ಧರ್ಮಕ್ಕೆ ಹಂಡೆವಜೀರರ ಕೊಡುಗೆ ಅಪಾರ


Team Udayavani, Mar 31, 2018, 1:11 PM IST

VIJ-3.jpg

ಹೂವಿನಹಿಪ್ಪರಗಿ: ವೀರಶೈವ ಪರಂಪರೆಯಾದ ಹಂಡೆವಜೀರ ಜನಾಂಗದ ಈ ಅರಸು ಮನೆತನ ಹಿಂದೂ ಧರ್ಮದ ಉಳಿವಿಗಾಗಿ ಸಾಕಷ್ಟು ಕೊಡುಗೆ ನೀಡಿದೆ ಎಂದು ಹಾರೊಗೇರಿ ಐಟಿಐ ಕಾಲೇಜಿನ ಪ್ರಾಚಾರ್ಯ ಬಿ.ಎಸ್‌. ಪಾಟೀಲ ಹೇಳಿದರು.

ಕಾಮನಕೇರಿಯಲ್ಲಿ ಅಖೀಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಗ್ರಾಮ ಘಟಕ ಹಾಗೂ ಹಂಡೆವಜೀರ ಕುಲತಿಲಕ ವೀರ ಅರಸ ಹನುಮಪ್ಪ ನಾಯಕನ ವೃತ್ತ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವೀರ ಅರಸ ಹನುಮಪ್ಪ ನಾಯಕ ಬಸವನಾಡಿನ ಮುತ್ತಗಿ ಗ್ರಾಮದಲ್ಲಿ ನಾಡಗೌಡರ ಮನೆತನದಲ್ಲಿ ಜನಿಸಿ, ಬಲಾಡ್ಯ ಹಾಗೂ ಬಹುವೀರ ಪರಾಕ್ರಮಿಯಾಗಿದ್ದ. ವಿಜಯಪುರದ ಎರಡನೇ ಇಬ್ರಾಯಿಂ ಸುಲ್ತಾನ್‌ನ ಆಸ್ಥಾನದಲ್ಲಿ ಸರದಾರನಾಗಿ ಕೆಲವು ಪ್ರದೇಶಗಳಿಗೆ ಒಡೆಯನಾಗಿ ಸುಲ್ತಾನ್‌ ಪ್ರೀತಿಗೆ ಪಾತ್ರರಾಗಿದ್ದ ನಾಯಕನಿಗೆ 11 ಪರಗಣಗಳಿಗೆ ಒಡೆತನ ನೀಡಿ ಬಾದಶಾ ವಜೀರ ಎಂಬ ಬಿರುದು ನೀಡಿದ್ದನು. ಮುಂದೆ 30 ವರ್ಷಗಳ ಕಾಲ ರಾಜ್ಯಭಾರ ಮಾಡಿ ಬಳ್ಳಾರಿ ಕೊಟ್ಟೂರ ಮಠಕ್ಕೆ 1,100 ಎಕರೆ ಜಮೀನು ದಾನವಾಗಿ ನೀಡಿದ್ದ ಎಂದರು.

ಸಾನ್ನಿಧ್ಯ ವಹಿಸಿದ್ದ ಕರಿಭಂಟನಾಳ ಹಿರೇಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಸುಕ್ಷೇತ್ರ ಕರಿಭಂಟನಾಳ ಗ್ರಾಮ 1,850ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಬೇಕಾಗುವ ಸೈನ್ಯ ಕಟ್ಟಲು ಈ ಗ್ರಾಮ ಪ್ರಮುಖ ಪಾತ್ರ ವಹಿಸಿದೆ. ಅಂದು ಈ ಗ್ರಾಮ ಸಾವಿರಾರು ಹಂಡೆವಜೀರ ಸಮಾಜಕದ ಯುವಕರನ್ನು ವೀರ ಯೋಧರನ್ನು
ತಯಾರು ಮಾಡಿ ಇತಿಹಾಸ ಪುಟಗಳಲ್ಲಿ ದಾಖಲೆ ಬರೆಯಲು ಹಂಡೆವಜೀರ ಸಮಾಜದ ಕೊಡುಗೆಂದಿಗೂ ಮರೆಯಲು ಸಾಧ್ಯವಿಲ್ಲ. ಸುಮಾರು 316 ವರ್ಷಗಳ ಕಾಲ ಆಳಿದ ಹಂಡೆ ಪಾಳೆಗಾರರು ಉದಾರ ನೀತಿ ಪರೋಪಕಾರಿ ಕಾರ್ಯಗಳಿಂದ ಈ ಅರಸರು ವೀರಶೈವ ಧರ್ಮದವರಾಗಿದ್ದರೂ ಇತರ ಧರ್ಮಗಳನ್ನು ಗೌರವಿಸಿ ಕರ್ನಾಟಕದ ಪಾಳೆಗಾರರಲ್ಲಿ ಐತಿಹಾಸಿಕ ಕೀರ್ತಿ ಗೌರವಗಳನ್ನು ಗಳಿಸಿದ್ದಾರೆ ಎಂದರು. 

ಬಾಗಲಕೋಟೆ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಅಧ್ಯಕ್ಷ ಜಿ.ಎನ್‌. ಪಾಟೀಲ ಮಾತನಾಡಿ, ಹನುಮಪ್ಪನು ಸಾಮಂತ ಅರಸನಾಗಿ ಸನ್ಮಾನನಿತಗೊಂಡು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಗಳಿಗೆ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿ 1565ರಲ್ಲಿ ಬಳ್ಳಾರಿ ಗುಡ್ಡದ ಮೇಲೆ ಬಲಿಷ್ಠ ಐತಿಹಾಸಿಕ ಕೋಟೆ ನಿರ್ಮಾಣ ಮಾಡಿ ಕಲ್ಯಾಣ ಕಾರ್ಯಕ್ರಮ ಕೈಗೊಂಡು 1583ರಲ್ಲಿ ಮರಣ ಹೊಂದಿದ ಇವರ ಸಮಾಧಿ ಅನಂತಪುರದ ನಿಡುಮಾಮಿಡಿ ಮಠದಲ್ಲಿ ಕಾಣಬಹುದು ಎಂದರು.

ಇಂಗಳೇಶ್ವರದ ವಚನಶಿಲಾ ಮಂಟಪದ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ, ಬಸವನಾಡಿನಲ್ಲಿ ಅನೇಕ ಶರಣರು ಸತ್ಪುರುಷರು ಆಗಿ ಹೋಗಿದ್ದಾರೆ. ಅವರು ನಡೆದ ಹಾದಿಯಲ್ಲಿ ನಡೆಯಬೇಕಾಗಿದ್ದು ಮಾತ್ರ ನಮ್ಮ ಕೆಲಸವಾಗಿದೆ. ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಹಂಡೆವಜೀರ ಸಮಾಜದ ಹನುಮಪ್ಪ ನಾಯಕ ಜನಿಸಿ ಅನೇಕ ಚರ್ಕವರ್ತಿಗಳ ಪ್ರೀತಿಗೆ ಪಾತ್ರರಾಗಿ ಕೊಡುಗೈ ದಾನಿಯಾದ ವಿಷಯ ಕೇಳಿ ಅಚ್ಚರಿಗೊಂಡೆ. ನಾಯಕನ ಚರಿತ್ರೆ ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಿರುವ ಸಮಾಜದ ಬಂಧುಗಳ ಕಾರ್ಯ ಮೆಚ್ಚಬೇಕು. ಮುಂದಿನ ಪೀಳಿಗೆಗೆ ನಾಯಕನ ಇತಿಹಾಸ ತಲುಪಬೇಕಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ರಾಜುಗೌಡ ಪಾಟೀಲ ಮಾತನಾಡಿದರು. ಕಾಮನಕೇರಿ ಅರಳಚಂಡಿ ಯಲ್ಲಾಲಿಂಗೇಶ್ವರ ಮಠದ ಪರಮಾನಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಗಂಗಾಧರ ಸ್ವಾಮೀಜಿ, ಬಸಯ್ಯ ಕಸ್ತೂರಿಮಠ, ಸುರೇಶಗೌಡಗೌಡ ಪಾಟೀಲ, ಜಿಲ್ಲಾ ಹಂಡೆವಜೀರ ಸಮಾಜದ ಅಧ್ಯಕ್ಷ ಹನುಮಂತರಾಯಗೌಡ ಬಿರಾದಾರ, ಶಂಕರಗೌಡ ಮ್ಯಾಗೇರಿ, ಪರಪ್ಪಗೌಡ ಬಿದಗೊಂಡ, ಎಂ.ಆರ್‌. ಪಾಟೀಲ, ಬಸಗೊಂಡಗೌಡ ಬಿರಾದಾರ, ಕಸಾಪ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಸಮಾಜದ ತಾಲೂಕಾಧ್ಯಕ್ಷ ಶೇಖರಗೌಡ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಪುಗೌಡ ಪಾಟೀಲ, ಜಿಪಂ ಸದಸ್ಯ ಕಲ್ಲಪ್ಪ ಮಟ್ಟಿ, ಮನೋಹರಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಲ್ಲಣ್ಣ ಖಾನಾಪುರ, ಚಂದ್ರಾಮ ಕುಂಬಾರ, ಸಾಹಿತಿ ಪ್ರಭಾಕರ ಇದ್ದರು. ಶಿವಣ್ಣ ಬಾಗೇವಾಡಿ ಪ್ರಾಸ್ತಾವಿಕ ಮಾತನಾಡಿದರು. ಮಲಕನಗೌಡ ಪಾಟೀಲ ಸ್ವಾಗತಿಸಿದರು. ಶಿವಕಾಂತ ಬಾಗೇವಾಡಿ ನಿರೂಪಿಸಿದರು. ಅವ್ವನಗೌಡ ಗೋತಗಿ ವಂದಿಸಿದರು.

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: Protest against Waqf led by many Seers

Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ

Waqf Issue:  Must Be Get Protected from Land Terrorism, Land Jihad: Shobha Karandlaje

Waqf Issue: ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವಾಗಬೇಕು: ಶೋಭಾ ಕರಂದ್ಲಾಜೆ

Jammer

Waqf Property: ಬೊಮ್ಮಾಯಿ ಕಾಲದಲ್ಲೂ ವಕ್ಫ್ ಆಸ್ತಿ ತೆರವಿಗೆ ಹೇಳಿದ್ರು: ಸಚಿವ ಜಮೀರ್‌

Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ

Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ

3-muddebihala

Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.