ಯಡಿಯೂರಪ್ಪರದ್ದು ಭ್ರಷ್ಟ ಸರಕಾರ ಎಂದ ಶಾ
Team Udayavani, Mar 28, 2018, 7:00 AM IST
ದಾವಣಗೆರೆ: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಭರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಡವಟ್ಟು ಹೇಳಿಕೆ ನೀಡಿದ ಘಟನೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ನಡೆಯಿತು.
ಜಿಎಂಐಟಿ ಕಾಲೇಜಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ರಾಜ್ಯ ಸರ್ಕಾರದ ಕಾರ್ಯ ವೈಖರಿ ಟೀಕಿಸುವ ಭರದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರು ಹೇಳಿರುವ ಮಾತು ಪ್ರಸ್ತಾಪಿಸುವಾಗ ಯಡವಟ್ಟಾಯಿತು.
ಅಮಿತ್ ಶಾ, ಸಿದ್ದರಾಮಯ್ಯರ ಬದಲಿಗೆ “ಯಡಿಯೂರಪ್ಪನವರ ಸರ್ಕಾರ ನಂ.ಒನ್ ಭ್ರಷ್ಟ ಸರ್ಕಾರ’ ಎಂದು ಹೇಳಿ ಬಿಟ್ಟರು. ಆಗ ಅವರ ಅಕ್ಕ, ಪಕ್ಕದಲ್ಲಿದ್ದ ಯಡಿಯೂರಪ್ಪ ಹಾಗೂ ಸಂಸದ ಪ್ರಹ್ಲಾದ ಜೋಶಿ, ತಪ್ಪನ್ನು ಗಮನಕ್ಕೆ ತಂದರು. ತಕ್ಷಣ ಸರಿಪಡಿಸಿಕೊಂಡ ಶಾ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿದರು.
ಸತ್ಯವನ್ನೇ ಹೇಳಿದ್ದಾರೆ ಸಿಎಂ
ಬೆಂಗಳೂರು: ಯಡಿಯೂರಪ್ಪ ಭ್ರಷ್ಟ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಲವು ವರ್ಷಗಳ ನಂತರ ಸತ್ಯ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಭ್ರಷ್ಟ
ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಎಲ್ಲರ ಮನಸಿನಲ್ಲಿರುವುದನ್ನೇ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾಗೆ ನಾವೇನು ಹೇಳಿಕೊಟ್ಟಿದ್ದೇವಾ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಅತ್ಯಂತ ಭ್ರಷ್ಟ ಸರ್ಕಾರ ನಡೆಸಿದ್ದರು ಎಂದು ಅಮಿತ್ ಶಾ ಹೇಳುವ ಮೂಲಕ ಕರ್ನಾಟಕ
ಚುನಾವಣಾ ಪ್ರಚಾರಕ್ಕೆ ಒಳ್ಳೆಯ ಗಿಫ್ಟ್ ನೀಡಿದ್ದಾರೆ. ಅವರಿಗೆ ಅಭಿನಂದನೆ.
● ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ
ಅಮಿತ್ ಶಾ ಸತ್ಯವನ್ನೇ ಹೇಳಿದ್ದಾರೆ. ಅವರಿಗೆ ಈಗ ಸತ್ಯ ಅರಿವಾಗಿದೆ.
● ಟಿ.ಬಿ. ಜಯಚಂದ್ರ, ಕಾನೂನು ಸಚಿವ
ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗಿದ್ದಾಗ ಅಮಿತ್ ಶಾ ಮತ್ತು ಮೋದಿ ಯಡಿಯೂರಪ್ಪ ಅವರನ್ನು ಬೈಯುತ್ತಿದ್ದರು. ಈಗ ಅದನ್ನೇ ಮುಂದುವರೆಸಿ ಸತ್ಯ ಹೇಳಿದ್ದಾರೆ.
● ರಾಮಲಿಂಗಾ ರೆಡ್ಡಿ, ಗೃಹ ಸಚಿವ
ನಾವು ಇದನ್ನೇ ಚುನಾವಣಾ ಪ್ರಣಾಳಿಕೆಯ ಲ್ಲಿಟ್ಟು ಜನರ ಮುಂದೆ ಹೋಗುತ್ತೇವೆ.
● ಆರ್.ವಿ. ದೇಶಪಾಂಡೆ, ಕೈಗಾರಿಕಾ ಸಚಿವ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.