ಮತದಾನ ಮಾಡಿದವರಿಗೆ ಮಾಲ್‌ಗಳಲ್ಲಿ ರಿಯಾಯ್ತಿ?
Team Udayavani, Mar 31, 2018, 12:02 PM IST
ಬೆಂಗಳೂರು: ರಾಜಧಾನಿಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಪಣತೊಟ್ಟಿರುವ ಚುನಾವಣಾ ಆಯೋಗ, ಮತದಾನ ಮಾಡಿದವರಿಗೆ ಆಯ್ದ ಶಾಪಿಂಗ್ ಮಾಲ್, ಹೋಟೆಲ್‌ಗಳಲ್ಲಿ ರಿಯಾಯ್ತಿ ಕೊಡಿಸಲು ಸಂಬಂಧಪಟ್ಟವರೊಂದಿಗೆ ಶನಿವಾರ ನಡೆಸಬೇಕಿದ್ದ ಸಭೆ ಮುಂದೂಡಿಕೆಯಾಗಿದೆ.
ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ ನಗರದಲ್ಲಿರುವ ಎಲ್ಲ ಅರ್ಹ ಮತದಾರರು ಮತದಾನ ಮಾಡುವಂತೆ ಪ್ರೇರೇಪಿಸಲು ಆಯೋಗ ನಾನಾ ರೀತಿಯ ಪ್ರಚಾರ ಕಾರ್ಯ ಕೈಗೊಂಡಿದೆ. ಕಾಲೇಜು, ಶಾಪಿಂಗ್ ಮಾಲ್, ವಾಣಿಜ್ಯ ಕಟ್ಟಡಗಳಲ್ಲಿ ಜಾಗೃತಿ ಅಭಿಯಾನವೂ ನಡೆದಿದೆ.
ಸಭೆ ಮುಂದಕ್ಕೆ: ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಮತದಾನ ಮಾಡಿದವರಿಗೆ ಶಾಪಿಂಗ್ ಮಾಲ್, ಹೋಟೆಲ್‌ಗಳಲ್ಲಿ ಪ್ರತಿ ಖರೀದಿ ಮೇಲೆ ರಿಯಾಯ್ತಿ ನೀಡಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಈ ಸಂಬಂಧ ಶಾಪಿಂಗ್ ಮಾಲ್ ಹಾಗೂ ಹೋಟೆಲ್ ಮಾಲೀಕರೊಂದಿಗೆ ನಗರ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್,
ಶನಿವಾರ ಸಭೆ ನಡೆಸಲು ಮುಂದಾಗಿದ್ದರು. ಮತದಾನದ ವೇಳೆ ಮತಗಟ್ಟೆಗಳಲ್ಲಿ ಬೆರಳಿಗೆ ಹಾಕಲಾದ ಶಾಹಿ ಗುರುತು ತೋರಿಸಿದರೆ ಶಾಪಿಂಗ್ ಮಾಲ್, ಹೋಟೆಲ್‌ಗಳಲ್ಲಿ ಪ್ರತಿ ಖರೀದಿಗೆ ರಿಯಾಯ್ತಿ ನೀಡಲು ಚಿಂತನೆ ನಡೆಸಲಾಗಿತ್ತು. ಕಾರಣಾಂತರಗಳಿಂದ ಸಭೆ ಮುಂದೂಡಿಕೆಯಾಗಿದ್ದು, ಮುಂದಿನ ವಾರ ಸಭೆ ಕರೆದು ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಶೇ.70ರಿಂದ ಶೇ.80ರಷ್ಟಕ್ಕೆ ಹೆಚ್ಚಿಸುವ ಸಲುವಾಗಿ ಆಯೋಗ ಪ್ರೋತ್ಸಾಹದಾಯಕ ಕ್ರಮಗಳ ಮೂಲಕ ಮತದಾರರನ್ನು ಸೆಳೆಯಲು ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಚುನಾವಣೆಯಲ್ಲಿ ಇವಿಎಂ ಜತೆಗೆ ವಿವಿ ಪ್ಯಾಟ್ ಬಳಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಸಭೆ ನಡೆಸಿದರು. ವಿವಿ ಪ್ಯಾಟ್ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡುವ ಜತೆಗೆ ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಕ್ರಮ ನಡೆಸದಂತೆಯೂ ಎಚ್ಚರಿಕೆ ನೀಡಿದರು.
ಶೇ.90 ಜಾಹೀರಾತು ಫಲಕ ತೆರವು: ಮಂಗಳವಾರ ನೀತಿ ಸಂಹಿತೆ ಜಾರಿಗೊಂಡ ಕ್ಷಣದಿಂದಲೇ ನಗರಾದ್ಯಂತ ಜಾಹೀರಾತು ಫಲಕ ತೆರವು ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಿದ್ದು, ಶುಕ್ರವಾರದವರೆಗೆ ಶೇ.90ರಷ್ಟು ಫಲಕ ತೆರವುಗೊಳಿಸಲಾಗಿದೆ.
ಬಾಕಿ ಫಲಕಗಳನ್ನು ಶೀಘ್ರವೇ ತೆರವುಗೊಳಿಸಲಾಗುವುದು. ಪ್ರಮುಖವಾಗಿ ಆರ್.ಆರ್.ನಗರ, ಯಶವಂತಪುರ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಆದ್ಯತೆ ಮೇರೆಗೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದೇವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥಪ್ರಸಾದ್ ತಿಳಿಸಿದರು.
ಪ್ರಕಾಶಕರ ಹೆಸರು ಕಡ್ಡಾಯ: ನಗರದಲ್ಲಿ ಜಾಹೀರಾತು ಪ್ರಿಂಟಿಂಗ್ ಹಾಗೂ ಪ್ರಕಾಶಕರೊಂದಿಗೆ ಗುರುವಾರ ಸಭೆ ನಡೆಸಿದ ಆಯುಕ್ತರು, ಇನ್ನು ಮುಂದೆ ಯಾವುದೇ ಜಾಹೀರಾತು ಮುದ್ರಣ, ಪ್ರಕಟಣೆ ಮಾಡಿದಾಗ ಜಾಹೀರಾತುಗಳ ಮೇಲೆ ಮುದ್ರಣಕಾರರು ಹಾಗೂ ಅವುಗಳನ್ನು ಅಳವಡಿಸಿದವರ ಹೆಸರನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ಸೂಚನೆ ನೀಡಿದ್ದಾರೆ.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಜಾಹಿರಾತು ಮುದ್ರಣ ಮಾಡಿದರೂ ಐದು ಜಾಹೀರಾತು ಪ್ರತಿಗಳನ್ನು ಆಯುಕ್ತರಿಗೆ ಕಳುಹಿಸಬೇಕು. ಒಂದೊಮ್ಮೆ ಜಾಹೀರಾತುಗಳ ಮೇಲೆ ಮುದ್ರಕರು, ಪ್ರಕಾಶಕರ ಮಾಹಿತಿ ಪ್ರಕಟಿಸದಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ. ಮುದ್ರಣ ಹಾಗೂ ಪ್ರಕಾಶನ ಸಂಸ್ಥೆಗಳ 100ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.