ಮಯಾಮಿ ಓಪನ್ ಟೆನಿಸ್: ಇಸ್ನರ್-ಜ್ವೆರೇವ್ ಫೈನಲ್
Team Udayavani, Apr 1, 2018, 6:55 AM IST
ಮಯಾಮಿ: ಅಮೆರಿಕದ ಜಾನ್ ಇಸ್ನರ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ “ಮಯಾಮಿ ಓಪನ್ ಟೆನಿಸ್’ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಪರಸ್ಪರ ಮುಖಾಮುಖೀಯಾಗಲಿದ್ದಾರೆ.
ಶುಕ್ರವಾರ ರಾತ್ರಿಯ ಮೊದಲ ಸೆಮಿಫೈನಲ್ನಲ್ಲಿ ಜಾನ್ ಇಸ್ನರ್ ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು 6-1, 7-6 (7-2) ಅಂತರದಿಂದ ಪರಾಭವಗೊಳಿಸಿದರು. ಅನಂತರದ ಸೆಮಿಫೈನಲ್ ಹಣಾಹಣಿಯಲ್ಲಿ ಅಲೆಕ್ಸಾಂಡರ್ ಜ್ವೆರೇವ್ ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ ವಿರುದ್ಧ 7-6 (7-2), 6-2 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಪ್ರಶಸ್ತಿ ಸಮರ ಭಾರತೀಯ ಕಾಲಮಾನದಂತೆ ರವಿವಾರ ರಾತ್ರಿ 10.30ಕ್ಕೆ ಆರಂಭವಾಗಲಿದೆ.
ಈ ಸೌತ್ ಫ್ಲೋರಿಡಾ ಟೆನಿಸ್ ಕೂಟಕ್ಕೆ ಆಗಮಿಸುವ ಮುನ್ನ ಜಾನ್ ಇಸ್ನರ್ 2018ರಲ್ಲಿ ಕೇವಲ 6 ಜಯಗಳನ್ನಷ್ಟೇ ಕಂಡಿದ್ದರು. ಆದರೆ ಮಯಾಮಿಯಲ್ಲಿ ಗೆಲುವಿನ ಅಮೋಘ ಅಭಿಯಾನ ನಡೆಸಿದರು. ಜ್ವೆರೇವ್ ವಿರುದ್ಧ ಗೆದ್ದು ಬಂದರೆ ಇಸ್ನರ್ ಮೊದಲ ಎಟಿಪಿ ಪ್ರಶಸ್ತಿಯನ್ನು ಒಲಿಸಿಕೊಳ್ಳಲಿದ್ದಾರೆ.
ಮತ್ತೋರ್ವ ಸೆಮಿಫೈನಲ್ ವಿಜೇತ ಅಲೆಕ್ಸಾಂಡರ್ ಜ್ವೆರೇವ್ಗೆ ಮೊದಲ ಸೆಟ್ ಬಹಳ ಕಠಿನವಾಗಿ ಪರಿಣಮಿಸಿತು. “ಇಲ್ಲಿ ತಾನು ಬಹಳಷ್ಟು ತಪ್ಪು ಮಾಡಿದೆ, ಆದರೆ ಇದು ಫೈನಲ್ನಲ್ಲಿ ಮರುಕಳಿಸದಂತೆ ಎಚ್ಚರ ವಹಿಸುವೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಜೈಪುರ್ ಮೇಲೆ ಪಾಟ್ನಾ ಸವಾರಿ
ODI; ಹ್ಯಾರಿಸ್ ರೌಫ್ ಗೆ ಹೆದರಿದ ಆಸೀಸ್ : 9 ವಿಕೆಟ್ಗಳಿಂದ ಗೆದ್ದ ಪಾಕಿಸ್ಥಾನ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್ರೌಂಡರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.