ವನಿತಾ ತ್ರಿಕೋನ ಟಿ20: ಪ್ರಶಸ್ತಿಗಾಗಿ ಬಲಿಷ್ಠ ತಂಡಗಳ ಸೆಣಸಾಟ
Team Udayavani, Mar 31, 2018, 7:00 AM IST
ಮುಂಬಯಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವನಿತೆಯರ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯ ಶನಿವಾರ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಆದರೆ, ಆತಿಥ್ಯದ ರಾಷ್ಟ್ರವಾಗಿರುವ ಭಾರತ 4ಪಂದ್ಯದಲ್ಲಿ 3 ಪಂದ್ಯ ಸೋತು ಫೈನಲ್‌ನಿಂದ ಹೊರಬಿದ್ದಿದೆ.
ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಬಲಿಷ್ಠವಾಗಿರುವುದರಿಂದ ಫೈನಲ್‌ನಲ್ಲಿ ತೀವ್ರ ಹೋರಾಟವನ್ನು ನಿರೀಕ್ಷಿಸಬಹುದು. ಲೀಗ್ ಹಂತದಲ್ಲಿ ಆಸ್ಟ್ರೇಲಿಯ ತಂಡ ಭಾರತದ ವಿರುದ್ಧ ಒಂದು ಪಂದ್ಯದಲ್ಲಿ 6 ವಿಕೆಟ್‌ನಿಂದ ಜಯ ಸಾಧಿಸಿದರೆ, ಮತ್ತೂಂದು ಪಂದ್ಯದಲ್ಲಿ 36 ರನ್‌ಗಳಿಂದ ಜಯ ಸಾಧಿಸಿದೆ. ಅದೇ ರೀತಿ ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯದಲ್ಲಿ 8 ವಿಕೆಟ್ ಗೆಲುವು ಸಾಧಿಸಿದರೆ, ಮತ್ತೂಂದು ಪಂದ್ಯದಲ್ಲಿ 8 ವಿಕೆಟ್‌ನಿಂದ ಸೋಲುಂಡಿದೆ. ಈ ಮೂಲಕ 4 ಪಂದ್ಯದಲ್ಲಿ 6 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿಯೇ ಫೈನಲ್ ಪ್ರವೇಶಿಸಿದೆ.
ಅದೇ ರೀತಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧ ಒಂದು ಪಂದ್ಯದಲ್ಲಿ 8 ವಿಕೆಟ್ ಸೋಲುಂಡರೆ, ಮತ್ತೂಂದು ಪಂದ್ಯದಲ್ಲಿ 8 ವಿಕೆಟ್ ಗೆಲುವು ಸಾಧಿಸಿದೆ. ಭಾರತದ ವಿರುದ್ಧ ಒಂದು ಪಂದ್ಯದಲ್ಲಿ 45 ರನ್‌ಗಳಿಂದ ಗೆಲುವು ಸಾಧಿಸಿದರೆ, ಮತ್ತೂಂದು ಪಂದ್ಯದಲ್ಲಿ 8 ವಿಕೆಟ್‌ನಿಂದ ಸೋಲುಂಡಿದೆ. ಒಟ್ಟು 4 ಪಂದ್ಯಗಳಿಂದ 4 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದೆ.
ಇಂಗ್ಲೆಂಡ್ ಪರ ಬ್ಯಾಟಿಂಗ್‌ನಲ್ಲಿ ಡೇನಿಯಲ್ ವ್ಯಾಟ್ (179 ರನ್) ಭರ್ಜರಿಯಾಗಿ ಮಿಂಚಿದ್ದಾರೆ. ಭಾರತದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಶತಕ ದಾಖಲಿಸಿ ತಂಡದ ಗೆಲುವಿಗೆ ನೆರವಾಗಿದ್ದರು. ಅದೇ ರೀತಿ ಟಮ್ಮಿ ಬ್ಯೂಮಾಂಟ್ (120 ರನ್) ಒಂದು ಅರ್ಧಶತಕ ಸಿಡಿಸಿದ್ದಾರೆ. ನಟಾಲಿಯಾ ಸಿವರ್ (105 ರನ್) ಕೂಡ ಒಂದು ಅರ್ಧಶತಕ ಸಿಡಿಸಿ ಫಾರ್ಮ್ ಸಾಬೀತುಪಡಿಸಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬರುತ್ತಿಲ್ಲ. ಆಲ್‌ರೌಂಡ್ ಪ್ರದರ್ಶನ ನೀಡುತ್ತಿರುವ ನಟಾಲಿಯಾ ಸಿವರ್ 4 ವಿಕೆಟ್ ಪಡೆದರೆ, ಡೇನಿಯಲ್ ಹೆಜೆಲ್ 3 ವಿಕೆಟ್ ಪಡೆದಿದ್ದಾರೆ. ಉಳಿದ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ಎಡವುತ್ತಿದ್ದಾರೆ.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ಪ್ರಬಲ
ಆಸ್ಟ್ರೇಲಿಯ ಪರ ಬ್ಯಾಟಿಂಗ್‌ನಲ್ಲಿ ಮೂನಿ ಕೂಟದಲ್ಲಿ 120 ರನ್ ಬಾರಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಸೇರಿದೆ. ವಿಲ್ಲಾನಿ ಕೂಟದಲ್ಲಿ 106 ರನ್ ಬಾರಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಸೇರಿದೆ. ಆದರೆ ಬ್ಯಾಟಿಂಗ್‌ನಲ್ಲಿ ಇಂಗ್ಲೆಂಡ್‌ಗೆ ಹೋಲಿಸಿದರೆ ಸ್ವಲ್ಪ ವೀಕ್ ಆಗಿಯೇ ಕಾಣಿಸುತ್ತದೆ. ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಕೂಟದಲ್ಲಿ ಡೆಲಿಸ್ಸಾ ಕಿಮ್ಮಿನ್ಸ್ 6 ವಿಕೆಟ್, ಮೇಗನ್ ಸ್ಕಟ್ 6 ವಿಕೆಟ್, ಆ್ಯಶ್ಲೇ ಗಾಡ್ನìರ್ 4 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಎರಡೂ ತಂಡಗಳ ಬಲಾಬಲವನ್ನು ನೋಡಿದರೆ ಆಸ್ಟ್ರೇಲಿಯ ಬೌಲಿಂಗ್‌ನಲ್ಲಿ ಮತ್ತು ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.