ಆಳ್ವಾಸ್‌ನಲ್ಲಿದ್ದಾರೆ ಕರ್ನಾಟಕದ “ದಂಗಲ್‌’ಸಹೋದರಿಯರು!


Team Udayavani, Mar 29, 2018, 7:19 PM IST

28Aivas-1.jpg

ದಂಗಲ್‌ ಸಿನೆಮಾ ಬಿಡುಗಡೆಯಾದ ಬಳಿಕ ಹರಿಯಾಣದ ಕುಸ್ತಿ ಸಹೋದರಿಯರಾದ ಗೀತಾ, ಬಬಿತಾ ಪೋಗಟ್‌ ಇಡೀ ದೇಶದಲ್ಲಿ ಜನಪ್ರಿಯರಾದರು. ಅವರನ್ನೇ ಹೋಲುವ ಅವಳಿ ಸಹೋದರಿಯರಿಬ್ಬರು ಮೂಡಬಿದಿರೆಯ ಆಳ್ವಾಸ್‌ನಲ್ಲಿ ಪತ್ತೆಯಾಗಿದ್ದಾರೆ. ರಾಜ್ಯ, ರಾಷ್ಟ್ರೀಯ ಕುಸ್ತಿಯಲ್ಲಿ 107 ಪದಕ ಗೆದ್ದ ಆತ್ಮಶ್ರೀ-ಅನುಶ್ರೀ ನೋಡುವುದಕ್ಕೆ ಒಬ್ಬರು ಮತ್ತೂಬ್ಬರ ಪಡಿಯಚ್ಚಿನಂತೆ ಕಾಣುತ್ತಾರೆನ್ನುವುದು ಸ್ವಾರಸ್ಯ! ಸದ್ಯ ಇಬ್ಬರಿಗೂ ಒಲಿಂಪಿಕ್ಸ್‌ ಅರ್ಹತೆ ಗಳಿಸಿ ಪದಕ ಗೆಲ್ಲುವ ಕನಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಹುಟ್ಟಿ ಈಗ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಆತ್ಮಶ್ರೀ, ಅನುಶ್ರೀ ಅವರ ಮನೆಯಲ್ಲಿ ಅಮ್ಮ, ಅತ್ತೆ, ಅಣ್ಣ…ಎಲ್ಲರೂ ಕ್ರೀಡಾಪಟುಗಳು. ಇವರನ್ನು ನೋಡುತ್ತ ಬೆಳೆದ ಅವಳಿ ಬಾಲಕಿಯರನ್ನು ಸಹಜವಾಗಿ ಕ್ರೀಡೆ ಆಕರ್ಷಿಸಿದೆ. ಈ ಇಬ್ಬರೂ ಪ್ರಾಥಮಿಕ ಶಾಲೆಯಿಂದಲೇ ಆ್ಯತ್ಲೆಟಿಕ್ಸ್‌ ಮತ್ತು ಕಬಡ್ಡಿಯಲ್ಲಿ ಪಾಲ್ಗೊಳ್ಳಲು ಆರಂಭಿಸಿದರು. ರಾಜ್ಯ ಮಟ್ಟದ ಶಾಲಾ ಕೂಟಗಳಲ್ಲಿ ಕಬಡ್ಡಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

ಕಬಡ್ಡಿ ಅಂದರೆ ಪ್ರಾಣ
ಶಾಲೆಯಲ್ಲಿ ಕಬಡ್ಡಿ ಆಡಿಸುವಾಗ ಈ ಇಬ್ಬರು ಅಕ್ಕ-ತಂಗಿಯರು ಮುಂದಾಳತ್ವ ವಹಿಸುತ್ತಿದ್ದರು. ಪ್ರೌಢಶಾಲೆಯಲ್ಲಿರುವಾಗ ರಾಜ್ಯ ಮಟ್ಟದ ವರೆಗೂ ಆಡಿದ್ದಾರೆ. ಇವರು ಕಬಡ್ಡಿ ಆಡುವ ಕೌಶಲವನ್ನು ಕಂಡ ಆಳ್ವಾಸ್‌ ಕಾಲೇಜಿನವರು ತಮ್ಮ ಕಾಲೇಜಿಗೆ ಪ್ರವೇಶ ನೀಡಿದ್ದಾರೆ. ಆದರೆ ಇವರನ್ನು ಗಮನಿಸಿದ ಕುಸ್ತಿ ಕೋಚ್‌ ತುಕಾರಾಮ್‌ ಗೌಡ ಕುಸ್ತಿ ಆಡುವಂತೆ ಆಹ್ವಾನ ನೀಡಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಸಹೋದರಿಯರು ಕುಸ್ತಿ ಅಖಾಡಕ್ಕೆ ಧುಮುಕಿದ್ದಾರೆ.

15 ದಿನಗಳಲ್ಲೇ ರಾಷ್ಟ್ರೀಯ ತಂಡಕ್ಕೆ
ಇಲ್ಲಿಯವರೆಗೆ ಆ್ಯತ್ಲೆಟಿಕ್ಸ್‌, ಕಬಡ್ಡಿ ಅಂತ ಇದ್ದವರು ದಿಢೀರನೆ ಕುಸ್ತಿ ಕ್ರೀಡೆಗೆ ಬದಲಾಯಿಸಿಕೊಂಡರು. ಆಳ್ವಾಸ್‌ನಲ್ಲಿಯೇ ಇದ್ದ ಎದುರಾಳಿಗಳ ವಿರುದ್ಧ ಸೆಣಸುತ್ತಿದ್ದರು. ರಾಜ್ಯ ಮಟ್ಟದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ಕೂಟಕ್ಕೆ ಆಯ್ಕೆಯಾದರು. ಕುಸ್ತಿಯಲ್ಲಿ ಅಭ್ಯಾಸ ಆರಂಭಿಸಿ ಕೇವಲ 15 ದಿನಗಳಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು! ಅದೇ ಅವರನ್ನು ಕುಸ್ತಿಯಲ್ಲಿ ಮುಂದುವರಿಯಲು ಪ್ರೇರೇಪಿಸಿದೆ.

ಒಲಿಂಪಿಕ್ಸ್‌ ಪದಕ ಗೆಲ್ಲುವ ಗುರಿ
ಒಲಿಂಪಿಕ್ಸ್‌ನಲ್ಲಿ ಒಂದು ಬೆಳ್ಳಿ, ಒಂದು ಕಂಚು ಗೆದ್ದಿರುವ ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರ ಸಾಧನೆಯಿಂದ ಪ್ರೇರಿತರಾದ ಸಹೋದರಿಯರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.ಸದ್ಯ ಭಾರತದಲ್ಲಿ ತೀವ್ರ ಸ್ಪರ್ಧೆ ಇದೆ. ಅಂತಾರಾಷ್ಟ್ರೀಯ ಪದಕ, ಒಲಿಂಪಿಕ್ಸ್‌ ಪದಕಕ್ಕಾಗಿ ಶ್ರಮವಹಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆತ್ಮಶ್ರೀಗೆ ಈ 
ಬಾರಿಯ ಕ್ರೀಡಾರತ್ನ

ಕುಸ್ತಿ ಅಖಾಡದಲ್ಲಿ ಈ ಇಬ್ಬರು ಪ್ರತಿಭೆಗಳು ಕ್ರೀಡಾರತ್ನವಾಗಿ ಬೆಳೆಯುತ್ತಿದ್ದಾರೆ. ದಿನ ಕಳೆದಂತೆ ಕುಸ್ತಿ ಅಖಾಡದಲ್ಲಿ ಬೆಳವಣಿಗೆ ಸಾಧಿಸುತ್ತಿದ್ದಾರೆ. ಈ ಇಬ್ಬರು ಸಹೋದರಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ, ದಸರಾ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. ಇತ್ತೀಚೆಗೆ ಕರ್ನಾಟಕ ಸರಕಾರ ಆತ್ಮಶ್ರೀ ಅವರಿಗೆ ಕ್ರೀಡಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

107 ಪದಕ ಬೇಟೆ
ಆತ್ಮಶ್ರೀ 60 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೆ, ಅನುಶ್ರೀ 68 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಜ್ಯ ಮಟದಲ್ಲಿ ಆತ್ಮಶ್ರೀ ಮತ್ತು ಅನುಶ್ರೀ ಇಬ್ಬರೂ 80ಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದಾರೆ. ಅದೇ ರೀತಿ ರಾಷ್ಟ್ರಮಟ್ಟದ ಹಿರಿಯ ಮತ್ತು ಕಿರಿಯರ ವಿಭಾಗದಲ್ಲಿ 27ಕ್ಕೂ ಅಧಿಕ ಪದಕ ಗೆದ್ದು ಕ್ರೀಡಾರತ್ನಗಳಾಗಿ ಹೊರಹೊಮ್ಮಿದ್ದಾರೆ.

ಈ ಅವಳಿಗಳು ತುಂಬಾ 
ಶ್ರದ್ಧೆಯಿಂದ ಅಭ್ಯಾಸ ನಡೆಸುತ್ತಾರೆ. ನಾನು ಏನು ಸಲಹೆ ನೀಡುತ್ತೇನೋ ಅದನ್ನು ಸರಿಯಾಗಿ ಪಾಲಿಸುತ್ತಾರೆ. ಹಳ್ಳಿಯಿಂದ ಬಂದಿರುವ ಈ ಯುವತಿಯರ ಸಾಧನೆ ಸಾಮಾನ್ಯದ್ದಲ್ಲ. ಮುಂದಿನ ದಿನಗಳಲ್ಲಿ  ಖಂಡಿತ ಇಬ್ಬರಿಂದ ದೊಡ್ಡ ಮೊಟ್ಟದ ಸಾಧನೆ ಬರಲಿದೆ.

– ತುಕಾರಾಮ್‌ ಗೌಡ, ಕೋಚ್‌

– ಮಂಜು ಮಳಗುಳಿ

ಟಾಪ್ ನ್ಯೂಸ್

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

Thiruvannamali

Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Nithin-gadkari

Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC situation changed; India’s entry into the final became easier; here is the calculation

WTC ಸನ್ನಿವೇಶ ಬದಲು; ಭಾರತಕ್ಕೆ ಸುಲಭವಾಯ್ತು ಫೈನಲ್‌ ಪ್ರವೇಶ; ಇಲ್ಲಿದೆ ಲೆಕ್ಕಾಚಾರ

PV Sindhu to tie the knot with businessman who worked with IPL team

PV Sindhu: ಐಪಿಎಲ್‌ ತಂಡದ ಜತೆ ಕೆಲಸ ಮಾಡಿದ ಉದ್ಯಮಿಯ ಕೈಹಿಡಿಯಲಿದ್ದಾರೆ ಪಿ.ವಿ.ಸಿಂಧು

KKR-Cap

Indian Premier league: ನಾಯಕರ ಹುಡುಕಾಟದಲ್ಲಿ 5 ಐಪಿಎಲ್‌ ತಂಡ

Don-bradman-Cap

Cap Auction: ಬೇಕೇ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ ಕ್ಯಾಪ್‌?

Head-Bumrah

India-Australia Test: ಬುಮ್ರಾ ಶ್ರೇಷ್ಠ ಪೇಸ್‌ ಬೌಲರ್‌: ಟ್ರ್ಯಾವಿಸ್‌ ಹೆಡ್‌ ಪ್ರಶಂಸೆ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

accident

Shirva: ಬೈಕ್‌ಗೆ ಜೀಪು ಢಿಕ್ಕಿ; ಸವಾರನಿಗೆ ಗಾಯ

14

Punjalkatte: ಮಳೆಗೆ ಮನೆಯ ಗೋಡೆ ಕುಸಿತ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

courts

Puttur: ರಸ್ತೆ ಬದಿಯಲ್ಲಿ ಶವ ಇರಿಸಿದ ಪ್ರಕರಣ; ಮೂವರಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.