ಮಂಗಳೂರು, ಟಿ4 ಸೂಪರ್ ಕಿಂಗ್ಸ್ ಸೆಮಿಗೆ
Team Udayavani, Mar 31, 2018, 6:00 AM IST
ಮಂಗಳೂರು: ಬ್ರ್ಯಾಂಡ್ ವಿಷನ್ ಈವೆಂಟ್ಸ್, ಮಂಗಳೂರು ಅಕೇಶನಲ್ಸ್ ಕ್ರೀಡಾ ಸಂಸ್ಥೆ ಮತ್ತು ಸಿ ಬರ್ಡ್ ಕ್ರಿಕೆಟ್ ಅಕಾಡೆಮಿಯ ಆಶ್ರಯದಲ್ಲಿ ಎನ್ಎಂಪಿಟಿಯ ಡಾ| ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ ದಲ್ಲಿ ಆಯೋಜಿಸಿದ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಕೂಟದ ಮೊದಲ ರೋಮಾಂಚಕಾರಿ ಎಲಿಮಿನೇಟರ್ ಪಂದ್ಯದಲ್ಲಿ ಟಿ4 ಸೂಪರ್ ಕಿಂಗ್ಸ್ ತಂಡವು 5 ರನ್ನುಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.
ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಟಿ4 ಸೂಪರ್ ಕಿಂಗ್ಸ್ ತಂಡವು ವಿನಯ್ ಸಾಗರ್ (43), ನಿಹಾಲ್ ಉಳ್ಳಾಲ (46) ಮತ್ತು ಅಬ್ದುಲ್ ಮಜೀದ್ (28) ಅವರ ಉತ್ತಮ ಆಟದಿಂದಾಗಿ 9 ವಿಕೆಟಿಗೆ 161 ರನ್ ಪೇರಿಸಿತು. ಇದಕ್ಕುತ್ತರವಾಗಿ ಅಲಿ ವಾರಿಯರ್ ತಂಡವು ಬಿರುಸಿನ ಆಟ ಆಡಿದ್ದರೂ ಅಂತಿಮವಾಗಿ 7 ವಿಕೆಟಿಗೆ 157 ರನ್ ಗಳಿಸಿ ಶರಣಾಯಿತು. ರೋಹಿತ್ ಗೌಡ 58 ರನ್ ಗಳಿಸಿ ಅಜೇಯರಾಗಿ ಉಳಿದರು.
“ಎ’ ಗುಂಪಿನ ಅಗ್ರಸ್ಥಾನ ಪಡೆದ ಟೀಂ ಎಲಿಗೆಂಟ್ ಮತ್ತು “ಬಿ’ ಗುಂಪಿಯ ಅಗ್ರಸ್ಥಾನಿ ಮಂಗಳೂರು ಯುನೈಟೆಡ್ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದವು.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡವು ಯುನೈಟೆಡ್ ಉಳ್ಳಾಲ ತಂಡವನ್ನು 64 ರನ್ನುಗಳಿಂದ ಸೋಲಿಸಿತು. ನಾಕೌಟ್ ಹಂತಕ್ಕೇರಬೇಕಾದರೆ ಉಳ್ಳಾಲ ತಂಡಕ್ಕೆ ಈ ಪಂದ್ಯ ಗೆಲ್ಲಲೇಬೇಕಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್ ತಂಡವು 8 ವಿಕೆಟಿಗೆ 162 ರನ್ ಗಳಿಸಿತ್ತು. ರೋಶನ್ ಶೆಟ್ಟಿ (46), ಪ್ರವೀಣ್ ದುಬೆ 46 ರನ್ ಹೊಡೆದರು. ಇದಕ್ಕುತ್ತರವಾಗಿ ಉಳ್ಳಾಲ ತಂಡವು 98 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಕಾರ್ತಿಕ್ 35 ರನ್ ಗಳಿಸಿದರೆ ನಾಗಭರತ್ ಮತ್ತು ಅಕ್ಷಯ್ ಬಲ್ಲಾಳ್ ತಲಾ ಮೂರು ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.