ಕಾಮಕಸ್ತೂರಿ ತಂಪು ಪಾನೀಯಗಳು
Team Udayavani, Mar 30, 2018, 7:30 AM IST
ಕಾಮಕಸ್ತೂರಿ ಬೀಜಗಳಿಗೆ ಸಬ್ಚ, ಫಲೋಡಾ ಸೀಡ್ಸ್, ಕಸಕಸೆ ಇತ್ಯಾದಿ ಹೆಸರುಗಳಿವೆ. ಈ ಬೀಜವು ಮಧುರವೂ, ಶೀತಲವಾದ ಗುಣಗಳನ್ನು ಹೊಂದಿದ್ದು ಮೂತ್ರ ಶುದ್ಧಿಕಾರಕವೂ ಆಗಿದೆ. ದೇಹದ ಉಷ್ಣತೆಯನ್ನು ಸಮತೋಲನಗೊಳಿಸಿ, ಮಲಬದ್ಧತೆಯನ್ನು ಹೋಗಲಾಡಿಸುವ ಇದರ ಸೇವನೆ ತೂಕ ಇಳಿಸುವವರಿಗೂ ವರದಾನ. ಸಕ್ಕರೆ ಬೆರೆಸಿದ ತೆಳುವಾದ ಹಾಲಿಗೆ, ಲಿಂಬೂ ಶರಬತ್‌ಗೆ ಅಥವಾ ಯಾವುದೇ ಪಾನೀಯ, ಸಲಾಡ್ಸ್, ರಾಯತಗಳಿಗೆ ಇದನ್ನು ಸೇರಿಸಬಹುದು.
ಕಾಮಕಸ್ತೂರಿ ವಿದ್ ಎಳನೀರು
ಬೇಕಾಗುವ ಸಾಮಗ್ರಿ: ನೆನೆಸಿದ ಕಾಮಕಸ್ತೂರಿ ಬೀಜ- ನಾಲ್ಕು ಚಮಚ, ಗಂಜಿ ಮಿಶ್ರಿತ ಎಳನೀರು- ಒಂದು ಕಪ್, ಬಾಳೆಹಣ್ಣು – ಎರಡು, ಲಿಂಬೆಹಣ್ಣು- ಒಂದು, ಸಕ್ಕರೆ- ಸಿಹಿಗೆ ಬೇಕಷ್ಟು, ಏಲಕ್ಕಿಪುಡಿ- ಚಿಟಿಕಿ.
ತಯಾರಿಸುವ ವಿಧಾನ: ಸಬ್ಚ ಬೀಜಗಳನ್ನು ಸುಮಾರು ಎರಡು ಗಂಟೆ ನೀರಿನಲ್ಲಿ ನೆನೆಸಿಡಿ. ಮಿಕ್ಸಿಂಗ್ ಬೌಲ್‌ಗೆ ಗಂಜಿಮಿಶ್ರಿತ ಎಳನೀರು ಹಾಕಿ, ಇದಕ್ಕೆ ಲಿಂಬೆರಸ, ಏಲಕ್ಕಿ ಮತ್ತು ಸಕ್ಕರೆ ಸೇರಿಸಿ ಬೇಕಷ್ಟು ನೀರು ಸೇರಿಸಿಕೊಂಡು ಮಿಶ್ರಮಾಡಿ. ನಂತರ ಸರ್ವ್ ಮಾಡುವಾಗ ಹೆಚ್ಚಿದ ಬಾಳೆಹಣ್ಣು ಮತ್ತು ನೆನೆಸಿಟ್ಟ ಸಬ್ಚ ಬೀಜಗಳನ್ನು ಸೇರಿಸಿ. ಬೇಕಿದ್ದರೆ ಐಸ್‌ಪೀಸ್ ಸೇರಿಸಬಹುದು. ಬಹಳ ಹೆಲ್ದಿಯಾದ ಇದರ ಸೇವನೆಯಿಂದ ದೇಹ ತಂಪಾಗುವುದರ ಜೊತೆಗೆ ಉರಿಮೂತ್ರ ಶಮನ.
ಖರಬೂಜ ವಿದ್ ಸಬ್ಚ ಬೀಜದ ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿ: ಹೆಚ್ಚಿದ ಖರಬೂಜ- ಒಂದು ಕಪ್, ತಂಪಾದ ಹಾಲು- ಎರಡು ಕಪ್, ಅವಲಕ್ಕಿ- ಒಂದು ಹಿಡಿ, ಸಕ್ಕರೆ ಅಥವ ಬೆಲ್ಲ ರುಚಿಗೆ ಬೇಕಷ್ಟು, ನೆನೆಸಿಟ್ಟ ಸಬ್ಚ ಬೀಜಗಳು- ಮೂರು ಚಮಚ, ಏಲಕ್ಕಿ ಪುಡಿ ಚಿಟಿಕಿ.
ತಯಾರಿಸುವ ವಿಧಾನ: ಖರಬೂಜಕ್ಕೆ ಹಾಲು, ಸಕ್ಕರೆ, ಅವಲಕ್ಕಿ ಮತ್ತು ಬೇಕಷ್ಟು ನೀರು ಸೇರಿಸಿ, ಮಿಕ್ಸಿಯಲ್ಲಿ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಸಬ್ಚ ಬೀಜಗಳು ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಸರ್ವ್ ಮಾಡಬಹುದು.
ಮಿಕ್ಸೆಡ್ ಫ್ರೂಟ್ಸ್ ರಸಾಯನ
ಬೇಕಾಗುವ ಸಾಮಗ್ರಿ: ನೆನೆಸಿದ ಸಬ್ಚಬೀಜ – ನಾಲ್ಕು ಚಮಚ, ತಂಪಾದ ದಪ್ಪಹಾಲು- ಎರಡು ಕಪ್, ಹೆಚ್ಚಿದ ಬಾಳೆಹಣ್ಣು, ಸಪೋಟಾ, ಪಪ್ಪಾಯ, ಖರ್ಬುಜ, ಸೇಬು ಇತ್ಯಾದಿ ಹಣ್ಣುಗಳ ಮಿಶ್ರಣ- ಎರಡು ಕಪ್, ಜೇನುತುಪ್ಪ- ಒಂದು ಚಮಚ, ಸಕ್ಕರೆ ರುಚಿಗೆ ಬೇಕಷ್ಟು, ಹೆಚ್ಚಿದ ಖರ್ಜೂರ, ಬಾದಾಮಿ- ಎರಡು ಚಮಚ, ಓಟ್ಸ್ – ಎರಡು ಚಮಚ.
ತಯಾರಿಸುವ ವಿಧಾನ: ಬಾಣಲೆ ಬಿಸಿಮಾಡಿ ಓಟ್ಸ್‌ನ್ನು ಸ್ವಲ್ಪ ಬೆಚ್ಚಗೆ ಮಾಡಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ಆರಿದ ಮೇಲೆ ಇದಕ್ಕೆ ತಂಪಾದ ದಪ್ಪಹಾಲನ್ನು ಸೇರಿಸಿ. ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳನ್ನು ಸೇರಿಸಿ ಸ್ವಲ್ಪ ಮ್ಯಾಶ್ ಮಾಡಿ. ನಂತರ, ರುಚಿಗೆ ಬೇಕಷ್ಟು ಸಕ್ಕರೆ, ಜೇನುತುಪ್ಪ, ಸಬ್ಚ ಬೀಜಗಳು ಹಾಗು ಡ್ರೈಫ್ರೂಟ್ಸ್ ಸೇರಿಸಿ ಮಿಶ್ರಮಾಡಿ. ಸರ್ವ್ ಮಾಡುವಾಗ ಮೇಲಿನಿಂದ ಕಾರ್ನ್ಫ್ಲೇಕ್ಸ್ ಹರಡಿ ಚೆರಿಯಿಂದ ಅಲಂಕರಿಸಬಹುದು.
ಕಾಮಕಸ್ತೂರಿ ವಿದ್ ಐಸ್‌ಕ್ರೀಮ್
ಬೇಕಾಗುವ ಸಾಮಗ್ರಿ: ನೆನೆಸಿದ ಕಾಮಕಸ್ತೂರಿ ಬೀಜ- ಎರಡು ಚಮಚ, ಹೆಚ್ಚಿದ ಮಾವು, ಚಿಕ್ಕು, ಬನಾನ, ಸೇಬು, ಫೈನಾಪಲ್ ಇತ್ಯಾದಿ ಹಣ್ಣುಗಳ ಮಿಶ್ರಣ- ಆರು ಚಮಚ, ಐಸ್‌ಕ್ರೀಮ್- ಎರಡು ಕಪ್, ತುಪ್ಪದಲ್ಲಿ ಹುರಿದ ಬಾದಾಮಿ, ಗೋಡಂಬಿ- ಎರಡು ಚಮಚ, ಒಣದ್ರಾಕ್ಷಿ- ಖರ್ಜೂರ- ಎರಡು ಚಮಚ, ಬೇಯಿಸದ ಫಲೂಡಸೇಮೆ- ಎರಡು ಚಮಚ.
ತಯಾರಿಸುವ ವಿಧಾನ: ಸರ್ವಿಂಗ್ ಬೌಲ್‌ನಲ್ಲಿ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳನ್ನು ಹರಡಿ ಮೇಲಿನಿಂದ ಐಸ್‌ಕ್ರೀಮ್ ಹಾಕಿ ಅದರ ಮೇಲಿನಿಂದ ಡ್ರೈಫೂಟ್ಸ್ ಹಾಗೂ ಸೇಮೆ ಹರಡಿ ಮೇಲಿನಿಂದ ಪುನಃ ಐಸ್‌ಕ್ರೀಮ್ ಹರಡಿ ಚೆರಿಯಿಂದ ಅಲಂಕರಿಸಿ.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.