ಹುಚ್ಚನ ಜೊತೆ ಕಲ್ಯಾಣ!
Team Udayavani, Mar 31, 2018, 11:16 AM IST
ಕೆಲವು ನಟಿಯರಿಗೆ ಆಗಾಗ ಅದೃಷ್ಟ ಹುಡುಕಿ ಬರುವುದು ನಿಜ. ಆ ಸಾಲಿಗೆ ಶ್ರಾವ್ಯ ಕೂಡ ಸೇರಿದ್ದಾರೆ. ಇದೇ ಮೊದಲ ಬಾರಿಗೆ ಅವರು ನಟಿಸಿರುವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ. ಅದು ಶ್ರಾವ್ಯ ಪಾಲಿನ ಅದೃಷ್ಟ ಎನ್ನಬಹುದು. ಶ್ರಾವ್ಯ ಅಭಿನಯಿಸಿರುವ “ಹುಚ್ಚ 2′ ಮತ್ತು “ನಂಜುಂಡಿ ಕಲ್ಯಾಣ’ ಚಿತ್ರಗಳು ಏಪ್ರಿಲ್ 6 ರಂದು ಬಿಡುಗಡೆಯಾಗುತ್ತಿವೆ. ಒಂದೇ ದಿನ ಎರಡು ಚಿತ್ರಗಳು ತೆರೆಗೆ ಬರುತ್ತಿರುವುದರಿಂದ ಶ್ರಾವ್ಯಗೆ ಇನ್ನಿಲ್ಲದ ಖುಷಿ. ಆ ಎರಡು ಚಿತ್ರಗಳ ಪಾತ್ರ ಕುರಿತು ಶ್ರಾವ್ಯ “ಉದಯವಾಣಿ’ಯ “ಚಿಟ್‌ಚಾಟ್’ನಲ್ಲಿ ಹಂಚಿಕೊಂಡಿದ್ದಾರೆ.
* ಕಳೆದ ಒಂದು ವರ್ಷದಲ್ಲಿ ನಿಮ್ಮ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಒಂದೇ ದಿನ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆಯಲ್ಲಾ?
ನಿಜ ಹೇಳಬೇಕೆಂದರೆ, ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ. ನಟಿಯರಿಗೆ ಇಂತಹ ಅವಕಾಶ ಸಿಗುವುದು ತುಂಬಾನೇ ವಿರಳ. ನನ್ನ ಆ ಎರಡು ಚಿತ್ರಗಳೂ ಬೇರೆ ಜಾನರ್ ಚಿತ್ರಗಳು. ಹಾಗಾಗಿ ನನಗೆ ಎರಡು ಚಿತ್ರಗಳಲ್ಲೂ ಬೇರೆಯದ್ದೇ ಪಾತ್ರ ಸಿಕ್ಕಿದೆ. ಸಿನಿ ಜರ್ನಿಯಲ್ಲಿ ನಾಯಕಿಯರು ನಟಿಸಿದ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆಗುವಂಥದ್ದು ಅಪರೂಪ. ಅದರಲ್ಲೂ ನನಗಿದು ವಿಶೇಷ ಎನಿಸಿದೆ.
* ನಿಮ್ಮ “ಹುಚ್ಚ 2′ ಕುರಿತು ಹೇಳುವುದಾದರೆ?
“ಹುಚ್ಚ 2′ ಇದರಲ್ಲಿ ವಿಶೇಷ ಪಾತ್ರ ನನ್ನದು. ನಾಯಕನ ಸಹಾಯಕ್ಕೆ ನಿಲ್ಲವಂಥ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಅದೊಂದು ರೀತಿಯ ಚಾಲೆಂಜಿಂಗ್ ಪಾತ್ರ. ಇನ್ನು, ಅಪ್ಪನ ನಿರ್ದೇಶನದಲ್ಲಿ ನಟಿಸಿದ ಎರಡನೇ ಚಿತ್ರ. ಈ ಹಿಂದೆ “ಕಟ್ಟೆ’ ಚಿತ್ರದಲ್ಲಿ ನಟಿಸಿದ್ದೆ. ಈಗ “ಹುಚ್ಚ 2′. ಅಪ್ಪನ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಅವರೊಬ್ಬ ಒಳ್ಳೆಯ ತಂತ್ರಜ್ಞರು. ಅವರಿಂದ ನಾನು ಸಾಕಷ್ಟು ಕಲಿತುಕೊಳ್ಳಲು ಸಾಧ್ಯವಾಗಿದೆ. ಪ್ರತಿ ದೃಶ್ಯದಲ್ಲೂ ಹೊಸದೇನನ್ನೋ ಕಲಿತಿದ್ದೇನೆ. ಒಳ್ಳೆಯ ತಂಡದ ಜತೆ ಹೊಸ ಅನುಭವ ಆಗಿದೆ.
* “ಹುಚ್ಚ 2′ ವಿಶೇಷತೆ ಏನು?
ಹೆಸರಲ್ಲೇ ದೊಡ್ಡ ವಿಶೇಷತೆ ಇದೆ. ಸುದೀಪ್ ಸರ್ ಮಾಡಿದ್ದ “ಹುಚ್ಚ’ ಚಿತ್ರವನ್ನು ಓಂ ಪ್ರಕಾಶ್‌ರಾವ್ ನಿರ್ದೇಶಿಸಿದ್ದರು. ಅದು ದೊಡ್ಡ ಹಿಟ್ ಆಗಿತ್ತು. ಈಗ ಆ ನಿರ್ದೇಶಕರೇ “ಹುಚ್ಚ 2′ ನಿರ್ದೇಶಿಸಿದ್ದಾರೆ. ಇಲ್ಲಿ ಮದರಂಗಿ ಕೃಷ್ಣ ಹೀರೋ. ಪಕ್ಕಾ ಆ್ಯಕ್ಷನ್ ಚಿತ್ರವಿದು. ಇಲ್ಲೂ ಸಂದೇಶವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ಈಗಾಗಲೇ ಹಾಡುಗಳು ಹಿಟ್ ಆಗಿವೆ. ಸುದೀಪ್ ಸರ್, ಹಾಡು ಬಿಡುಗಡೆ ಮಾಡಿದ್ದಾರೆ. ಲೇಟ್ ಆಗಿದ್ದರೂ ಲೇಟೆಸ್ಟ್ ಆಗಿ ಬರುತ್ತಿರುವ “ಹುಚ್ಚ 2′ ಈಗಿನ ಜನರೇಷನ್ ಮನ ಗೆಲ್ಲುವಂತಹ ಚಿತ್ರ.
* “ನಂಜುಂಡಿ ಕಲ್ಯಾಣ’ನ ಬಗ್ಗೆ ಏನ್ ಹೇಳ್ತೀರಾ?
ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಇರುವಂತಹ ಚಿತ್ರ. ಆರಂಭದಿಂದ ಅಂತ್ಯದವರೆಗೂ ನಗಿಸುವ ಪಾತ್ರಗಳೇ ತುಂಬಿವೆ. ನನ್ನದು ಒಂದು ರೀತಿಯ ಸಿಂಪಲ್ ಹುಡುಗಿ ಪಾತ್ರ. ನನಗಾಗಿಯೇ “ನಂಜುಂಡಿ ಕಲ್ಯಾಣ’ ಚಿತ್ರದಲ್ಲಿ ದೊಡ್ಡ ಡ್ರಾಮ ಶುರುವಾಗುತ್ತೆ. ಅದು ಸಂಪೂರ್ಣ ಹಾಸ್ಯಮಯವಾಗಿಯೇ ಸಾಗುತ್ತೆ. ಮೊದಲ ಸಲ ನಾನು ಆ ರೀತಿಯ ಪಾತ್ರ ನಿರ್ವಹಿಸಿದ್ದೇನೆ. ಇಲ್ಲಿ ಹಾಡುಗಳ ಜೊತೆಗೆ ಸಂಭಾಷಣೆ ಕೂಡ ನಗಿಸುತ್ತಲೇ ಜನರನ್ನು ಖುಷಿಪಡಿಸುತ್ತೆ ಎಂಬ ವಿಶ್ವಾಸ ನನ್ನದು.
* ಆ “ನಂಜುಂಡಿ ಕಲ್ಯಾಣ’ ಸೂಪರ್ ಹಿಟ್ ಆಗಿತ್ತು. ಈ ನಂಜುಂಡಿಯ ಗುಣಗಳೇನು?
ಮೊದಲೇ ಹೇಳಿದಂತೆ, ಇಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ನಾನು ಡಬ್ಬಿಂಗ್ ಮಾಡುವ ವೇಳೆಯಲ್ಲೇ ಸಾಕಷ್ಟು ನಕ್ಕಿದ್ದೆ. ಅಷ್ಟೊಂದು ಕಾಮಿಡಿ ವಕೌìಟ್ ಆಗಿದೆ. ಹಾಗಂತ ಪೋಲಿ ಡೈಲಾಗ್‌ಗಳಿಲ್ಲ. ಈಗಿನ ಟ್ರೆಂಡ್‌ಗೆ ತಕ್ಕ ಮಾತುಗಳಿವೆ. ಸಿನಿಮಾ ಕೂಡ ನೋಡುಗರಿಗೆ ಎಲ್ಲೂ ಬೋರ್ ಎನಿಸುವುದಿಲ್ಲ. ಒಂದು ಹೊಸ ಎಳೆ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ. ಇಲ್ಲಿ ಕಾಮಿಡಿ ಪ್ಲಸ್. ಸಂದೇಶ ಅಂತೇನೂ ಇಲ್ಲ ಒಂದು ಮನರಂಜನೆಯ ಚಿತ್ರವಿದು. ನೋಡುಗರಿಗೊಂದು ಖುಷಿ ಕೊಡುವ ಚಿತ್ರವಂತೂ ಹೌದು.
* ಇಲ್ಲಿ ಬರೀ ಮದುವೆ ವಿಷಯವೇ ತುಂಬಿರುತ್ತಾ?
“ನಂಜುಂಡಿ ಕಲ್ಯಾಣ’ ಅಂದಮೇಲೆ, ಮದುವೆಯ ಕಾನ್ಸೆಪ್ಟ್ ಇರದಿದ್ದರೆ ಹೇಗೆ? ಚಿತ್ರಪೂರ್ಣ ಮದುವೆ ಹಿನ್ನೆಲೆಯಲ್ಲೇ ಸಾಗಲಿದ್ದು, ಅಮ್ಮ ತನ್ನ ಮಗನಿಗೆ ಹೆಣ್ಣು ಹುಡುಕಿ ಮದುವೆ ಮಾಡೋಕೆ ಪಡುವ ಸಾಹಸವೇ ಚಿತ್ರದ ಸಾರಾಂಶ. ಒಬ್ಬ ಹುಡುಗಿಯನ್ನು ಮದುವೆ ಆಗಲು ಎಷ್ಟೆಲ್ಲಾ ಪರಿತಪಿಸುತ್ತಾನೆ ಎಂಬುದನ್ನು ಹಾಸ್ಯಮಯವಾಗಿ ಹೇಳುತ್ತಾ ಹೋಗಿದ್ದಾರೆ ನಿರ್ದೇಶಕರು.
* ಹಾಗಾದರೆ ನಂಜುಂಡಿ ಜೊತೆ ಕಲ್ಯಾಣ ಆಗುತ್ತಾ?
ಅದೇ ಇಲ್ಲಿರುವ ಹೈಲೈಟು. ಈಗಲೇ ಹೇಳಿಬಿಟ್ಟರೆ? ನಂಜುಂಡಿಯ ಕಲ್ಯಾಣದ ಸುತ್ತ ಸಾಗುವ ಕಥೆ ಇಲ್ಲಿದೆ. ಅದೊಂದು ಫನ್ನಿಯಾಗಿ ಹೋಗುವುದರಿಂದ ಕಲ್ಯಾಣಕ್ಕೂ ಹೆಚ್ಚು ಮಹತ್ವ ಇದೆ. ಹೇಗೆಲ್ಲಾ ಕಲ್ಯಾಣ ನಡೆಯುತ್ತೆ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.
* ಮುಂದಾ…?
ಈಗ ಸದ್ಯಕ್ಕೆ ತೆಲುಗಿನ ಒಂದು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಕನ್ನಡದಲ್ಲಿ “ನಾಗರಕಟ್ಟೆ’ ಎಂಬ ಚಿತ್ರದ ಚಿತ್ರೀಕರಣವೂ ನಡೆಯುತ್ತಿದೆ. ಉಳಿದಂತೆ ಒಂದಷ್ಟು ಮಾತುಕತೆಗಳು ನಡೆಯುತ್ತಿವೆ. ಯಾವುದೂ ಅಂತಿಮವಾಗಿಲ್ಲ. “ಹುಚ್ಚ 2′ ಮತ್ತು “ನಂಜುಂಡಿ ಕಲ್ಯಾಣ’ ಚಿತ್ರಗಳ ಮೇಲೆ ನನಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.