ರಾಜಧಾನಿಯ ರಸ್ತೆಗಿಳಿಯಲಿವೆ ಕಡಿಮೆ ದರದ ಎಲೆಕ್ಟ್ರಿಕ್‌ ಬಸ್‌


Team Udayavani, Mar 28, 2018, 12:20 PM IST

rajadhani.jpg

ಬೆಂಗಳೂರು: ದೇಶದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ಗಳ ಪೂರೈಸಲು ಕಂಪನಿಗಳು ಮುಂದೆ ಬಂದ ಹಿನ್ನೆಲೆಯಲ್ಲಿ ಸುಮಾರು 500 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ರಸ್ತೆಗಿಳಿಸಲು ಬಿಎಂಟಿಸಿ ನಿರ್ಧರಿಸಿದೆ. 

1,500 ಡೀಸೆಲ್‌ ಆಧಾರಿತ ಬಸ್‌ಗಳನ್ನು ಖರೀದಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಸೇವೆ ಒದಗಿಸಲು ಕಂಪನಿಗಳು ಮುಂದೆ ಬಂದಿವೆ. ಈ ಹಿನ್ನೆಲೆಯಲ್ಲಿ 1,500ರ ಪೈಕಿ 12 ಮೀಟರ್‌ ಉದ್ದದ 500 ಹವಾನಿಯಂತ್ರಣ ರಹಿತ (ನಾನ್‌ ಎಸಿ) ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಪಡೆಯಲು ಉದ್ದೇಶಿಸಿದೆ. ಶೀಘ್ರದಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಟೆಂಡರ್‌ ಕರೆಯಲಿದೆ. 

ಈಗಿರುವ ಎಸಿ ಬಸ್‌ಗಳಿಗೆ ಪ್ರತಿ ಕಿ.ಮೀ. ಕಾರ್ಯಾಚರಣೆಗೆ 52 ರೂ. ತಗಲುತ್ತದೆ. ಆದರೆ, ಎಲೆಕ್ಟ್ರಿಕ್‌ ಬಸ್‌ಗಳನ್ನು ಪ್ರತಿ ಕಿ.ಮೀ.ಗೆ ಕೇವಲ 24.03 ರೂ.ಗಳಲ್ಲಿ ಓಡಿಸಲು ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್‌ ಕಂಪನಿ ಮುಂದೆ ಬಂದಿದೆ. ಇದರೊಂದಿಗೆ 6 ರೂ. ಇಂಧನ ಮತ್ತು 8 ರೂ. ನಿರ್ವಾಹಕ/ ಚಾಲಕನ ವೆಚ್ಚ ಸೇರಿ 40 ರೂ. ಆಗುತ್ತದೆ. ಕಿ.ಮೀಗೆ 12 ರೂ ಉಳಿತಾಯವಾಗಲಿದೆ.

ಬಿಎಂಟಿಸಿಯ ಬಸ್‌ಗಳು ಸಾಮಾನ್ಯವಾಗಿ ದಿನಕ್ಕೆ 200 ಕಿ.ಮೀ. ಸಂಚರಿಸುತ್ತವೆ. ಎಲ್ಲ ವೆಚ್ಚವನ್ನು ಕಡಿತಗೊಳಿಸಿ ಕಿ.ಮೀ.ಗೆ ಕನಿಷ್ಠ 5 ರೂ. ಉಳಿತಾಯ ಆಗಲಿದೆ. 500 ಬಸ್‌ಗೆ ಲೆಕ್ಕಹಾಕಿದರೂ ನಿತ್ಯ ಈ 500 ಎಲೆಕ್ಟ್ರಿಕ್‌ ಬಸ್‌ಗಳಿಂದ ಕನಿಷ್ಠ 5 ಲಕ್ಷ ರೂ. ಯಾವುದೇ ಶ್ರಮವಿಲ್ಲದೆ ಉಳಿತಾಯ ಆಗಲಿದೆ. ಡೀಸೆಲ್‌ ಆಧಾರಿತ ಬಸ್‌ಗಳು ಪರಿಸರ ಸ್ನೇಹಿ ಅಲ್ಲದ್ದರಿಂದ ನಿಗಮವು ಎಲೆಕ್ಟ್ರಿಕ್‌ ಬಸ್‌ಗಳತ್ತ ಮುಖಮಾಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಇನ್ನಷ್ಟು ಕಡಿಮೆ ದರದ ನಿರೀಕ್ಷೆ: ನೂರಾರು ಬಸ್‌ಗಳಿಗೆ ಟೆಂಡರ್‌ ಕರೆದಾಗ ಈ ದರ ಇನ್ನೂ ಕಡಿಮೆ ಆಗುವ ಸಾಧ್ಯತೆ ಇದೆ. ಹೀಗೆ ಟೆಂಡರ್‌ ಕರೆಯುವಾಗ ಎಸಿ, ನಾನ್‌ ಎಸಿ 9 ಮತ್ತು 12ಮೀ. ಉದ್ದ ಸೇರಿ ನಾಲ್ಕೂ ಮಾದರಿಯ ಬಸ್‌ಗಳಿಗೆ ಟೆಂಡರ್‌ ಆಹ್ವಾನಿಸಲಾಗುವುದು.

70 ಬಸ್‌ಗಳ ಸಬ್ಸಿಡಿಗಾಗಿ ಕೇಂದ್ರಕ್ಕೆ ಪತ್ರ: 150 ಎಲೆಕ್ಟ್ರಿಕ್‌ ಬಸ್‌ಗಳ ಪೈಕಿ 40ಕ್ಕೆ ಕೇಂದ್ರ ಸರ್ಕಾರ ಈ ಹಿಂದೆಯೇ ಅನುಮತಿ ಕೊಟ್ಟಿದೆ. ಈಗ ಮತ್ತೆ 40 ಬಸ್‌ಗಳ ಖರೀದಿಗೆ ಸಬ್ಸಿಡಿ ನೀಡುವ ಭರವಸೆ ನೀಡಿದೆ. ಉಳಿದ 70 ಬಸ್‌ಗಳ ಖರೀದಿಗೂ ಅವಕಾಶ ನೀಡುವಂತೆ ಬಿಎಂಟಿಸಿಯು ಕೇಂದ್ರಕ್ಕೆ ಮನವಿ ಮಾಡಿದೆ.

ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಕೇಂದ್ರ ಸರ್ಕಾರ ಶೇ. 60ರಷ್ಟು ಸಬ್ಸಿಡಿ ನೀಡಲಿದ್ದು, ನೇರವಾಗಿ ಬಿಎಂಟಿಸಿಗೆ ಸಬ್ಸಿಡಿ ಹಣ ಕೊಡಲಾಗುತ್ತದೆ. ನಿಗಮವು ಟೆಂಡರ್‌ ಪಡೆದ ಕಂಪನಿಗೆ ಈ ಅನುದಾನವನ್ನು ವರ್ಗಾವಣೆ ಮಾಡಲಿದೆ. ಪ್ರಸ್ತುತ ಗೋಲ್ಡ್‌ಸ್ಟೋನ್‌ ಕಂಪನಿಯು ಮೊದಲೆರಡು ಹಂತಗಳಲ್ಲಿನ 80 ಬಸ್‌ಗಳನ್ನು ಪೂರೈಸಲು ಭರವಸೆ ನೀಡಿದೆ.

ಅತಿ ಕಡಿಮೆ ದರ!: ಹಲವು ರಾಜ್ಯಗಳು ಈಗ ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ರೂಪದಲ್ಲಿ ಪಡೆದು, ಸಾರಿಗೆ ಸೇವೆಗೆ ಮುಂದಾಗಿವೆ. ಕರ್ನಾಟಕದಲ್ಲಿ ಅತಿ ಕಡಿಮೆ ದರದಲ್ಲಿ ಬಸ್‌ ಒದಗಿಸಲು ಕಂಪನಿಗಳು ಮುಂದೆ ಬಂದಿವೆ. ಹೈದರಾಬಾದ್‌ನಲ್ಲಿ 12 ಮೀ. ಉದ್ದದ ಎಸಿಗೆ ಪ್ರತಿ ಕಿ.ಮೀ.ಗೆ 49.12 ರೂ.ಗಳಿಗೆ ಬಸ್‌ ಕಲ್ಪಿಸಲು ಕಂಪನಿಗಳು ಮುಂದೆ ಬಂದಿದ್ದರೆ,

ಮುಂಬೈನಲ್ಲಿ 9 ಮೀಟರ್‌ ಉದ್ದದ ಎಸಿ ಬಸ್‌ಗೆ 57.93 ರೂ. ಹಾಗೂ 9 ಮೀ. ಉದ್ದದ ನಾನ್‌ ಎಸಿಗೆ 51.75 ರೂ. ಬೇಡಿಕೆ ಇಟ್ಟಿವೆ. ಆಂಧ್ರಪ್ರದೇಶದಲ್ಲಿ 12 ಮೀ. ಉದ್ದದ ನಾನ್‌ ಎಸಿ ಬಸ್‌ಗೆ 48 ರೂ. ನಿಗದಿಪಡಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ನಾನ್‌ ಎಸಿ 9 ಮೀ. ಉದ್ದದ ಬಸ್‌ಗೆ 24.03 ರೂ. ಹಾಗೂ 12 ಮೀ. ಉದ್ದದ ಎಸಿ ಬಸ್‌ಗೆ 37.45 ರೂ.ಗೆ ಸೇವೆ ಒದಗಿಸಲು ಕಂಪನಿಗಳು ನಿರ್ಧರಿಸಿವೆ. 

ಕಡಿಮೆ ದರಕ್ಕೆ ಕಾರಣ: ನಿತ್ಯ ತಲಾ ಬಸ್‌ಗೆ ಕನಿಷ್ಠ 200 ಕಿ.ಮೀ.ವರೆಗಿನ ಮೊತ್ತ ಖಾತ್ರಿ ಇರುತ್ತದೆ (ಮುಂಬೈನಲ್ಲಿ 150 ಕಿ.ಮೀ.ಗೆ ಸೀಮಿತ). ಅಂದರೆ ಇದಕ್ಕಿಂತ ಕಡಿಮೆ ಓಡಿದರೂ 200 ಕಿ.ಮೀ. ಲೆಕ್ಕಹಾಕಿ ಹಣ ಪಾವತಿ ಮಾಡಲಾಗುವುದು. ಪ್ರತಿ ವರ್ಷ ಕಿ.ಮೀ.ಗೆ ಶೇ. 2ರಷ್ಟು ನಿಗದಿಪಡಿಸಿದ ಹಣ ಹೆಚ್ಚಳ ಮಾಡಲಾಗುವುದು. ಎಲೆಕ್ಟ್ರಿಕ್‌ ಬಸ್‌ಗಳಿಂದ ಬರುವ ಆದಾಯ ಪ್ರತ್ಯೇಕವಾಗಿ ಇರಲಿದ್ದು, ಈ ಮೂಲಕ ಹಣ ಸಕಾಲದಲ್ಲಿ ಪಾವತಿ ಭರವಸೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಲಾಭ ಏನು?: ನೇರವಾಗಿ 12 ರೂ. ಉಳಿತಾಯ ಮಾತ್ರವಲ್ಲ; ಬಸ್‌ ನಿರ್ವಹಣೆ, ಖರೀದಿಗೆ ಕೋಟ್ಯಂತರ ಹೂಡಿಕೆ ಸಮಸ್ಯೆ ಇರುವುದಿಲ್ಲ. 500 ಬಸ್‌ಗಳ ಖರೀದಿಗೆ ಕೋಟ್ಯಂತರ ರೂ. ಬೇಕಾಗುತ್ತದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ನಿಗಮವು ಸಾಲದ ರೂಪದಲ್ಲಿ ನೂರಾರು ಕೋಟಿ ಹಣ ತಂದು ಹೂಡಿಕೆ ಮಾಡಬೇಕಾಗುತ್ತದೆ. ಅದಕ್ಕೆ ಪ್ರತಿಯಾಗಿ ನಿಯಮಿತವಾಗಿ ಬಡ್ಡಿ ಪಾವತಿಸಬೇಕು. ಬಸ್‌ಗಳ ಪ್ರತಿ ತಿಂಗಳ ನಿರ್ವಹಣೆ ಬೇರೆ ಇರುತ್ತದೆ. ಆದರೆ, ಗುತ್ತಿಗೆ ರೂಪದಲ್ಲಿ ಬಸ್‌ಗಳನ್ನು ರಸ್ತೆಗಿಳಿಸುವುದರಿಂದ ಇದಾವುದರ ಆತಂಕ ಇರುವುದಿಲ್ಲ.

ಅಂಕಿ ಅಂಶ
-500 ಎಲೆಕ್ಟ್ರಿಕ್‌ ಬಸ್‌ಗಳು ರಸ್ತೆಗೆ?
-24.03 ರೂ.ಗಳಲ್ಲಿ ಕಿ.ಮೀಗೆ ಬಸ್‌ ಓಡಿಸಲು ಗೋಲ್ಡ್‌ಸ್ಟೋನ್‌ ಕಂಪನಿ ಭರವಸೆ
-12 ರೂ. ಪ್ರತಿ ಕಿ.ಮೀ ನಿಗಮಕ್ಕೆ ಉಳಿತಾಯ
-200 ಕಿ.ಮೀ ದಿನಕ್ಕೆ ಪ್ರತಿ ಬಸ್‌ ಸಂಚಾರ ನಿರೀಕ್ಷೆ
-ಶೇ.60 ಎಲೆಕ್ಟ್ರಿಕ್‌ ಬಸ್‌ಗಳಿಗೆ ಕೇಂದ್ರದ ಸಬ್ಸಿಡಿ

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.