ಮನು ಭಾಕರ್‌ ಈಗ ಶೂಟಿಂಗ್‌ ರಾಣಿ


Team Udayavani, Mar 31, 2018, 11:41 AM IST

5.jpg

“ಪದಕ ಗೆಲ್ಲುವೆನೆಂಬ ವಿಶ್ವಾಸ ನನಗೆ ಖಂಡಿತ ಇರಲಿಲ್ಲ. ಆದರೆ, ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಪಣತೊಟ್ಟಿದ್ದೆ. ಆ ಪರಿಶ್ರಮದ ಫ‌ಲವೆಂಬಂತೆ ಚಿನ್ನದ ಪದಕ ಒಲಿದಿರುವುದು ಸಂತಸ ತಂದಿದೆ’ ಇತ್ತೀಚೆಗೆ ಮೆಕ್ಸಿಕೋದಲ್ಲಿ ನಡೆದ ಶೂಟಿಂಗ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮನು ಭಾಕರ್‌ ಅವರ ಮನದಾಳದ ಮಾತು ಇದು. ಹರ್ಯಾಣ ಮೂಲದ ಮನುಗೆ ಈಗ 16 ವರ್ಷ. ಈಕೆ ಶೂಟಿಂಗ್‌ ವಿಶ್ವಕಪ್‌ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಶೂಟರ್‌ ಮತ್ತು ವಿಶ್ವದ 3ನೇ ಕಿರಿಯ ಶೂಟರ್‌.

ನಾನಾ ಕ್ರೀಡೆಯಲ್ಲಿ ಮನು
ಮನು ಅವರ ತಂದೆ ಒಬ್ಬ ಎಂಜಿನಿಯರ್‌. ಮಗಳನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಮಾಡಬೇಕು ಎಂದು ಅವರು ಪಣ ತೊಟ್ಟಿದ್ದರು. ಮಗಳಿಗೆ ಇಷ್ಟ ಇರುವ ಎಲ್ಲಾ ಕ್ರೀಡೆಯಲ್ಲೂ ತೊಡಗಲು ಪ್ರೇರೇಪಿಸಿದರು. ಪರಿಣಾಮ ಬಾಕ್ಸಿಂಗ್‌, ಕರಾಟೆ, ಟೆನಿಸ್‌, ಸ್ಕೇಟಿಂಗ್‌… ಹೀಗೆ ನಾನಾ ಕ್ರೀಡೆಯಲ್ಲಿ ಮನು ತೊಡಗಿದ್ದರು. ಸ್ಕೇಟಿಂಗ್‌, ಬಾಕ್ಸಿಂಗ್‌, ಕರಾಟೆಯಲ್ಲಿ ಈಕೆ ರಾಷ್ಟ್ರೀಯ ಪದಕ ಗೆದ್ದಿದ್ದಾರೆ.

2 ವರ್ಷದಲ್ಲಿಯೇ ಚಿನ್ನದ ಬೇಟೆ
9ನೇ ತರಗತಿಯಲ್ಲಿದ್ದಾಗ ಶೂಟರ್‌ ಆಗಬೇಕೆಂದು ಮನು ಕನಸು ಕಂಡರು. ತನ್ನ ಬಯಕೆಯನ್ನು ತಂದೆಯಲ್ಲಿ ಹೇಳಿಕೊಂಡರು. ಶೂಟಿಂಗ್‌ ಅಕಾಡೆಮಿಗೆ ಸೇರಿ ಸತತ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಇತರೆ ಕ್ರೀಡೆಗಳತ್ತ ದೃಷ್ಟಿ ಹರಿಸುವುದನ್ನು ಕಡಿಮೆ ಮಾಡಿದ್ದರು. ಬಹುಪಾಲು ಸಮಯವನ್ನು ಶೂಟಿಂಗ್‌ ಅಕಾಡೆಮಿಯಲ್ಲಿಯೇ ಕಳೆಯುತ್ತಿದ್ದರು. ಶೂಟಿಂಗ್‌ ಮೇಲಿರುವ ಆಕೆಯ ಪ್ರೀತಿಗೆ, ಶ್ರದ್ಧೆಯಿಂದ ನಡೆಸಿದ ಅಭ್ಯಾಸಕ್ಕೆ 2017ರಲ್ಲಿಯೇ ಫ‌ಲಸಿಕ್ಕಿತು. ಅಂದರೆ, ಅಭ್ಯಾಸ ಅರಂಭಿಸಿದ ಒಂದೇ ವರ್ಷದಲ್ಲಿ ರಾಷ್ಟ್ರೀಯ ಪದಕ ಲಭಿಸಿತು. 2017ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್‌ನಲ್ಲಿ ಮನು ಚಿನ್ನದ ಪದಕ ಗೆದ್ದರು. ಹೀನಾ ಸಿಧು ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು. 

ಹೀಗೆ, ಅಲ್ಪ ಅವಧಿಯಲ್ಲಿ ಗುರಿ ಸಾಧಿಸುತ್ತಾ ಸಾಗಿದ ಮನು 2017ರಲ್ಲಿ ನಡೆದ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು. 

ವಿಶ್ವಕಪ್‌ ಪದಕ
11ನೇ ತರಗತಿಯ ವಿದ್ಯಾರ್ಥಿಯಾಗಿರುವ 16 ವರ್ಷದ ಮನು, ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್‌ ಶೂಟಿಂಗ್‌ ಟೂರ್ನಿಯ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ನಿಖರ ಗುರಿ ಇಡುವ ಮೂಲಕ ಚಿನ್ನ ಗೆದ್ದರು. ತಂಡ ವಿಭಾಗದಲ್ಲಿಯೂ ಚಿನ್ನದ ಬೇಟೆಯಾಡಿ ಇತಿಹಾಸ ನಿರ್ಮಿಸಿದರು.

ಟಾಪ್ ನ್ಯೂಸ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಸಮುದ್ರದ ಮಧ್ಯೆ ಮೀನುಗಾರ ನಾಪತ್ತೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.