ಕ್ಷಯ ರೋಗದ ಪತ್ತೆ ಮಾಡುವಿಕೆ ಮತ್ತು ಚಿಕಿತ್ಸೆಯ ಹೊಸ ಮಾರ್ಗದರ್ಶಿ


Team Udayavani, Apr 1, 2018, 6:15 AM IST

Tuberculosis.jpg

ಹಿಂದಿನ ವಾರದಿಂದ-  ಕ್ಷಯ ರೋಗದ ಚಿಕಿತ್ಸೆಯ ಬಗೆಗಳು

1. CBNAAT (GENE X PERT)  ಫ‌ಲಿತಾಂಶದಲ್ಲಿ ಕಫ‌ ಅಥವಾ ದೇಹದ ಇತರ ಯಾವುದೇ ಮಾದರಿಯಲ್ಲಿ ಸೂಕ್ಷ್ಮಾಣುಗಳು ಇವೆ ಮತ್ತು  RIFAMPICIN SENSITIVE ಅಂತಿದ್ದರೆ ಆ ರೋಗಿಗೆ CATEGORY I (ONE)   ಚಿಕಿತ್ಸೆ  (2 ತಿಂಗಳು ದಿನಂಪ್ರತಿ HREZ  ಮಾತ್ರೆಗಳು ಅನಂತರ 4 ತಿಂಗಳು ದಿನಂಪ್ರತಿ HRE  ಮಾತ್ರೆಗಳು) ಪ್ರಾರಂಭಿಸುವುದು. 

ಕಫ‌ ಪರೀಕ್ಷೆ ಆಧಾರದ ಮೇಲೆ ಈ ಮೊದಲೇ ಈ ಚಿಕಿತ್ಸೆ ಆರಂಭಿಸಿದ್ದರೆ ಅದನ್ನೇ 6 ತಿಂಗಳ ಕೊನೆಗೆ ಹಾಗೂ 6 ತಿಂಗಳ ಕೂಸಿಗೆ MICROSCOPY  ಮೂಲಕ ಕಫ‌ ಪರೀಕ್ಷೆ ಮಾಡಿಸಿ ಅದರಲ್ಲಿ ಸೂಕ್ಷ್ಮಾಣುಗಳು ಇಲ್ಲ ಎಂಬ ಫ‌ಲಿತಾಂಶ ಬಂದಲ್ಲಿ ರೋಗಿಯು ಕ್ಷಯ ರೋಗ ಮುಕ್ತ ಎಂದು ಪರಿಗಣಿಸಿ ಆರು ತಿಂಗಳ ಕೊನೆಗೆ ಚಿಕಿತ್ಸೆಯಿಂದ ಬಿಡುಗಡೆಗೊಳಿಸುವುದು.

2. CBNAAT ಫ‌ಲಿತಾಂಶ RIFAMPICIN RESISTANCE ಎಂದು ಕಂಡುಬಂದರೆ ಆ ರೋಗಿಯು DRUG RESISTANT TUBERCULOSIS  ನಿಂದ ಬಳಲುತ್ತಿದ್ದಾರೆ ಎಂದು ಪರಿಗಣಿಸಬೇಕಾಗುವುದು. ಅಲ್ಲದೆ ಅವರಿಗೆ ಕೂಡಲೇ ಸಾಂಪ್ರದಾಯಿಕವಾಗಿ ನೀಡುವ ಕಡಿಮೆ ಸಮಯದ (9-11 ತಿಂಗಳು) ಚಿಕಿತ್ಸೆ ತಾತ್ಕಾಲಿಕವಾಗಿ ಪ್ರಾರಂಭಿಸಬೇಕು. RIFAMPICINE RESISTANCE ಫ‌ಲಿತಾಂಶ ಬಂದ ಕೂಡಲೇ CBNAAT ಪ್ರಯೋಗಾಲಯದಿಂದ ಈ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಈಖಖ DST-CULTURE   ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ. ಅಂತಹ ಪ್ರಯೋಗಾಲಯಗಳು ನಮ್ಮ ರಾಜ್ಯದಲ್ಲಿ ಕೇವಲ ಬೆಂಗಳೂರು ಹುಬ್ಬಳ್ಳಿ ರಾಯಚೂರಿನಲ್ಲಿವೆ. ಅಲ್ಲಿ ಆ ರೋಗಿಯು ಮಾದರಿಯನ್ನು ಕ್ಷಯರೋಗದ Second Line  ಔಷಧಗಳನ್ನು Line Probeassay  ಮೂಲಕ ಔಷಧ  Sensitivity ಪತ್ತೆ ಹಚ್ಚಿ ಆ ರೋಗಿಗೆ ಸೂಕ್ತವಾದ DR-TB ಚಿಕಿತ್ಸಾ Regemen ಸೂಚಿಸಲಾಗುತ್ತದೆ. 

ಅದರಂತೆ ರೋಗಿಗೆ ಒಂದು ವರ್ಷದಿಂದ 2 ವರ್ಷಕ್ಕೂ ಅಧಿಕವಾದ ದೀರ್ಘ‌ಕಾಲೀನ ಚಿಕಿತ್ಸೆ ಪಡೆಯಬೇಕಾಗಬಹುದು. 
ರೋಗಿಯು ಈ ಚಿಕಿತ್ಸೆಯನ್ನು ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿರುವ/ಸ್ಥಾಪಿಸುತ್ತಿರುವ DR-TB CENTRE ಗಳಲ್ಲಿ ಉಚಿತವಾಗಿ ಪಡೆಯಬಹುದು.

ಈ ಎಲ್ಲಾ ಪರೀಕ್ಷೆಗಳು, ಚಿಕಿತ್ಸೆಗಳು ಯಾವುದೇ ರೋಗಿಗೆ ಉಚಿತವಾಗಿದ್ದು ರೋಗಿಗೆ ತಿಂಗಳ ಮಾಸಾಶನದೊಂದಿಗೆ ಚಿಕಿತ್ಸಾ ಕೇಂದ್ರಗಳಿಗೆ ಪ್ರಯಾಣಿಸಲು ಪ್ರಯಾಣ ಭತ್ತೆಯನ್ನು ಸಹ ನೀಡಲಾಗುತ್ತದೆ.

ಯಾವುದೇ ಖಾಸಗೀ ವೈದ್ಯರುಗಳು ಕೂಡ ತಮ್ಮ ರೋಗಿಗಳಿಗಾಗಿ ಈ Diagnostic Servicesಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದ್ದು ಸಂಬಂಧಪಟ್ಟ ಔಷಧಗಳನ್ನು ಸಹ ಉಚಿತವಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಿಂದ ಪಡೆದುಕೊಂಡು ತಮ್ಮ ಆಸ್ಪತ್ರೆಗಳಲ್ಲಿ ಸಹ ಸೂಕ್ತ ಕಾಯಿಲೆ ಹರಡುವ ನಿರೋಧಕ ಕ್ರಮಗಳನ್ನು ಅನುಸರಿಸಿ ನೀಡಬಹುದಾಗಿದೆ. ಚಿಕಿತ್ಸೆ ನೀಡುವ ಪ್ರತೀ ಖಾಸಗಿ ವೈದ್ಯರಿಗೆ ಸಹ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈಗ ಪ್ರತೀ ವೈದ್ಯರು (ಖಾಸಗಿ ಮತ್ತು ಸರಕಾರಿ) ಕ್ಷಯ ರೋಗವನ್ನು ಪತ್ತೆ ಹಚ್ಚಿದ ಕೂಡಲೇ ಅದರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ TB Notification-Resporting Format ಮೂಲಕ ನೀಡುವುದು ಅಗತ್ಯವಾಗಿದೆ. Computer ಅಥವಾ Smart Phone ಇರುವವರು.NIKSHAY ಎಂಬ Software  ಉಪಯೋಗಿಸಿ ಆ ಮೂಲಕ Notification  ಮಾಡಬಹುದಾಗಿದೆ. ಹೀಗೆ ಮಾಡಿದ ಪ್ರತೀ ರೋಗಿಯ ಮಾಹಿತಿಗೆ ಸರಕಾರದಿಂದ ಪ್ರೋತ್ಸಾಹ ಧನ ಮತ್ತು ಆ ರೋಗಿಯ ಚಿಕಿತ್ಸೆಗೆ ಉಚಿತ ಔಷಧ ಸಹ ಇಲಾಖೆಯಿಂದ ನೀಡಲಾಗುವುದು. ವೈದ್ಯರು ಇಲಾಖೆಗೆ ಹೀಗೆ Notification ಮಾಡಿದ ನಂತರ ಇಲಾಖೆಯ ಕಾರ್ಯಕರ್ತರು ರೋಗಿ ನಿಗದಿತ ಸಮಯದವರೆಗೆ ಈ ಚಿಕಿತ್ಸೆ  ಪಡೆದುಕೊಂಡು ರೋಗದಿಂದ ಗುಣಮುಖರಾಗುವುದನ್ನು ಖಾತರಿಪಡಿಸಿಕೊಳ್ಳುತ್ತಾರೆ. 

ರೋಗ ಚಿಕಿತ್ಸೆ ಪತ್ತೆ ಹಚ್ಚಲು 
ಹಾಗೂ ಚಿಕಿತ್ಸೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಾಗಿ ಆಯಾ ಜಿಲ್ಲೆಯಲ್ಲಿರುವ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ PPM COORDINATOR, ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕರು ಹಾಗೂ ಕ್ಷಯ ರೋಗ ಆರೋಗ್ಯ ವೀಕ್ಷಕರಿಂದ ಪಡೆಯಬಹುದಾಗಿದೆ.

ಟಾಪ್ ನ್ಯೂಸ್

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ

Marsh-webster

Border-Gavaskar Trophy: ಮಿಚೆಲ್‌ ಮಾರ್ಷ್‌ ಗಾಯಾಳು; ವೆಬ್‌ಸ್ಟರ್‌ ಬ್ಯಾಕಪ್‌ ಆಟಗಾರ

Bajarang-Poonia

Doping Test: ಕುಸ್ತಿಪಟು ಬಜರಂಗ್‌ ಪೂನಿಯಾಗೆ ನಾಲ್ಕು ವರ್ಷ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.