ಅಸಹಾಯಕ ಮಹಿಳೆಗೆ ಸೂರು ನಿರ್ಮಾಣ


Team Udayavani, Mar 28, 2018, 9:39 AM IST

28-March-1.jpg

ತೋಕೂರು: ಬಡ ಮಹಿಳೆಯೊಬ್ಬರಿಗೆ ಸೂರನ್ನು ನಿರ್ಮಿಸಿ ಕೊಟ್ಟು ಗ್ರಾಮಸ್ಥರೆಲ್ಲರು ಔದಾರ್ಯತೆ ಮೆರೆದ ಘಟನೆ ಪಡುಪಣಂಬೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ 10ನೇ ತೋಕೂರಿನ ಕಂಬಳ ಬೆಟ್ಟಿನಲ್ಲಿ ನಡೆದಿದೆ.

ಆಕೆಯ ಹೆಸರು ಬೊಮ್ಮಿ ಪೂಜಾರ್ತಿ ಊರಲ್ಲೆಲ್ಲ ಬೊಮ್ಮಕ್ಕ ಎಂದೇ ಪರಿಚಿತರು. ಕೃಷಿ- ಕೂಲಿ ಕೆಲಸ, ತೆಂಗಿನ ಗೆರಟೆಯನ್ನು ಹದಮಾಡಿ ಸಟ್ಟಿಗ ಮಾಡುವ ಪರೋಕ್ಷ ಕಾಯಕವನ್ನು ಮಾಡಿಕೊಂಡು ಸಿಕ್ಕ ಒಂದಷ್ಟು ಪುಡಿಗಾಸೇ ಆಕೆಯ ಜೀವನಾಧಾರ. ಮೂವರು ಹೆಣ್ಣು ಮಕ್ಕಳನ್ನು ಕೈಗಿತ್ತು, ಪತಿ ತೌಡು ಪೂಜಾರಿ ಅಕಾಲಿಕವಾಗಿ ಸಾವನ್ನಪ್ಪಿದಾಗ ಬೊಮ್ಮಿ ಪೂಜಾರಿಗೆ ಆಸರೆಯಾದವರೇ ಸ್ಥಳೀಯರು. ಕಷ್ಟಪಟ್ಟು ಮಕ್ಕಳನ್ನು ಬೆಳೆಸಿ ಮದುವೆ ಮಾಡಿಸಿದರು.

ಪ್ರಾಮಾಣಿಕತೆಯಿಂದ ಜೀವನದ ಉದ್ದಕ್ಕೂ ಕಷ್ಟಗಳನ್ನೇ ಅನುಭವಿಸಿದ ಬೊಮ್ಮಿ ಪೂಜಾರಿಯವರ ಮನೆ ದಿನದಿಂದ ದಿನಕ್ಕೆ ಶಿಥಿಲಾವಸ್ಥೆಯನ್ನು ಕಾಣುತ್ತಿತ್ತು. ಜಮೀನಿನ ದಾಖಲೆ ಪತ್ರದ ಕಾನೂನಾತ್ಮಕ ತೊಡಕಿನಿಂದ ಮನೆಗೆ ಪ್ಲಾಸ್ಟಿಕ್‌ ಹೊದಿಕೆ ಅನಿವಾರ್ಯ ವಾಯಿತು. ಗಂಡನನ್ನು ಕಳೆದುಕೊಂಡಿರುವ ಹಿರಿಯ ಪುತ್ರಿ ಹಾಗೂ ಆಕೆಯ ಮಗನ ಸಂಸಾರವನ್ನು ಸರಿದೂಗಿಸಲು ಇದ್ದ ಮನೆಯನ್ನಾದರೂ ದುರಸ್ತಿ ಮಾಡಲು ಇಚ್ಛಿಸಿದ ಬೊಮ್ಮಿ ಅವರಿಗೀಗ 80ರ ಹರೆಯ. ಜತೆಯಲ್ಲಿರುವ ಮಗಳ ಹಾಗೂ ಮೊಮ್ಮಗನಿಗೊಂದು ಸೂರು ಸಿಗಲಿ ಎಂಬ ಕನಸು ಕಟ್ಟಿ ಕೊಂಡಿದ್ದರು.

ನೆರವಿಗೆ ನಿಂತ ಗ್ರಾ.ಪಂ.
ಗ್ರಾಮದ ಬಡ ಮಹಿಳೆಗೆ ಸೂರೊಂದನ್ನು ನಿರ್ಮಿಸಲು ಮೊದಲಿಗೆ ಪಡುಪಣಂಬೂರು ಗ್ರಾ.ಪಂಚಾಯತ್‌ನ ಅಧ್ಯಕ್ಷರಾಗಿರುವ ಮೋಹನ್‌ದಾಸ್‌ ಹಾಗೂ ಸದಸ್ಯರಾಗಿರುವ ಹೇಮಂತ್‌ ಅಮೀನ್‌ ಮುಂದಾದರಾದರೂ ಜಮೀನಿಗೆ ದಾಖಲೆ ಪತ್ರದ ಸಮಸ್ಯೆ ಯಿತ್ತು. ಇದು ಕಾನೂನಾತ್ಮಕವಾಗಿಯೂ ತೊಡಕಾಯಿತು. ಆದರೂ ಸಹ ಇದ್ದ ಸ್ಥಳದಲ್ಲಿಯೇ ಮನೆಯ ದುರಸ್ತಿ ಎಂಬ ಮೀಸಲು ಅನುದಾನವನ್ನು ಪಂಚಾಯತ್‌ನಿಂದ ಆರಂಭದಲ್ಲಿ ಬಳಸಿಕೊಂಡು ಸ್ಥಳೀಯ ಸಮಾಜಮುಖಿ ಚಿಂತನೆಯ ಸೇವಾ ಸಂಸ್ಥೆಗಳಿಗೆ ನೆರವನ್ನು ನೀಡಲು ಬೊಮ್ಮಿ ಪೂಜಾರಿಯವರ ಪರವಾಗಿ ವಿನಂತಿಸಿಕೊಂಡರು.

ಇದಕ್ಕೆ ಶೀಘ್ರ ಸ್ಪಂದನೆ ಸಿಕ್ಕಂತೆ ವ್ಯವಸ್ಥಿತವಾದ ಮನೆಯೊಂದು ಸುಮಾರು 6 ತಿಂಗಳ ಅವಧಿಯಲ್ಲಿ ಅಂದಾಜು 1.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಯಿತು. ಇವರಿಗೆ ಸ್ಥಳೀಯ ಗ್ರಾಮಸ್ಥರು, ಉತ್ಸಾಹಿ ಯುವಕರು, ಉದ್ಯಮಿಗಳು ಸಹ ವೈಯಕ್ತಿಕ ಸಹಾಯ ಮಾಡಿದ್ದಾರೆ.

ಕೈ ಮುಗಿದ ಬೊಮ್ಮಕ್ಕ
ಮನೆ ನಿರ್ಮಾಣದ ಬಗ್ಗೆ ಪತ್ರಿಕೆಯೊಂದಿಗೆ ಹೇಳಿಕೆ ನೀಡಲು ಮುಂದಾದರೂ ಸಹ ಬೊಮ್ಮಕ್ಕನ ಬಾಯಲ್ಲಿ ಮಾತು ಹೊರಡಲಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಆಕೆ ಕೈ ಮುಗಿದು ಸಹಕರಿಸಿದವರನ್ನು ನೆನಪಿಸಿಕೊಂಡು ಕಣ್ಣೀರು
ಸುರಿಸಿದರು. 

ಸಂಸ್ಥೆಗಳ ನೆರವು
ಗ್ರಾಮ ಪಂಚಾಯತ್‌ನ ಎಲ್ಲ ಸದಸ್ಯರು ಸಹ ಈ ಅಸಹಾಯಕ ಮಹಿಳೆಗೆ ಸ್ಪಂದಿಸಲು ಸಹಕರಿಸಿದರಲ್ಲದೇ, ಸ್ಥಳೀಯ ಸಂಘ ಸಂಸ್ಥೆಗಳು ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸಿದ್ದಾರೆ.
ಮೋಹನ್‌ ದಾಸ್‌, ಅಧ್ಯಕ್ಷರು,
   ಪಡುಪಣಂಬೂರು ಗ್ರಾ.ಪಂ.

ಟಾಪ್ ನ್ಯೂಸ್

JJ Perry of Hollywood came to Yash film Toxic

Toxic: ಯಶ್‌ ಚಿತ್ರಕ್ಕೆ ಬಂದ ಹಾಲಿವುಡ್‌ ನ ಜೆ.ಜೆ.ಪೆರ್ರಿ

final Verdict: ಬುಲ್ಡೋಜರ್‌ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್‌ ಅಂತಿಮ ತೀರ್ಪು

Final Verdict: ಬುಲ್ಡೋಜರ್‌ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್‌ ಅಂತಿಮ ತೀರ್ಪು

BGT 2024-25: Australia’s Squad For 1st Test against India announced

BGT: ಭಾರತ ವಿರುದ್ದದ ಮೊದಲ ಟೆಸ್ಟ್‌ ಗೆ ಆಸೀಸ್‌ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ

Pilikulka-Kambala

Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!

BS-yadiyurappa

Covid Scam: ಕೋವಿಡ್‌ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ

Palimaru-Swamji

Waqf Notice: ವಕ್ಫ್ ಬೋರ್ಡ್‌ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

JJ Perry of Hollywood came to Yash film Toxic

Toxic: ಯಶ್‌ ಚಿತ್ರಕ್ಕೆ ಬಂದ ಹಾಲಿವುಡ್‌ ನ ಜೆ.ಜೆ.ಪೆರ್ರಿ

final Verdict: ಬುಲ್ಡೋಜರ್‌ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್‌ ಅಂತಿಮ ತೀರ್ಪು

Final Verdict: ಬುಲ್ಡೋಜರ್‌ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್‌ ಅಂತಿಮ ತೀರ್ಪು

BGT 2024-25: Australia’s Squad For 1st Test against India announced

BGT: ಭಾರತ ವಿರುದ್ದದ ಮೊದಲ ಟೆಸ್ಟ್‌ ಗೆ ಆಸೀಸ್‌ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ

Pilikulka-Kambala

Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!

BS-yadiyurappa

Covid Scam: ಕೋವಿಡ್‌ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.