ಅಕಾಡೆಮಿಗಳ ರಚನೆ ಏಕೆ?
Team Udayavani, Mar 31, 2018, 6:00 AM IST
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯನ್ನು ಈಗ ಬಯಲಾಟ ಅಕಾಡೆಮಿ ಹಾಗೂ ಯಕ್ಷ ಗಾನ ಅಕಾಡೆಮಿ ಎಂಬುದಾಗಿ ವಿಭಜನೆ ಮಾಡಿ ಅಥವಾ ಎರಡು ಪ್ರತ್ಯೇಕ ಅಕಾಡೆಮಿಗಳನ್ನಾಗಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಪದನಿಮಿತ್ತ ಅಧ್ಯಕ್ಷ ಹಾಗೂ ಸದಸ್ಯರನ್ನು ಸರಕಾರ ನೇಮಕ ಮಾಡಿದೆ. ಈ ಅಕಾಡೆಮಿಗಳ ರಚನೆಯ ಉದ್ದೇಶದ ಬಗೆಗೆ ಗೊಂದಲವಿದೆ ಅಥವಾ ಜಿಜ್ಞಾಸೆ ಇದೆ ಎಂದರೆ ತಪ್ಪಲ್ಲ. ಅಕಾಡೆಮಿ ರಚಿಸುವುದೇ ಕಲೆಯ ಪರಂಪರೆ ಅಥವಾ ಮೂಲಸ್ವರೂಪ ಸಂರಕ್ಷಣೆಗಾಗಿ ಎನ್ನುವುದು ಸ್ಥಿರವಾಗಿ ನೆಲೆಗೊಂಡ ಸಾರ್ವತ್ರಿಕ ಅಭಿಪ್ರಾಯ. ಸ್ಮಾರಕ, ಐತಿಹಾಸಿಕ ಸ್ಥಳ, ಸಾಂಸ್ಕೃತಿಕ ಹಿನ್ನೆಲೆಯುಳ್ಳ ಕಲೆಗಳು ವಿರೂಪಗೊಳ್ಳದ ಹಾಗೆ ಸಂರಕ್ಷಿಸುವುದು ಸಂವಿಧಾನದ ಆಶಯದಲ್ಲಿ ಒಳಗೊಂಡ ಅಂಶ. ಈ ಪ್ರಬಲ ಉದ್ದೇಶವಲ್ಲದಿದ್ದರೆ ಈ ಅಕಾಡೆಮಿಗಳ ಅವಶ್ಯವೂ ಇರುವುದಿಲ್ಲ ಮತ್ತು ಸಾರ್ವಜನಿಕ ನಿಧಿಯನ್ನು ಬಳಸಲು ಅವಕಾಶವೂ ಇರುವುದಿಲ್ಲ.
ಈ ಹಿನ್ನೆಲೆಯಲ್ಲಿ ಯಕ್ಷಗಾನ ಅಕಾಡೆಮಿ ರಚನೆಯಾಗುತ್ತಲೇ ಕಲೆಯ ಗುಣಲಕ್ಷಣಗಳನ್ನು ನಿರೂಪಿಸಿ, ನಿರ್ವಹಣಾ ಮೇರೆಯನ್ನು ಗೊತ್ತುಪಡಿಸುವ ಕೆಲಸ, ಅಕಾಡೆಮಿಯ ಮೊದಲ ಕರ್ತವ್ಯವಾಗಿತ್ತು. ಹಾಗೆ ನಿರೂಪಿಸಿದ ಕಲೆಯನ್ನು ಉಳಿಸಿ ಬೆಳೆಯಲು ಬೇಕಾದ ಉಪಕ್ರಮಗಳನ್ನು ಕೈಗೊಳ್ಳುವುದು ಅನಂತರದ ವಿಚಾರ. ವಿಭಜನೆಗೆ ಮುನ್ನ ಇದ್ದ ಯಕ್ಷಗಾನ ಬಯಲಾಟ ಅಕಾಡೆಮಿಯ ವ್ಯಾಪ್ತಿಯೊಳಗೆ ಕರಾವಳಿಯ ತೆಂಕು ತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಹಾಗೂ ಹಳೇ ಮೈಸೂರು ವಿಭಾಗದ ಮತ್ತು ಉತ್ತರ ಕರ್ನಾಟಕ ಭಾಗದ ದೊಡ್ಡಾಟ, ಮೂಡಲಪಾಯ, ಕೃಷ್ಣ ಪಾರಿಜಾತ, ರಾಧಾನಾಟ ಇತ್ಯಾದಿ ಕಲೆಗಳು ಸೇರಿಕೊಂಡಿವೆ.
ಖೇದದ ವಿಚಾರವೆಂದರೆ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರತ ಈ ಅಕಾಡೆಮಿ ಈ ಕಲೆಗಳ ಮೂಲ ಸ್ವರೂಪವನ್ನು ನಿರೂಪಿಸಿ ದಾಖಲೀಕರಣ ಮಾಡುವ ಗೋಜಿಗೆ ಹೋಗಲೇ ಇಲ್ಲ. ಈ ಬಗ್ಗೆ ಕಳೆದ ಮೂರು ವರ್ಷದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡಿದ ದಾಖಲೆ ಇದೆ. ಸರಕಾರಕ್ಕೆ ಇದು ಬೇಕಾಗಿಲ್ಲ. ದಿವ್ಯ ನಿರ್ಲಕ್ಷ. ಇನ್ನು, ಅಕಾಡೆಮಿಯ ಪದಾಧಿಕಾರಿಗಳು ಗಂಭೀರ ಚಿಂತನೆ ಮಾಡಲೇ ಇಲ್ಲ. ಅವರ ಚಿಂತನೆ ಪ್ರತ್ಯೇಕಿಸುವುದಕಷ್ಟೇ ಎಂದು ಭಾಸವಾಗುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಪ್ರತ್ಯೇಕ ಅಕಾಡೆಮಿ ರಚಿಸುವುದರಿಂದ ಕಲೆಗೆ ಯಾವ ಪ್ರಯೋಜನ ದೊರಕೀತು. ಬದಲಾಗಿ ಈ ಎಲ್ಲ ಕಲೆಗಳ ಮೂಲ ಸ್ವರೂಪವನ್ನು ನಿರೂಪಿಸಿ ದಾಖಲೀಕರಿಸುವ ಕೆಲಸ ಮಾಡಿದ್ದಾದರೆ, ಒಂದೇ ಸೂರಿನಡಿ ಇದ್ದು ಅವುಗಳ ಅಸ್ವಿತ್ವವನ್ನು ಪ್ರತ್ಯೇಕ ಉಳಿಸಿ, ಬೆಳೆಸಿಕೊಂಡು ಹೋಗಲು ಸಹಕಾರಿಯಾಗುತಿತ್ತು. ಇವುಗಳ ಭೌಗೋ ಳಿಕ ಹರವನ್ನು ಕರ್ನಾಟಕದಾದ್ಯಂತ ವಿಸ್ತರಿಸಲು ಅನುಕೂಲವಾಗುತ್ತಿತ್ತು. ಕರ್ನಾಟಕದ ಎಲ್ಲ ಭಾಗಗ ಳಲ್ಲಿಯೂ ಈ ಕಲೆಗಳ ಪ್ರಯೋಗ, ಪ್ರದರ್ಶನಗಳನ್ನು ನೀಡುವ ಮೂಲಕ ಪ್ರೇಕ್ಷಕ ವರ್ತುಲವನ್ನು ಹಿಗ್ಗಿಸುವ ವಿಪುಲ ಅವಕಾಶವಿತ್ತು. ಈಗ ಈ ಕಲೆಗಳನ್ನು ಪ್ರಾದೇಶಿಕವಾಗಿ ಸಂಕುಚಿತಗೊಳಿಸುವ ಹುನ್ನಾರಕ್ಕೆ ನಾಂದಿಯಾಗಬಹುದು.
ಇನ್ನೊಂದು ಆಘಾತಕಾರಿ ವಿಷಯವೇನೆಂದರೆ ಈ ಅಕಾಡೆಮಿಯ ರಚನೆ ಹಾಗೂ ತತ್ಸಂಬಂಧಿತ ನಿಯ ಮಾವಳಿಗಳು ಸಂವಿಧಾನದ ಆಶಯಕ್ಕೆ ಪೂರಕವಾಗಿಲ್ಲ. ವಿಭಜನೆಗೆ ಮುನ್ನ ಇದ್ದ ಅಕಾಡೆಮಿಯ ಬೈಲಾ ಅಥವಾ ಅಂಗರಚನೆಯಲ್ಲಿ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗೆ ಯಾವ ಅರ್ಹತಾ ಮಾನದಂಡವನ್ನು ನಿಗದಿ ಪಡಿಸದೆ ಕೇವಲ ನೇಮಕಾತಿ ಹಕ್ಕನ್ನು ಮಾತ್ರ ಸರಕಾರ ತನ್ನ ಸ್ವಾಧೀನ ಇರಿಸಿಕೊಂಡಿದೆ. ಹಾಗೇ ಪ್ರಶಸ್ತಿ ಪ್ರದಾನಕ್ಕೂ ಹಾಗೂ ಅನುದಾನ ಮಂಜೂರಾತಿಗೂ ಯಾವ ಮಾನದಂಡವನ್ನು ನಿಗದಿಪಡಿಸಿರುವುದಿಲ್ಲ. ಅಂದರೆ ಇಲ್ಲಿಯ ತನಕ ಕಾಲಕಾಲಕ್ಕೆ ಬರುವ ಸಕಾರದ ಸಮೀಪವರ್ತಿಗಳು ಮಾಡಿದ ಉಪದೇಶ ಯಾ ಶಿಫಾರಸ್ಸಿನಂತೆ ಪದಾಧಿಕಾರಿಗಳನ್ನು ನೇಮಕ ಮಾಡ ಲಾಗಿದೆ. ಅಂದರೆ ಈ ತನಕ ನೇಮಕಗೊಂಡವರು ಅರ್ಹತಾವಂಥರಾಗಿಲ್ಲವೆಂಬ ವಾದವಲ್ಲ. ಆದರೆ ಯಾವ ಮಾನದಂಡ ನಿಗದಿಪಡಿಸದೆ ನೇಮಕಾತಿ ಅಧಿ ಕಾರ ಮಾತ್ರ ಸರಕಾರದ ಸ್ವಾಧೀನ ಇರಿಸಿಕೊಳ್ಳುವುದು ಸಾರ್ವಜನಿಕ ನೇಮಕಾತಿ ನಿಯಮಗಳಿಗೆ ಹಾಗೂ ಸಾರ್ವಜನಿಕ ನಿಧಿಯ ಬಳಕೆಯ ತತ್ವಕ್ಕೆ ವಿರೋಧ ವಾದುದು ಎಂದು ಹೇಳದೆ ವಿಧಿಯಿಲ್ಲ. ಆದುದರಿಂದ ಪ್ರತ್ಯೇಕ ಅಕಾಡೆಮಿಯನ್ನು ರಚಿಸಿದ ಈ ಹೊತ್ತಿನಲ್ಲಿ ಪದಾಧಿಕಾರಿಗಳ ಆಯ್ಕೆಗೆ ಅರ್ಹತೆಯನ್ನು ನಿಗದಿಪಡಿ ಸುವ ಹಾಗೂ ಪ್ರಶಸ್ತಿ ಮತ್ತು ಅನುದಾನ ಇತ್ಯಾದಿಗಳಿಗೆ ಮಾನದಂಡ ನಿಗದಿಪಡಿಸುವ ಅಲ್ಲದೆ ಅಕಾಡೆಮಿಗೆ ನಿಶ್ಚಿತ ಕರ್ತವ್ಯವನ್ನು ಸೂಚಿಸುವ ನಿಯಾಮಾವಳಿಗಳನ್ನು ಸ್ಪಷ್ಟ ಪದಗಳಲ್ಲಿ ಸರಕಾರ ಆದಷ್ಟು ಬೇಗ ರೂಪಿಸಬೇಕು.
ಬೇಳೂರು ರಾಘವ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.