ಒಂದು ದಿನ ಅಂತ ಶುರುವಾಗಿದ್ದು 15 ದಿನ ಆಯ್ತು
Team Udayavani, Mar 30, 2018, 8:15 AM IST
“ಹೀಗೊಂದು ದಿನ’ ಎಂಬ ಸಿನಿಮಾವೊಂದು ತಯಾರಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಚಂದ್ರಶೇಖರ್ ನಿರ್ಮಿಸಿದ್ದಾರೆ. “ಹೀಗೊಂದು ದಿನ’ ಮಹಿಳಾ ಪ್ರಧಾನ ಚಿತ್ರವಾದ ಕಾರಣ, ಚಿತ್ರವನ್ನು ಮಹಿಳಾ ದಿನಾಚರಣೆಯಂದು ಬಿಡುಗಡೆ ಮಾಡಲು ನಿರ್ಮಾಪಕರು ಯೋಚಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಚಿತ್ರ ಇಂದು ಬಿಡುಗಡೆಯಾಗುತ್ತಿದೆ.
“ಇದು ಅನ್‌ಕಟ್ ಸಿನಿಮಾ. ಒಂದೇ ದಿನ ಚಿತ್ರೀಕರಿಸಬೇಕೆಂದು ಆಲೋಚಿಸಿದ್ದೆವು. ಆದರೆ, ಅದು ಕಷ್ಟ ಎಂದು ಗೊತ್ತಾಗಿ 12 ರಿಂದ 15 ದಿನ ಚಿತ್ರೀಕರಣ ಮಾಡಿದ್ದೇವೆ. ಈಗಾಗಲೇ ಚಿತ್ರದ ಹಾಡುಗಳನ್ನು ಜನ ಇಷ್ಟಪಟ್ಟಿದ್ದಾರೆ. ಚಿತ್ರ ಇಂದು ಕರ್ನಾಟಕದಲ್ಲಿ
ಬಿಡುಗಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಟಲಿ, ಜರ್ಮನ್, ಯುಎಸ್‌ಎನಲ್ಲೂ ತೆರೆಕಾಣಲಿದೆ’ ಎಂದು ವಿವರ ನೀಡಿದರು
ಚಂದ್ರಶೇಖರ್. ಚಿತ್ರವನ್ನು ವಿಕ್ರಮ್ ಯೋಗಾನಂದ್ ನಿರ್ದೇಶನ ಮಾಡಿದ್ದಾರೆ. ಇವರಿಗಿದು ಚೊಚ್ಚಲ ಸಿನಿಮಾ. ನಿರ್ದೇಶಕರು ಕೂಡಾ ಆರಂಭದಲ್ಲಿ ಒಂದೇ ದಿನದಲ್ಲಿ ಈ ಸಿನಿಮಾವನ್ನು ಮಾಡಿ ಮುಗಿಸಬೇಕೆಂದುಕೊಂಡಿದ್ದರಂತೆ. ಆದರೆ, ಚಿತ್ರ ಹೆಚ್ಚು ಸೂಕ್ಷ್ಮ
ಅಂಶಗಳನ್ನು ಬಯಸಿದ್ದರಿಂದ ಹೆಚ್ಚು ದಿನ ಚಿತ್ರೀಕರಿಸಿದರಂತೆ. ಬೆಳಗ್ಗೆ 6 ರಿಂದ 8 ಗಂಟೆವರೆಗೆ ನಡೆಯುವ ಕಥೆಯಾಗಿದ್ದು, ಅದೇ ಲೈಟಿಂಗ್‌ನಲ್ಲಿ ಚಿತ್ರೀಕರಿಸಲಾಗಿದೆಯಂತೆ. 6 ರಿಂದ 8 ಗಂಟೆವರೆಗಿನ ಸಮಯದಲ್ಲಿ ಹುಡುಗಿಯೊಬ್ಬಳ ಜೀವನದಲ್ಲಿ ಏನೇನು ನಡೆಯುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಚಿತ್ರದಲ್ಲಿ ಸಿಂಧು ಲೋಕನಾಥ್ ನಾಯಕಿ.
ಒಂದರ್ಥದಲ್ಲಿ ಈ ಚಿತ್ರದ ನಾಯಕಿ ಹಾಗೂ ನಾಯಕ ಅವರೇ ಎಂದರೆ ತಪ್ಪಲ್ಲ. “ಇದು ಎಲ್ಲರ ಜೀವನದಲ್ಲಿ ನಡೆಯುವ ಕಥೆ. ಏನೋ
ಕೆಲಸಕ್ಕೆಂದು ನಾವು ಬೇಗ ಮನೆ ಬಿಡುತ್ತೇವೆ. ಆದರೆ, ಕೆಲವೊಮ್ಮೆ ದಾರಿ ಮಧ್ಯೆ ಏನೇನೋ ತೊಂದರೆಗಳು ಎದುರಾಗುತ್ತವೆ. ಆ
ತೊಂದರೆಗಳನ್ನೆಲ್ಲಾ ದಾಟಿ ತನ್ನ ಗುರಿ ತಲುಪುತ್ತಾಳಾ ಎಂಬುದು ಇಲ್ಲಿನ ಕುತೂಹಲಕರ ಅಂಶ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ಸಿಂಧು. ಚಿತ್ರದಲ್ಲಿ ನಟಿಸಿದ ಶಂಕರ್ ನಾರಾಯಣ್, ಗಾಯಕರಾದ ಸಿಂಚನಾ ದೀಕ್ಷಿತ್, ಸ್ಪರ್ಶ. ಸಂಗೀತ ನಿರ್ದೇಶಕ ಅಭಿಲಾಷ್
ಗುಪ್ತಾ ಕೂಡಾ ತಮ್ಮ ಅನುಭವ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.