ಕಾಸರಗೋಡು ಭಾಗದ ಕ್ರೈಂ ಸುದ್ದಿಗಳು
Team Udayavani, Apr 1, 2018, 6:35 AM IST
ವಾರಂಟ್ ಆರೋಪಿಯ ಬಂಧನ
ಕಾಸರಗೋಡು: ಅಮಾನ್ಯ ಬ್ಯಾಂಕ್ ಚೆಕ್ ಪ್ರಕರಣಕ್ಕೆ ಸಂಬಂಧಿಸಿ ಕಲ್ಲಿಕೋಟೆ ಸ್ಪೆಷಲ್ ಜೆ.ಎಫ್.ಸಿ.ಎಂ. ನ್ಯಾಯಾಲಯ ಹೊರಡಿಸಿದ ವಾರಂಟ್‌ನನ್ವಯ ಚಟ್ಟಂಚಾಲ್ ಪಾದೂರು ಹೌಸ್‌ನ ಅಬ್ದುಲ್ ಇರ್ಷಾದ್(27)ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆತನನ್ನು ಕಲ್ಲಿಕೋಟೆಗೆ ಒಯ್ಯಲಾಯಿತು.
ಮಟ್ಕಾ ದಂಧೆ : ಇಬ್ಬರ ಬಂಧನ
ಪೆರ್ಲ: ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ನಲ್ಕ ನಿವಾಸಿ ಚಂದ್ರಶೇಖರ ಮತ್ತು ಅಡ್ಯನಡ್ಕದ ಲೋಕೇಶ್ ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದು 570 ರೂ. ವಶಪಡಿಸಿಕೊಂಡಿದ್ದಾರೆ.
ಲಾರಿ ಢಿಕ್ಕಿ : ಬೈಕ್ ಸವಾರರಿಗೆ ಗಾಯ
ಕುಂಬಳೆ: ಕುಂಬಳೆ ರಾ.ಹೆದ್ದಾರಿಯಲ್ಲಿ ಲಾರಿ ಢಿಕ್ಕಿ ಹೊಡೆದು ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮೊಗ್ರಾಲ್ ಕೋಟ ರೋಡ್‌ನ ಇಸ್ಮಾಯಿಲ್ ಅಜಿಶರ್(20) ಮತ್ತು ಆತನ ತಾಯಿ ಹಾಜಿರ(40) ಗಾಯಗೊಂಡಿದ್ದಾರೆ.
ನ್ಯಾಯವಾದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ನ್ಯಾಯವಾದಿಯೋರ್ವರು ಅವರ ಮನೆ ಬಳಿ ಗಂಭೀರ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆಂಗಳ ಇಂದಿರಾನಗರದಲ್ಲಿ ವಾಸಿಸುತ್ತಿರುವ ಕಣ್ಣೂರು ನಿವಾಸಿ ಜೋಲಿ ಅಬ್ರಹಾಂ(39) ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ತನ್ನ ತಲೆಗೆ ಯಾರೋ ಹಲ್ಲೆ ಮಾಡಿದ್ದಾರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೋದರಂಬತ್ತ್: ಯುವತಿ ನಾಪತ್ತೆ
ಕಾಸರಗೋಡು: ಉದುಮ ಕೋದರಂಬತ್ತ್ ನಿವಾಸಿಯಾದ 18 ರ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೇಳ: ಕಟ್ಟಡ ನಿರ್ಮಾಣ ಯತ್ನ ತೆರವು
ಬೇಳ: ಬೇಳ ಗ್ರಾಮ ಕಚೇರಿಯ ಬಳಿಯ ಪುರಂಬೋಕ್ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಯತ್ನವನ್ನು ಜಿಲ್ಲಾಧಿಕಾರಿ, ಪೊಲೀಸರು ತಡೆದಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ತಂದಿರಿಸಿದ ಕೆಂಪು ಕಲ್ಲುಗಳನ್ನು ಗ್ರಾಮ ಕಚೇರಿ ಪರಿಸರಕ್ಕೆ ಸ್ಥಳಾಂತರಿಸಲಾಗಿದೆ.
ಆತ್ಮಹತ್ಯೆಗೆ ಯತ್ನ : ವ್ಯಕ್ತಿಯ ರಕ್ಷಣೆ
ಕುಂಬಳೆ: ಮೊಗ್ರಾಲ್‌ನ ಲೀಗ್ ಕಚೇರಿ ಪರಿಸರದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ 42 ರ ಹರೆಯದ ವ್ಯಕ್ತಿಯನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿದ್ದಾರೆ. ಉತ್ತರ ಪ್ರದೇಶದ ಈತ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿದ್ದು, ಆದರೆ ಆ ಹಗ್ಗ ತುಂಡಾಗಿ ಆತ ಕೆಳಗೆ ಬಿದ್ದಿªದ್ದ. ಮತ್ತೆ ಮರಕ್ಕೆ ನೇಣು ಹಾಕಲು ಯತ್ನಿಸಿದಾಗ ಆತನನ್ನು ರಕ್ಷಿಸಿದರು.
ಎಂಡೋಸಲ್ಫಾನ್ : ವ್ಯಕ್ತಿ ಸಾವು
ಬೆಳ್ಳೂರು: ಎಂಡೋ ಸಂತ್ರಸ್ತ ಐತ್ತನಡ್ಕ ಮಣ್ಣಾಪು ಕಾಲನಿ ನಿವಾಸಿ ಕರಿಯ (48) ಸಾವಿಗೀಡಾದರು. ಇವರು ಬೆಳ್ಳೂರು ಪಂಚಾಯತ್ ಎಂಡೋ ಸಂತ್ರಸ್ತರ ಯಾದಿಯಲ್ಲಿ ಸೇರ್ಪಡೆಗೊಂಡಿದ್ದರು.
ಮಾದಕ ವಸ್ತು ಸಹಿತ ಇಬ್ಬರ ಬಂಧನ
ಕಾಸರಗೋಡು: ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳ ಸಹಿತ ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಮೊಹಮ್ಮದ್ ಬಿಲಾಲ್(32) ಮತ್ತು ಪಳ್ಳುರುತ್ತಿ ಚಾಲಪ್ಪ ನಿವಾಸಿ ಗ್ರೀಷ್ಮಾ(24)ಳನ್ನು ಕೊಚ್ಚಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.