ಕುಮಾರಸ್ವಾಮಿ ಅವರ ಸಾಧನೆಗಳೇ ಪಕ್ಷಕ್ಕೆ ಶ್ರೀರಕ್ಷೆ


Team Udayavani, Mar 29, 2018, 6:25 AM IST

Yogish-Shetty-Kaup.jpg

ಉಡುಪಿ: ನನ್ನ ಕಾಲೇಜು ದಿನಗಳು ಮುಗಿಯುತ್ತಿದ್ದ ವೇಳೆಗೆ ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದರು. ಆಗಲೇ ನಾನು ಪಕ್ಷದ ಕಾರ್ಯಕರ್ತ ನಾಗಿದ್ದೆ. ಸತತ 24 ವರ್ಷಗಳ ಕಾಲ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು ಕಳೆದ ಒಂದೂವರೆ ವರ್ಷಗಳಿಂದ ಜೆಡಿಎಸ್‌ ಉಡುಪಿ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್‌ ಖಾತೆ ತೆರೆಯುವುದು ಗ್ಯಾರಂಟಿ ಎನ್ನುತ್ತಾರೆ ಯೋಗೀಶ್‌ ಶೆಟ್ಟಿ ಕಾಪು ಅವರು. 

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ರಾಜಕಾರಣವನ್ನು ಕಟುವಾಗಿ ಟೀಕಿಸುವ ಯೋಗೀಶ್‌ ಅವರು ಜೆಡಿಎಸ್‌ ಪಕ್ಷ ಮಾತ್ರ ಸಾಮಾನ್ಯರು, ರೈತರು, ಕಾರ್ಮಿಕರ ಪರವಾಗಿದೆ. ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವ ಏಕೈಕ ಪಕ್ಷ ಜೆಡಿಎಸ್‌ ಎಂದು ಬಲವಾಗಿ ನಂಬಿದ್ದಾರೆ. “ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಟೀಕಿಸುವವರಿಗೆ ಈ ಚುನಾವಣೆ ಸೂಕ್ತ ಉತ್ತರ ನೀಡಲಿದೆ’ ಎಂದು ಯೋಗೀಶ್‌ ಹೇಳುತ್ತಾರೆ. 

ಕುಮಾರಣ್ಣನ ಜನಪರ ಆಡಳಿತ
ಕಳೆದ ಬಾರಿ 20 ತಿಂಗಳುಗಳ ಕಾಲ ಅತ್ಯುತ್ತಮ ಆಡಳಿತ ನೀಡಿದ ಕುಮಾರಸ್ವಾಮಿಯವರನ್ನು ಜನ ಮರೆತಿಲ್ಲ. ಕುಮಾರಣ್ಣ ಮತ್ತೂಮ್ಮೆ ಸಿಎಂ ಆಗಬೇ ಕೆಂಬುದು ನಾಡಿನ ಜನತೆಯ ಅಭಿಲಾಷೆ. ಉಡುಪಿ ಜನತೆಯೂ ಕುಮಾರಸ್ವಾಮಿಯವರ ಆಡಳಿತ ವೈಖರಿ ಮೆಚ್ಚಿದ್ದಾರೆ. ಈ ಬಾರಿ ಮತ್ತಷ್ಟು ಹೊಸ ಯೋಜನೆ ಗಳನ್ನು ಕುಮಾರಸ್ವಾಮಿಯವರು ಜನರ ಮುಂದೆ ಇಟ್ಟಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರು, ಮೀನುಗಾರರು, ನೇಕಾರರ ಸಾಲ ಮನ್ನಾ ಮಾಡು ವುದಾಗಿ ಘೋಷಿಸಿದ್ದಾರೆ. ಅಲ್ಲದೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ, ವಿಧವೆಯರು ಮತ್ತು ಅಂಗವಿಕಲರ ಮಾಸಾಶನ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಖಂಡಿತವಾಗಿಯೂ ಅದನ್ನು ಪೂರೈಸುತ್ತಾರೆ. 

70 ವರ್ಷ ಮೇಲ್ಪಟ್ಟವರಿಗೆ ಪ್ರತೀ ತಿಂಗಳು 5,000 ರೂ. ಗೌರವಧನ, ಗರ್ಭಿಣಿಯರಿಗೆ ಪ್ರತಿ ತಿಂಗಳು 6,000 ರೂ ನೆರವು, ಎಲ್ಲಾ ಗ್ರಾಮಗಳಲ್ಲಿಯೂ ಸುಸಜ್ಜಿತ ಆಸ್ಪತ್ರೆ, ಉದ್ಯೋಗ ಒದಗಿಸುವುದು ಮೊದಲಾದವು ಅವರ ಉತ್ತಮ ಯೋಜನೆಗಳು. ಅವಿದ್ಯಾವಂತ ಯುವಕ ಯುವತಿಯರ ಮೂಲಕ ಗಿಡ ನೆಡಿಸಿ ಅದನ್ನು ಬೆಳೆಸುವ ಕೆಲಸ ಕೊಟ್ಟು ಅವರಿಗೆ ವೇತನ ನೀಡುವ ದೂರಗಾಮಿ ಯೋಜನೆಯೂ ಅವರ ಬಳಿ ಇದೆ. ಈ ರೀತಿ ಅನೇಕ ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಇಚ್ಛಾಶಕ್ತಿ ಕುಮಾರಣ್ಣನ ಬಳಿ ಮಾತ್ರವೇ ಇದೆ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗಲೂ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂಬುದು ಯೋಗೀಶ್‌ ಅಭಿಪ್ರಾಯ.

ಕೆಲಸಕ್ಕಿಂತ ಪ್ರಚಾರವೇ ಹೆಚ್ಚು
ಉಡುಪಿಯಲ್ಲಿ ಈಗಿನ ಸಚಿವರಿಂದಾಗಲಿ, ಹಿಂದಿನ ಶಾಸಕರಿಂದಾಗಲಿ ಅಭಿವೃದ್ಧಿ ಕೆಲಸಗಳು, ಜನಪರ ಕಾರ್ಯಗಳು ನಡೆದಿಲ್ಲ. ಉಡುಪಿಯಲ್ಲಿ ಅಭಿವೃದ್ಧಿಗಿಂತ ಪ್ರಚಾರವೇ ಹೆಚ್ಚಾಗುತ್ತಿದೆ. ಮೂಲ ಸೌಕರ್ಯ ಒದಗಿಸಿಕೊಟ್ಟಿಲ್ಲ. ಕುಡಿಯುವ ನೀರಿನ ಸಮಸ್ಯೆ ಜನವರಿಯಿಂದಲೇ ಆರಂಭ ವಾಗಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ವಾರಾಹಿಯಿಂದ ನೀರು ತರುವ ಯೋಜನೆ ಕಾರ್ಯಗತ ಗೊಳಿಸುತ್ತೇವೆ. ಜಿಲ್ಲೆಗೆ ಸರಕಾರಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಕಾಲೇಜು, ಸಿಆರ್‌ಝೆಡ್‌ ವಲಯ 2ಕ್ಕೆ ಸೇರ್ಪಡೆ ಮಾಡುವುದು, ಪ್ರವಾಸೋದ್ಯಮ ಅಭಿವೃದ್ಧಿ ಇತ್ಯಾದಿ ಕೆಲಸಗಳತ್ತ ವಿಶೇಷ ಗಮನ ನೀಡುತ್ತೇವೆ. ಈಗ ಉಡುಪಿ ನಗರಸಭೆಯ ಆಡಳಿತವೂ ಸಮರ್ಪಕವಾಗಿಲ್ಲ. ಅವ್ಯವಹಾರ ಹೆಚ್ಚಾಗಿದೆ. ಮುಂದೆ ಜೆಡಿಎಸ್‌ ನಗರ ಸಭೆಯ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿ ಅಧಿಕಾರಕ್ಕೆ ಬರಲಿದೆ. ಈ ವಿಶ್ವಾಸ ನನಗಿದೆ. ಈಗ ನಡೆದಿರುವ ಅವ್ಯವಹಾರಗಳೆಲ್ಲವನ್ನು ಬಯಲಿಗೆಳೆಯುತ್ತೇವೆ. ಉಡುಪಿಗೆ 2,000 ಕೋ.ರೂ. ಅನುದಾನ ಬಂದಿದ್ದರೆ ಅದು ಏನಾಯಿತು ಎಂಬ ಪ್ರಶ್ನೆಗೆ ಸಚಿವರು ಉತ್ತರ ನೀಡಬೇಕು. ಉಡುಪಿ ಜಿಲ್ಲೆ ರಚನೆಯಾದದ್ದೇ ಜನತಾ ಪರಿವಾರದ ಸರಕಾರ ಇರುವಾಗ ಎನ್ನುತ್ತಾರೆ ಯೋಗೀಶ್‌ ಶೆಟ್ಟಿ ಅವರು.

ನಿಷ್ಠೆ ಮುಖ್ಯ
ಹಿಂದೆ ಪಕ್ಷವನ್ನು ಮುನ್ನಡೆಸಿದವರ ಬಗ್ಗೆ ಮಾತ ನಾಡಲಾರೆ. ಆದರೆ ನಾನು ಮಾತ್ರ ಪಕ್ಷ ನಿಷ್ಠೆಗೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ. ನಿಷ್ಠೆಯಿಂದ ಇಲ್ಲದಿದ್ದರೆ ಪಕ್ಷಕ್ಕೆ ಅಗತ್ಯವಿಲ್ಲ. ತಳಮಟ್ಟದ ಪಕ್ಷ ಸಂಘಟನೆಗೆ ಆದ್ಯತೆ ಕೊಡುತ್ತಿದ್ದೇನೆ. ನಾನು ಯಾವ ಲಾಬಿ ಮಾಡಿಯೂ ಈ ಸ್ಥಾನಕ್ಕೇರಿಲ್ಲ. ನನ್ನ ಸುದೀರ್ಘ‌ ಕಾಲದ ಪಕ್ಷನಿಷ್ಠೆ, ಕೆಲಸಗಳನ್ನು ನೋಡಿ ಸ್ವತಃ ದೇವೇಗೌಡ ಮತ್ತು ಕುಮಾರಸ್ವಾಮಿಯವರು ನನ್ನನ್ನು ಕರೆದು ಈ ಜವಾಬ್ದಾರಿ ಕೊಟ್ಟಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳನ್ನು ಕೂಡ ದೂರ ಇಟ್ಟಿದ್ದೇವೆ. ಯಾವ ರೀತಿಯ ಹೊಂದಾಣಿಕೆಯೂ ಇಲ್ಲ. ಕಾರ್ಕಳದಲ್ಲಿ ಮಾತ್ರ ಬಿಎಸ್‌ಪಿಗೆ ಸ್ಥಾನ ಬಿಟ್ಟುಕೊಡುತ್ತೇವೆ. ಉಳಿದೆಡೆ ಬಿಎಸ್‌ಪಿಯವರು ನಮಗೆ ಸಹಕಾರ ನೀಡುತ್ತಾರೆ. ಕಾಪುವಿನಲ್ಲಿ ನಾನೇ ಸ್ಪರ್ಧಿಸಬೇಕೆಂಬ ಒತ್ತಾಯ ಇದೆ. ನಾನು ಇನ್ನು ಕೂಡ ನಿರ್ಧರಿಸಿಲ್ಲ. ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಉಳಿದ ಕ್ಷೇತ್ರಗಳತ್ತ ಗಮನ ಕೊಡುವುದು ಕಷ್ಟ.

ಹೋರಾಟದಲ್ಲಿ ಹಿಂದೆ ಬಿದ್ದಿಲ್ಲ
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಉಂಟಾದಾಗ, ಬೆಲೆ ಏರಿಕೆಯಾ ದಾಗ, ಕಾರ್ಮಿಕರಿಗೆ ಸಮಸ್ಯೆ ಎದುರಾದಾಗ ಹೀಗೆ ವಿವಿಧ ಸಂದರ್ಭಗಳಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಸುಜ್ಲಾನ್‌ ಕಾರ್ಮಿಕರಿಗೆ ಅನ್ಯಾಯ ವಾದಾಗ ಅವರ ಪರ ನಿಂತು ನ್ಯಾಯ ಒದಗಿಸಿದ್ದೇವೆ. ಬೇರೆ ಪಕ್ಷಗಳ ಅನೇಕ ಕಾರ್ಯಕರ್ತರು ಜೆಡಿಎಸ್‌ ಸೇರ್ಪಡೆ ಗೊಂಡಿದ್ದಾರೆ. ಮುಂದೆಯೂ ಇತರ ಪಕ್ಷಗಳ ಕಾರ್ಯಕರ್ತರು, ನಾಯಕರು ಜೆಡಿಎಸ್‌ ಸೇರ್ಪಡೆಗೊಳ್ಳಲಿದ್ದಾರೆ ಎನ್ನುತ್ತಾರೆ ಯೋಗೀಶ್‌.

ಕಾಂಗ್ರೆಸ್‌, ಬಿಜೆಪಿಯದ್ದು  ನಾಟಕ
ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಗೆ ಶಾಂತಿ, ಸಮೃದ್ಧಿ ಬೇಕಾಗಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರ ಕಚ್ಚಾಡುತ್ತಿರಬೇಕೆಂದೇ ಆ ಎರಡೂ ಪಕ್ಷಗಳು ಬಯಸುತ್ತವೆ. ಈ ಬಾರಿಯ ಚುನಾವಣೆಯಲ್ಲಿ ಅವೆರಡರ ಬಣ್ಣ ಬಯಲಾಗ ಲಿದೆ. ಕುಮಾರಸ್ವಾಮಿ ಅವರ ಉತ್ತಮ ಆಡಳಿತ ಮತ್ತೂಮ್ಮೆ ಈ ರಾಜ್ಯದ ಜನರಿಗೆ ಸಿಗಲಿದೆ. ಉಡುಪಿಯಲ್ಲಿಯೂ ಅಚ್ಚರಿಯ ಫ‌ಲಿತಾಂಶ ಹೊರಬೀಳಲಿದೆ. ಈಗಾಗಲೇ ಉಡುಪಿ ಮತ್ತು ಬೈಂದೂರಿನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಕಾರ್ಮಿಕ ನಾಯಕ ರವಿ ಶೆಟ್ಟಿ ಬೈಂದೂರಿನ ಅಭ್ಯರ್ಥಿಯಾಗಿದ್ದಾರೆ. ಹಿಂದುಳಿದ ವರ್ಗಗಳ ನಾಯಕ, ನಿಷ್ಠಾವಂತ ಕಾರ್ಯಕರ್ತ ಗಂಗಾಧರ ಭಂಡಾರಿ ಬಿರ್ತಿ ಅವರು ಉಡುಪಿಯ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಅವರು ಕ್ಷೇತ್ರದಲ್ಲಿ ಚಿರಪರಿಚಿತರು. ಕುಂದಾಪುರ, ಕಾಪುವಿನಲ್ಲಿಯೂ ಸ್ಪರ್ಧಾಕಾಂಕ್ಷಿಗಳು ತುಂಬಾ ಮಂದಿ ಇದ್ದಾರೆ. ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆಯಾಗಲಿದೆ. ನಮ್ಮಲ್ಲಿ ತೋಳ್ಬಲ, ಹಣ ಬಲ ಇಲ್ಲ. ಆದರೆ ಮನೆ ಮನೆಗೆ ಹೋಗಿ ಮತ ಕೇಳುತ್ತೇವೆ. ಕುಮಾರಸ್ವಾಮಿಯವರ ಉತ್ತಮ ಯೋಜನೆಗಳ ಬಗ್ಗೆ ತಿಳಿಸುತ್ತೇವೆ. ಈಗಾಗಲೇ ಬೂತ್‌ ಸಮಿತಿ ರಚನೆ ಶೇ. 70ರಷ್ಟು ಪೂರ್ಣಗೊಂಡಿದೆ ಎಂದು ಹೇಳುತ್ತಾರೆ ಯೋಗೀಶ್‌ ಶೆಟ್ಟಿ ಅವರು.

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.