ಪ್ರೌಢಿಮೆ ಅನಾವರಣಗೊಂಡ ಕುರಿಯ ಶೇಣಿ ತಾಳಮದ್ದಳೆ ಸಪ್ತಾಹ
Team Udayavani, Mar 30, 2018, 6:00 AM IST
ಕಳೆದ ವಾರದಿಂದ
ನಾಲ್ಕನೇ ದಿನದ “ಅತಿಕಾಯ ಮೋಕ್ಷಕ್ಕೆ’ ಭಾಗವತಿಕೆ ಮಾಡಿದವರು ರವಿಚಂದ್ರ ಕನ್ನಡಿಕಟ್ಟೆ. ಚೆಂಡೆ ಮದ್ದಳೆ ನುಡಿಸಿದವರು ರಾಮಪ್ರಸಾದ್ ವದ್ವ ಮತ್ತು ವಿನಯ ಅಚಾರ್ಯ ಕಡಬ. ರಾವಣನಾಗಿ ಹಿರಿಯರಾದ ಶಂಭು ಶರ್ಮ ವಿಟ್ಲ, ಅತಿಕಾಯನಾಗಿ ವಿಶ್ವೇಶ್ವರ್ ಭಟ್ ಸುಣ್ಣಂಬಳ, ಲಕ್ಷ್ಮಣನಾಗಿ ಭಾಸ್ಕರ ರೈ ಕುಕ್ಕವಳ್ಳಿ ಮತ್ತು ರಾಮನಾಗಿ ಸೇರಾಜೆ ಸೀತಾರಾಮ ಭಟ್ ಪಾತ್ರಗಳನ್ನು ನಿರ್ವಹಿಸಿದರು.
ಏರು ಪದಗಳಿಗೂ ಹೆಣ್ಣು ಮಕ್ಕಳ ಸ್ವರ ಹೊಂದಿಕೊಳ್ಳಬಲ್ಲದು ಎಂದು ತೋರಿಸಿಕೊಟ್ಟವರು ಕು| ಕಾವ್ಯಶ್ರೀ ಅಜೇರು ಮತ್ತು ಕು| ಅಮೃತಾ ಅಡಿಗ. ಐದನೇ ದಿನದ ಸುದರ್ಶನ ವಿಜಯ ಪ್ರಸಂಗದಲ್ಲಿ ಇವರಿಬ್ಬರೂ ತಮ್ಮ ಕಂಠಸಿರಿಯಿಂದ ಕಲಾಸಕ್ತರ ಮನ ತಣಿಸಿದರು. ಚೆಂಡೆ ಮದ್ದಳೆಯಲ್ಲಿ ಜಗನ್ನಿವಾಸ ರಾವ್ ಪುತ್ತೂರು ಮತ್ತು ಶ್ರೀಧರ ಪಡ್ರೆ ಸಹಕರಿಸಿದರು. ಮುಮ್ಮೇಳದಲ್ಲಿ ಸುದರ್ಶನನಾಗಿ ಉಜಿರೆ ಅಶೋಕ ಭಟ್,ಶತ್ರು ಪ್ರಸೂದನನಾಗಿ ಶಂಭು ಶರ್ಮ ವಿಟ್ಲ, ವಿಷ್ಣುವಾಗಿ ಜಬ್ಟಾರ್ ಸಮೋ ಸಂಪಾಜೆ, ಲಕ್ಷ್ಮಿಯಾಗಿ ವಿಷ್ಣು ಶವåì ವಾಟೆಪಡು³ ಮತ್ತು ದೇವೇಂದ್ರನಾಗಿ ಪಕಳಕುಂಜ ಶ್ಯಾಮ ಭಟ್ ಪ್ರದರ್ಶನ ನೀಡಿದರು.
“ಪಾದುಕಾ ಪ್ರಧಾನ’ ಆರನೇ ದಿನದ ಪ್ರಸಂಗ. ಭಾಗವತರಾಗಿ ಪಟ್ಲ ಸತೀಶ ಶೆಟ್ಟಿ ಮತ್ತು ಹಿರಿಯ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ತಮ್ಮ ಸ್ವರ ಮಾಧುರ್ಯವನ್ನೂ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಚೆಂಡೆ ಮದ್ದಳೆಯಲ್ಲಿ ವರ್ಷಿತ್ ಕಿಜೆಕ್ಕಾರು ಮತ್ತು ಸುಬ್ರಹ್ಮಣ್ಯ ಭಟ್ ದೇಲಂತಮಜಲು ಸಹಕರಿಸಿದರು. ಪಾತ್ರಧಾರಿಗಳಾಗಿ ಡಾ| ಪ್ರಭಾಕರ ಜೋಶಿ ಭರತನಾಗಿ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ರಾಮನಾಗಿ ಗಾಢ ಜ್ಞಾನವನ್ನು ಕಲಾಸಕ್ತರಿಗೆ ಉಣ ಬಡಿಸಿದರು. ವಸಿಷ್ಠನಾಗಿ ಶೇಣಿ ವೇಣು ಗೋಪಾಲ ಭಟ್ ಮತ್ತು ಲಕ್ಷ್ಮಣನಾಗಿ ದಿನೇಶ್ ಶೆಟ್ಟಿ ಅಳಿಕೆ ಕಾಣಿಸಿಕೊಂಡರು.
ಆರನೇ ದಿನ ರಾತ್ರಿ 7 ರಿಂದ 9 ರ ತನಕ “ಬಬ್ರುವಾಹನ’ ಬಯಲಾಟದ ರಸದೌತಣ. ಪುತ್ತಿಗೆ ರಘರಾಮ ಹೊಳ್ಳರ ಹಾಡುಗಾರಿಕೆಗೆ ಚೆಂಡೆ ಮದ್ದಳೆ ನುಡಿಸಿದವರು ಅಡೂರು ಗಣೇಶ ರಾವ್ ಮತ್ತು ಚೈತನ್ಯ ಕೃಷ್ಣ ಪದ್ಯಾಣ. ಬಬ್ರುವಾಹನಾಗಿ ಅದ್ಬುತ ಪ್ರದರ್ಶನ ನೀಡಿದವರು ಕಾಲೇಜು ವಿದ್ಯಾರ್ಥಿನಿ ಕು| ರಂಜಿತಾ ಎಲ್ಲೂರು. ಮಾತುಗಾರಿಕೆಯಲ್ಲಿ ಸ್ವರ ಭಾರ ಸಿದ್ಧಿಸಿಕೊಂಡರೆ ಮುಂದೆ ಯಕ್ಷಗಾನಕ್ಕೊಬ್ಬ ಪ್ರಬುದ್ಧ ಕಲಾವಿದೆಯಾಗಲ್ಲರು. ರಾಮಚಂದ್ರ ಭಟ್ ಎಲ್ಲೂರು, ಮಹೇಶ ಮಣಿಯಾಣಿ, ಕು| ಅನನ್ಯಾ ಬಳಂತಿಮೊಗರು, ವನಿತಾ ಭಟ್ ಎಲ್ಲೂರು, ಕು| ರಕ್ಷಿತಾ ಎಲ್ಲೂರು, ಕು| ಪ್ರಕೃತಿ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡರು.
ಸಪ್ತಾಹದ ಕೊನೆಯ ದಿನದ ಕೂಟ “ನಿಮಿ ಯಜ್ಞ’. ಈ ವಿಶಿಷ್ಟ ಪ್ರಸಂಗ ಕತೃì ನಿವೃತ್ತ ಪ್ರಾಧ್ಯಾಪಕ ರಾಧಾಕೃಷ್ಣ ಕಲ್ಚಾರ್.ಅರ್ಥ ಪುಷ್ಟಿಯುಳ್ಳ, ಪ್ರಾಸ ಬದ್ದ, ಸಂವಾದಕ್ಕೆ ಪೂರಕವಾಗಿ ನಿಲ್ಲುವಂಥ ಪ್ರಸಂಗವಿದು. ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ ವಿಶಿಷ್ಟ ಗಾಯನದ ಮೂಲಕ ಈ ಪ್ರಸಂಗಕ್ಕೆ ಜೀವ ತುಂಬಿದರು. ಬಿ. ಸೀತಾರಾಮ ತೋಳ್ಪಾಡಿತ್ತಾಯ ಮತ್ತು ಬಿ. ಜನಾರ್ದನ ತೋಳ್ಪಾಡಿತ್ತಾಯ ಸಹೋದರರು ಚೆಂಡೆ ಮದ್ದಳೆಯಲ್ಲಿ ಪ್ರತಿಭೆ ಮೆರೆದರು. ಕಲ್ಚಾರ್ ನಿಮಿ ಪಾತ್ರವನ್ನು ತನ್ನ ಕಲ್ಪನೆಗೆ ಸರಿಯಾಗಿ ದುಡಿಸಿಕೊಂಡರು. ಹರೀಶ ಬಳೆಂತಿಮೊಗರು ವಸಿಷ್ಠನ ಸೌಮ್ಯ ಸ್ವರವನ್ನೂ, ಸಿಟ್ಟುಗೊಂಡ ಶಾಪವೀಯುವ ಕಾಠಿಣ್ಯ ಸ್ವರವನ್ನೂ ಯುಕ್ತವಾಗಿ ಪ್ರಕಟಿಸಿದರು. ಪ್ರಾಚಾರ್ಯ ಉಮಾಕಾಂತ ಭಟ್ ಕೆರೆಕೈ ಗೌತಮನ ಸೌಮ್ಯ ಪಾತ್ರ ನಿರ್ವಹಿಸಿದ ರೀತಿ ಅಚ್ಚುಕಟ್ಟಾಗಿತ್ತು. ಬ್ರಹ್ಮನ ಪಾತ್ರವನ್ನು ಮಾಡಿದ ಶ್ರೀರಮಣ ಆಚಾರ್‌ರ ಅರ್ಥಗರ್ಭಿತ ಮಾತುಗಳು ಕಥೆಯ ಹಂದರಕ್ಕೆR ಅಂತಿಮ ನಿಗಮನವನ್ನು ತರುವಲ್ಲಿ ಯಶಸ್ಸಿಯಾಗಿತ್ತು.
ನಂತರ ನಡೆದ ಬಯಲಾಟ “ಇಂದ್ರಜಿತು’. ಪುತ್ತಿಗೆ ಭಾಗವತರಾಗಿ, ಎಂ. ಲಕ್ಷ್ಮೀಶ ಅಮ್ಮಣ್ಣಾಯ ಅಡೂರು ಗಣೇಶ ರಾವ್ ಹಿಮ್ಮೇಳದಲ್ಲಿ ಸಹಕರಿಸಿದರು. ಇಂದ್ರಜಿತುವಾಗಿ ಮಿಂಚಿನ ಸಂಚಾರ ಮಾಡಿದ ರಂಜಿತ ಎಲ್ಲೂರು ಇಲ್ಲಿಯೂ ಪ್ರಶಂಸಾರ್ಹ ಪ್ರದರ್ಶನವಿತ್ತರು. ಇವರ ಸಹೋದರಿ ಕು| ರಕ್ಷಿತಾ ಎಲ್ಲೂರು ಲಕ್ಷ್ಮಣನ ಪಾತ್ರ ನಿರ್ವಹಿಸಿ ಅಕ್ಕನ ಹಾಗೆ ತಾನೂ ಪ್ರದರ್ಶನ ನೀಡಬಲ್ಲೆ ಎಂದು ತೋರಿಸಿದ್ದಾರೆ. ಇತರ ಪಾತ್ರಗಳನ್ನು ರಾಮಚಂದ್ರ ಭಟ್ ಎಲ್ಲೂರು, ವನಿತಾ ಎಲ್ಲೂರು, ಜಯ ಪ್ರಕಾಶ್ ಹೆಬ್ಟಾರ್ , ಕು| ಪ್ರಕೃತಿ ,ಕು| ನಿಶಾ ನಿರ್ವಹಿಸಿದರು. ಎಲ್ಲೂರು ಕುಟುಂಬದ ತಂದೆ ತಾಯಿ ಮಕ್ಕಳ ಈ ಯಕ್ಷಗಾನ ಸೇವೆಗೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಯಿತು.
ರಸ ಋಷಿ ದೇರಾಜೆ ಸಭಾಂಗಣ, ರಸಿಕ ರತ್ನ ವಿಟ್ಲ ಜೋಶಿ ವೇದಿಕೆ, ವಿದ್ವಾನ್ ಪುಚ್ಚಕೆರೆ ಕೃಷ್ಣ$ ಭಟ್ ಸಂಸ್ಮರಣೆ, ಯಕ್ಷ ರಂಗಕ್ಕೆ ಕೊಡುಗೆ ನೀಡಿದ ಈ ಮಹಾನ್ ಚೇತನಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿರುವುದು ಸ್ತುತ್ಯಾರ್ಹವೆನಸಿತು.ವೆಂಕಟ್ರಮಣ ಭಟ್ ಪುಂಡಿಕಾç, ಸತೀಶ ಪುಣಿಂಚಿತ್ತಾಯ ಪೆರ್ಲ, ಶಾಂತಾರಾಮ ಕುಡ್ವ ಮೂಡಬಿದ್ರೆ ಮತ್ತು ಸದಾಶಿವ ರಾವ್ ನೆಲ್ಲಿಮಾರು ಇವರನ್ನು ಸಮ್ಮನಿಸಲಾಯಿತು. ಡಾ| ಎಂ. ಪ್ರಭಾಕರ ಜೋಶಿ ಸಂಸ್ಮರಣಾ ನುಡಿಯಾಡಿದರು. ರಾಧಾಕೃಷ್ಣ ಕಲ್ಚಾರ್ ಸಮಾರೋಪ ಭಾಷಣ ಮಾಡಿದರು.
ಕಲಾವಿದರನ್ನು ಕರೆದು, ಕ್ಲಪ್ತ ಸಮಯಕ್ಕೆ ಆರಂಭ ಮತ್ತು ಅಂತ್ಯಗೊಳಿಸುವಲ್ಲಿ ಕಾಠಿಣ್ಯ ತಳೆದ ಸಂಘಟಕ ಉಜಿರೆ ಅಶೋಕ ಭಟ್ ಮತ್ತು ಶೇಣಿ ವೇಣು ಗೋಪಾಲ ಭಟ್ ಶ್ರಮ ಅಭಿನಂದನೀಯ. ಸ್ಥಳವಿತ್ತು ಸಕಲ ವ್ಯವಸ್ಥೆ ಮಾಡಲು ಸಹಕರಿಸಿದ ಕ್ಷೇತ್ರದ ಮೊಕ್ತೇಸರ ಕೇಶವ ಆರ್. ವಿ. ಯವರ ಶ್ರಮ ಮತ್ತು ನೂರಾರು ಸಂರಕ್ಷಕ ಪೋಷಕರ ಕೊಡುಗೆ ಸಾರ್ಥಕವಾಗಿತ್ತು. ಮುಂದಿನ ವರ್ಷವೂ ಇಲ್ಲಿಯೇ ಸಪ್ತಾಹವಾಗಲಿ ಎಂಬ ಸಾರ್ವಜನಿಕರ ಮಾತು ಇದರ ಸಫಲತೆಗೆ ಸಾಕ್ಷಿ.
ಶಂಕರ್ ಸಾರಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.