ಟೊಯೋಟಾ, ಸುಜುಕಿ ಕಾರು ಹೈಬ್ರಿಡ್
Team Udayavani, Mar 31, 2018, 6:00 AM IST
ಹೊಸದಿಲ್ಲಿ: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಬಲು ಬೇಡಿಕೆಯ ಬಲೆನೋ ಕಾಂಪೆಕ್ಟ್, ಮಿನಿ ಎಸ್ಯುವಿ ಸೆಗ್ಮೆಂನ ವಿತಾರ ಬ್ರಿಜಾ ಮತ್ತು ಜನಪ್ರಿಯ ಸೆಡಾನ್ ಸೆಗ್ಮೆಂಟ್ನ ಕೊರೋಲಾ ಮುಂದಿನ ವರ್ಷ ಬದಲಾಗಲಿವೆ!
ಇದೇನು ಇಷ್ಟು ಬೇಗ ಉತ್ಪಾದನೆಗೆ ಬ್ರೇಕ್ ಹಾಕು ತ್ತಾರಾ ಎಂದುಕೊಳ್ಳಬೇಡಿ. ಖಂಡಿತಾ ಹಾಗೇನೂ ಇಲ್ಲ. ಸುಜುಕಿ ಮೋಟಾರ್ ಹಾಗೂ ಟೊಯೋಟಾ ಕಂಪನಿಗಳು ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಮಾರುತಿ ಸುಜುಕಿ ಮೋಟಾರ್ ತನ್ನ ಜನಪ್ರಿಯ ಬಲೆನೋ ಹಾಗೂ ವಿತಾರಾ ಬ್ರಿಜಾ ಕಾರುಗಳನ್ನು ಟೊಯೋಟಾ ಕಂಪನಿಗೂ, ಟೊಯೋಟಾ ತನ್ನ ಜನಪ್ರಿಯ ಸೆಡಾನ್ ಕೊರೋಲಾವನ್ನು ಸುಜುಕಿಯವರಿಗೂ ಮಾರಾಟ ಹಾಗೂ ಉತ್ಪಾದನೆಗೆ ನೆರವಾಗುವಂತೆ ಅದಲು- ಬದಲಾಯಿಸಿಕೊಳ್ಳುವ ಒಪ್ಪಂದ ಮಾಡಿ ಕೊಂಡಿವೆ. ಹೀಗಾಗಿ 2019ರ ವೇಳೆಗೆ ಬಲೆನೋ, ಬ್ರಿàಜಾ ಟೊಯೋಟಾ ಬ್ರಾಂಡ್ ಹೆಸರಿನೊಂದಿಗೂ, ಕೊರೋಲಾ ಸುಜುಕಿ ಅವರ ಬ್ರಾಂಡ್ ಹೆಸರಿನೊಂದಿಗೂ ಮಾರುಕಟ್ಟೆ ಪ್ರವೇಶಿಸಲಿವೆ. ಹೀಗಾಗಿ ಮುಂದಿನ ವೇರಿಯಂಟ್ಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನೂ ನಿರೀಕ್ಷಿಸಬಹುದಾಗಿದೆ.
ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಕಳೆದ ನವೆಂಬರ್ನಲ್ಲಿ ಒಪ್ಪಂದ ಮಾಡಿಕೊಂಡಿರುವ ಜಪಾನ್ನ ಈ ಎರಡೂ ಕಂಪನಿಗಳು ಈಗ ಅದಕ್ಕಿಂತ ಮುಖ್ಯವಾದ ಮಗದೊಂದು ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಜಂಟಿ ಯಾಗಿ ಪ್ರಕಟಣೆ ಮೂಲಕ ಮಾಹಿತಿ ನೀಡಿವೆ. 2017ರ ಫೆಬ್ರವರಿಯಲ್ಲಿಯೇ ಇಂಥದ್ದೊಂದು ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆ ನಡೆದಿತ್ತು ಎಂದು ಕಂಪನಿ ಹೇಳಿಕೊಂಡಿವೆ. ಮೂಲಗಳ ಪ್ರಕಾರ ಟೊಯೋಟಾ ತನ್ನ ಶೋರೂಂಗಳಲ್ಲಿ ಬಲೆನೋ, ಬ್ರಿಜಾ ಕಾರುಗಳನ್ನು, ಸುಜುಕಿ ಮೊಟಾರ್ ನೆಕ್ಸಾ ಶೋರೂಂನಲ್ಲಿ ಕೊರೋಲಾ ಕಾರುಗಳನ್ನೂ ಮಾರಾಟ ಮಾಡಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.