ಭರತನಾಟ್ಯದಲ್ಲಿ  ಕಲಿಕೆ ನಿರಂತರ


Team Udayavani, Mar 29, 2018, 4:46 PM IST

29-March-16.jpg

10ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಕೆಯನ್ನು ಆರಂಭಿಸಿರುವ ನೃತ್ಯಗುರು ವಿದುಷಿ ಸುಖಧಾ ಬರ್ವೆ ಅವರು ಕಳೆದ 13 ವರ್ಷಗಳಿಂದ ನೃತ್ಯ ಕಲಿಸುತ್ತಿದ್ದಾರೆ. ಕರ್ನಾಟಕ ಕಲಾಶ್ರೀ ಕುದ್ಕಾಡಿ ವಿಶ್ವನಾಥ ರೈ ಹಾಗೂ ನಯನಾ ವಿ. ರೈ ಅವರಿಂದ ನೃತ್ಯಾಭ್ಯಾಸ ಮಾಡಿ, ಬಳಿಕ ಉಳ್ಳಾಲ ಮೋಹನ್‌ ಕುಮಾರ್‌ ಹಾಗೂ ರಾಜಶ್ರೀ ಉಳ್ಳಾಲ್‌ ಅವರಿಂದ ನೃತ್ಯ ಕಲಿತಿದ್ದಾರೆ. 

ಪ್ರಸ್ತುತ ಅಭಿನಯ ತರಬೇತಿಯನ್ನು ಬೆಂಗಳೂರಿನ ಗುರು ಬಿ. ಭಾನುಮತಿ ಅವರಿಂದ ಕಲಿಯುತ್ತಿದ್ದಾರೆ. ಪ್ರಸ್ತುತ ಮೂಡಬಿದಿರೆ ಆರಾಧನಾ ನೃತ್ಯ ಕೇಂದ್ರದ ಮೂಲಕ ನೃತ್ಯ ಕಲಿಸುತ್ತಿರುವ ಇವರು, ಕಾರ್ಕಳ, ವೇಣೂರುಗಳಲ್ಲಿ ಶಾಖೆಯನ್ನೂ ಆರಂಭಿಸಿದ್ದಾರೆ. ಜತೆಗೆ ಹಲವಾರು ಪ್ರದೇಶಗಳಲ್ಲಿ ನೃತ್ಯ ಪ್ರದರ್ಶನಗಳನ್ನೂ ನೀಡಿದ್ದಾರೆ. ಇವರ ನೃತ್ಯ ಸಾಧನೆಗಾಗಿ ಚಿತ್ಪಾವನ ನಾಟ್ಯರತ್ನ ಪ್ರಶಸ್ತಿ ಸ ಹಿತ ವಿವಿಧ ಸಂಘ ಸಂಸ್ಥೆಗಳು ಸಮ್ಮಾನವನ್ನೂ ಮಾಡಿರುತ್ತವೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಜೂನಿಯರ್‌, ಸೀನಿಯರ್‌ ಹಾಗೂ ವಿದ್ವತ್‌ ಪರೀಕ್ಷೆಗೆ ಪರೀಕ್ಷಕರಾಗಿ ತೆರಳುತ್ತಿದ್ದಾರೆ.

ಭರತನಾಟ್ಯ ನಿಮ್ಮನ್ನು ಆಕರ್ಷಿಸಲು ಕಾರಣವೇನು?
ನಾನು ನೃತ್ಯ ತರಗತಿಗೆ ಆಸಕ್ತಿಯಿಂದ ಹೋದವಳಲ್ಲ. ನನ್ನ ಊರು ಕಡಬ ಸಮೀಪದ ಹೊಸಮಠವಾಗಿದ್ದು, ಶಾಲೆಯಲ್ಲಿ ಶಿಕ್ಷಕರು ಕಡಬದಲ್ಲಿ ನೃತ್ಯ ತರಗತಿ ಆರಂಭಗೊಂಡಿದೆ, ಆಸಕ್ತರು ಹೋಗಬಹುದು ಎಂದು ತಿಳಿಸಿದ್ದರು. ಈ ರೀತಿ ನನ್ನ ಗೆಳತಿಯರು ಹೋದಾಗ ನಾನೂ ಅವರ ಜತೆ ಹೋಗಿದ್ದೆ. ಬಳಿಕ ಕಲಿಯುತ್ತಾ ನನ್ನಲ್ಲಿ ನೃತ್ಯದ ಕುರಿತು ಆಸಕ್ತಿ ಹೆಚ್ಚಾಯಿತು. ಬಳಿಕ ಹಂತ ಹಂತವಾಗಿ ಪರೀಕ್ಷೆ ಬರೆದು ಮುಂದೆ ಸಾಗಿದೆ. ಕಲಿಯುವ ಸಂದರ್ಭದಲ್ಲೇ ಹಲವಾರು ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. ಅಂದು ನಾನು ತೆಗೆದುಕೊಂಡ ನಿರ್ಧಾರವೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ.

ಶಾಸ್ತ್ರೀಯ ನೃತ್ಯದ ಬೆಳವಣಿಗೆಗೆ ಮಂಗಳೂರಿನ ಕೊಡುಗೆ ಏನು.?
ಮಂಗಳೂರಿನ ನೃತ್ಯ ಕ್ಷೇತ್ರಕ್ಕೆ ಉಳ್ಳಾಲ ಮೋಹನ್‌ಕುಮಾರ್‌ ಅವರ ಕೊಡುಗೆ ಅಪಾರ. ಇಂದು ಬಹುತೇಕ ನೃತ್ಯ ಗುರುಗಳು ಅವರ ಶಿಷ್ಯರೇ ಆಗಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ ನೃತ್ಯ ತರಗತಿ ಹಾಗೂ ಪ್ರದರ್ಶನಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೊಸ ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಿದ್ದಾರೆ. ಜತೆಗೆ ಇದರಿಂದ ಸಾರ್ವಜನಿಕರಿಗೂ ನೃತ್ಯದ ಅನುಭವ ಸಿಗುತ್ತಿದೆ. ಹಿಂದೆ ನೃತ್ಯ ಕಲಿಕೆಗೆ ದೂರದೂರಿಗೆ ತೆರಳಬೇಕಿತ್ತು. ಆದರೆ ಈಗ ಅಲ್ಲಲ್ಲಿ ನೃತ್ಯ ತರಗತಿಗಳಿರುವುದರಿಂದ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ನೃತ್ಯ ಕಲಿಯುತ್ತಿದ್ದಾರೆ. ಇದು ಒಟ್ಟು ನೃತ್ಯ ಕ್ಷೇತ್ರಕ್ಕೆ ಮಂಗಳೂರಿನ ಕೊಡುಗೆ ಎನ್ನಬಹುದು.

ನೃತ್ಯದ ಬೆಳವಣಿಗೆಗೆ ಸರಕಾರ ಏನು ಮಾಡಬಹುದು?
ಪ್ರಸ್ತುತ ಖಾಸಗಿ ಶಾಲೆಗಳಲ್ಲಿ ನೃತ್ಯ ಕಲಿಸಲಾಗುತ್ತಿದ್ದು, ಅದು ಎಲ್ಲ ಸರಕಾರಿ ಶಾಲೆಗಳಿಗೂ ವಿಸ್ತರಣೆಗೊಳ್ಳಬೇಕು. ಇದರಿಂದ ನೃತ್ಯಗುರುಗಳಿಗೆ ಉದ್ಯೋಗಾವಕಾಶ ಸಿಗುವ ಜತೆಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಕೂಡ ನೃತ್ಯ ಕಲಿತಂತಾಗುತ್ತದೆ. ಜತೆಗೆ ಅರ್ಹ ಕಲಾವಿದರಿಗೂ ಮಾಸಾಶನ ನೀಡುವ ಕಾರ್ಯ ಮಾಡಿದರೆ ನೃತ್ಯ ಕ್ಷೇತ್ರವನ್ನು
ಪ್ರೋತ್ಸಾಹಿಸಿದಂತಾಗುತ್ತದೆ.

ನಾಟ್ಯ ಗುರು ತಮ್ಮ ಶಿಷ್ಯ ವರ್ಗದಿಂದ ಏನನ್ನು ಬಯಸುತ್ತಾರೆ?
ಶಿಷ್ಯ ವರ್ಗ ಗುರುಗಳಿಗೆ ವಿಧೇಯರಾಗಿರಬೇಕು. ಶಾಸ್ತ್ರೀಯ ಚೌಕಟ್ಟಿನಲ್ಲಿ ಗುರುಪರಂಪರೆಯನ್ನು ಮುಂದುವರಿಸಬೇಕು.
ಜತೆಗೆ ಭಯ ಭಕ್ತಿಯಿಂದ ಯಾವುದೇ ಧಾವಂತ ಇಲ್ಲದೆ ತಾಳ್ಮೆಯನ್ನು ಹೊಂದಿರಬೇಕು. ನೃತ್ಯವನ್ನು ಶುಲ್ಕ ನೀಡಿ ಕಲಿಯುವುದಾದರೂ ಗುರುಗಳ ಕುರಿತು ಗೌರವವನ್ನು ಮರೆಯಬಾರದು. ಇಂತಹ ವಿದ್ಯಾರ್ಥಿಗಳಿದ್ದಾಗಲೇ ನೃತ್ಯಗುರು ಬಹಳ ತಾಳ್ಮೆಯಿಂದ ನೃತ್ಯ ಕಲಿಸುತ್ತಾನೆ.

ನಾಟ್ಯ ಕಲಿಕೆಯಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆಯೇ?
ಖಂಡಿತವಾಗಿಯೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಏಕಾಗ್ರತೆ, ಸ್ಮರಣ ಶಕ್ತಿ ಜಾಸ್ತಿಯಾಗುತ್ತದೆ. ಈಗಿನ ಮಕ್ಕಳು ಶಾಲೆಯಿಂದ ಬಂದು ಮೊಬೈಲ್‌, ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ನೃತ್ಯ ಕಲಿಕೆಗೆ ಬಂದಾಗ ಮಕ್ಕಳಿಗೆ ವ್ಯಾಯಾಮವೂ ಸಿಗುತ್ತದೆ. ಅವರ ಬೌದ್ಧಿಕ ಗುಣಮಟ್ಟವೂ ವೃದ್ಧಿಯಾಗುತ್ತದೆ. ಪುರಾಣ ಕಥೆಗಳ ಕುರಿತು ಜ್ಞಾನ ಬೆಳೆದು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಅನುಕೂಲವಾಗುತ್ತದೆ. ಒತ್ತಡ ಜೀವನದಿಂದ ನೆಮ್ಮದಿಯೂ ನೃತ್ಯದಿಂದ ದೊರೆಯುತ್ತದೆ.

ಭರತನಾಟ್ಯ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ನಿಮ್ಮ ಕಿವಿಮಾತೇನು.?
ಭರತನಾಟ್ಯ ಎನ್ನುವುದು ಕಲಿತು ಮುಗಿಯುವ ವಿದ್ಯೆಯಲ್ಲ. ಕಲಿಕೆ ನಿರಂತರವಾಗಿರುತ್ತದೆ. ಹೀಗಾಗಿ ಯಾರೂ ಕೂಡ ನಾವು ಎಲ್ಲವನ್ನೂ ಕಲಿತಿದ್ದೇವೆ ಎಂಬ ಭಾವನೆ ಹೊಂದಿರಬಾರದು. ತರಗತಿ ಸೇರಿದ ತತ್‌ಕ್ಷಣ ನೃತ್ಯ ಪ್ರದರ್ಶನಕ್ಕೆ ಮುಂದಾಗುವುದು ಕೂಡ ಸರಿಯಲ್ಲ. ಪೂರ್ತಿ ಅಭ್ಯಾಸದ ಬಳಿಕವೇ ಪ್ರದರ್ಶನ ನೀಡಬೇಕು. ಜತೆಗೆ ನೃತ್ಯ ತರಗತಿಗೆ ಬಂದರೆ ತಮ್ಮ ಓದಿಗೆ ತೊಂದರೆಯಾಗುತ್ತದೆ ಎಂಬ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಇದು ಖಂಡಿತವಾಗಿಯೂ ತಪ್ಪು, ನೃತ್ಯ ಕಲಿಯುವ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುತ್ತಾರೆ. ನೃತ್ಯ ತರಗತಿಗಳು ಮನಸ್ಸಿಗೆ ರಿಲ್ಯಾಕ್ಸ್‌ ನೀಡುವುದರಿಂದ ವಿದ್ಯಾರ್ಥಿಗಳು ನಾಟ್ಯ ತರಗತಿಗಳಿಗೆ ನಿರಂತರವಾಗಿ ಬರಬೇಕು.

 ಕಿರಣ್‌ ಸರಪಾಡಿ

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

5(1

Mangaluru: 7 ಕೆರೆ, ಪಾರ್ಕ್‌ ಅಭಿವೃದ್ಧಿಗೆ ಅಮೃತ 2.0

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.