ಕೋಸ್ಟಲ್‌ವುಡ್‌ಗೆ ಬರಲಿದ್ದಾರೆ ‘ಪೆಟ್‌ ಕಮ್ಮಿ’ಗಳು !


Team Udayavani, Mar 29, 2018, 3:41 PM IST

29-March-12.jpg

‘ಅಪ್ಪೆ ಟೀಚರ್‌’ ಅಧ್ಯಾಯ ಕರಾವಳಿಯಲ್ಲಿ ತುಳು ಸಿನೆಮಾ ಇಂಡಸ್ಟ್ರಿಗೆ ಸಾಕಷ್ಟು ಮಾರ್ಕ್‌ ತರಿಸಿಕೊಡುವಲ್ಲಿ ಯಶಸ್ವಿಯಾಗಿದೆ. ‘ತೊಟ್ಟಿಲ್‌’ ಸಿನೆಮಾ ಕೂಡ ಪೂರಕವಾಗಿ ಹೆಸರು ಮಾಡಿದೆ. ಹೀಗಾಗಿ ಕೋಸ್ಟಲ್‌ವುಡ್‌ ಅಂಗಳ ಮೆಲ್ಲನೆ ಹೊಸ ಲುಕ್‌ ಪಡೆದುಕೊಳ್ಳುತ್ತಿದೆ. ಕೆಲವು ದಿನದಿಂದ ಸ್ವಲ್ಪ ಮಟ್ಟಿಗೆ ಬಿಕೋ ಎನ್ನುತ್ತಿದ್ದ ತುಳು ಸಿನೆಮಾ ಲೋಕದಲ್ಲಿ ಈಗ ಸ್ವಲ್ಪ ಚೇತರಿಕೆ ಬಂದಂತಾಗಿದೆ.

ಇದೇ ಮೂಡ್‌ನ‌ಲ್ಲಿ ಇನ್ನೊಂದು ವಿಭಿನ್ನ ಟೈಟಲ್‌ನ ಸಿನೆಮಾವೊಂದು ರಿಲೀಸ್‌ಗಾಗಿ ಕಾಯುತ್ತಿದೆ. ಕೋಸ್ಟಲ್‌ವುಡ್‌ನ‌ಲ್ಲಿ ವಿಭಿನ್ನ ಕಥೆ ಹಾಗೂ ಹೊಸ ಕಲಾವಿದರ ಜತೆಗೆ ಹೆಣೆದ ವಿನೂತನ ಶೈಲಿಯ ‘ಪೆಟ್‌ಕಮ್ಮಿ’ ಈಗಾಗಲೇ ಸೆನ್ಸಾರ್‌ ಪಡೆದು, ಎ. 13ರ ಸುಮಾರಿಗೆ ರಿಲೀಸ್‌ ಮಾಡುವ ಬಗ್ಗೆ ಪೂರ್ವಭಾವಿ ಸೂಚನೆಯನ್ನು ಕೋಸ್ಟಲ್‌ವುಡ್‌ನ‌ಲ್ಲಿ ಹರಿಯಬಿಟ್ಟಿದೆ.

ತುಳು ಸಿನೆಮಾ ನಿರ್ಮಾಪಕರ ಸಂಘ ಈಗಾಗಲೇ ಘೋಷಣೆ ಮಾಡಿದಂತೆ ಒಂದು ಸಿನೆಮಾ ರಿಲೀಸ್‌ ಆಗಿ ಮೂರು ವಾರಗಳ ಗ್ಯಾಪ್‌ ಕೊಟ್ಟು ಬಳಿಕ ಇನ್ನೊಂದು ತುಳು ಸಿನೆಮಾ ರಿಲೀಸ್‌ ಆಗಬೇಕು ಎಂಬ ಸೂಚನೆಯನ್ನು ನೀಡಿತ್ತು. ಇದು ತುಳು ಸಿನೆಮಾ ಲೋಕ ಹಾಗೂ ಪ್ರೇಕ್ಷಕರ ಹಿತದೃಷ್ಟಿಯಿಂದ ಕೂಡ ಉತ್ತಮ ನಿರ್ಧಾರವಾಗಿತ್ತು. ಆದರೆ, ಕೆಲವರು ಇದನ್ನು ಮೀರಿ ಒಂದೇ ದಿನ ಎರಡು ಸಿನೆಮಾ ರಿಲೀಸ್‌ಗೆ ಸಿದ್ಧರಾಗಿದ್ದರು. ಆದರೆ, ಇಂತಹ ತಪ್ಪುಗಳು ನಡೆಯಬಾರದು ಎಂಬ ಕಾಳಜಿಯಿಂದ ಹಾಗೂ ತುಳು ಸಿನೆಮಾದೊಳಗೆಯೇ ಯಾವುದೇ ಸ್ಪರ್ಧೆ ನಡೆಯಬಾರದು ಎಂಬ ಕಾರಣದಿಂದ ‘ಅಪ್ಪೆ ಟೀಚರ್‌’ ರಿಲೀಸ್‌ ಆಗಿ ಮೂರು ವಾರದ ಬಳಿಕವಷ್ಟೇ ‘ಪೆಟ್‌ಕಮ್ಮಿ’ ರಿಲೀಸ್‌ಗೆ ನಿರ್ಧರರಿಸಲಾಗಿದೆ.

ಸುದೀರ್ಘ‌ ವರ್ಷ ಬಾಲಿವುಡ್‌ನ‌ಲ್ಲಿ ಕೆಲಸ ಮಾಡಿರುವ ಉಡುಪಿ ಮೂಲದ ಅಶೋಕ್‌ ಶೆಟ್ಟಿ ನಿರ್ಮಿಸಿದ ‘ಪೆಟ್‌ ಕಮ್ಮಿ’ ರಿಲೀಸ್‌ ಬಗ್ಗೆ ‘ಕುಡ್ಲ ಟಾಕೀಸ್‌’ ಜತೆಗೆ ಅವರು ಮಾತನಾಡಿದ್ದಾರೆ. ‘ಅಪ್ಪೆ ಟೀಚರ್‌’ ಸದ್ಯ ಉತ್ತಮವಾಗಿ ರೆಸ್ಪಾನ್ಸ್‌ ಪಡೆಯುತ್ತಿದೆ. ಮೂರು ವಾರ ಆದ ಬಳಿಕ ನಾವು ತೆರೆಗೆ ಬರಲಿದ್ದೇವೆ. ಒಂದು ವೇಳೆ ‘ಅಪ್ಪೆ ಟೀಚರ್‌’ ಇನ್ನಷ್ಟು ದಿನ ಸಕ್ಸಸ್‌ ಆಗುತ್ತಿದ್ದರೆ ನಮ್ಮ ದಿನಾಂಕದಲ್ಲಿ ಬದಲಾವಣೆ ಮಾಡಲು ರೆಡಿಯಾಗಿದ್ದೇವೆ. ಯಾಕೆಂದರೆ, ಸಿನೆಮಾ ಮಾಡಿದವರಿಗೆ ಹಾಗೂ ಪ್ರೇಕ್ಷಕರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬುದಷ್ಟೇ ನಮ್ಮ ಕಳಕಳಿ. ಹೀಗಾಗಿ ನಾವು ಸೆನ್ಸಾರ್‌ ಪಡೆದು ರೆಡಿಯಾಗಿದ್ದರೂ, ಸ್ಪರ್ಧೆಗೆ ಇಳಿಯುವುದಿಲ್ಲ ಎನ್ನುತ್ತಾರೆ.

‘ಪೆಟ್‌ ಕಮ್ಮಿ’ ತುಳು ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಗೆ ಕಾರಣವಾದ ಹಾಗೂ ಒಂದಿಷ್ಟು ವಿವಾದವನ್ನೂ ಹುಟ್ಟು ಹಾಕಿದ ಚಿತ್ರ. ಮಾಲ್ಗುಡಿ ಡೇಸ್‌ ಬ್ಯಾನರ್‌ನಡಿ ಈ ಚಿತ್ರ ರೆಡಿಯಾಗಿದೆ. ತುಳು ಲಿಪಿಯಲ್ಲಿ ತುಳು ಚಿತ್ರದ ಟೈಟಲ್‌ ಮಾಡುವ ಮೂಲಕ ಮೊದಲ ಬಾರಿಗೆ ಸುದ್ದಿಗೆ ಬಂದ ಪೆಟ್‌ ಕಮ್ಮಿ ಅನಂತರ ಒಂದೊಂದೇ ರೀತಿಯ ಅವತಾರಗಳ ಮೂಲಕ ಗಮನ ಸೆಳೆಯಿತು. ಈ ಚಿತ್ರದ ಟ್ರೈಲರ್‌ ಕೂಡ ಹೊಸ ನಿರೀಕ್ಷೆ ಮೂಡಿಸಿದೆ.

ಮನುಷ್ಯ ತನ್ನ ಜೀವನ ಮೌಲ್ಯವನ್ನೇ ತಿಳಿಯದೆ ಅರೆಹುಚ್ಚನಂತೆ ಹೇಗೆ ವಿನಾಶದ ಹಾದಿ ಹಿಡಿಯುತ್ತಾನೆ ಎಂಬುದೇ ಚಿತ್ರದ ಸಾರ. ಆರು ಮಂದಿ ಗೆಳೆಯರು ಒಟ್ಟು ಸೇರಿದಾಗ ಏನೆಲ್ಲ ಮಾಡುತ್ತಾರೆ? ಅವರೊಳಗೆ ಏನೆಲ್ಲ ಆಗಲಿದೆ? ಮುಂದೆ ಏನಾಗುತ್ತೆ? ಹೀಗೆ ನೂರೊಂದು ವಿಚಾರಗಳ ಬಗ್ಗೆ ಸಿನೆಮಾ ಬೆಳಕು ಚೆಲ್ಲುತ್ತದೆ. ಭೂಕಂಪ, ಸುನಾಮಿ, ಬರಗಾಲ, ಹೆಚ್ಚಿದ ತಾಪಮಾನ ಹೀಗೆ ನೂರೊಂದು ಪ್ರಾಕೃತಿಕ ಸಮಸ್ಯೆಯಿಂದ ಜನ ಸತ್ತರೆ ಅದಕ್ಕೆ ಯಾರನ್ನು ಹೊಣೆ ಮಾಡಬೇಕಾದೀತು? ಇರುವ ಮರ ಗಿಡವನ್ನೆಲ್ಲ ಕಡಿದು, ಪರಿಸರವನ್ನೇ ಹಾಳು ಮಾಡುವಾಗ ಈ ಬಗ್ಗೆ ಒಂದಿನಿತು ಬೇಸರ ಪಟ್ಟುಕೊಳ್ಳದ ನಾವು ಪ್ರಾಕೃತಿಕ ವಿಕೋಪದಿಂದ ಸಾವು- ನೋವು ಆದಾಗ ಬೊಬ್ಬೆ ಹಾಕಿ ಕಿರುಚುತ್ತೇವೆ. ಇಂತಹ ಸಂಗತಿಗಳು ನಮಗೆ ಯಾಕೆ ಮುಖ್ಯವಾಗುವುದಿಲ್ಲ ಎಂಬ ಆಶಯವಿರಿಸಿ ‘ಪೆಟ್ಟ್ ಕಮ್ಮಿ’ ರೆಡಿ ಮಾಡಲಾಗಿದೆ ಎಂಬುದು ವಿಶೇಷ.

 ದಿನೇಶ್‌ ಇರಾ

ಟಾಪ್ ನ್ಯೂಸ್

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

5(1

Mangaluru: 7 ಕೆರೆ, ಪಾರ್ಕ್‌ ಅಭಿವೃದ್ಧಿಗೆ ಅಮೃತ 2.0

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

8(1

Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.