ಸಿದ್ಧೇಶ್ವರದಲ್ಲಿ ದಲಿತರ ಮೇಲೆ ಹಲ್ಲೆ; ದಲಿತ ಸಂಘಟನೆ ಪ್ರತಿಭಟನೆ
Team Udayavani, Mar 30, 2018, 12:40 PM IST
ಭಾಲ್ಕಿ: ಸಿದ್ಧೇಶ್ವರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗಲಭೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಲಾಯಿತು.
ಸಿದ್ದೇಶ್ವರ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಭೆ ನಡೆದು, ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಸುಮಾರು ಜನರಿಗೆ ಗಾಯಗಳಾಗಿವೆ. ಈ ವೇಳೆ ಹೆಚ್ಚು ಸಂಖ್ಯೆಯಲ್ಲಿ ದಲಿತರ ಮೇಲೆ ಹಲ್ಲೆ ಮಾಡಲಾಗಿದೆ. ಆದರೆ ದುರುದ್ದೇಶದಿಂದ ಅಮಾಯಕ ದಲಿತರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಕಾರಣ ದಲಿತರ ಮೇಲಿನ ಕ್ರಿಮಿನಲ್ ಕೌಂಟರ್ ಕೇಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕೆಎಸ್‌ಆರ್‌ಟಿಸಿ ನಿರ್ದೆಶಕ ವಿಲಾಸ ಮೋರೆ, ದಲಿತ ಪ್ಯಾಂಥರ್ ಮುಖಂಡ ಮನೋಹರ ಮೋರೆ, ಪ್ರಕಾಶ ಭಾವಿಕಟ್ಟೆ, ಮಾರುತಿ ಬೌದ್ಧೆ, ರಮೇಶ ಬೆಲ್ದಾರ, ಅಶೋಕ ಗಾಯಕವಾಡ, ಶಿವಕುಮಾರ ಮೇತ್ರೆ, ಸಂಜುಕುಮಾರ ಭಾವಿಕಟ್ಟೆ, ಕೈಲಾಸ ಭಾವಿಕಟ್ಟೆ, ಡಿಎಸ್ ಎಸ್ ಸಂಚಾಲಕ ವಿಲಾಸಮೋರೆ, ಜೈಪಾಲ ಬೋರಾಳೆ, ಮಾರುತಿ ಸಿಂಗೆ, ರಾಜಕುಮಾರ ಬೌದ್ಧೆ, ಚಂದ್ರಕಾಂತ ಪ್ಯಾಗೆ, ಕಿರಣ ಪ್ಯಾಗೆ, ಮಲ್ಲಿಕಾರ್ಜುನ ಮೊಳಕೇರೆ, ಅನೀಲ ಮೋರೆ, ಮಾರುತಿ ಭಾವಿಕಟ್ಟೆ, ರಾಹುಲ ಡಾಂಗೆ, ಪ್ರವೀಣ ಮೋರೆ, ಶಿವಕುಮಾರ ಮೋರೆ, ರಾಜಕುಮಾರ ಮೋರೆ, ಗುಂಡಪ್ಪಾ ಜ್ಯೋತಿ, ಪ್ರಶಾಂತ ಮೊಘಲೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.