ಅಡಿಕೆ ಕಳವು ಪ್ರಕರಣ: ಓರ್ವನ ಬಂಧನ


Team Udayavani, Apr 1, 2018, 6:00 AM IST

14.jpg

ಉಪ್ಪಿನಂಗಡಿ: ಅಡಿಕೆ ಕಳವು ಪ್ರಕರಣವನ್ನು ವಾರದೊಳಗೆ ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿ, ಆತನಿಂದ 1 ಕಾರು ಸಹಿತ ಒಟ್ಟು 4.25 ಲ. ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೌಕ್ರಾಡಿ ಗ್ರಾಮದ ನೆಲ್ಯಾಡಿ ಬಳಿಯ ಕುಂಡಡ್ಕ ನಿವಾಸಿ ಸರ್ಪ ರಾಜ್‌ ಯಾನೆ ಹುಸೈನ್‌ ಸರ್ಫ್ರಾಜ್‌ (30) ಬಂಧಿತ ಆರೋಪಿ. ಈತನ ನೆರೆಮನೆಯವನಾದ ಅಶ್ಫಾಕ್‌  ಪೊಲೀಸರ ಕಾರ್ಯಾಚರಣೆ ಸಂದರ್ಭ  ತಪ್ಪಿಸಿಕೊಂಡಿದ್ದಾನೆ. 

ಮಠದ ಕೆರೆಮೂಲೆ ನಿವಾಸಿ ಮಹಮ್ಮದ್‌ ಹನೀಫ್ ಅವರ ನೆಲ್ಯಾಡಿ ಯಲ್ಲಿರುವ ಎಚ್‌. ಎನ್‌. ಸುಪಾರಿ ಟ್ರೇಡರ್ನಿಂದ  ಮಾ.25ರಂದು ರಾತ್ರಿ ಅಂಗಡಿಯ ಮಾಡಿನ ಹಂಚು ತೆಗೆದು ಒಳ ನುಗ್ಗಿದ ಆರೋಪಿಗಳು 520 ಕೆ.ಜಿ. ಅಡಿಕೆ ಕಳವು ಮಾಡಿದ್ದರು. ಸೋಮವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನ  ಬೆಳಕಿಗೆ ಬಂದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿತ್ತು. 

ಕಳ್ಳರ ಪತ್ತೆಗಾಗಿ ಉಪ್ಪಿನಂಗಡಿ  ಠಾಣಾ ಉಪ ನಿರೀಕ್ಷಕ ನಂದ ಕುಮಾರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ತನಿಖೆ ಕೈಗೆತ್ತಿಕೊಂಡಿದ್ದರು. ಮಾ. 31ರಂದು ಮುಂಜಾನೆ  ಬಿಳಿಯೂರು ಕಡೆಯಿಂದ ವ್ಯಕ್ತಿಗಳಿಬ್ಬರು ಕಾರಿನಲ್ಲಿ ಅಡಿಕೆ ತುಂಬಿಸಿಕೊಂಡು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು 34ನೇ ನೆಕ್ಕಿಲಾಡಿ ಗ್ರಾಮದ ಕರುವೇಲುನಲ್ಲಿ ಕಾರನ್ನು ತಡೆದು ನಿಲ್ಲಿಸಿದಾಗ,  ಅಡಿಕೆ ಇರುವುದು ಪತ್ತೆಯಾಗಿತ್ತು.  ವಿಚಾರಣೆ ನಡೆಸಿದಾಗ ಇದನ್ನು ನೆಲ್ಯಾಡಿಯ ಅಂಗಡಿಯಿಂದ ಕಳವುಗೈದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.  ಬಂಧಿತ ಸರ್ಪರಾಜ್‌ ವಿದೇಶದಿಂದ ಬಂದಿದ್ದು, ಕಳ್ಳತನವಾದ ಅಡಿಕೆ ಅಂಗಡಿಯಿದ್ದ ಕಟ್ಟಡದ ಮಾಲಕನಾಗಿದ್ದಾನೆ.

ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿಕಾಂತೇ ಗೌಡ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಜಿತ್‌ ಕುಮಾರ್‌, ಪುತ್ತೂರು ಉಪವಿಭಾಗದ ಡಿವೈಎಸ್ಪಿ  ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಎಂ. ಗೋಪಾಲ ನಾಯ್ಕ ಹಾಗೂ ಉಪ್ಪಿನಂಗಡಿ  ಪೊಲೀಸ್‌ ಠಾಣಾ ಉಪ ನಿರೀಕ್ಷಕ ನಂದಕುಮಾರ್‌  ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಬಂದಿ ವರ್ಗದ ಹರಿಶ್ಚಂದ್ರ, ಪ್ರವೀಣ್‌ ರೈ, ಜಗದೀಶ್‌, ಇರ್ಷಾದ್‌,  ಶ್ರೀಧರ್‌, ಚಾಲಕ ನಾರಾಯಣ ಗೌಡ ಮತ್ತು ನೆಲ್ಯಾಡಿ ಹೊರಠಾಣಾ ಎಎಸ್‌ಐ ಚೆನ್ನಪ್ಪ ಗೌಡ ಮತ್ತು ಸಿಬಂದಿ ಶೇಖರ ಗೌಡ ಹಾಗೂ ದ.ಕ. ಜಿಲ್ಲಾ ಗಣಕ ಯಂತ್ರ ಸಿಬಂದಿ ವರ್ಗದ ಸಂಪತ್‌ ಮತ್ತು ದಿವಾಕರ್‌ ಭಾಗವಹಿಸಿದ್ದರು.  

ಪ್ರಶಂಸೆ
ಪ್ರಕರಣವನ್ನು ಶೀಘ್ರವಾಗಿ  ಭೇದಿಸಿದ ತಂಡಕ್ಕೆ  ಮೇಲಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂಗಡಿ ಪಕ್ಕದ ಖಾಲಿ ಕೋಣೆಯಲ್ಲಿ  ತುಂಬಿಸಿಟ್ಟಿದ್ದ ಆರೋಪಿಯ ಮಾಲಕತ್ವದ ಆರು ಕೋಣೆಗಳ ಪೈಕಿ ಅಡಿಕೆ ಅಂಗಡಿಯ ಪಕ್ಕದ ಕೊಠಡಿ ಆರು ತಿಂಗಳಿಂದ ಖಾಲಿ ಇದೆ. ಸ್ನೇಹಿತನ ಸಹಕಾರದಿಂದ  ಕಳವು ಸಂಚು ರೂಪಿಸಿದ ಸರ್ಫ್ರಾಜ್‌ ಕೋಣೆಯ ಛಾವಣಿಯ ಹಂಚು ತೆಗೆದು ಒಳ ನುಗ್ಗಿ ಏಣಿ ಇಟ್ಟು  ಸತತ ನಾಲ್ಕು ಗಂಟೆಗಳಲ್ಲಿ 30-40 ಕೆ.ಜಿ. ಗೋಣಿಯಲ್ಲಿ ಕಟ್ಟಿ ಸಂಗ್ರಹಿಸಿಟ್ಟ 520 ಕೆ.ಜಿ.  ಅಡಿಕೆಯನ್ನು  ಖಾಲಿ ಕೋಣೆಯಲ್ಲಿ ಒಟ್ಟುಗೂಡಿಸಿದ್ದಾನೆ.

ಟಾಪ್ ನ್ಯೂಸ್

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ

Belthangady; ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ

5

Punjalkatte: ರಾಷ್ಟ್ರೀಯ ಹೆದ್ದಾರಿ ಬದಿ ಕಸದ ರಾಶಿ; ಕ್ರಮಕ್ಕೆ ಆಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.