ಮಲ್ಯಗೆ 3ನೇ ಮದುವೆ?
Team Udayavani, Mar 29, 2018, 6:00 AM IST
ಲಂಡನ್: ಸಾವಿರಾರು ಕೋಟಿ ಸಾಲ ಮಾಡಿ ಬ್ಯಾಂಕ್ಗಳಿಗೇ ಪಂಗನಾಮ ಹಾಕಿ ವಿದೇಶದಲ್ಲಿ ನೆಲೆಸಿರುವ ವಿಜಯ್ ಮಲ್ಯ ಮಗದೊಂದು ಮದುವೆ ಆಗಲು ಮುಂದಾಗಿದ್ದಾರೆ!
ಇದೇನ್ ಸತ್ಯನಾ? ಎಂದು ಹುಬ್ಬೇರಿಸಬೇಡಿ. ಹೀಗೊಂದು ಸುದ್ದಿ ಓಡಾಡುತ್ತಿವೆ ಎನ್ನುತ್ತಿರುವ ಇಂಗ್ಲಿಷ್ ಮಾಧ್ಯಮಗಳು, ಈಗಾಗಲೇ ಮಲ್ಯ ಜತೆ ಆಗಾಗ ಕಾಣಿಸಿಕೊಳ್ಳುತ್ತಿರುವ ಬಹುದಿನಗಳ ಗೆಳತಿ ಪಿಂಕಿ ಲಾಲ್ವಾನಿ ಎಂಬಾಕೆಯನ್ನು ಶೀಘ್ರದಲ್ಲಿಯೇ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವರದಿಮಾಡಿವೆ. ಕೆಲ ಮಾಧ್ಯಮಗಳ ವರದಿಗಳ ಪ್ರಕಾರ ಮಲ್ಯ ಮಾರ್ಚ್ ಎರಡನೇ ವಾರದಲ್ಲೇ ಒಟ್ಟಿಗೇ ಹೋಟೆಲ್ ಒಂದರಲ್ಲಿ ಪಾರ್ಟಿ ಯನ್ನೂ ಮಾಡಿ ಸಂಭ್ರಮಿಸಿದ್ದಾರೆ ಎನ್ನಲಾ ಗಿದೆ. ಕಿಂಗ್ಫಿಷರ್ ಏರ್ಲೈನ್ಸ್ ಸೇರಿ ಬೇರೆ ಬೇರೆ ಉದ್ಯಮಗಳಿಗೆಂದು ವಿವಿಧ ಬ್ಯಾಂಕ್ಗಳಲ್ಲಿ 9,000 ಸಾವಿರ ಕೋಟಿಯಷ್ಟು ಸಾಲ ಮಾಡಿ ಸುಸ್ತಿದಾರರಾಗಿರುವ ವಿಜಯ್ ಮಲ್ಯ, ಬಂಧನ ಭೀತಿಯಿಂದ ಭಾರತಕ್ಕೆ ಬರಲಾಗದೇ ಲಂಡನ್ನಲ್ಲಿಯೇ ನೆಲೆಸಿದ್ದಾರೆ. 1986-87ರಲ್ಲಿ ಸಮೀರಾ ಎಂಬಾಕೆಯನ್ನು, 1993ರಿಂದ ರೇಖಾ ಎಂಬಾಕೆಯನ್ನು ಮದುವೆಯಾಗಿ ಸಂಸಾರ ನಡೆಸಿದ್ದು, ಸಿದ್ಧಾರ್ಥ, ಲೆಯೆನ್ನಾ ಮತ್ತು ತಾನ್ಯಾ ಹೆಸರಿನ ಮೂವರು ಮಕ್ಕಳಿದ್ದಾರೆ.
ಯಾರೀಕೆ ಲಾಲ್ವಾನಿ?
ಅಷ್ಟಕ್ಕೂ ಈಕೆ ಮತ್ತಾರೂ ಅಲ್ಲ, ಮಾಜಿ ಗಗನಸಖೀ. ಮಲ್ಯರಿಗೆ ಬಹಳ ಆಪೆ¤ ಎನಿಸಿಕೊಂಡಿರುವ ಪಿಂಕಿ 2011ರಿಂದಲೂ ಮಲ್ಯ ಅವರೊಂದಿಗೆ ಆಗಾಗ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.