ಮಗನೊಂದಿಗೆ 10ನೇ ತರಗತಿ ಪರೀಕ್ಷೆ: ಇದು 44ರ ತಾಯಿಯ ಕಥೆ
Team Udayavani, Mar 29, 2018, 11:49 AM IST
ಲೂಧಿಯಾನ : ಕೌಟುಂಬಿಕ ಸಮಸ್ಯೆಗಳಿಂದಾಗಿ ಶಾಲಾ ಶಿಕ್ಷಣ ಕೈಗೊಳ್ಳಲಾಗದೆ ಹೊರ ಬಿದ್ದಿದ್ದ 44ರ ಹರೆಯದ ರಜನಿ ಬಾಲಾ ಅವರೀಗ ತನ್ನ ಮಗನೊಂದಿಗೆ 10ನೇ ತರಗತಿಯ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಅಟೆಂಡೆಂಟ್ ಆಗಿರುವ ರಜನಿ ಬಾಲಾ, 10ನೇ ತರಗತಿ ಪರೀಕ್ಷೆಗೆ ಕೂರಲು ಹಲವು ತಿಂಗಳ ರಜೆ ಪಡೆದು ಶಾಲೆಗೆ ಹೋಗಿ ವಿದ್ಯಾರ್ಥಿನಿಯಾಗಿ ಕುಳಿತು ಪಾಠಗಳನ್ನು ಕಲಿತು ಇದೀಗ ತನ್ನ ಪುತ್ರನೊಂದಿಗೆ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ.
“ನಾನು ಹತ್ತನೇ ಕ್ಲಾಸ್ ಓದಿ ಮುಗಿಸಲೇಬೇಕು; ಪರೀಕ್ಷೆ ಪಾಸು ಮಾಡಲೇ ಬೇಕು ಎಂಬ ಹಠ ನನ್ನಲ್ಲಿತ್ತು. ಆರಂಭದಲ್ಲಿ ನಾನು, ಇಷ್ಟು ಪ್ರಾಯವಾದವಳು, ಶಾಲೆಗೆ ಹೋಗಿ ಕೂರುವುದಕ್ಕೆ ತುಂಬಾ ಸಂಕೋಚವಾಗಿತ್ತು. ಆದರೂ ಅದನ್ನು ಬದಿಗಿಟ್ಟು ನಾನು 10ನೇ ತರಗತಿ ಶಿಕ್ಷಣ ಪೂರೈಸಿ ಈಗ ಪರೀಕ್ಷೆ ಬರೆಯುತ್ತಿದ್ದೇನೆ’ ಎಂದು ಸಂಭ್ರಮದಿಂದ ಮತ್ತು ಆತ್ಮವಿಶ್ವಾಸದಿಂದ ರಜನಿ ಬಾಲಾ ಹೇಳಿದರು.
1989ರಲ್ಲಿ 9ನೇ ತರಗತಿಯ ಓದಿನೊಂದಿಗೆ ಕೌಟುಂಬಿಕ ಸಮಸ್ಯೆಗಳಿಂದಾಗಿ ಶಾಲೆಯಿಂದ ಹೊರಬಿದ್ದಿದ್ದ ರಜನಿ ಬಾಲಾ ಅವರು “ನನಗೆ ಈಗ 10ನೇ ತರಗತಿ ಮುಗಿಸಿ ಪರೀಕ್ಷೆ ಎದುರಿಸಲು ನನ್ನ ಪತಿ ರಾಜ್ಕುಮಾರ್ ಸಾಥಿ ಮತ್ತು ಪುತ್ರಿಯರು ತುಂಬ ಸಪೋರ್ಟ್ ನೀಡಿದ್ದಾರೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.