ತುಳುವರ ಬಹುನಿರೀಕ್ಷೆಯ ನೂತನ ನಲಸೋಪರ ತುಳುಕೂಟಕ್ಕೆ ಚಾಲನೆ
Team Udayavani, Mar 31, 2018, 4:18 PM IST
ಮುಂಬಯಿ: ರಾಮನವಮಿಯ ಶುಭ ದಿನದಂದು ಶುಭಾರಂಭಗೊಂಡ ತುಳುಕೂಟ ನಲಸೋಪರ ಸಂಸ್ಥೆಯು ಭವಿಷ್ಯದಲ್ಲಿ ಈ ಪರಿಸರದ ತುಳುವರನ್ನು ಬೆಸೆಯುವ ಕಾಯಕದಲ್ಲಿ ತೊಡಗಲಿ. ಯಾವುದೇ ಒಂದು ಸಂಸ್ಥೆಯನ್ನು ಹುಟ್ಟುಹಾಕುವುದು ಬಹಳ ಸುಲಭದ ಕೆಲಸ. ಆದರೆ ಅದನ್ನು ಯಾವುದೇ ರೀತಿಯ ಚ್ಯುತಿ ಬಾರದಂತೆ ಕಾಪಾಡಿಕೊಂಡು ಅಭಿವೃದ್ಧಿಯ ಪಥದತ್ತ ಸಾಗಿಸೋದು ಬಹಳ ಕಷ್ಟದ ಕಾರ್ಯವಾಗಿದೆ. ಈ ಸಂಘಟನೆಯಲ್ಲಿ ಉತ್ಸಾಹಿ ಸಮಾಜ ಸೇವಕರಿದ್ದು, ತುಳುವರೆಲ್ಲರನ್ನು ಒಗ್ಗಟ್ಟಾಗಿ ಬೆಳೆಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಮುಂಬಯಿ ನಮಗೆ ಸಂಪತ್ತು ಮತ್ತು ಗೌರವವನ್ನು ಸಂಪಾದಿಸಿಕೊಟ್ಟಿದೆ. ನಾವು ಒಬ್ಬರಿಗೊಬ್ಬರು ಒಗ್ಗಟ್ಟು ಮತ್ತು ಪ್ರೀತಿ ಬಾಳ್ಳೋಣ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು.
ಮಾ. 25 ರಂದು ನಲಸೋಪರ ಪಶ್ಚಿಮದ ಗ್ಯಾಲಕ್ಸಿ ಸಭಾಂಗಣದಲ್ಲಿ ನಲಸೋಪರ ಪರಿಸರದಲ್ಲಿ ನೆಲೆಸಿರುವ ತುಳುವರನ್ನು ಒಟ್ಟುಗೊಡಿಸಲು ಸ್ಥಾಪನೆಯಾದ ತುಳುಕೂಟ ನಲಸೋಪರ ಸಂಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಸಾಯಿ-ವಿರಾರ್ ಮಹಾನಗರ ಪಾಲಿಕೆಯ ಮೇಯರ್ ರೂಪೇಶ್ ಜಾಧವ್ ಇವರು ಮಾತನಾಡಿ, ಈ ಪರಿಸರದ ತುಳು-ಕನ್ನಡಿಗರ ಸಹಕಾರ, ಪ್ರೋತ್ಸಾಹದಿಂದ ನಾನು ರಾಜಕೀಯದಲ್ಲಿ ಬೆಳೆದಿದ್ದೇನೆ. ನಿಮ್ಮ ಎಲ್ಲಾ ರೀತಿಯ ಸಮಾಜ ಸೇವಾ ಕಾರ್ಯಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದರು.
ವಸಾಯಿ-ವಿರಾರ್ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಉಮೇಶ್ ನಾಯ್ಕ ಇವರು ಮಾತನಾಡಿ, ಮಾತೃಭಾಷೆಯ ಬಗ್ಗೆ ನಾವು ಅಭಿಮಾನ ಮತ್ತು ಗೌರವವನ್ನು ಬೆಳೆಸಿಕೊಳ್ಳಬೇಕು. ಮನೆಯಿಂದ ಮಾತೃಭಾಷೆ ಬೆಳೆಯಬೇಕು. ಈ ನೂತನ ಸಂಸ್ಥೆಯು ಭಾಷೆಯ ಬೆಳವಣಿಗೆಯೊಂದಿಗೆ ನಮ್ಮ ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವಲ್ಲೂ ಸಕ್ರಿಯವಾಗಲಿ ಎಂದು ಹೇಳಿದರು.
ಬೋಂಬೆ ಬಂಟ್ಸ್ ಅಸೋಸಿಯೇಶನ್ ಇದರ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ ಇವರು ಮಾತನಾಡಿ, ತುಳುನಾಡಿನ ಜನರು ಧೈರ್ಯವಂತರು. ಸ್ಥೈರ್ಯದೊಂದಿಗೆ ಎಲ್ಲವನ್ನು ಸಾಧಿಸಿ ತೋರುವವರು. ಪ್ರಾಮಾಣಿಕತೆಯಿಂದ ಎಲ್ಲದರಲ್ಲೂ ತೊಡಗಿ ಯಶಸ್ವಿಯಾಗುತ್ತಾರೆ. ನಲಸೋಪರ ಪರಿಸರದ ತುಳುವರಿಗೆ ಈ ಸಂಸ್ಥೆಯಿಂದ ಎಲ್ಲಾ ರೀತಿಯ ನೆರವು ಸಿಗುವಂತಾಗಲಿ ಎಂದು ಆಶಿಸಿದರು.ತುಳುಕೂಟ ಐರೋಲಿ ಇದರ ಅಧ್ಯಕ್ಷ ಪಡುಬಿದ್ರೆ ಹರೀಶ್ ಶೆಟ್ಟಿ ಇವರು ಮಾತನಾಡಿ, ತುಳುವರು ಒಗ್ಗಟ್ಟಿದ್ದಾಗ ಮಾತ್ರ ಈ ಪರಿಸರದಲ್ಲಿ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯವಾಗುತ್ತದೆ. ಇಂತಹ ಸಂಘಟನೆಗಳಿಂದ ರಾಜಕೀಯವಾಗಿ ಗುರುತಿಸಿಕೊಂಡ ತುಳು-ಕನ್ನಡಿಗರಿಗೆ ಸಹಕಾರಿಯಾಗುತ್ತದೆ. ಈ ಸಂಸ್ಥೆಯಿಂದ ಸಮಾಜ ಸೇವೆಯೊಂದಿಗೆ ಶೈಕ್ಷಣಿಕ ಸೇವೆಯು ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ, ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಮಣಿಕಂಠ ಸೇವಾ ಸಮಿತಿ ವಸಾಯಿ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ ಅವರು ಮಾತನಾಡಿ ನೂತನ ಸಂಸ್ಥೆಗೆ ಶುಭಹಾರೈಸಿದರು. ಸಮಾರಂಭದ ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿ, ಸಮಾಜ ಸೇವಕ ಪ್ರವೀಣ್ ಶೆಟ್ಟಿ, ಉದ್ಯಮಿ ಮಂಜುನಾಥ ಶೆಟ್ಟಿ ವಸಾಯಿ, ರಜಕ ಸಂಘ ಮೀರಾರೋಡ್-ವಿರಾರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ದೇವೇಂದ್ರ ಬುನ್ನನ್, ತುಳುಕೂಟ ನಲಸೋಪರ ಸಂಸ್ಥೆಯ ಪದಾಧಿಕಾರಿಗಳಾದ ಸಂಸ್ಥೆಯ ಉಪಾಧ್ಯಕ್ಷ ಗಣೇಶ್ ವಿ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಡಿ. ಶೆಟ್ಟಿ, ಕೋಶಾಧಿಕಾರಿ ಸುರೇಂದ್ರ ಜೆ. ಶೆಟ್ಟಿ, ಜತೆ ಕಾರ್ಯದರ್ಶಿ ಯಶವಂತ್ ಸಾಲ್ಯಾನ್, ಜತೆ ಕೋಶಾಧಿಕಾರಿ ದಿವಾಕರ ಶೆಟ್ಟಿ ನಿಟ್ಟೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ತಾರನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿ ಕೆ. ಚೌಟ ಮೊದಲಾದವರು ಉಪಸ್ಥಿತರಿದ್ದರು. ಪ್ರವೀಣ್ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಸುವರ್ಣ ವಂದಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳುಕೂಟದ ಸದಸ್ಯ ಬಾಂಧವರಿಂದ ನೃತ್ಯ ವೈವಿಧ್ಯ ನಡೆಯಿತು.
ಕೊನೆಯಲ್ಲಿ ನಾಗರಾಜ ಗುರುಪುರ ರಚಿಸಿ, ರಹೀಂ ಸಚ್ಚರಿಪೇಟೆ ನಿರ್ದೇಶನದಲ್ಲಿ ಎಂಕ್ ಪುರೊÕತ್ತಿಜ್ಜಿ ತುಳು ನಾಟಕ ಪ್ರದರ್ಶನಗೊಂಡಿತು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಲಘು ಉಪಾಹಾರ ಮತ್ತು ಕೊನೆಯಲ್ಲಿ ಭೋಜನದ ವ್ಯವಸೆœಯನ್ನು ಆಯೋಜಿಸಲಾಗಿತ್ತು.
ತುಳುಕೂಟ ನಲಸೋಪರ ಸ್ಥಾಪನೆಯ ಬಗ್ಗೆ ಹಲವು ವರ್ಷಗಳ ಹಿಂದೆಯೇ ಕನಸು ಕಂಡವರು ನಾವು. ನಮ್ಮ ಈ ಕನಸು ಇದೀಗ ನನಸಾದಂತಾಗಿದೆ. ಸಾವಿರಾರು ತುಳುವರ ಉಪಸ್ಥಿತಿಯಲ್ಲಿ ಸಂಸ್ಥೆಗೆ ಚಾಲನೆ ದೊರೆತಿರುವುದು ಬಹಳ ಸಂತೋಷ ತಂದಿದೆ. ಈ ಪರಿಸರದಲ್ಲಿ ಅಪಾರ ಸಂಖ್ಯೆಯಲ್ಲಿ ತುಳುವರು ನೆಲೆಸಿದ್ದು, ಅವರ ಅಶೋತ್ತರಗಳಿಗೆ ಸ್ಪಂದಿ ಸುವ ಉದ್ಧೇಶವನ್ನು ಸಂಸ್ಥೆಯು ಹೊಂದಿದೆ. ಎಲ್ಲಾ ತುಳುವರು ಸಂಸ್ಥೆಯ ಸದಸ್ಯತನವನ್ನು ಪಡೆದು ಸಂಘ ಟನೆಯ ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ರೀತಿಯ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡದೆ ತುಳುವರ ಸೇವೆಗೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಮುಂದಾಗಬೇಕು. ಸಂಸ್ಥೆಯಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಸ್ಥೆಯನ್ನು ಬೆಳೆಸೋಣ
ಶಶಿಧರ ಕೆ. ಶೆಟ್ಟಿ (ಸಂಸ್ಥೆ ಸ್ಥಾಪನೆಯ ರೂವಾರಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.