ಬಾಬು ಕೃಷ್ಣಮೂರ್ತಿ 75ರ ಸಂಭ್ರಮ


Team Udayavani, Apr 1, 2018, 7:30 AM IST

3.jpg

ಕನ್ನಡ ಸಾಹಿತ್ಯಕ್ಕೆ ಕ್ರಾಂತಿಕಾರಿಗಳಾದ ಚಂದ್ರಶೇಖರ ಆಜಾದ್‌, ಭಗತ್‌ ಸಿಂಗ್‌, ವೀರ ಸಾವರ್ಕರ್‌, ಬಾಘಾ ಜತೀನ್‌, ಸಾಧುಗಳಾದ ಶ್ರೀಲ ಪ್ರಭುಪಾದ ಇವರನ್ನು ತಮ್ಮ ಐದು ಬೃಹತ್‌ ಕಾದಂಬರಿಗಳ ಮೂಲಕ ಪರಿಚಯಿಸಿದ ಕೀರ್ತಿ ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿಯವರಿಗೆ ಸಲ್ಲುತ್ತದೆ. ಅವರಿಗೆ 75 ವರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಇಂದು ಬೆಂಗಳೂರಿನಲ್ಲಿ ಅವರ ಸಾಹಿತ್ಯದ ಕುರಿತ ವಿಚಾರಸಂಕಿರಣ ಆಯೋಜನೆಗೊಂಡಿದೆ. ಈ ಸಂದರ್ಭದಲ್ಲಿ ಬಾಬು ಕೃಷ್ಣಮೂರ್ತಿ: ಸಾಹಿತ್ಯ ವಿಮರ್ಶೆ  ಕೃತಿಯೂ ಬಿಡುಗಡೆಯಾಗಲಿದೆ.

ಬಾಬು ಕೃಷ್ಣಮೂರ್ತಿ ಬಿಎಸ್ಸಿ ಆದಮೇಲೆ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಮೆಡಿಕಲ್‌ ರೆಪ್‌ ಆಗುವ ಅವಕಾಶ ಬಂದಿತ್ತು. ಅದರ ಬದಲು ಅವರು ತಮ್ಮ ಓದಿನ ಬಲ, ದೇಶಭಕ್ತರನ್ನು ಸಾಹಿತ್ಯದ ಮೂಲಕ, ದೊಡ್ಡ ದೊಡ್ಡ ಕಾದಂಬರಿಗಳನ್ನು ಬರೆಯುವ ಮೂಲಕ ಕನ್ನಡದ ಓದುಗರಿಗೆ ಪರಿಚಯಿಸಲು ಮನಸ್ಸು ಮಾಡಿದರು. ಇದಕ್ಕೆ ಅವರಿಗೆ ಮಧ್ವರಾವ್‌ ಎಂಬ ಹಿರಿಯ ಹಿತೈಷಿಗಳ ನಿರಂತರ ಪ್ರೋತ್ಸಾಹವಿತ್ತು.

ಬೆಂಗಳೂರಿನ ವಾತಾವರಣದ ಕಾರಣದಿಂದ ಅವರಿಗೆ ಸಿದ್ಧವನಹಳ್ಳಿ ಕೃಷ್ಣಶರ್ಮ, ಪು.ತಿ. ನರಸಿಂಹಾಚಾರ್‌, ತಿರುಮಲೆ ತಾತಾಚಾರ್ಯ ಶರ್ಮ, ಜಿ.ಪಿ. ರಾಜರತ್ನಂ ಅವರ ಪರಿಚಯವಾಯಿತು. ಸಿನೆಮಾ ನಟ ಉದಯ ಕುಮಾರ್‌ ಅವರಿಗೆ ಮೊದಲಿನಿಂದಲೂ ಕೃಷ್ಣಮೂರ್ತಿಯವರ ಸಾಹಿತ್ಯ ಪ್ರತಿಭೆಯ ಮೇಲೆ ಅಪಾರ ಭರವಸೆಯಿತ್ತು.  ಮುಂದೆ ಅವರು ಅಜೇಯ ಬರೆದು ರಾತ್ರೋರಾತ್ರಿ ಕರ್ನಾಟಕ ಫೇಮಸ್‌ ಆದ ಬಳಿಕ ಮಾಸ್ತಿ, ವಿ. ಕೃ. ಗೋಕಾಕ್‌, ಬಸವರಾಜ ಕಟ್ಟಿàಮನಿ, ತ.ರಾ.ಸು., ಕೊರಟಿ ಶ್ರೀನಿವಾಸ ರಾವ್‌ ಅವರ ಮೆಚ್ಚುಗೆಗೂ ಪಾತ್ರರಾದರು.

ಕೆಲವು ಕಾಲ ದೇಶಸೇವೆ ಮಾಡಲು ಮದುವೆಯಾಗದೆ ಉಳಿದಿದ್ದ ಅವರು 1986ರಲ್ಲಿ ಶ್ರೀಮತಿ ಸುಶೀಲಾ ಅವರನ್ನು ಮದುವೆಯಾದರು. ಕೃಷ್ಣಮೂರ್ತಿಯವರ ಜೀವನ ಮತ್ತು ಸಾಹಿತ್ಯಜೀವನ ಎರಡಲ್ಲೂ ಆಕೆಯ ಪಾತ್ರ ದೊಡ್ಡದು. ಅವರ ಸಹಾಯವಿಲ್ಲದಿದ್ದರೆ ಈ ಪ್ರಮಾಣದ ಸಮಯ, ತಾಳ್ಮೆ, ನಿರಂತರ ಪ್ರವಾಸ, ಅಧ್ಯಯನ ಬೇಡುವ ದೈತ್ಯಕೃತಿಗಳನ್ನು ಕೃಷ್ಣಮೂರ್ತಿಯವರು ಪ್ರಾಯಃ ರಚಿಸಲು ಸಾಧ್ಯವಾಗುತ್ತಿರಲಿಲ್ಲ.

ಮದುವೆಯಾದ ಬಳಿಕ ಕೃಷ್ಣಮೂರ್ತಿಯವರು ವಾರಪತ್ರಿಕೆಯೊಂದರ ಸಂಪಾದಕರಾಗಿ ಸುದೀರ್ಘ‌ ಕಾಲ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರ ಮುಂದಿನ ಬೃಹತ್‌ ಕೃತಿಗಳ ಹಿನ್ನೆಲೆಯಲ್ಲಿ ನಿರಂತರ ಓದು, ವಿಷಯ ಸಂಗ್ರಹಣೆ ನಡೆದಿತ್ತು. ಈಗ ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧರಾಗಿರುವ ಅನೇಕ ಲೇಖಕ-ಲೇಖಕಿಯರನ್ನು ಪರಿಚಯಿಸಿದವರು ಕೃಷ್ಣಮೂರ್ತಿ. ಅವರು ಅಪ್ಪಟಜ್ಞಾನ ಪಕ್ಷಪಾತಿ. ಭಾರತೀಯ ಯುವಕರು ಕಳೆದ ನೂರು ಅಥವಾ ಎಪ್ಪತ್ತು-ಎಂಬತ್ತು ವರ್ಷಗಳ ಹಿಂದೆ ಹೇಗಿದ್ದರು? ಅವರ ಆಶೋತ್ತರಗಳು ಹೇಗಿದ್ದವು? ಅವರು ವಿದೇಶಿ ಪ್ರಭುತ್ವ ವಸಾಹತುಶಾಹಿ ವಿರುದ್ಧ ಹೋರಾಡಿದ್ದು, ಚಿಂತಿಸಿದ್ದು ಕೃಷ್ಣಮೂರ್ತಿಯವರ ಜ್ಞಾನಾನ್ವೇಷಣೆಯ ದಾರಿ. ಈ ದಾರಿಯಲ್ಲಿ ಅವರು ಸುಮಾರು ಅರವತ್ತು ವರ್ಷಗಳು ಹೆಜ್ಜೆ ಹಾಕಿ¨ªಾರೆ. ಮೊಕಾಶಿಯವರು ಸಿಂಧು ಲಿಪಿಯ ಬೆನ್ನು ಹತ್ತಿದ್ದರು. ಬೇಂದ್ರೆಯವರು ಸಂಖ್ಯೆಗಳ ವಿಲಕ್ಷಣತೆ ಕುರಿತು ಆಳವಾಗಿ ಕೆಲಸ ಮಾಡಿದ್ದಾರೆ. ಶಂಬಾ ಅವರು ವೇದದ ರಹಸ್ಯ ಸಂಕೇತಗಳ ಹುಡುಕಾಟ ಮಾಡಿದರು. ಕುವೆಂಪು ಮಲೆನಾಡಿನ ಅಭಿಜಾತ ಸೌಂದರ್ಯ, ಜೀವನವನ್ನು ಅನುಭವಿಸಿ ಜೀವನದ ಉದ್ದಕ್ಕೂ ಬರೆದರು. ಅವರ ಮಗ ತೇಜಸ್ವಿ ಅದೇ ಮಲೆನಾಡಿನ ನಂತರದ ದಾರುಣ ಪರಿಸ್ಥಿತಿ, ಮನುಷ್ಯನ ದುರಾಸೆ ಅರಣ್ಯವನ್ನು ಬೋಳು ಬೋಳು ಮಾಡಿದ್ದನ್ನು ಚಿತ್ರಿಸಿದರು. ಕಾರಂತರು, ಭೈರಪ್ಪನವರು ಮನುಷ್ಯ  ಸ್ವಭಾವಗಳನ್ನು ತಮ್ಮ ಎಲ್ಲಾ ಕಾದಂಬರಿಗಳಲ್ಲೂ ಅನ್ವೇಷಣೆ ಮಾಡಿದರು. ಹೀಗೆ ಕನ್ನಡದ ಒಬ್ಬೊಬ್ಬ ಲೇಖಕಕರಿಗೂ ಅವರದ್ದೇ ಆದ ಸೃಜನಶೀಲ ತಹತಹವಿದೆ, ಹುಡುಕಾಟವಿದೆ. ಅದರ ಅರ್ಥ ಏನು ಎಂದು ಅವರು ಯಾರೂ ತಲೆಕೆಡಿಸಿಕೊಂಡಿಲ್ಲ, ಬದಲಾಗಿ ತಮ್ಮ ಅಳಿವು-ಉಳಿವಿನ ಪ್ರಶ್ನೆ ಎಂಬಷ್ಟು ಕಾಳಜಿ ವಹಿಸಿ ಈ ಹುಡುಕಾಟ ಮಾಡಿದ್ದಾರೆ. ಗೋಪಾಲಕೃಷ್ಣ ಅಡಿಗರು ಒಮ್ಮೆ ಸಾಹಿತ್ಯದ ಶ್ರೇಷ್ಠತೆ ನನಗೆ ಜೀವನ್ಮರಣದ ಪ್ರಶ್ನೆ ಎಂದು ಹೇಳಿದ್ದರು. ಕೃಷ್ಣಮೂರ್ತಿಯವರ ಒಟ್ಟಾರೆ ಕ್ರಾಂತಿಲೋಕದ ಅನ್ವೇಷಣೆಯನ್ನು ಹೀಗೆ ನೋಡಬೇಕು. ಕ್ರಾಂತಿಕಾರಿಗಳನ್ನು ಕುರಿತು ದೊರಕುವ ಸಣ್ಣ ಸಣ್ಣ ಮಾಹಿತಿಗಳನ್ನು ಒಂದೆಡೆ ಕಲೆ ಹಾಕಿ ಅದಕ್ಕೆ ಸಾಹಿತ್ಯದ ಆಕೃತಿ ನೀಡಿ ರಸವತ್ತಾದ ವೀರ್ಯವತ್ತಾದ ರೂಪದಲ್ಲಿ ಕೃಷ್ಣಮೂರ್ತಿಯವರು ವಾಚಕರಿಗೆ ನೀಡಿದ್ದಾರೆ.

ಅವರು ಬಹಳ ತಿರುಗಾಟ ಮಾಡಿ ತಮ್ಮ ಕೃತಿಗಳನ್ನು ಬರೆದಿಲ್ಲ. ಆದರೆ ಅಜೇಯ ಮತ್ತು ಅದಮ್ಯದಂಥ ಉತ್ತರಭಾರತ ಮತ್ತು ಮರಾಠಿ ನೆಲೆಗಳಿಗೆ ಹೋಗಿ ಬಂದಿದ್ದಾರೆ. ಒಂದು ವಸ್ತು ಅಲ್ಲೇ ಇರುತ್ತದೆ, ಅದನ್ನು ಕಾಣುವವರು ಬಂದಾಗ ಅದು ಅವರ ಕಣ್ಣಿಗೆ ಬೀಳುತ್ತದೆ. ಉದಾಹರಣೆಗೆ ದೇಸಿ ಸಮಾಜವಿಜ್ಞಾನಿ ಧರ್ಮಪಾಲ್‌ ಇಂಗ್ಲೆಂಡಿನ ಗ್ರಂಥಾಲಯಗಳಲ್ಲಿ ದಶಕಗಳಗಟ್ಟಲೆ ಕುಳಿತು ತಪಸ್ಸು ಮಾಡಿದ್ದರಿಂದ, ಅವರಿಗೆ ಹತ್ತಾರು ಲೈಬ್ರರಿಗಳಲ್ಲಿ ಇರುವ 17, 18, 19ನೇ ಶತಮಾನದ ದಾಖಲೆಗಳನ್ನು ನೋಡಲು ಸಾಧ್ಯವಾಯಿತು. ಇನ್ನೂ ಮುಖ್ಯವಾದ ವಿಷಯವೆಂದರೆ, ಅವುಗಳ ನಡುವೆ ಇರುವ ಲಿಂಕ್‌ ಜೋಡಿಸಿ ಬ್ರಿಟಿಷರ ಕಣ್ಣಲ್ಲಿ ಭಾರತ ಹೇಗಿತ್ತು ಎಂಬುದನ್ನು ಸಮಗ್ರವಾಗಿ ಕಲ್ಪಿಸಿಕೊಳ್ಳಲು ಸಾಧ್ಯವಾಯಿತು. ಕೃಷ್ಣಮೂರ್ತಿಯವರ ವಿಷಯದಲ್ಲೂ ಹೆಚ್ಚು ಕಮ್ಮಿ ಹೀಗೆ ಆಯಿತು. ಅಜೇಯ ಕಾದಂಬರಿಗಾಗಿ ಅವರು ಮಾಡಿರುವ ವಿಷಯ ಸಂಗ್ರಹಣೆಯ ಅಗಾಧತೆ, ವಿಪುಲತೆ ನೋಡಿದರೆ ಆಶ್ಚರ್ಯವಾಗುತ್ತದೆ. ದಕ್ಷಿಣಭಾರತದ, ಕರ್ನಾಟಕದ ಯುವ ಲೇಖಕರೊಬ್ಬರು ಕಾಶಿ ಮುಂತಾದ ಕಡೆಗಳಲ್ಲಿ ಸಂಚರಿಸಿ, ಅಲ್ಲಿ ದೊರೆತ ಮಾಹಿತಿಗಳನ್ನು ಕಲೆಹಾಕಿ ತಮ್ಮ ಕೃತಿಯೊಳಗೆ ಅದನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿರುವುದು ಸೋಜಿಗ ಹುಟ್ಟಿಸುತ್ತದೆ.

ರಷ್ಯನ್‌ ಭಾಷೆಯಲ್ಲಿ ತೊಲ್ಸ್‌ತಾಯ್‌ ಕುರಿತು ಬೃಹತ್‌ ಗ್ರಂಥವಿರದಿದ್ದಿದ್ದರೆ ಹೇಗಿರುತ್ತಿತ್ತು ಹಾಗೆ ಒಂದು ಪರಿಸ್ಥಿತಿ ಈಗಲೂ ಹಿಂದಿ ಸಾಹಿತ್ಯದಲ್ಲಿದೆ. ಅದೆಂದರೆ ಭಗತ್‌ ಸಿಂಗ್‌, ವಿಶ್ವನಾಥ ವೈಶಂಪಾಯನ, ಸುಖದೇವ್‌, ರಾಜಗುರು ಮುಂತಾದವರಿಗೆ ನಾಯಕನಾಗಿದ್ದ ಚಂದ್ರಶೇಖರ ಆಜಾದನ ಜೀವನ ಕುರಿತು 700-800 ಪುಟಗಳ ಉತ್ಕೃಷ್ಟ ಗ್ರಂಥ ಹಿಂದಿಯಲ್ಲಿ ಈವತ್ತಿಗೂ ಇಲ್ಲ. ಆದರೆ, ಕೃಷ್ಣಮೂರ್ತಿಯವರ ಅನ್ವೇಷಣೆಯ ಕಾರಣದಿಂದ ಕನ್ನಡದಲ್ಲಿ ಆಜಾದ್‌ ದೊರೆತ. ಸಾಂಸ್ಕತಿಕ ಫೆನಾಮಿನಾ ಏನು ಎಂಬುದಕ್ಕೆ ಇದೊಂದು ಉದಾಹರಣೆ. ಭಗತ್‌ ಸಿಂಗ್‌ ಪ್ರಸಿದ್ಧನಾದಷ್ಟು ಉತ್ತರಭಾರತದಲ್ಲಿ ಅಜಾದ್‌ ಬೇರೆ ಬೇರೆ ಕಾರಣಗಳಿಂದ ಎಷ್ಟು ಪ್ರಸಿದ್ಧನಾಗಬಹುದಿತ್ತೋ ಅಷ್ಟು ಪ್ರಸಿದ್ಧನಾಗಲಿಲ್ಲ. ಬಾಲಿವುಡ್‌ನ‌ ಪ್ರಸಿದ್ಧ ನಟ, ನಿರ್ದೇಶಕ, ನಿರ್ಮಾಪಕ ಮನೋಜ್‌ ಕುಮಾರ್‌ ಒಮ್ಮೆ ಬಾಬು ಅವರನ್ನು ಉತ್ತರದಲ್ಲಿ ಭಗತ್‌ಸಿಂಗ್‌ ಮನೆಮಾತು. ಆಜಾದ್‌ ಅವನಷ್ಟು ಪ್ರಸಿದ್ಧನಲ್ಲ. ಕರ್ನಾಟಕದಲ್ಲಿ ಆಜಾದ್‌ ಇಷ್ಟು ಪ್ರಸಿದ್ಧ ಹೇಗಾದ? ಎಂದು ಪ್ರಶ್ನಿಸಿದ್ದುಂಟು. ಇದಕ್ಕೆ ಕಾರಣ ಬಾಬು ಅವರ ಅಜೇಯ ಕೃತಿ ಎಂಬುದರಲ್ಲಿ ಅನುಮಾನಗಳಿಲ್ಲ. ಆದರೆ ಕೃಷ್ಣಮೂರ್ತಿಯವರ ಜ್ಞಾನಾನ್ವೇಷಣೆ, ಕ್ರಾಂತಿಕಾರಿಗಳ ಜೀವನ ಅವರು  ದೇಶಕ್ಕಾಗಿ ಪಟ್ಟ ಕಷ್ಟ, ಬಲಿದಾನದ ಮೇಲಿನ ಅಪಾರ ಗೌರವದ ಕಾರಣದಿಂದ ಝಾನ್ಸಿ ರಾಣಿ, ತಾತ್ಯಾ ಟೋಪಿ, ಕುವರಸಿಂಹ, ಆಜಾದ್‌, ಭಗತ್‌, ಫ‌ಡಕೆ, ಬಾಘಾ ಜತಿನ್‌, ಚಿದಂಬರ ಪಿಳೈ ಸುಬ್ರಹ್ಮಣ್ಯ ಭಾರತಿ, ಸಾವರ್ಕರ್‌ ಇವರ ಜೀವನದ ಚಿತ್ರಣ ಕನ್ನಡಿಗರಿಗೆ ದೊರೆತಿದೆ. ಕುವೆಂಪು ಇರದಿದ್ದರೆ ಮಲೆನಾಡಿನ ಅಪೂರ್ವ ಲೋಕ, ಅದರದ್ದೇ ಘನ ವ್ಯಕ್ತಿತ್ವ ಕನ್ನಡಕ್ಕೆ ಸಿಗುತ್ತಿರಲಿಲ್ಲ. ಬಾಬು ಅವರು ಬರೆಯದಿದ್ದರೆ ಈ ವಿಷಯವನ್ನು ಇಷ್ಟು ದೀರ್ಘ‌ವಾಗಿ ಬೇರೆಯವರು ಬರೆಯುತ್ತಿರಲಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಇನ್ನೊಂದು ವಿಷಯವೆಂದರೆ ಅವರು ಬಾಲ್ಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಗಳಿಗೆಗೆ ಸಾಕ್ಷಿಯಾದವರು. ಆಗಿನ ಮಲ್ಲೇಶ್ವರದಲ್ಲಿ ಎಲ್ಲೆಲ್ಲಿ ಆಗಸ್ಟ್‌ 15ರಂದು ಭಾರತದ ಧ್ವಜ ಹಾರುತ್ತಿತ್ತು ಎಂದು ಖಚಿತವಾಗಿ ಹೇಳಬಲ್ಲವರು! 

ಜಿ. ಬಿ. ಹರೀಶ

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.