ಎಲಿಯನಡುಗೋಡು ಮೂಡಾಯಿಬೆಟ್ಟಿನಲ್ಲೊಬ್ಬರು ಪಕ್ಷಿ ಪ್ರೇಮಿ

Team Udayavani, Mar 30, 2018, 12:15 PM IST

30-March-9.jpg

ಬಂಟ್ವಾಳ: ಬೇಸಗೆ, ಮಳೆಗಾಲದಲ್ಲಿ ಪಕ್ಷಿಗಳಿಗೆ ಮಣ್ಣಿನ ಕುಡಿಕೆಗಳಲ್ಲಿ ನೀರು, ಆಹಾರ ಇಡುವ ಮೂಲಕ ಪರಿಸರ ಪ್ರೇಮಿಯಾಗಿ ಎಲಿಯನಡುಗೋಡು ಗ್ರಾಮದ ಮೂಡಾಯಿಬೆಟ್ಟು ನಿವಾಸಿ ನಿತ್ಯಾನಂದ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ತನ್ನ 2 ಎಕ್ರೆ ಪ್ರದೇಶದ ಮರ-ಗಿಡಗಳಲ್ಲಿ ನೀರು ತುಂಬಿದ ಮಣ್ಣಿನ ಪಾತ್ರೆಯನ್ನು ನೇತು ಹಾಕಿದ್ದಾರೆ. ಐದನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಿಂದ ಈ ಹವ್ಯಾಸ ಬೆಳೆಸಿಕೊಂಡಿದ್ದ ಅವರು, ಪಕ್ಷಿ ಸಂಕುಲಕ್ಕೆ ನೀರೊದಗಿಸುವ ಕೆಲಸ ಮಾಡುತ್ತಿದ್ದಾರೆ.

ಇಂದು ಜೀವಜಲ ಕೊರತೆಯಿಂದ ಅನೇಕ ಪಕ್ಷಿಗಳು ಕುಡಿಯುವ ನೀರಿಲ್ಲದೆ ಸತ್ತಿರುವುದನ್ನು ಕಂಡು ಇಂತಹ ಒಂದು ಸಾಹಸಕ್ಕೆ ಮುಂದಾದರು. ಪಠ್ಯಗಳಿಂದ, ಸ್ನೇಹಿತರ ಮಾರ್ಗದರ್ಶನದಿಂದ ಪಕ್ಷಿಗಳಿಗೆ ನೀರೊದಗಿಸುವ, ನಶಿಸುತ್ತಿರುವ ಗುಬ್ಬಚ್ಚಿಯ ಸಂತಾನ ರಕ್ಷಣೆಗಾಗಿ ಮಡಕೆಯ ಕಾಪಿನಲ್ಲಿ ಮೊಟ್ಟೆ ಯಿಂದ ಮರಿ ಮಾಡುವುದಕ್ಕೂ ಕ್ರಮ ಕೈಗೊಂಡಿದ್ದಾರೆ.

ಪ್ರಾರಂಭದ ದಿನದಲ್ಲಿ ಅವರು ತನ್ನ ಜಮೀನಿನಲ್ಲಿ ಇಂತಹ ಪ್ರಯತ್ನ ನಡೆಸಿದಾಗ ಪಕ್ಷಿಯೊಂದು ಈ ಕುಡಿಕೆಯಿಂದ ನೀರು ಕುಡಿದುದನ್ನು ಗಮನಿಸಿದ ಬಳಿಕ ವಿಸ್ತಾರವಾಗಿ ಅಲ್ಲಲ್ಲಿ ಹಾಕಿದ್ದಾರೆ. ಹರಿಯುವ ನದಿ, ನೀರಿನಾಶ್ರಯದ ಕೆರೆ ಇಲ್ಲದಿದ್ದಲ್ಲಿ ಪಕ್ಷಿಗಳು ಕುಡಿಯುವ ನೀರಿನ ಉದ್ದೇಶಕ್ಕೆ ವಲಸೆ ಹೋಗುತ್ತವೆ. ಪಕ್ಷಿಗಳ ವಲಸೆಯಿಂದ ಪ್ರಾಕೃತಿಕ ಸಮತೋಲನ ತಪ್ಪುವುದು. ಇಂತಹ ವಿಚಾರಕ್ಕಾಗಿ ಪಕ್ಷಿಗಳಿಗೆ ನೀರು ಒದಗಿಸುವ ವ್ಯವಸ್ಥೆ ರೂಪಿಸಿದ್ದಾಗಿ ಅವರು ತಿಳಿಸಿದ್ದಾರೆ.

ಉಚಿತ ವಿತರಣೆ
ಅಪೇಕ್ಷಿತರು ಬಯಸಿದಲ್ಲಿ ಪಕ್ಷಿಗಳ ಸಂತಾನೋತ್ಪತ್ತಿಗಾಗಿ ಮಣ್ಣಿನ ಗೂಡು ಮತ್ತು ನೀರಿನ ಪಾತ್ರೆಯನ್ನು ಉಚಿತವಾಗಿ ವಿತರಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗೆ, ಸಸ್ಯರಾಶಿಗಳ ಮಹತ್ವ ತಿಳಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಸ್ಥಳೀಯವಾಗಿ ವಿವಿಧ ಶಾಲೆಗಳಿಗೆ ತೆರಳಿ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗಾಗಿ ಸಸ್ಯರಾಶಿಗಳ ಮಹತ್ವ ಎಂಬ ಬಗ್ಗೆ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ.

ಹಸಿರುಮಯ ಯೋಜನೆ
ಅವರ ಮನೆ ಸನಿಹದ ವಿಶಾಲ ಬಂಡೆ ಕಲ್ಲಿನ ಮೇಲೆ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಕಬ್ಬಿಣದೆ ಸಲಾಕೆಗಳಿಂದ ಮಾಡಿದ ಗೂಟದಲ್ಲಿ ಅಡ್ಡಕಟ್ಟುವ ಮೂಲಕ ನೀರಿನ ಪಾತ್ರೆ, ಆಹಾರದ ಪಾತ್ರೆಯನ್ನು ಕಟ್ಟಿ ನೇತಾಡಿಸುವ ಯೋಜನೆಯನ್ನು ಮಾಡಿದ್ದಾರೆ. ಇದರಿಂದ ಹಾರಿ ಬರುವ ಹಕ್ಕಿಗಳು ಸ್ಪಷ್ಟವಾಗಿ ನೀರನ್ನು, ಕಾಳನ್ನು ಗಮನಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.

ಹೆತ್ತವರ ಪ್ರೋತ್ಸಾಹ
ತನ್ನದೇ ಜಮೀನನ್ನು ಸಂಪೂರ್ಣವಾಗಿ ಹಸಿರುಮಯವಾಗಲು ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದ್ದಾರೆ. ಅವರ ಹೆತ್ತವರೂ ಅವರ ಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ. ಪುತ್ರನ ಅನುಪಸ್ಥಿತಿಯಲ್ಲಿ ತಾವೇ ನೀರು, ಕಾಳನ್ನು ಹಾಕುವ ಕ್ರಮವನ್ನು ನಿರ್ವಹಿಸುತ್ತಿದ್ದಾರೆ. ಸ್ನಾತಕೋತ್ತರ ಪದವಿಧರರಾದ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.

ಮರ-ಗಿಡಗಳಲ್ಲಿ ಬೆಳಗ್ಗೆ ಹಕ್ಕಿಗಳ ಕಲರವ
ಇಲ್ಲಿನ ಮರ-ಗಿಡಗಳಲ್ಲಿ ಬೆಳಗ್ಗೆ ಹಕ್ಕಿಗಳ ಕಲರವ ಕೇಳಿಸುತ್ತದೆ. ಗಿಳಿ, ಗುಬ್ಬಚ್ಚಿ, ಕೋಗಿಲೆ, ಪಾರಿವಾಳ, ಪಿಕಳಾರ, ಗೋರವಂಕ, ಮುಂತಾದ ಹಕ್ಕಿಗಳು ಕಾಣಸಿಗುತ್ತವೆ. ಸ್ವಂತ 2 ಎಕ್ರೆ ಜಮೀನಿನಲ್ಲಿ ಪೇರಳೆ, ಚಿಕ್ಕು ಮುಂತಾದ ಹಣ್ಣುಗಳನ್ನು ಕೇವಲ ಪಕ್ಷಿಗಳಿಗೆ ಆಹಾರ ಉದ್ದೇಶಕ್ಕಾಗಿ ಇನ್ನಷ್ಟು ಬೆಳೆಸಲು ನಿತ್ಯಾನಂದ ಶೆಟ್ಟಿ ಉದ್ದೇಶಿಸಿದ್ದಾರೆ. ಹಣ್ಣುಗಳು ಸಿಗದೇ ಇರುವ ಬೇಸಗೆಯ ಹೊತ್ತಿನಲ್ಲಿ, ಮಳೆಗಾಲದಲ್ಲಿ ಪ್ರತಿ ನಿತ್ಯ ರಾಗಿ, ಗೋಧಿ ಇನ್ನಿತರ ಆಹಾರ ಕಾಳುಗಳನ್ನು ಮರ-ಗಿಡಗಳಿಗೆ ಅಳವಡಿಸಿದ ಪ್ರತ್ಯೇಕ ಪಾತ್ರೆಯಲ್ಲಿ ದಿನಂಪ್ರತಿಯಂತೆ ಪ್ರತಿ ತಿಂಗಳಿಗೆ ಸರಾಸರಿ 30 ಕೆ.ಜಿ.ಯಷ್ಟು ಹಾಕುವ ಮೂಲಕ ಪಕ್ಷಿಗಳಿಗೆ ಆಹಾರ ಕೊರತೆ ನೀಗಿಸುವ ಪ್ರಯತ್ನ ಮಾಡಿದ್ದಾರೆ.

ಮಾನಸಿಕ ನೆಮ್ಮದಿ
ಹೆತ್ತವರಾದ ಬೇಬಿ ಶೆಟ್ಟಿ , ಸುಮತಿ ಬಿ. ಶೆಟ್ಟಿ ಅವರಿಂದ ನನ್ನ ಹವ್ಯಾಸಕ್ಕೆ ಪ್ರೋತ್ಸಾಹವಿದೆ. ಪ್ರಕೃತಿಯ ಜೀವ ರಾಶಿಗಳ ಸೇವೆಯೂ ಭಗವಂತನ ಸೇವೆ ಎಂಬುದಾಗಿ ನಂಬಿ ನಡೆಯುತ್ತಿದ್ದು, ಮಾನಸಿಕ ನೆಮ್ಮದಿ, ತೃಪ್ತಿ, ಸಂತೋಷ ಸಿಗುತ್ತದೆ. ಯಾವುದೋ ಒಂದು ಪಕ್ಷಿ ಬಂದು ಈ ಕುಡಿಕೆಗಳಿಂದ ನೀರು ಕುಡಿಯುವಾಗ ಅದರ ಚಲನವಲನ ವೀಕ್ಷಿಸುವುದೇ ಆನಂದ.
– ನಿತ್ಯಾನಂದ ಶೆಟ್ಟಿ

ರಾಜಾ ಬಂಟ್ವಾಳ 

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.