ಅಕ್ಷರಸ್ಥರಿಂದ ಸುಂದರ ನಾಡು ಕಟ್ಟಲು ಸಾಧ್ಯ
Team Udayavani, Mar 30, 2018, 3:57 PM IST
ವಡಗೇರಾ: ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಯಾದಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಭೀಮರಾಯ ಲಿಂಗೇರಿ ಹೇಳಿದರು.
ತಾಲೂಕಿನ ನಾಯ್ಕಲ್ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಮಕ್ಕಳ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಸಸಿಗಳಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಮಗುವಿನಲ್ಲಿ ಸೃಜನಶೀಲತೆ ಇದೆ. ಅದನ್ನು ಶಿಕ್ಷಕರು ಗುರುತಿಸಿ ಆ ನಿಟ್ಟಿನಲ್ಲಿ ಮಾರ್ಗದರ್ಶವನ್ನು ಮಾಡಿದಾಗ ಮಕ್ಕಳಲ್ಲಿ ಇರುವ ಪ್ರತಿಭೆಯು ಹೊರತರಲು ಸಾಧ್ಯ ಎಂದು ತಿಳಿಸಿದರು.
ಪ್ರತಿಯೊಬ್ಬರು ಡಾ| ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮೂಢನಂಬಿಕೆ, ಅನಿಷ್ಠ ಪದ್ಧತಿಗಳನ್ನು ತೊಲಗಿಸಬಹುದು ಎಂದು ತಿಳಿಸಿದರು. ದಲಿತ ಮುಖಂಡ ಮಲ್ಲಿಕಾರ್ಜುನ ಅನಸುಗೂರ ಮಾತನಾಡಿ, ಪ್ರತಿಯೊಂದು ಸಮುದಾಯದವರಿಗೆ ಇಂದಿನ ಯುಗದಲ್ಲಿ ಶಿಕ್ಷಣ ಅಗತ್ಯ. ಅಕ್ಷರಸ್ಥರಿಂದ ಮಾತ್ರ ಸುಂದರ ನಾಡನ್ನು ಕಟ್ಟಲು ಸಾಧ್ಯ ಎಂದು ಬಸವಣ್ಣನವರ ವಚನ ಪ್ರಸ್ತುತ ಪಡಿಸಿದರು. ಶಿಕ್ಷಕ ಶಂಕ್ರಪ್ಪ ನಗಿಮುಖ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಖಾಜಾ ಮೈನೋದ್ಧೀನ್ ಜೇಮಶೇರಿ, ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಶಿವರಾಯ, ಪ್ರಮುಖರಾದ ಚೆನ್ನಾರೆಡ್ಡಿ ಗೊಸ್ವಾಮಿ, ಶರಣಪ್ಪ ಚತುರ್ವೇದಿ, ಭೀಮರಾಯ ತುಮಕೂರ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಹೊಸ್ಮನಿ, ಬಸವರಾಜ್ ದೊರೆ, ಎಸ್‌ಡಿಎಂಸಿ ಅಧ್ಯಕ್ಷ ಶೇಖಪ್ಪ ಮುಂದಿನಮನಿ, ಮಾನಮ್ಮ ಭೀಮರಾಯ, ಭೀಮರಾಯ ಕಣಜಿಕರ್, ಷಣ್ಮುಖಸ್ವಾಮಿ, ಭೀಮರಾಯ ನಾಟೇಕಾರ್, ಸಿದ್ರಾಮಪ್ಪ ಭಂಡಾರಿ ಸೇರಿದಂತೆ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.