ಮತದಾನ ಜಾಗೃತಿಗಾಗಿ ಪಾದಯಾತ್ರೆ


Team Udayavani, Mar 31, 2018, 6:45 AM IST

2903Kpe3.jpg

ಕಾಪು: ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ, ಸಾಮಾಜಿಕ ಕಾರ್ಯ ಕರ್ತರಿಬ್ಬರು “ಪ್ರತಿಜ್ಞೆಯ ನಡಿಗೆ ಮತದಾರರ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಪಾದಯಾತ್ರೆ- ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಜನರ ಗಮನಸೆಳೆದಿದ್ದಾರೆ.
  
ತಾರನಾಥ ಮೇಸ್ತ ಶೀರೂರು ಮತ್ತು ವಿನಯಚಂದ್ರ ಸಾಸ್ತಾನ  ಅವರು ಜಾಗೃತಿ ಕರಪತ್ರಗಳನ್ನು ಹಂಚುತ್ತ, ಉಡುಪಿಯಿಂದ ಕಾಪುವಿನವರೆಗೆ ಕಾಲ್ನಡಿಗೆ ನಡೆಸಿದ್ದಾರೆ.
  
ವಲಸೆ ಕಾರ್ಮಿಕರು,ಶಿಕ್ಷಿತರು ಗುರಿ
ಪಾದಯಾತ್ರೆ ಸಂದರ್ಭ ವಲಸೆ ಕಾರ್ಮಿಕರು,  ಶಿಕ್ಷಿತರನ್ನು ಹೆಚ್ಚಾಗಿ ಭೇಟಿ ಮಾಡುತ್ತಿದ್ದು ಅವರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕರಾವಳಿಯಲ್ಲಿ ಸಾವಿರಾರು ಕಾರ್ಮಿಕರಿದ್ದು, ಪ್ರತಿ ಸಂದರ್ಭದಲ್ಲೂ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಮತದಾನದ ಬಗ್ಗೆ ತಿಳಿದಿಲ್ಲ ಎಂಬ ಮಾತುಗಳು ಕೇಳಿಬಂದಿದೆ. ಅವರಿಗೆ ವೇತನ ಸಹಿತ ರಜೆ ಪಡೆದು ಮತದಾನ ಮಾಡುವ ಬಗ್ಗೆ ಮನವಿ ಮಾಡಿದ್ದೇವೆ. ಇನ್ನು, ಶಿಕ್ಷಿತರೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದು, ಅವರನ್ನೇ ಜಾಗೃತಿ ಗೊಳಿಸುವ ಪ್ರಯತ್ನ ನಡೆಸಬೇಕಿದೆ ಎಂದು ತಾರನಾಥ ಮೇಸ್ತ ಮತ್ತು ವಿನಯಚಂದ್ರ ಸಾಸ್ತಾನ ಹೇಳಿದರು.

ರಜೆ ದುರುಪಯೋಗ ಸಲ್ಲದು
ಮತದಾನದಂದು ಸಾರ್ವತ್ರಿಕ ರಜೆಯಿರುತ್ತದೆ. ಆದರೆ ಆ ರಜೆಯನ್ನು ಉದ್ಯೋಗಸ್ಥರು ಮತದಾನಕ್ಕಾಗಿ ಬಳಸು ತ್ತಿಲ್ಲ. ಆ ಬಗ್ಗೆ ಶಿಕ್ಷಿಕತರನ್ನು ಎಚ್ಚರಿಸುವ ಸಲುವಾಗಿ ಮತ್ತು ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರಿಗೂ ಅವರ ಹಕ್ಕಿನ ಬಗ್ಗೆ  ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 
 
ಎಲ್ಲೆಲ್ಲಿ ಕಾಲ್ನಡಿಗೆ? 
ಪ್ರಥಮ ಹಂತದಲ್ಲಿ ಉಡುಪಿಯಿಂದ ಕುಂದಾಪುರದವರೆಗೆ (41 ಕಿ.ಮೀ.) ಪಾದಯಾತ್ರೆ ನಡೆಸಿದ್ದು, ಗುರುವಾರ ಉಡುಪಿಯಿಂದ ಕಾಪು (13 ಕಿ.ಮೀ.) ಕಾಲ್ನಡಿಗೆ ನಡೆಸಿದ್ದಾರೆ. ಮುಂದೆ ಉಡುಪಿಯಿಂದ ಹಿರಿಯಡಕ (16 ಕಿ.ಮೀ.), ಕುಂದಾಪುರದಿಂದ ಬೈಂದೂರು (27 ಕಿ.ಮೀ.) ಕಾಲ್ನಡಿಗೆ ನಡೆಸಲಿದ್ದಾರೆ. ಜಾಗೃತಿ ಕಾರ್ಯಕ್ರಮ ಇಲ್ಲಿಗೆ ಮುಗಿಸದೇ ಜಿಲ್ಲೆಯಾದ್ಯಂತ ಮಾಡುತ್ತೇವೆ ಎಂದಿದ್ದಾರೆ.  

ಕರಪತ್ರದಲ್ಲೇನಿದೆ? 
“ನಾನು ಪ್ರತಿಜ್ಞೆ ಮಾಡುತ್ತೇನೆ, ನೀವು ಧೈರ್ಯದಿಂದ ಪ್ರತಿಜ್ಞೆ  ಮಾಡಿ ಭಾರತ ದೇಶವು ಸ್ವಾತಂತ್ರ್ಯ ಪಡೆದ ಅನಂತರ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಮತದಾನ ನನ್ನ ಅಮೂಲ್ಯ ಹಕ್ಕು. ಆಮಿಷಗಳಿಗೆ ಬಲಿಯಾಗದೆ, ಸ್ವಾಭಿಮಾನವನ್ನು ಕಳೆದುಕೊಳ್ಳದೆ ತಪ್ಪದೆ ಪ್ರಾಮಾಣಿಕವಾಗಿ ಯೋಗ್ಯ ಅಭ್ಯರ್ಥಿಗೆ ಅಮೂಲ್ಯವಾದ ಮತ ಚಲಾಯಿಸುತ್ತೇನೆ’ ಎಂಬ ಪ್ರತಿಜ್ಞೆ ಕರಪತ್ರದಲ್ಲಿದೆ.

ಟಾಪ್ ನ್ಯೂಸ್

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.