ನಿರ್ಧಾರ ಪ್ರಬುದ್ಧವಾಗಿರಲಿ


Team Udayavani, Mar 28, 2018, 8:00 AM IST

ele.jpg

ರಾಜಕೀಯ ಪಕ್ಷಗಳು ತಮ್ಮ ಚಿಂತನೆ ಅಥವಾ ಕಾರ್ಯ ಕ್ರಮಗಳನ್ನು ಜನರ ಮುಂದೆ ಇಡುವ ಸಮಯ ಬಂದಿದೆ. ಈಗಲಾದರೂ ಅಭಿವೃದ್ಧಿ ಪರ ತಮ್ಮ ಸ್ಪಷ್ಟ ನಿಲುವು ಹಾಗೂ ಅದನ್ನು ಜಾರಿ ಗೊಳಿಸುವ ಬದ್ಧತೆಗೆ ಖಾತರಿ ತೋರಬೇಕಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಮಹೂರ್ತ ನಿಗದಿಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಒಳ್ಳೆಯ ಸರ್ಕಾರ ನೀಡುವ ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡುವ ಶಾಸಕರನ್ನು ಆಯ್ಕೆ ಮಾಡುವ ಅಧಿಕಾರ ಮತದಾರರಿಗೆ ಮತ್ತೂಮ್ಮೆ ಸಿಕ್ಕಿದೆ. ಹದಿನಾಲ್ಕನೇ ವಿಧಾನಸಭೆ ಅವಧಿ 2018ರ ಮೇ ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದು ಗೊತ್ತಿದ್ದರೂ ಕಳೆದ ಒಂದು ವರ್ಷದ ಹಿಂದೆಯೇ ಚುನಾವಣಾ ಸಿದ್ಧತೆ ಆರಂಭಗೊಂಡಿದ್ದಂತೂ ನಿಜ. ರಾಜ್ಯದ ಮಟ್ಟಿಗೆ ಪ್ರಮುಖವಾಗಿ ಮೂರು ರಾಜಕೀಯ ಪಕ್ಷಗಳು ತಮ್ಮ ತಮ್ಮ ಕೋಟೆ ಭದ್ರಪಡಿಸಿಕೊಳ್ಳುವ ಜತೆಗೆ ಅನ್ಯ ಪಕ್ಷಗಳಿಂದ ಸಮರ್ಥರನ್ನು ಸೆಳೆದು ಅಡಿಪಾಯ ಗಟ್ಟಿಗೊಳಿಸುವ ಕಾರ್ಯ ಸದ್ದಿಲ್ಲದೆ ನಡೆಸುತ್ತಿದ್ದವು.

ಒಂದು ಹಂತದಲ್ಲಿ ರಾಜ್ಯ ವಿಧಾನಸಭೆಗೆ ಆರು ತಿಂಗಳ ಮುಂಚೆಯೇ ಚುನಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರ ಬೆನ್ನಲ್ಲೇ ಈ ವರ್ಷಾಂತ್ಯಕ್ಕೆ ರಾಜಸ್ಥಾನ -ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯೂ ಇರುವುದರಿಂದ ರಾಜ್ಯ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಒಂದೇ ಬಾರಿ ನಡೆಸಲಾಗುವುದು. ಹೀಗಾಗಿ, ಆರು ತಿಂಗಳು ಚುನಾವಣೆ ಮುಂದೂಡಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅದೆಲ್ಲದಕ್ಕೂ ಕೇಂದ್ರ ಚುನಾವಣಾ ಆಯೋಗ ತೆರೆ ಎಳೆದು ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದೆ.

ಇದುವರೆಗಿನ ರಾಜ್ಯ ರಾಜಕೀಯ ಪರಿಸ್ಥಿತಿ ಬೇರೆ, ಇನ್ಮುಂದೆ ರಾಜಕೀ ಯದ ಪರಿಸ್ಥಿತಿಯೇ ಬೇರೆಯಾಗ ಲಿದೆ. ಸಂಕ್ರಾಂತಿ ನಂತರ ಒಂದು ಹಂತದ ಪಕ್ಷಾಂತರ ಪರ್ವ ನಡೆದು ರಾಮ ನವಮಿವರೆಗೂ ಮುಂದು ವರಿಯಿತು. ಇದೀಗ ಚುನಾವಣಾ ದಿನಾಂಕ ನಿಗದಿ ನಂತರ ಮತ್ತೂಂದು ಪಕ್ಷಾಂತರ ಪರ್ವಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ.

ಮತ್ತೂಂದು ವಿಚಾರ ಎಂದರೆ ಇದೀಗ ರಾಜಕೀಯ ಪಕ್ಷಗಳಿಗೆ ಮಡಿವಂತಿಕೆ ಎಂಬುದು ಬಹಿರಂಗ ವಾಗಿಯೇ ಇಲ್ಲ. ಗೆಲ್ಲುವ ಸಾಮ ರ್ಥ್ಯವನ್ನೇ ಮಾನದಂಡವಾಗಿರಿಸಿ ಕೊಂಡು ಜಾತಿ ಬಲ, ಹಣ ಬಲ ಪ್ರಮುಖವಾಗಿ ಗಮನಿಸಿ ಗೆಲ್ಲುವ ಕುದುರೆ ನಮ್ಮಲ್ಲಿರಬೇಕು ಎಂದು ಬಯಸುವುದೇ ಹೆಚ್ಚು. ಹೇಗಾ ದರೂ ಮಾಡಿ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕು. ಯಾರ ಹಂಗಿಲ್ಲದೆ ಆಡಳಿತ ನಡೆಸುವ ಅವಕಾಶ ಸಿಕ್ಕರೆ ನಾವಂದುಕೊಂಡಿದ್ದು ಮಾಡಲು ಸಾಧ್ಯ ಎಂಬುದು ಮೂರೂ ಪಕ್ಷಗಳ ಪ್ರತಿಪಾದನೆಯೂ ಹೌದು. ಅವರಂದುಕೊಂಡದ್ದು ಏನು ಎಂಬುದು ಯಕ್ಷಪ್ರಶ್ನೆ. ಕಳೆದ ಮೂರು ದಶಕಗಳ ರಾಜ್ಯ ರಾಜಕಾರಣ ದಲ್ಲಿ ಸ್ವಂತ ಶಕ್ತಿಯ ಮೇಲೆ ಈ ಮೂರೂ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಆಗ ಯಾಕೆ ಈಗಂದುಕೊಳ್ಳುತ್ತಿರುವುದನ್ನು ಮಾಡಲಿಲ್ಲ ಎಂಬುದಕ್ಕೂ ಅವುಗಳ ಬಳಿ ಉತ್ತರವಿಲ್ಲ. ಇನ್ನೊಮ್ಮೆ ಅವಕಾಶ ಕೊಟ್ಟು ನೋಡಿ ಎಂಬ ಸಬೂಬು ಅಷ್ಟೇ ಅವರಿಗಿರುವ ಹಾದಿ.

ಆದರೆ, ರಾಜಕೀಯ ಪಕ್ಷಗಳು ತಮ್ಮ ಚಿಂತನೆ ಅಥವಾ ಕಾರ್ಯ ಕ್ರಮಗಳನ್ನು ಜನರ ಮುಂದೆ ಇಡುವ ಸಮಯವಂತೂ ಬಂದಿದೆ. ಈಗಲಾದರೂ ಅಭಿವೃದ್ಧಿ ಪರ ತಮ್ಮ ಸ್ಪಷ್ಟ ನಿಲುವು ಅದಕ್ಕೆ ಪೂರಕವಾದ ಪ್ರಣಾಳಿಕೆ ಹಾಗೂ ಅದನ್ನು ಜಾರಿಗೊಳಿಸುವ ಬದ್ಧತೆಗೆ ಖಾತರಿ ತೋರಬೇಕಿದೆ. ಯಾಕೆಂದರೆ, ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ ಎಂಬಂತೆ ಕೇವಲ ಪ್ರಚಾರ ಅಥವಾ ಅಗ್ಗದ ಭರವಸೆಗಳ ಘೋಷಣೆಗೆ ಮತಗಳು ಬುಟ್ಟಿಗೆ ಬೀಳುತ್ತವೆ ಎಂಬುದು ಸುಳ್ಳು. ಅಭಿವೃದ್ಧಿ ಹಾಗೂ ಕಾರ್ಯಕ್ರಮಗಳ ಬಗ್ಗೆ ಸ್ಪಷ್ಟತೆ, ನಿಖರತೆ, ವಾಸ್ತವಾಂಶದ ಅರಿವು ಎಷ್ಟರ ಮಟ್ಟಿಗೆ ರಾಜಕೀಯ ಪಕ್ಷ ಅಥವಾ ಮತ ಕೇಳುವ ಅಭ್ಯರ್ಥಿಗೆ ಇದೆ ಎಂಬುದನ್ನೂ ಮತದಾರ ಊಹಿಸಬಲ್ಲ. ಇದೀಗ ಏನಿದ್ದರೂ ಅಳೆದೂ ತೂಗಿ, ಕಾರ್ಯಕ್ರಮ, ಪ್ರಚಾರ, ವರ್ಚಸ್ಸು, ಸಾಮರ್ಥ್ಯ, ಒಳ್ಳೆಯತನ ನೋಡಿಯೇ ಮತ ಹಾಕುವುದು. ಜನಸಾಮಾನ್ಯರು ಯೋಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವ ದಿನ ಸನಿಹವಾಗುತ್ತಿದೆ. ಮತದಾರರ ಕೈಯ್ಯಲ್ಲಿ ರಾಜ್ಯದ ಭವಿಷ್ಯವಿದೆ. ಅವರ ತೀರ್ಮಾನ ಏನು ಎಂಬುದು ಕಾದು ನೋಡಬೇಕಾಗಿದೆ.ಏನೇ ಆದರೂ ನಿರ್ಧಾರ ಪ್ರಬುದ್ಧವಾಗಿರಲಿ.

ಟಾಪ್ ನ್ಯೂಸ್

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.