ಪಂದ್ಯ ಫಿಕ್ಸ್ ಮಾಡಲು ಪ್ರಯತ್ನ: ಹರಾರೆ ಅಧಿಕಾರಿಗೆ 20 ವರ್ಷ ನಿಷೇಧ
Team Udayavani, Mar 28, 2018, 6:00 AM IST
ದುಬಾೖ: ಕಳೆದ ವರ್ಷ ಪಂದ್ಯವೊಂದನ್ನು ಫಿಕ್ಸ್ ಮಾಡಲು ಜಿಂಬಾಬ್ವೆ ನಾಯಕ ಗ್ರೇಮ್ ಕ್ರೀಮರ್ ಅವರಿಗೆ ಹಣದ ಕೊಡುಗೆ ನೀಡಿದ ಹರಾರೆಯ ಅಧಿಕಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್ ಚಟುವಟಿಕೆಯಿಂದ ದೂರ ಇರುವಂತೆ 20 ವರ್ಷಗಳ ನಿಷೇಧ ಹೇರಿದೆ.
ಹರಾರೆ ಮೆಟ್ರೋಪಾಲಿಟನ್ ಕ್ರಿಕೆಟ್‌ಇದರ ಕೋಶಾಧಿಕಾರಿ ಮತ್ತು ಮಾರು ಕಟ್ಟೆ ನಿರ್ದೇಶಕರಾಗಿರುವ ರಾಜನ್ ನಾಯರ್ ಅವರು ಕ್ರೀಮರ್‌ಗೆ ಪಂದ್ಯ ಫಿಕ್ಸ್ ಮಾಡಲು 30 ಸಾವಿರ ಡಾಲರ್‌ಗಳ ಕೊಡುಗೆ ನೀಡಿದ್ದರು. ಇದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಹೇಳಿದೆ.
ವಿಚಾರಣೆ ಪ್ರಕ್ರಿಯೆ ವೇಳೆ ಗ್ರೇಮ್ ಕ್ರೀಮರ್ ವೃತ್ತಿಪರತೆ ಹೊಂದಿದವರಂತೆ ಭಾಗವಹಿಸಿದ್ದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಐಸಿಸಿಯ ಭ್ರಷ್ಟಾಚಾರ ವಿರೋಧಿ ದಳ (ಎಸಿಯು)ದ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.
ರಾಜನ್ ನಾಯರ್ ಹಣದ ಕೊಡುಗೆ ನೀಡಿದ ತತ್‌ಕ್ಷಣವೇ ಕ್ರೀಮರ್ ಈ ವಿಷಯವನ್ನು ಐಸಿಸಿಗೆ ವರದಿ ಮಾಡಿದ್ದರು. ಹಾಗಾಗಿ ನಾವು ತನಿಖೆ ನಡೆಸಲು ಸಾಧ್ಯವಾಯಿತು. ಫಿಕ್ಸಿಂಗ್ ಅಪಾಯದ ಕುರಿತು ಆಟಗಾರರಿಗೆ ಮಾರ್ಗದರ್ಶನ, ತಿಳಿ ಹೇಳುತ್ತಿರುವ ಐಸಿಸಿಯ ಕ್ರಮಕ್ಕೆ ಕ್ರೀಮರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಟಕ್ಕೆ ನಿಕಟ ಸಂಬಂಧಪಟ್ಟ ವ್ಯಕ್ತಿ ಯೊಬ್ಬನ ಭೇಟಿ ಮಾಡುವಾಗ ನಾನು ದಿಗಿಲುಗೊಂಡಿದ್ದೆ ಮತ್ತು ಸಾಧ್ಯವಾದಷ್ಟು ಬೇಗ ಇದನ್ನು ಸಂಬಂ ಧಪಟ್ಟವರಿಗೆ ವರದಿ ಮಾಡುವಂತೆ ನನ್ನ ಮನಸ್ಸು ಹೇಳುತ್ತಿತ್ತು ಎಂದು 31ರ ಹರೆಯದ ಕ್ರೀಮರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?
Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.