ಪೆರ್ಮುದೆ ಇಗರ್ಜಿಯಲ್ಲಿ ಶುಭ ಶುಕ್ರವಾರ ಆಚರಣೆ

Team Udayavani, Mar 31, 2018, 9:25 AM IST

Permude-3.jpg

ಕಾಸರಗೋಡು: ಮನುಕುಲದ ಪಾಪ ವಿಮೋಚನೆಗಾಗಿ ದೇವಪುತ್ರ ಪ್ರಭು ಯೇಸು ಕ್ರಿಸ್ತ ಶಿಲುಬೆಗೆ ಬಲಿಯಾದ ದಿನದ ಅಂಗವಾಗಿ ಶುಕ್ರವಾರ ಕೆಥೋಲಿಕ್‌ ಕ್ರೈಸ್ತರು ಗುಡ್‌ ಫ್ತೈಡೇ ಅಥವಾ ಶುಭ ಶುಕ್ರವಾರವಾಗಿ ಆಚರಿಸಿದರು. ಶುಕ್ರವಾರ ಬೆಳಗ್ಗೆ ಪೆರ್ಮುದೆ ಸೈಂಟ್‌ ಲಾರೆನ್ಸ್‌ ಇಗರ್ಜಿ ಮೈದಾನದಲ್ಲಿ ಶಿಲುಬೆ ಹಾದಿ ನಡೆಯಿತು. ಫಾ| ಮೆಲ್ವಿನ್‌ ಫೆರ್ನಾಂಡಿಸ್‌ ನೇತೃತ್ವ ನೀಡಿದರು.

ಗೋಲ್ಗೊಥಾ ಎಂಬ ಸ್ಥಳದಲ್ಲಿ ನಿರಪರಾಧಿ ಯೇಸುವನ್ನು ಯೆಹೂದ್ಯರು ಶಿಲುಬೆಗೆ ಏರಿಸಿದ್ದರು. ‘ಪಿತನೇ ಇವರನ್ನು ಕ್ಷಮಿಸಿ. ತಾವು ಏನು ಮಾಡುತ್ತಿರುವರು ಎಂದು ಇವರು ಅರಿಯರು’ ಎಂದು ಶಿಲುಬೆಯಿಂದ ಹೇಳಿದ ಯೇಸು ಕ್ಷಮೆಯ ಹೊಸ ಉಪದೇಶವನ್ನು ಮನುಕುಲಕ್ಕೆ ನೀಡಿದರು. ಮುಳ್ಳುಗಳಿಂದ ತುಂಬಿದ ಗೋಲ್ಗೊಥಾ ಬೆಟ್ಟಕ್ಕೆ ಶಿಲುಬೆಯನ್ನು ಹೆಗಲಿಗೇರಿಸಿ ಯೇಸು ನಡೆದ ಶಿಲುಬೆಯ ಹಾದಿಯನ್ನು ಹದಿನಾಲ್ಕು ಹಂತಗಳಾಗಿ ವಿಭಜಿಸಿ ವಿಮರ್ಶಿಸಿ ಕ್ರೈಸ್ತ ಬಾಂಧವರು ಧ್ಯಾನ- ಪ್ರಾರ್ಥನೆ ಸಲ್ಲಿಸಿದರು. ಯೇಸು ಪ್ರಾಣಾರ್ಪಣೆ ಮಾಡಿದ ದಿನ ನಡು ಮಧ್ಯಾಹ್ನದವರೆಗೆ ಸೂರ್ಯ ಕಾಂತಿಹೀನನಾಗಿದ್ದನು. ಎಲ್ಲೆಡೆ ಕತ್ತಲೆ ಆವರಿಸಿತ್ತು. ಮಹಾದೇವಾಲಯದ ತೆರೆ ಇಬ್ಭಾಗವಾಗಿ ಸೀಳಿತು. ಯೇಸು ಸ್ವಾಮಿ ‘ಪಿತನೇ ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ’ ಎಂದು ಗಟ್ಟಿಯಾಗಿ ಕೂಗಿ ಪ್ರಾಣ ಬಿಟ್ಟರು.

ಯೇಸುವಿನ ಹೆಗಲಿಗೆ ಶಿಲುಬೆ ನೀಡುವುದು, ಯೇಸು ಮೊದಲ ಬಾರಿ ಶಿಲುಬೆಯಡಿ ಬೀಳುವುದು, ಯೇಸು ತನ್ನ ದುಃಖತಪ್ತ ಮಾತೆಯನ್ನು ನೋಡುವುದು, ಸಿರೆನಾದ ಸೈಮಾನ್‌ ಯೇಸುವಿಗೆ ಶಿಲುಬೆ ಹೊರಲು ಸಹಾಯ ಮಾಡುವುದು, ವೆರೊನಿಕಾ ಯೇಸುವಿನ ಮುಖಾರವಿಂದವನ್ನು ಒರೆಸುವುದು, ಯೇಸು ಎರಡನೇ ಬಾರಿ ಶಿಲುಬೆಯಡಿ ಬೀಳುವುದು, ಯೇಸು ಜೆರುಸಲೇಂನ ಮಹಿಳೆಯರಿಗೆ ಸಾಂತ್ವನ ಹೇಳುವುದು, ಯೇಸು ಮೂರನೇ ಬಾರಿ ಶಿಲುಬೆಯಡಿ ಬೀಳುವುದು, ಯೇಸುವಿನ ದೇಹದ ವಸ್ತ್ರ ತೆಗೆದು ನಗ್ನ ಮಾಡುತ್ತಾರೆ. ಯೇಸುವನ್ನು ಶಿಲುಬೆಗೇರಿಸುವುದು, ಯೇಸು ಶಿಲುಬೆಯಲ್ಲಿ ಪ್ರಾಣ ಬಿಡುವುದು, ಯೇಸುವಿನ ಪಾರ್ಥಿವ ಶರೀರ ಶಿಲುಬೆಯಿಂದ ಕೆಳಗಿಳಿಸುತ್ತಾರೆ. ಯೇಸುವಿನ ಪಾರ್ಥಿವ ಶರೀರವನ್ನು ಸಂಸ್ಕರಿಸುವುದು ಹೀಗೆ ಹದಿನಾಲ್ಕು ಹಂತಗಳಲ್ಲಿ ಶಿಲುಬೆ ಹಾದಿ ನಡೆಯಿತು. ನೂರಾರು ಕ್ರೈಸ್ತ ಬಾಂಧವರು ಶಿಲುಬೆ ಹಾದಿಯಲ್ಲಿ ಭಾಗವಹಿಸಿದರು.

ಪಾಸ್ಖ ಹಬ್ಬದ ಅಂಗವಾಗಿ ಪೆರ್ಮುದೆ ಸೈಂಟ್‌ ಲಾರೆನ್ಸ್‌ ಇಗರ್ಜಿಯಲ್ಲಿ ಮಾ. 31ರಂದು ರಾತ್ರಿ 7.30ಕ್ಕೆ ಹೊಸ ಬೆಳಕಿನ ಆಶೀರ್ವಚನ, ಬಳಿಕ ದಿವ್ಯಬಲಿಪೂಜೆ ನಡೆಯಲಿದೆ. ಎ. 1ರಂದು ಬೆಳಗ್ಗೆ 8 ಗಂಟೆಗೆ ದಿವ್ಯಬಲಿಪೂಜೆ ನಡೆಯಲಿದೆ. ಧರ್ಮಗುರು ಫಾ| ಮೆಲ್ವಿನ್‌ ಫೆರ್ನಾಂಡಿಸ್‌ ನೇತೃತ್ವ ನೀಡುವರು.

ಟಾಪ್ ನ್ಯೂಸ್

12-cancer

Breast Cancer: ಸ್ತನಗಳ ಕ್ಯಾನ್ಸರ್‌ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

11-knee-1

Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ

Former Assam cricketer Devjit Saikia appointed as BCCI secretary

Saikia: ಬಿಸಿಸಿಐ ಕಾರ್ಯದರ್ಶಿಯಾಗಿ ಮಾಜಿ ಅಸ್ಸಾಂ ಕ್ರಿಕೆಟರ್‌ ದೇವಜಿತ್‌ ಸೈಕಿಯಾ ನೇಮಕ

10-liver-cancer

Liver Cancer: ಯಕೃತ್‌ ಕ್ಯಾನ್ಸರ್‌ನೊಂದಿಗೆ ಬದುಕಲು ಕಾರ್ಯತಂತ್ರಗಳು

Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಕೈರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ

Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಲಾಠಿ ರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

Manjeshwar: ಬೈಕ್‌ ಢಿಕ್ಕಿ; ಗಾಯಾಳು ಯುವಕನ ಸಾವು

Manjeshwar: ಬೈಕ್‌ ಢಿಕ್ಕಿ; ಗಾಯಾಳು ಯುವಕನ ಸಾವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

12-cancer

Breast Cancer: ಸ್ತನಗಳ ಕ್ಯಾನ್ಸರ್‌ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು

Dharwad: Seven children sick after eating audala fruit: Admitted to district hospital

Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

11-knee-1

Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.