ಮಲಿನಗೊಂಡಿರುವ ಫ‌ಲ್ಗುಣಿ ನದಿಯ ನಿಜ ದರ್ಶನ !


Team Udayavani, Mar 28, 2018, 10:16 AM IST

28-March-3.jpg

ಮಹಾನಗರ: ಒಂದು ಕಡೆ ಹಗಲು ರಾತ್ರಿಯೆನ್ನದೆ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ. ಇನ್ನೊಂದೆಡೆ ನದಿಯುದ್ದಕ್ಕೂ ಕಾರ್ಖಾನೆಗಳಿಂದ ಎಗ್ಗಿಲ್ಲದೆ ಹೊರಬಂದು ನದಿಗೆ ಸೇರುತ್ತಿರುವ ಗಲೀಜು ನೀರು. ಇದರ ನಡುವೆ ನದಿಯಲ್ಲಿ ತೇಲಾಡುತ್ತಿರುವ ಪ್ಲಾಸ್ಟಿಕ್‌ ಬಾಟಲ್‌ಗ‌ಳು, ಪಾಚಿ ಕಟ್ಟಿದಂತೆ ಗಬ್ಬು ನಾರುತ್ತಿರುವ ಕಾರ್ಖಾನೆಗಳ ತ್ಯಾಜ್ಯವಸ್ತುಗಳು. ಮತ್ತೂಂದೆಡೆ ಇದ್ಯಾವುದನ್ನು ಗಮನಿಸದೆ, ಅದೇ ನೀರನ್ನು ತಮ್ಮ ದೈನಂದಿನ ಅಗತ್ಯಗಳಿಗೆ ಉಪಯೋಗಿಸುತ್ತಿರುವ ನದಿ ದಡದ ಮುಗ್ಧ ಜನರು..! ಇದು ಒಂದು ಕಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ನಗರದ ಹೊರವಲಯದಲ್ಲಿರುವ ಫ‌ಲ್ಗುಣಿ ನದಿಯ ಒಡಲಿನ ವಾಸ್ತವ ಸ್ಥಿತಿ.

ಮಂಗಳೂರಿಗೆ ಹೊಂದಿಕೊಂಡಿರುವ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುತ್ತಿರುವ ಫ‌ಲ್ಗುಣಿ ನದಿ ಈಗ ಸಂಪೂರ್ಣ ಕಲುಷಿತಗೊಂಡಿದ್ದು, ಈ ನದಿ ದಂಡೆಯಲ್ಲಿ ವಾಸಿಸುವ ಜನರು ಕೂಡ ಮೂಗು ಮುಚ್ಚಿಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ.

‘ಜಲ ಪಯಣ’ದ ಮೂಲಕ ಸತ್ಯದರ್ಶನ
ಪರಿಸರ ಪರ ಸಂಘಟನೆಯಾದ ಸಹ್ಯಾದ್ರಿ ಸಂಚಯ ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟವು ಫ‌ಲ್ಗುಣಿ ನದಿ ಎಷ್ಟೊಂದು ಮಲಿನಗೊಂಡಿದೆ ಎಂಬುದನ್ನು ತೋರಿಸುವುದಕ್ಕೆ ಮಾಧ್ಯಮದವರನ್ನು ಸುಲ್ತಾನ್‌ ಬತ್ತೇರಿಯಿಂದ ಮರವೂರು ಡ್ಯಾಂ ವರೆಗೆ ಬೋಟ್‌ನಲ್ಲಿ ಕರೆದೊಯ್ದಿದ್ದರು. ಆ ಮೂಲಕ, ಇಂಥದೊಂದು ಅಪರೂಪದ ‘ಜಲ ಪಯಣ’ದ ಮೂಲಕ ಫ‌ಲ್ಗುಣಿ ನದಿಯ ಸತ್ಯ ದರ್ಶನ ಮಾಡಿಸಿರುವುದು ಗಮನಾರ್ಹ.

ನದಿ ನೀರಿನ ಬಳಕೆಯಿಂದ ರೋಗಬಾಧೆ ಭೀತಿ
ಈಗ ಫ‌ಲ್ಗುಣಿ ನದಿ ಅಕ್ಷರಶಃ ವಿಷ ನೀರನ್ನು ಉಣಿಸಬೇಕಾದ ಸ್ಥಿತಿಗೆ ಬಂದು ನಿಂತಿದೆ. ಈ ನದಿ ನೀರಿನ ಮಾಲಿನ್ಯದಿಂದಾಗಿ ಸುತ್ತಮುತ್ತಲ ಮಂದಿಗೆ ನಾನಾ ತರಹದ ಚರ್ಮ ರೋಗಗಳಿಗೆ ಒಳಗಾಗುತ್ತಿದ್ದಾರೆ. ನದಿಯ ಪಕ್ಕದಲ್ಲಿಯೇ ಪ್ಲೈವುಡ್‌, ಗೇರುಬೀಜ ಸೇರಿದಂತೆ ಅನೇಕ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳ ತ್ಯಾಜ್ಯವೂ ನದಿ ಸೇರುತ್ತಿದೆ. ಇದರಿಂದಾಗಿ ನದಿ ನೀರು ಮಲಿನಗೊಂಡಿದ್ದು, ಇದೇ ನೀರನ್ನು ನಂಬಿಕೊಂಡ ಅನೇಕ ಜಲಚರಗಳು ಕೊನೆಯುಸಿರೆಳೆಯುತ್ತಿವೆ.

ಫ‌ಲ್ಗುಣಿ ನದಿಯ ನೀರು ಕೂಳೂರು, ತೋಕೂರು, ಮೇಲ್‌ಕೊಪ್ಪಲು, ಅತ್ರೆಬೈಲು, ಮರವೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಜೀವನಾಧಾರವಾಗಿದೆ. ಇದೇ ಕಾರಣಕ್ಕೆ ಈ ನದಿಗೆ ಮರವೂರಿನಲ್ಲಿ ಅಣೆಕಟ್ಟು ನಿರ್ಮಿಸಿ ನದಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲಾಗುತ್ತಿದೆ. ಆದರೆ ಮಲಿನಗೊಂಡ ನೀರನ್ನು ಕುಡಿಯುವ ಸ್ಥಿತಿ ಸ್ಥಳೀಯರದ್ದು. ಇಲ್ಲಿನ ತೋಕೂರು ಹಳ್ಳವಂತೂ ಸಂಪೂರ್ಣ ಮಲಿನಗೊಂಡಿದೆ. ಈ ಹಿಂದೆ ಈ ನದಿಯಲ್ಲಿ ವಿವಿಧ ಪ್ರಕಾರದ ಮೀನುಗಳು ಯಥೇತ್ಛವಾಗಿ ಸಿಗುತ್ತಿತ್ತು. ಆದರೆ ಈಗ ನದಿಯಲ್ಲಿನ ಜಲಚರ ನಾಶವಾಗುತ್ತಿದೆ.

ಈ ದಂಧೆಯಲ್ಲಿ ಅನೇಕ ಪ್ರಭಾವೀ ಮುಖಂಡರ ಕೈವಾಡವಿದೆ. ಜಿಲ್ಲಾಡಳಿತವು ಅಕ್ರಮ ಮರಳುಗಾರಿಕೆಯನ್ನು ಗಮನಿಸಿಯೂ ಕಣ್ಣುಮುಚ್ಚಿ ಕೂತಿದೆ. ಇವರ ಪ್ರಭಾವಕ್ಕೆ ಸ್ಥಳೀಯರು ಕೂಡ ಎದುರುತ್ತರ ಕೊಡಲು ಹೆದರುತ್ತಾರೆ’ ಎಂದು ಸ್ಥಳೀಯರೊಬ್ಬರು `ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. 

ಎಗ್ಗಿಲ್ಲದೆ ಸಾಗುತ್ತಿದೆ ಅಕ್ರಮ ಮರಳುಗಾರಿಕೆ
ಫ‌ಲ್ಗುಣಿ ನದಿಯಲ್ಲಿ ಪ್ರತಿ ದಿನ ಹಗಲು ರಾತ್ರಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸಾಂಪ್ರದಾಯಿಕ ಮರಳುಗಾರಿಕೆಗೆ ವಿರುದ್ಧವಾಗಿ ಅಂದರೆ, ಸುಮಾರು 20 ಮೀಟರ್‌ ಹೆಚ್ಚಿನ ಆಳದಿಂದ ಮರಳು ತೆಗೆಯುತ್ತಿದ್ದಾರೆ. ಪ್ರತಿದಿನ ಸುಮಾರು 50ಕ್ಕೂ ಹೆಚ್ಚಿನ ದೋಣಿಗಳು ಅಕ್ರಮ ಮರಳುಗಾರಿಕೆಯಲ್ಲಿ ನಿರತವಾಗಿದೆ. ಅಷ್ಟೇ ಅಲ್ಲದೆ ಬಿಹಾರ ಸೇರಿದಂತೆ ವಿವಿಧ ರಾಜ್ಯದ ನೂರಾರು ಮಂದಿ ಕೂಲಿ ಕಾರ್ಮಿಕರು ಈ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಪರವಾನಗಿ ಪಡೆದುಕೊಂಡು ಮರಳು ತೆಗೆಯಲು ತಮ್ಮ ದೋಣಿಗಳಲ್ಲಿ ಹಳದಿ ಬಣ್ಣದ ಪೈಂಟ್‌ ಮತ್ತು ದೋಣಿ ಸಂಖ್ಯೆಯನ್ನು ನಮೂದು ಮಾಡಲಾಗುತ್ತದೆ. ಆದರೆ ಅಕ್ರಮ ಮರಳುಗಾರಿಕೆ ದೋಣಿಯಲ್ಲಿ ಯಾವುದೇ ರೀತಿಯ ಕಾನೂನು ಅಂಶಗಳು ಕಾಣುವುದೇ ಇಲ್ಲ. ‘ಕಳೆದ ಅನೇಕ ಸಮಯಗಳಿಂದ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.

ಕೂಡಲೇ  ಶಿಸ್ತುಕ್ರಮ
ಕೆಲವು ದಿನಗಳ ಹಿಂದೆ ಫ‌ಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುವವರ ವಿರುದ್ಧ ಕಾರ್ಯಾಚರಣೆ
ನಡೆಸಿದ್ದೇವೆ. ಆ ಸಮಯದಲ್ಲಿ ಅನೇಕ ಅಕ್ರಮ ದೋಣಿಗಳನ್ನು ವಶಕ್ಕೆ ಪಡೆದು, ಮರಳುಗಾರಿಕೆ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರಗಿಸಿದ್ದೇವೆ. ಸದ್ಯ ಅಕ್ರಮ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸಲಾಗುವುದು.
– ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ಸಾರ್ವಜನಿಕರು ಒಗ್ಗಟ್ಟಾಗಿ
ಫ‌ಲ್ಗುಣಿ ನದಿಯು ಸಂಪೂರ್ಣ ಮಲಿನವಾಗಿದೆ. ನದಿ ತಟದ ಮಂದಿ ತ್ಯಾಜ್ಯಗಳನ್ನು ನದಿಗೇ ಹಾಕುತ್ತಿದ್ದಾರೆ. ಇದರಿಂದಾಗಿ ಜಲಚರಗಳು ಸಾವನ್ನಪ್ಪುತಿವೆ. ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಲು ಸಾರ್ವಜನಿಕರೆಲ್ಲರೂ ಒಟ್ಟಾಗಬೇಕಿದೆ.
– ದಿನೇಶ್‌ ಹೊಳ್ಳ, ಪರಿಸರವಾದಿ 

ಟಾಪ್ ನ್ಯೂಸ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.