ಈ ಬಾರಿ ಅಭಿವೃದ್ಧಿ – ಅಪಪ್ರಚಾರದ ನಡುವಿನ ಸಂಘರ್ಷ


Team Udayavani, Mar 28, 2018, 3:04 PM IST

28-March-9.jpg

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ಚುನಾವಣೆಯನ್ನು ಎದುರಿಸಲು ಈಗಾಗಲೇ ವಿವಿಧ ಕಾರ್ಯ ತಂತ್ರ ರೂಪಿಸಿ ಅಖಾಡಕ್ಕೆ ಇಳಿದಿವೆ. ಕಾಂಗ್ರೆಸ್‌ ಪಕ್ಷವೂ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಕಳೆದ 5 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಮತ್ತು ಪಕ್ಷದ ಸಂಘಟನೆ ಈ ಬಾರಿಯ ಚುನಾವಣೆಯಲ್ಲಿ ನಮಗೆ ಶ್ರೀರಕ್ಷೆಯಾಗಿದೆ ಎನ್ನುತ್ತಾರೆ ಕಾಂಗ್ರೆಸ್‌ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌.

ಚುನಾವಣೆಯನ್ನು ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಂಪೂರ್ಣ ಸನ್ನದ್ಧವಾಗಿದೆ. ಚುನಾವಣೆಯನ್ನು
ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಎಂಟು ತಿಂಗಳ ಹಿಂದೆಯೇ ಕಾರ್ಯಯೋಜನೆಗಳನ್ನು
ರೂಪಿಸಿತ್ತು. ಎಐಸಿಸಿಯಿಂದ ಕರ್ನಾಟಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ನೇಮಕಗೊಂಡಿರುವ ಕೆ.ಸಿ. ವೇಣುಗೋಪಾಲ್‌, ಮೈಸೂರು ವಿಭಾಗ ಉಸ್ತುವಾರಿ ವಿಷ್ಣುನಾಥನ್‌ ಚುನಾವಣೆಗೆ ಪೂರಕವಾಗಿ ಪಕ್ಷ ಸಂಘಟನೆ, ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಕಾಲ ಕಾಲಕ್ಕೆ ಅವಶ್ಯ ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಅದರಂತೆ ತಳಮಟ್ಟದಿಂದ ನಮ್ಮ ಕೆಲಸಗಳು ನಡೆದಿವೆ; ನಡೆಯುತ್ತಿವೆ ಎಂದವರು ವಿವರಿಸುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಪೂರಕವಾಗಿ ನಮ್ಮ ಸಿದ್ಧತೆ 8 ತಿಂಗಳ ಹಿಂದೆಯೇ ಆರಂಭಗೊಂಡಿದೆ. ಜಿಲ್ಲೆಯಲ್ಲಿ 1,766 ಬೂತ್‌ಗಳಿವೆ. ಈ ಬಾರಿ ಬೂತ್‌ಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ನಾವು ಮಾಡಿರುವ ಪ್ರಥಮ ಕೆಲಸ ಈ ಎಲ್ಲ ಬೂತ್‌ಗಳಲ್ಲೂ ಬೂತ್‌ ಸಮಿತಿ ರಚನೆ. ಬೂತ್‌ ಸಮಿತಿಗಳು ಈ ಹಿಂದೆ ಇದ್ದರೂ ಇಷ್ಟೊಂದು ಪರಿಣಾಮಕಾರಿಯಾಗಿ ಆಗಿರಲಿಲ್ಲ. ಎಲ್ಲ ಬೂತ್‌ಗಳಲ್ಲೂ ಬೂತ್‌ ಮಟ್ಟದ ಏಜೆಂಟ್‌ಗಳನ್ನು (ಬಿಎಲ್‌ಎ) ನೇಮಿಸಲಾಗಿದೆ. ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳು ಹಾಗೂ ಕೆಲವು ಬ್ಲಾಕ್‌ ಮಟ್ಟಗಳಲ್ಲಿ  ಈಗಾಗಲೇ ಸಮಾವೇಶಗಳನ್ನು ನಡೆಸಿ ಕಾರ್ಯಕರ್ತರನ್ನು ಜಾಗೃತಗೊಳಿಸುವ ಕಾರ್ಯ ನಡೆದಿದೆ. ಮನೆಮನೆಗೆ ಕಾಂಗ್ರೆಸ್‌ ಅಭಿಯಾನವನ್ನು ದ.ಕ. ಜಿಲ್ಲೆಯಲ್ಲಿ ಯಶಸ್ವಿಯಾಗಿ ಮಾಡಿದೆ. ರಾಜ್ಯದ ಕಾಂಗ್ರೆಸ್‌ ಸರಕಾರದ ಸಾಧನೆಗಳನ್ನು ವಿವರಿಸುವ ಪುಸ್ತಕವನ್ನು ಕಾಂಗ್ರೆಸ್‌ ಪಕ್ಷ ಹೊರತಂದಿದ್ದು, ಮನೆಮನೆ ಅಭಿಯಾನದಲ್ಲಿ ಇದನ್ನು ಮತದಾರರಿಗೆ ನೀಡಿ ಅಭಿವೃದ್ಧಿಯ ಬಗ್ಗೆ ಮನದಟ್ಟು ಮಾಡುವ ಕಾರ್ಯ ಮಾಡಲಾಗಿದೆ ಎನ್ನುತ್ತಾರೆ.

ಚುನಾವಣೆಗೆ ಪೂರಕವಾಗಿ ತಳಮಟ್ಟದಲ್ಲಿ ನಮ್ಮ ಸಿದ್ಧತೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರತಿ ವಿಧಾನಸಭಾ ಮಟ್ಟದಲ್ಲಿ ಬೂತ್‌ ಮಟ್ಟದ ತರಬೇತಿಗಳನ್ನು ನಡೆಸಿದ್ದೇವೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ಸುಮಾರು 500 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಚರಿತ್ರೆ, ತಣ್ತೀ ಸಿದ್ಧಾಂತಗಳು, ಮತದಾರರ ಪಟ್ಟಿಯಲ್ಲಿ ಮತದಾರರ ಸೇರ್ಪಡೆ ಬಗ್ಗೆ ಬೂತ್‌ ಸಮಿತಿ ಅಧ್ಯಕ್ಷರ ಪಾತ್ರ, ಮತದಾರರ ಪಟ್ಟಿಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸುವಲ್ಲಿ ಬಿಎಲ್‌ಎಗಳು ಮಾಡಬೇಕಾದ ಕೆಲಸ ಹಾಗೂ ಸಾಮಾಜಿಕ ಜಾಲತಾಣದ ಬಗ್ಗೆ ಅರಿವು ನೀಡುವ ಕಾರ್ಯ ತರಬೇತಿ ಶಿಬಿರದಲ್ಲಿ ಆಗಿದೆ ಎಂದವರು ವಿವರಿಸುತ್ತಾರೆ.

ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳೇ ನಮ್ಮ ಚುನಾವಣಾ ಅಸ್ತ್ರ. ನಮ್ಮ ಸರಕಾರ ನುಡಿದಂತೆ ನಡೆದ ಸರಕಾರ. ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್‌, ರೈತರ ಸಾಲಮನ್ನಾ, ಹೈನುಗಾರರಿಗೆ ಹಾಲಿಗೆ ಲೀಟರ್‌ಗೆ 5 ರೂ. ಸಹಾಯಧನ, 94ಸಿ ಮತ್ತು 94ಸಿಸಿಯಲ್ಲಿ ಹಕ್ಕುಪತ್ರಗಳ ವಿತರಣೆ, ಬಿಪಿಎಲ್‌ ಕಾರ್ಡುಗಳ ವಿತರಣೆ, ಶಾಲಾ ಮಕ್ಕಳಿಗೆ ವಿದ್ಯಾಸಿರಿ, ಶೂಭಾಗ್ಯ, ಮನಸ್ವಿನಿ, ಮೈತ್ರಿ, ರಾಜೀವ್‌ ಗಾಂಧಿ ವಿದ್ಯುದೀಕರಣ ಯೋಜನೆಯಲ್ಲಿ ಬಡವರಿಗೆ ಉಚಿತ ವಿದ್ಯುತ್‌ ಸಂಪರ್ಕ ಮುಂತಾದ ಅನೇಕ ಜನಪರ ಯೋಜನೆಗಳು, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿ ಹೀಗೆ ನಮ್ಮ ಸರಕಾರ ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಕ್ರಾಂತಿಯನ್ನೇ ಮಾಡಿದೆ. ಜನತೆ ಇದನ್ನು ಮನಗಂಡಿದ್ದಾರೆ. ಜನರಿಗೆ ನಮ್ಮ ಸರಕಾರದ ಬಗ್ಗೆ ವಿಶ್ವಾಸ ಬಂದಿದೆ ಎಂದವರು ಹೇಳುತ್ತಾರೆ.

ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಬಗ್ಗೆ ವಿವರಿಸುವ ಅವರು, ಈ ಬಾರಿಯ ಚುನಾವಣೆ ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಣ ಸಂಘರ್ಷ ಕೂಡ ಆಗಿದೆ. ನಮ್ಮದು ಅಭಿವೃದ್ಧಿ ಅಜೆಂಡಾ. ಬಿಜೆಪಿಯದ್ದು ಅಪಪ್ರಚಾರ ಅಜೆಂಡಾ. ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಯಿಂದ ಜನ ರೋಸಿಹೋಗಿದ್ದಾರೆ. ನೋಟು ಅಪನಗದೀಕರಣ, ಜಿಎಸ್‌ಟಿ ಮುಂತಾದ ಕ್ರಮಗಳು ಜನರ ಬದುಕನ್ನು ದುಸ್ತರಗೊಳಿಸಿವೆ. ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲ್‌ ಬ್ಯಾರೆಲ್‌ಗೆ 140 ಡಾಲರ್‌ ಇದ್ದರೂ ಲೀಟರ್‌ಗೆ 70 ರೂ.ನಲ್ಲಿ ಪೆಟ್ರೋಲ್‌ ನೀಡಲಾಗಿತ್ತು. ಪ್ರಸ್ತುತ ಬ್ಯಾರೆಲ್‌ಗೆ 40 ಡಾಲರ್‌ ಇದ್ದರೂ ಲೀಟರ್‌ಗೆ 72 -73 ರೂ. ಇದೆ. ಯುಪಿಎ ಸರಕಾರದ ಅವಧಿಯಲ್ಲಿ ಗ್ಯಾಸ್‌ ಸಿಲಿಂಡರ್‌ 365 ರೂ.ನಲ್ಲಿ ವಿತರಿಸಲಾಗುತ್ತಿದ್ದರೆ ಈಗ 800 ರೂ. ಗೇರಿದೆ. ಅಡಿಕೆ, ರಬ್ಬರು, ಕಾಳುಮೆಣಸು ಬೆಳೆಗಾರರನ್ನು ಕೇಂದ್ರ ಸರಕಾರ ಸಂಕಷ್ಟಕ್ಕೆ ಸಿಲುಕಿಸಿದೆ. ದೇಶದಲ್ಲಿ ಅಚ್ಛೇ ದಿನ್‌ ಯಾರಿಗೂ ಬಂದಿಲ್ಲ. ಕೇಂದ್ರ ಸರಕಾರದ ಜನ ವಿರೋಧಿ ನೀತಿ ಮತ್ತು ವೈಫಲ್ಯವನ್ನು ಜನರ ಮುಂದೆ ತೆರೆದಿಡುತ್ತೇವೆ ಎನ್ನುತ್ತಾರೆ ಹರೀಶ್‌ ಕುಮಾರ್‌.

ಸಮಾನವಾಗಿ ಕಂಡಿದ್ದೇವೆ…
ಈ ಬಾರಿ ಚುನಾವಣೆ ಎದುರಿಸಲು ಯಾವುದೇ ವಿರೋಧ ಪಕ್ಷಗಳಲ್ಲಿ ಯಾವುದೇ ವಿಷಯಗಳಿಲ್ಲ. ಬಿಜೆಪಿ ಹಿಂದುತ್ವ ಹೆಸರಿನಲ್ಲಿ ಮತೀಯ ಭಾವನೆಗಳನ್ನು ಕೆರಳಿಸಿ ಜನರಲ್ಲಿ ಗೊಂದಲ ನಿರ್ಮಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ನಾವು ಎಲ್ಲ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡು ಸಮಾಜದಲ್ಲಿ ಶಾಂತಿ, ಸೌಹಾರ್ದದ ವಾತಾವರಣ ನೆಲೆಗೊಳಿಸುವ, ಸಾಮಾಜಿಕ ನ್ಯಾಯದ ಸಾಕಾರ ಕಾರ್ಯ ಮಾಡುತ್ತಿದ್ದರೆ ಬಿಜೆಪಿಯವರು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಜನತೆ ಇದನ್ನು ಅರಿತಿದ್ದಾರೆ.

ಎಂಟರಲ್ಲಿ ಎಂಟು: ಟಾರ್ಗೆಟ್‌
ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರೀ ಅಂತರದಿಂದ ಗೆಲುವು ಸಾಧಿಸಲಿದೆ 2013ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಸ್ಥಾನ ಗೆದ್ದಿದ್ದೇವೆ. ಸುಳ್ಯ ಕ್ಷೇತ್ರವನ್ನು ಅಲ್ಪಮತಗಳಿಂದ ಸೋತಿದ್ದೇವೆ. ಈ ಬಾರಿ ಕಳೆದ ಬಾರಿ ಗೆದ್ದಿದ್ದ 7 ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜತೆಗೆ ಉಳಿದ ಸುಳ್ಯದಲ್ಲೂ ಜಯ ಸಾಧಿಸಿ ಎಂಟರಲ್ಲಿ ಎಂಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಧೃಡ ವಿಶ್ವಾಸ ನಮ್ಮದಾಗಿದೆ.

ಜಿಲ್ಲೆಯಲ್ಲಿ ಪಕ್ಷದ ಸಂಘಟನೆ, ಸಿದ್ದರಾಮಯ್ಯ ನೀಡಿರುವ ಅಭಿವೃದ್ಧಿ, ಜನಪರ ಯೋಜನೆಗಳು ನಮಗೆ ಶ್ರೀರಕ್ಷೆಯಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಿರುವ ರಾಹುಲ್‌ ಗಾಂಧಿಯವರ ಜನಾಶೀರ್ವಾದ ಯಾತ್ರೆ ಸಂದರ್ಭ ವ್ಯಕ್ತವಾಗಿರುವ ಭಾರೀ ಜನಬೆಂಬಲ ಪಕ್ಷ ಜಿಲ್ಲೆಯಲ್ಲಿ ನಮ್ಮ ಪರವಾಗಿರುವ ವಾತಾವರಣಕ್ಕೆ ನಿದರ್ಶನವಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ಪ್ರತಿಫಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

 ಕೇಶವ ಕುಂದರ್‌ 

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.