ಹೀಗೊಂದು ಪ್ರವಾಸ ಕಥನ !


Team Udayavani, Mar 30, 2018, 7:30 AM IST

13.jpg

ಅದು ನಾನು 10ನೆಯ ತರಗತಿಯಲ್ಲಿ ಓದುತ್ತಿದ್ದ ಕಾಲ. ಸದಾ ಹಸಿರು ವನಸಿರಿಯಿಂದ ಕಂಗೊಳಿಸುತ್ತಿತ್ತು ನಮ್ಮ ಶಾಲೆ. ಸದಾ ಶಿಸ್ತುಬದ್ಧವಾದ ಅಧ್ಯಾಪಕರು ಮತ್ತು ಕಟ್ಟುನಿಟ್ಟಾದ ನಿಯಮಗಳು ನಮ್ಮ ಶಾಲೆಯಲ್ಲಿ ಜಾರಿಯಲ್ಲಿತ್ತು. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ನಡುವೆ ಸಲುಗೆಯ ವಾತಾವರಣ ಇರಲಿಲ್ಲ. ಆದರೂ ಸಹ ಕೆಲವು ಸಮಾರಂಭ ಮತ್ತು ವಿಶೇಷ ದಿನಗಳಂದು ಸ್ನೇಹಯುತ ವಾತಾವರಣ ಅಸ್ತಿತ್ವದಲ್ಲಿತ್ತು. ಇದಲ್ಲದೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಅಧಿಕ ಸೌಹಾರ್ದಯುತವಾದ ಸಂಬಂಧ ಬಳಕೆಯಲ್ಲಿದ್ದದ್ದು ಎಂದರೆ ಅದು ಶಾಲಾ ಪ್ರವಾಸದ ಸಂದರ್ಭದಲ್ಲಿ ಮಾತ್ರ.

ಎಂದಿನಂತೆ ಅದು ಚುಮು ಚುಮು ಚಳಿಯ ನವೆಂಬರ-ಡಿಸೆಂಬರದ ತಿಂಗಳಾಗಿತ್ತು. ನಮ್ಮ ಶಾಲೆಯಲ್ಲೂ ಪ್ರವಾಸದ ಸಮಯ. ನಮ್ಮ ತರಗತಿಗೆಂದೇ ವಿಶೇಷವಾಗಿ ಒಂದು ವಾರದ ಹಾಗೂ ಒಂದು ದಿನದ ಪ್ರವಾಸ ನಿಗದಿಯಾಗಿತ್ತು. ಒಂದು ದಿನದ ಪ್ರವಾಸವು ಸಮೀಪದ ಸೋಮೇಶ್ವರ, ಮಲ್ಪೆ, ಸೇಂಟ್‌ ಮೇರೀಸ್‌ ದ್ವೀಪ, ಉಡುಪಿ ಕ್ಷೇತ್ರ, ಮಣಿಪಾಲ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಸಂದರ್ಶನವನ್ನು ಒಳಗೊಂಡಿತ್ತು. ಒಂದು ವಾರ ಮನೆಯನ್ನು ಬಿಡಲು ಒಲ್ಲದ ನಾನು ಒಂದು ದಿನದ ಈ ಮಂಗಳೂರು ಪ್ರವಾಸಕ್ಕೆ ಹೆಸರನ್ನು ನೋಂದಾಯಿಸಿದ್ದೆ. ಆದರೆ ಫ‌ಜೀತಿ ಆದದ್ದು ಇಲ್ಲಿಯೇ. ಪ್ರವಾಸ ಕೇವಲ ಒಂದು ದಿನದ್ದು ನಿಜ, ಆದರೆ ಅದರ ಸಮಯವನ್ನು ನಾನು ವಿಚಾರಿಸದ್ದೇ ದೊಡ್ಡ ತಪ್ಪಾದದ್ದು. ಅಂತೂ ಮನೆಯವರನ್ನೆಲ್ಲ ಒಪ್ಪಿಸಿದ ನಾನು ಪ್ರವಾಸದ ತಯಾರಿಯಲ್ಲಿದ್ದೆ. ಪ್ರವಾಸದ ಮುನ್ನಾ ದಿನ ಕರೆದ ಸಭೆಯಲ್ಲಿ ತಿಳಿದ ವಿಷಯ ನನ್ನ ಆ ಪ್ರವಾಸದ ಸಂಭ್ರಮವನ್ನೆಲ್ಲ ಕಡಿಮೆಯಾಗುವಂತೆ ಮಾಡಿತು. ನಡೆದದ್ದು ಇಷ್ಟೇ. ಪ್ರವಾಸವು ಮುಂಜಾನೆ 3.30ಕ್ಕೆ ಸರಿಯಾಗಿ ಹೊರಟು ರಾತ್ರಿ ಸುಮಾರು ಹನ್ನೊಂದು-ಹನ್ನೊಂದೂವರೆಗೆ ತಲುಪಲು ನಿರ್ಧಾರವಾಗಿತ್ತು. ಅದಕ್ಕಾಗಿಯೇ ನಮ್ಮನ್ನು ಪ್ರವಾಸದ ಹಿಂದಿನ ದಿನದ ರಾತ್ರಿಯೇ ಶಾಲೆಯಲ್ಲಿ ತಂಗಲು ತಿಳಿಸಿದ್ದರು. ಇಲ್ಲವೇ ಮೂರು ಗಂಟೆಗೆ ಸರಿಯಾಗಿ ಶಾಲೆಗೆ ಬರಲು ಹೇಳಿದ್ದರು. ನಿಮಗೆ ಅಚ್ಚರಿಯಾಗಬಹುದು. ಇದೆಂತಹ ತಪ್ಪು ಎಂದು. ಆದರೆ ನನಗಂತೂ ಇದು ಸಮಸ್ಯೆಯಾಗಿಯೇ ಕಾಡಲಾರಂಭಿಸಿತು. ಮನೆಯನ್ನು , ಹೆತ್ತವರನ್ನು ಒಂದು ದಿನವೂ ಬಿಟ್ಟಿರದ ನಾನು ಒಂದು ರಾತ್ರಿ ಶಾಲೆಯಲ್ಲಿ ಹೇಗೆ ತಂಗಲಿ ಎಂದೇ ಚಡಪಡಿಸುತ್ತಿದ್ದೆ. ಮನೆಯಲ್ಲಿ ತಿಳಿಸಿದ ನನಗೆ ಕಾದಿದ್ದ ಆಶ್ಚರ್ಯದ ಸಂಗತಿ ಎಂದರೆ ತುಸು ಹೊತ್ತು ಆಲೋಚಿಸಿದ ನನ್ನ ತಂದೆ-ತಾಯಿ ನನ್ನ ಸ್ವಭಾವವನ್ನು ಅರಿತವರಾಗಿದ್ದರಿಂದ ನನ್ನನ್ನು ಶಾಲೆಗೆ ಮೂರು ಗಂಟೆಗೆ ತಲುಪಿಸುವ ಮಾತನ್ನು ಹೇಳಿದರು. ಈ ಮಾತು ನನ್ನ ಮನಸ್ಸಿನಲ್ಲಿ ಕಳೆದುಹೋಗಿದ್ದ ಪ್ರವಾಸದ ಅದೇ ಉತ್ಸಾಹವನ್ನು ಮರಳಿಸಿತು.

ಪ್ರವಾಸದ ದಿನವೂ ಬಂದುಬಿಟ್ಟಿತು. ನಾನು ಹೇಳಿದಂತೆ ನನ್ನ ಹೆತ್ತವರು ನನ್ನನ್ನು ಮೂರು ಗಂಟೆಗೆ ಶಾಲೆಗೆ ತಲುಪಿಸಿ ಶುಭವನ್ನು ಹಾರೈಸಿ ಬೀಳ್ಕೊಟ್ಟರು. ನಾನು ಅವರ ಹಾರೈಕೆಯನ್ನು ಮನಸಾ ಸ್ವೀಕರಿಸಿ ಪ್ರವಾಸದ ಬಸ್ಸನ್ನು ಏರಿದೆ. ಯೋಜನೆಯ ಹಾಗೆ ಐದರ ತಾಸಿಗೆ ಸೋಮೇಶ್ವರವನ್ನು ತಲುಪಿ, ದೇವರಿಗೆೆ ನಮಸ್ಕರಿಸಿ ಅಲ್ಲಿ ಬೀಚ್‌ನಲ್ಲಿ ಕೊಂಚ ಸಮಯ ವಿಹರಿಸಿ ಉಳ್ಳಾಲದ ಮಸೀದಿಯನ್ನು ಸಂದರ್ಶಿಸಿ ಅಲ್ಲಿ ಪ್ರಸಾದದ ರೂಪದಲ್ಲಿ ಕೊಟ್ಟ ಖರ್ಜೂರವನ್ನು ಸೇವಿಸಿ ಪಂಪ್‌ವೆಲ್‌ ಹೊಟೇಲಿನಲ್ಲಿ ಉಪಹಾರವನ್ನು ಮುಗಿಸಿ ಮಲ್ಪೆಯತ್ತ ಪಯಣ ಮುಂದುವರೆಸಿದೆವು. ನಾವು ಅಲ್ಲಿಗೆ ತಲುಪುವಾಗ ಮಟಮಟ ಮಧ್ಯಾಹ್ನ ಹನ್ನೆರಡರ ಸಮಯ. ಆ ಬಿಸಿಲಿಗೂ ಹಿಂಜರಿಯದ ನಾವು ಕಾಲ್ನಡಿಗೆಯಲ್ಲಿ ಸಾಗುತ್ತಾ ಅಲ್ಲಿನ ವಹಿವಾಟುಗಳನ್ನು ನೋಡುತ್ತಿದ್ದೆವು. ನಮ್ಮ ಅಧ್ಯಾಪಕರು ಸೇಂಟ್‌ ಮೇರೀಸ್‌ ದ್ವೀಪಕ್ಕೆ ತೆರಳಲು ಟಿಕೇಟ್‌ ಖರೀದಿಸಿ ನಮ್ಮನ್ನು ಬೋಟ್‌ ಪಯಣದಲ್ಲಿ ಮುಂದೆ ಕರೆದೊಯ್ದರು. ಬೋಟ್‌ ಪಯಣದ ಆನಂದ ನಿಜಕ್ಕೂ ಅವಿಸ್ಮರಣೀಯ. ಸಾಗುತ್ತಾ ಅಲ್ಲಿ ಮೀನುಗಾರರ ಕೆಲಸಗಳು, ದೂರದ ದ್ವೀಪದಲ್ಲಿ ಕಾಣುವ ತೆಂಗಿನ ತೋಟಗಳ ನೋಟ ನಿಜಕ್ಕೂ ಆ ಪ್ರಾಯದ ನಮಗೆ ಒಂದು ತರಹದ ಉಲ್ಲಾಸವನ್ನೇ ನೀಡಿತು. ಅಲ್ಲಿನ ಬಿಸಿಲಿನ ಝಳದಲ್ಲಿಯೂ ಬೀಚ್‌ ದಂಡೆಯ ಮೇಲೆ ಹೇರಳವಾಗಿ ಬಿದ್ದಿದ್ದ ಚಿಪ್ಪುಗಳೂ ಅನಾಯಾಸವಾಗಿ ನಮ್ಮ ಚೀಲಗಳನ್ನು ಸೇರಿದವು. ಇಷ್ಟಾಗುವಾಗ ಗಂಟೆ ಸರಿಯಾಗಿ 1.15 ಆಗಿತ್ತು. ನಂತರ ನಮ್ಮ ಪ್ರಯಾಣ ಸಾಗಿದ್ದು ಶ್ರೀಕ್ಷೇತ್ರ ಉಡುಪಿಗೆ. ಅಲ್ಲಿ ಶ್ರೀಕೃಷ್ಣನಿಗೆ ನಮಸ್ಕರಿಸಿ, ಪ್ರಸಾದ ಭೋಜನವನ್ನು ಮಾಡಿದೆವು. ಬಳಿಕ ತೀರಾ ಬಿಸಿಲಿದ್ದ ಕಾರಣ ಬಸ್ಸಿನಲ್ಲೇ ಕೊಂಚ ಹಾಡು-ಹರಟೆಯನ್ನು ಮಾಡುತ್ತಾ ವಿಶ್ರಾಂತಿ ಪಡೆದೆವು. ನಂತರ ಮೂರು ಗಂಟೆಗೆ ಮಣಿಪಾಲದ ಟಿ.ಎನ್‌. ಪೈ ಸಂಸ್ಥೆಗೆ ಭೇಟಿ ಕೊಟ್ಟೆವು. ಅಲ್ಲಿ ಸಂಗ್ರಹಿಸಿದ್ದ ಮಾನವನ ಹಲವು ವಯೋಮಾನದ ದೇಹ ರಚನೆಗಳ ಕುರಿತು ಅಧ್ಯಾಪಕರು ನೀಡುತ್ತಿದ್ದ ಮಾಹಿತಿಯನ್ನು ಕೇಳುತ್ತಾ ಮುಂದೆ ಸಾಗಿದೆವು. ಅಲ್ಲೇ ಹತ್ತಿರದಲ್ಲಿದ್ದ ನಕ್ಷತ್ರ ವೀಕ್ಷಣಾಲಯವನ್ನು ವೀಕ್ಷಿಸಿ ತಾರಾಮಂಡಲದಲ್ಲಿನ ವೈವಿಧ್ಯತೆಗೆ ಮಾರುಹೋದೆವು. ದಾರಿ ಮಧ್ಯೆ ಸಿಕ್ಕಿದ ಕೆ.ಎಂ.ಎಫ್. ಹಾಲಿನ ಸೊಸೈಟಿಯನ್ನು ವೀಕ್ಷಿಸಿ ಅಲ್ಲಿ ನೀಡಿದ “ಲಸ್ಸಿ’ಯ ಸವಿಯನ್ನು ಸವಿದೆವು. ನಂತರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಕ್ಕೆ ಬಂದು ಲಿಂಗಸ್ವರೂಪಿ ಶಿವನಿಗೆ ನಮಸ್ಕರಿಸಿ ಪ್ರಸಾದವನ್ನು ಪಡೆದು ಅಲ್ಲಿನ ರಾತ್ರಿಯ ಸೊಬಗನ್ನು ನೋಡಿ ಆನಂದಿಸಿದೆವು. ನಂತರ ತುಸುಕಾಲ ಶಾಪಿಂಗ್‌ ಮಾಡಿ, ರಾತ್ರಿಯ ಭೋಜನವನ್ನು ಪಡೆದು ಬಸ್‌ ಹತ್ತಿ ಆನಂದಿಸುತ್ತಾ, ಪ್ರವಾಸದ ಸವಿನೆನಪುಗಳೊಂದಿಗೆ ಶಾಲಾ ವಠಾರವನ್ನು ತಲುಪಿದೆವು. ನನಗಾಗಿ ಕಾಯುತ್ತಾ ಇದ್ದ ನನ್ನ ತಾಯ್ತಂದೆಯರೊಂದಿಗೆ ನಾನೂ ಮನೆಗೆ ಬಂದು ಸೇರಿದೆ.
ನನ್ನ ಈ ಪ್ರವಾಸದ ಅನುಭವಗಳ ಸವಿನೆನಪುಗಳನ್ನು ತಂದೆ-ತಾಯಿಯರ ಜತೆ ಹಂಚಿಕೊಂಡು ಮತ್ತೂಮ್ಮೆ ಖುಷಿಪಟ್ಟೆ.

ನಯನಾ ಜಿ.ಎಸ್‌.
ದ್ವಿತೀಯ ಬಿ. ಎ. ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ

ಟಾಪ್ ನ್ಯೂಸ್

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.