ಟಿ20 ತ್ರಿಕೋನ ಸರಣಿ: ಇಂಗ್ಲೆಂಡಿಗೆ ಮೊದಲ ಸೋಲು
Team Udayavani, Mar 29, 2018, 7:15 PM IST
ಮುಂಬಯಿ: ಟಿ20 ತ್ರಿಕೋನ ಸರಣಿಯ “ಫೈನಲ್ ಅಭ್ಯಾಸ’ವಾಗಿ ಗುರುತಿಸಲ್ಪಟ್ಟ ಬುಧವಾರದ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟ್‌ಗಳಿಂದ ಇಂಗ್ಲೆಂಡಿಗೆ ಸೋಲುಣಿಸಿದೆ. ಇದರೊಂದಿಗೆ ಮೊದಲ ಸುತ್ತಿನ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ 17.4 ಓವರ್‌ಗಳಲ್ಲಿ ಕೇವಲ 96 ರನ್ನಿಗೆ ಆಲೌಟ್ ಆಯಿತು; ಸಣ್ಣ ಮೊತ್ತಕ್ಕೆ ಜವಾಬಿತ್ತ ಆಸ್ಟ್ರೇಲಿಯ 11.3 ಓವರ್‌ಗಳಲ್ಲೇ 2 ವಿಕೆಟಿಗೆ 97 ರನ್ ಮಾಡಿ ಜಯ ಸಾಧಿಸಿತು. ಇದು ಈ ಸರಣಿಯಲ್ಲಿ ಇಂಗ್ಲೆಂಡಿಗೆ ಎದುರಾದ ಮೊದಲ ಸೋಲು.
ಗುರುವಾರದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ- ಇಂಗ್ಲೆಂಡ್ ಮುಖಾಮುಖೀಯಾಗಲಿವೆ. ಆಡಿದ ಮೂರೂ ಪಂದ್ಯಗಳಲ್ಲಿ ಸೋಲನುಭವಿಸಿ ಕೂಟದಿಂದ ಹೊರ ಬಿದ್ದಿರುವ ಭಾರತಕ್ಕೆ ಇದೊಂದು ಪ್ರತಿಷ್ಠೆಯ ಪಂದ್ಯ ವಾಗಿದೆ. ಆತಿಥೇಯ ತಂಡ ಒಂದೂ ಪಂದ್ಯ ಗೆಲ್ಲದೇ ಹೋದರೆ ಅದು ಭಾರೀ ಅವಮಾನ ಎನಿಸುವುದರಲ್ಲಿ ಅನುಮಾನವಿಲ್ಲ. ಈ ಸಂಕಟದಿಂದ ಭಾರತ ಪಾರಾದೀತೇ ಎಂಬುದು ಅಭಿಮಾನಿಗಳ ಕಟ್ಟಕಡೆಯ ನಿರೀಕ್ಷೆ. ಮಾ. 31ರ ಫೈನಲ್‌ನಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ಮುಖಾ ಮುಖೀಯಾಗಲಿವೆ.
ಆಸೀಸ್ ಘಾತಕ ದಾಳಿ
ಆಸ್ಟ್ರೇಲಿಯದ ಸಂಘಟಿತ ಬೌಲಿಂಗ್ ಆಕ್ರಮಣಕ್ಕೆ ತತ್ತರಿಸಿದ ಇಂಗ್ಲೆಂಡಿಗೆ ರನ್ ಗಳಿಸುವುದೇ ದೊಡ್ಡ ಸಮಸ್ಯೆಯಾಗಿ ಕಾಡಿತು. ದಾಳಿಗಿಳಿದ 7 ಮಂದಿಯಲ್ಲಿ 6 ಬೌಲರ್‌ಗಳು ವಿಕೆಟ್ ಬೇಟೆಯಾಡುವಲ್ಲಿ ಯಶಸ್ವಿ ಯಾದರು. ಇವರಲ್ಲಿ ಮಧ್ಯಮ ವೇಗಿ ಡೆಲಿಸ್ಸಾ ಕಿಮ್ಮಿನ್ಸ್ 20 ರನ್ನಿತ್ತು 3 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಇದು ಕಿಮ್ಮಿನ್ಸ್ ಅವರ ಜೀವನಶ್ರೇಷ್ಠ ಬೌಲಿಂಗ್ ಆಗಿದೆ.
ಇಂಗ್ಲೆಂಡ್ ಸರದಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿ ಅಲಿಸ್ ಡೇವಿಡ್‌ಸನ್ ರಿಚರ್ಡ್ಸ್. 7ನೇ ಕ್ರಮಾಂಕದಲ್ಲಿ ಆಡಲಿಳಿದ ಅಲಿಸ್ 24 ರನ್ ಹೊಡೆದರು. ಬೇಮಾಂಟ್ 17, ಜೆನ್ನಿ ಗನ್ 12 ರನ್ ಮಾಡಿದರು.
ಈ ಸಣ್ಣ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಆಸ್ಟ್ರೇಲಿಯ ಕೂಡ ಆರಂಭಿಕ ಕುಸಿತಕ್ಕೆ ಸಿಲುಕಿತು. ಅಲಿಸ್ಸಾ ಹೀಲಿ (6) ಮತ್ತು ಎಲಿಸ್ ವಿಲ್ಲಾನಿ (1) 12 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಆದರೆ 3ನೇ ವಿಕೆಟಿಗೆ ಜತೆಗೂಡಿದ ಎಲ್ಲಿಸ್ ಪೆರ್ರಿ (ಔಟಾಗದೆ 47) ಮತ್ತು ನಾಯಕಿ ಮೆಗ್ ಲ್ಯಾನಿಂಗ್ (ಔಟಾಗದೆ 41) 85 ರನ್ ಪೇರಿಸಿ ತಂಡದ ಗೆಲುವು ಸಾರಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-17.4 ಓವರ್‌ಗಳಲ್ಲಿ 96 (ಅಲಿಸ್ 24, ಬೇಮಾಂಟ್ 17, ಗನ್ 12, ಕಿಮ್ಮಿನ್ಸ್ 20ಕ್ಕೆ 3, ಶಟ್ 13ಕ್ಕೆ 2, ಜೊನಾಸೆನ್ 21ಕ್ಕೆ 2). ಆಸ್ಟ್ರೇಲಿಯ-11.3 ಓವರ್‌ಗಳಲ್ಲಿ 2 ವಿಕೆಟಿಗೆ 97 (ಪೆರ್ರಿ ಔಟಾಗದೆ 47, ಲ್ಯಾನಿಂಗ್ ಔಟಾಗದೆ 41).
ಪಂದ್ಯಶ್ರೇಷ್ಠ: ಎಲ್ಲಿಸ್ ಪೆರ್ರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
1st ODI: ಇಂಗ್ಲೆಂಡ್ ವಿರುದ್ಧ ವಿಂಡೀಸ್‌ಗೆ 8 ವಿಕೆಟ್ ಜಯ
INDvsNZ: ಮತ್ತೆ ಬ್ಯಾಟಿಂಗ್ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ
MI: ಸೂರ್ಯ, ಹಾರ್ದಿಕ್ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್: ರೋಹಿತ್ ಹೇಳಿದ್ದೇನು?
Pro Kabaddi: ದಬಾಂಗ್ ಡೆಲ್ಲಿಯನ್ನು ಕೆಡವಿದ ಪಾಟ್ನಾ ಪೈರೆಟ್ಸ್
India Vs Newzeland Test: ವಾಂಖೇಡೆ: ರೋಹಿತ್ ಶರ್ಮಾ ಪಡೆಗೆ ಅಗ್ನಿಪರೀಕ್ಷೆ
MUST WATCH
ಹೊಸ ಸೇರ್ಪಡೆ
BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್
1st ODI: ಇಂಗ್ಲೆಂಡ್ ವಿರುದ್ಧ ವಿಂಡೀಸ್‌ಗೆ 8 ವಿಕೆಟ್ ಜಯ
Congress ಬಣ್ಣ ಕೆಟ್ಟದಾಗಿ ಬಹಿರಂಗವಾಗಿದೆ: ಖರ್ಗೆ ಹೇಳಿಕೆ ಕುರಿತು ಪ್ರಧಾನಿ ಮೋದಿ ಲೇವಡಿ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.