ ವಾಸ್ತವ್ಯ ದೃಢೀಕರಣ ಪತ್ರ ಬೇಕು ಎನ್ನುತ್ತಾರೆ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಜನರು ಅಲ್ಲಿಂದಿಲ್ಲಿಗೆ ಓಡಾಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸರಕಾರವೇ ಉಚಿತ ನೀಡಲಿ
ಬಯೋಮೆಟ್ರಿಕ್‌ ಕಡ್ಡಾಯ ಆದ ಮೇಲೆ ಹೊಸ ಬೆರಳಚ್ಚು ಯಂತ್ರ ಖರೀದಿಸಲು ಸೊಸೈಟಿಯಲ್ಲಿ ಹಣದ ಕೊರತೆ ಇತ್ತು. ಅದಕ್ಕಾಗಿ ತಾತ್ಕಾಲಿಕವಾಗಿ ಬೇರೆ ಯಂತ್ರ ಉಪಯೋಗಿಸುತ್ತಿದ್ದೇವೆ. ಹೊಸ ಯಂತ್ರ ಖರೀದಿಸುವ ಸಾಮರ್ಥ್ಯ ಸದ್ಯಕ್ಕಿಲ್ಲ. ಸೊಸೈಟಿಯಿಂದ ಯಾವುದೇ ಲಾಭ ಇಲ್ಲ. ಸಿಬಂದಿ ವೇತನ ಕೊಡಬೇಕು. ಪಿಲಿಚಂಡಿ ಕಲ್ಲಿನಲ್ಲಿಯೇ ಎಲ್ಲರಿಗೂ ವಿತರಿಸಲು ಗೋದಾಮು ಸಮಸ್ಯೆ ಇದೆ. ಅದಕ್ಕಾಗಿ ಮದ್ದಡ್ಕ ಸೊಸೈಟಿಯಲ್ಲಿ ವಿತರಿಸಲಾಗುತ್ತಿದೆ. ಸರಕಾರವೇ ಉಚಿತ ಬಯೋಮೆಟ್ರಿಕ್‌ ಯಂತ್ರ ನೀಡಿದರೆ ಉತ್ತಮ.  
– ರಾಜಶ್ರೀ ರಮಣ, ಅಧ್ಯಕ್ಷೆ, ಮಹಿಳಾ ವಿವಿಧೋದ್ದೇಶ ಸೊಸೈಟಿ, ಗುರುವಾಯನಕೆರೆ

ಕಷ್ಟವಾಗುತ್ತಿದೆ
ಸೊಸೈಟಿ ನಡೆಸಲು ತುಂಬಾ ಕಷ್ಟವಾಗುತ್ತಿದೆ. ಆಸಕ್ತರು ಮುನ್ನಡೆಸಬಹುದು. ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದೇವೆ. ಜನರೂ ಸ್ಪಂದಿಸುತ್ತಿಲ್ಲ, ನಮ್ಮ ಸೊಸೈಟಿಗೆ ಆದಾಯ ಬರುವ ಹಾಗೆ ಸಹಕರಿಸುತ್ತಿಲ್ಲ. ಸರಕಾರದಿಂದ ಸಿಗುವ ವಸ್ತುಗಳನ್ನು ಬಿಟ್ಟರೆ ಬೇರೆ ಯಾವುದೇ ವಸ್ತು ಖರೀದಿಸುವುದಿಲ್ಲ. ನಡೆಸುವವರಿದ್ದರೆ ಅವರ ಹೆಸರಲ್ಲೇ ಲೈಸೆನ್ಸ್‌ ಮಾಡಿಕೊಡುತ್ತೇವೆ.
– ಸಜೀತಾ ಬಂಗೇರ, ಸ್ಥಾಪಕ ಅಧ್ಯಕ್ಷೆ

ಪರಿಹಾರ ಕಲ್ಪಿಸಿ
ಮದ್ದಡ್ಕ ವ್ಯಾಪ್ತಿಯ ಜನರು ರೇಷನ್‌ಗೆ ಬೆರಳಚ್ಚು ನೀಡಲು ಪಿಲಿಚಂಡಿಕಲ್ಲು ಕೇಂದ್ರಕ್ಕೆ ಹೋಗಿ ಬರಬೇಕು. ಅವತ್ತೇ ಅಕ್ಕಿ ಸಿಗುತ್ತದೆ ಎಂದು ಆಟೋದಲ್ಲಿ ಹೋಗುತ್ತಾರೆ. ತಾಂತ್ರಿಕ ದೋಷದಿಂದಾಗಿ ಬೆರಳಚ್ಚು ನೀಡಲು ಆಗದಿದ್ದರೆ ದಿನ ವ್ಯರ್ಥವಾಗುತ್ತದೆ. ಉಚಿತವಾಗಿ ಸಿಗುವ ಅಕ್ಕಿ, ಬೇಳೆಗೆ ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತಿದೆ. ಮದ್ದಡ್ಕ ಸೊಸೈಟಿಗೂ ಬಯೋಮೆಟ್ರಿಕ್‌ ಯಂತ್ರ ಅಳವಡಿಕೆಯಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಸಮಸ್ಯೆ ಬಗೆಹರಿಯಬಹುದು.
-ಶಿವರಾಮ ಶೆಟ್ಟಿ, ಮದ್ದಡ್ಕ, ಸ್ಥಳೀಯರು

— ಪ್ರಮೋದ್‌ ಬಳ್ಳಮಂಜ

ಟಾಪ್ ನ್ಯೂಸ್

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.