ಕುಕ್ಕರ್ ಪ್ರಷರ್: 659 ಕುಕ್ಕರ್,ಇಸ್ತ್ರಿ ಪೆಟ್ಟಿಗೆ,ಭಾರಿ ಹಣ ವಶ
Team Udayavani, Apr 1, 2018, 6:00 AM IST
ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆಗಿನ್ನೂ ಅಧಿಸೂಚನೆಯೇ ಪ್ರಕಟವಾಗಿಲ್ಲ, ಆಗಲೇ ರಾಜ್ಯದ ಮತದಾರರ ಸೆಳೆಯಲು ಹಣ, ಉಡುಗೊರೆ ಹಂಚಿಕೆ ಸೇರಿದಂತೆ ನಾನಾ ಕಸರತ್ತುಗಳು ತುಸು ಜೋರಾಗಿಯೇ ಶುರುವಾಗಿವೆ.
ಈ ಬಾರಿಯ ಚುನಾವಣೆಯ ಆಮಿಷ ನೀಡಲು ಹೋಗಿ ಸಿಕ್ಕಿಹಾಕಿಕೊಂಡವರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಅವರೇ ಮೊದಲಿಗರು. ಹೆಬ್ಟಾಳ್ಕರ್ ಅವರ ಭಾವಚಿತ್ರವುಳ್ಳ 659 ಕುಕ್ಕರ್ ಬಾಕ್ಸ್‌ಗಳಿದ್ದ ಇಡೀ ಲಾರಿಯನ್ನು ವಶಪಡಿಸಿ ಕೊಂಡಿರುವ ಚುನಾವಣಾ ಅಧಿಕಾರಿಗಳು, ಲಾರಿ ಚಾಲಕನ ವಿರುದ್ಧ ದೂರು ದಾಖಲಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಮನೆಯ ಕೂಗಳತೆ ದೂರದಲ್ಲಿರುವ ಜಾಧವ ನಗರದಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರರಿಗೆ ಹಂಚಲು ಈ ಕುಕ್ಕರ್‌ಗಳನ್ನು ತೆಗೆದು ಕೊಂಡು ಹೋಗಲಾಗುತ್ತಿತ್ತು ಎನ್ನಲಾಗಿದ್ದು, 5 ಲೀಟರ್‌ನ 659 ಪ್ರಶರ್ ಕುಕ್ಕರ್‌ಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಎ. ಬೂದೆಪ್ಪ ತಿಳಿಸಿದ್ದಾರೆ.
ಕುಕ್ಕರ್‌ಗಳ ಹಂಚಿಕೆ ಬಗ್ಗೆ ಬಿಜೆಪಿ ಮುಖಂಡ ಅನಿಲ ಬೆನಕೆ ಹಾಗೂ ಕಾರ್ಯಕರ್ತರೇ ಕಾರ್ಯಾಚರಣೆ ನಡೆಸಿದ್ದಾರೆ. ಇವರು ಬರುತ್ತಿದ್ದಂತೆ ಲಾರಿ ತಡೆಯುತ್ತಿದ್ದಂತೆ ಚಾಲಕ ಓಡಿ ಹೋಗಿದ್ದಾನೆ. ನಂತರ ಸ್ಥಳಕ್ಕೆ ಬಂದ ಹೆಬ್ಟಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಲಾರಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಇವು ವೈಯ ಕ್ತಿಕ ಕೆಲಸಕ್ಕೆ ತರಲಾಗಿದೆ ಎಂದೂ ಅವರು ಹೇಳಿದ್ದು, ಈ ವೇಳೆ ಮಾತಿನ ಚಕಮಕಿಯೂ ನಡೆದಿದೆ.
ಅಪಾರ್ಟ್‌ಮೆಂಟ್‌ನಲ್ಲೂ ಕುಕ್ಕರ್‌ಗಳು
ಬೆಳಗಾವಿ ಉತ್ತರ ಮತಕ್ಷೇತ್ರ ವ್ಯಾಪ್ತಿಯ ವಿವಂತಾ ಅಪಾರ್ಟ್‌ಮೆಂಟ್‌ನಲ್ಲೂ ಲಕ್ಷ್ಮಿ ಹೆಬ್ಟಾಳ್ಕರ್ ಅವರ ಭಾವಚಿತ್ರವುಳ್ಳ ಕುಕ್ಕರ್,ಇಸ್ತ್ರಿ ಪೆಟ್ಟಿಗೆ,ಗ್ಯಾಸ್ ಸ್ಟೌವ್‌ಗಳನ್ನು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ವಶ ಪಡಿಸಿಕೊಂಡಿದ್ದಾರೆ.ಇವುಗಳನ್ನೂ ಮತದಾರರಿಗೇ ಹಂಚುವ ಸಲುವಾಗಿಯೇ ತರಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ.
ಪ್ರಹ್ಲಾದ ಜೋಶಿ ವಿರುದ್ಧ ಪ್ರಕರಣ
ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಡಿ ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಇಲ್ಲಿನ ಜೆಎಂಎಫ್ಸಿ 3ನೇ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿದೆ. ಇಲ್ಲಿನ ಕಸಬಾಪೇಟೆ ಪೊಲೀಸ್ ಸ್ಟೇಶನ್ ವ್ಯಾಪ್ತಿಯ ಕೆಲ ಪ್ರದೇಶ ಮಿನಿ ಪಾಕಿಸ್ತಾನವಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
ದಾಖಲೆ ಇಲ್ಲದೇ ಸಾಗಿಸುತ್ತಿದ್ದ 74.50 ಲಕ್ಷ ವಶ
ಪ್ರತ್ಯೇಕ ಪ್ರಕರಣಗಳಲ್ಲಿ ಶನಿವಾರ 74.5 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಕಾರಿನಲ್ಲಿ ದಾಖಲೆ ಇಲ್ಲದ 20 ಲಕ್ಷ ರೂ. ಅನ್ನು ಶನಿವಾರ ವಶಪಡಿಸಿಕೊಳ್ಳಲಾಗಿದೆ. ನಿಪ್ಪಾಣಿ ಸಮೀಪದ ಕೊಗನೊಳ್ಳಿ ಚೆಕ್ ಪೋಸ್ಟ್‌ನಲ್ಲಿ ಈ ಹಣ ಸಿಕ್ಕಿದ್ದು,ಇಬ್ಬ ರನ್ನು ವಶಕ್ಕೆ ಪಡೆಯಲಾಗಿದೆ. ಈ ಮಧ್ಯೆ, ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 50 ಲಕ್ಷ ರೂ.ಅನ್ನು ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಕ್ರಾಸ್ ಬಳಿಯ ರಾಯಚೂರು- ಬಾಚಿ ರಾಷ್ಟ್ರೀಯ ಹೆದ್ದಾರಿ ಮೇಲೆ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದಾದ ಅರ್ಧ ಗಂಟೆಯಲ್ಲೇ ಮತ್ತೂಂದು ಕಾರಿನಲ್ಲಿ 4.50 ಲಕ್ಷ ಪತ್ತೆಯಾಗಿವೆ.
ರಾಮದುರ್ಗ ಮೂಲದ ಶಿವಕುಮಾರ ಕೋವಳ್ಳಿ ಎಂಬುವವರು ತಮ್ಮ ಕಾರಿನ ಡಿಕ್ಕಿಯಲ್ಲಿ 4.50 ಲಕ್ಷ ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ತಪಾಸಣೆ ಮಾಡಿದ್ದು, ಸೂಕ್ತ ದಾಖಲಾತಿ ಇಲ್ಲದ ಕಾರಣ ಜಪ್ತಿ ಮಾಡಿದ್ದಾರೆ.
ಮಂಜುಗೆ ನೋಟಿಸ್
ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರವಾಸಿ ಮಂದಿರದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಇನ್ನೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,ಸಚಿವ ಎ.ಮಂಜುಗೆ ನೋಟಿಸ್ ಜಾರಿ ಮಾಡಿದ್ದಾರೆ. ಕೆಲ ಮಾಧ್ಯ ಮಗಳಲ್ಲಿ ಈ ಬಗ್ಗೆ ಸುದ್ದಿ ಯಾದ ತಕ್ಷ ಣವೇ ಕಾರ್ಯ ಪ್ರವೃತ್ತರಾದ ನೀತಿ ಸಂಹಿತೆ ಜಾರಿ ತಂಡವು ಸಚಿವರ ಕಚೇರಿಗೆ ಬೀಗ ಹಾಕಿ ಹೊರಟು ಹೋಯಿತು.
ಬಾಂಗ್ಲಾದಿಂದ ರಾಜ್ಯಕ್ಕೆ ಖೋಟಾ ನೋಟು
ಹೈದರಾಬಾದ್: ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ 10 ಲಕ್ಷ ರೂ. ಮುಖಬೆಲೆಯ 2000 ರೂ.ಗಳ ಖೋಟಾನೋಟು ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕಂದಾಯ ಜಾಗೃತಿ ದಳ (ಡಿಆರ್‌ಐ) ಹೈದರಾಬಾದ್‌ನಲ್ಲಿ ಬಂಧಿಸಿದೆ. ಈ ಹಣವನ್ನು ಕರ್ನಾಟಕದಲ್ಲಿ ಚುನಾವಣೆಯ ವೇಳೆ ಹಂಚಲು ತರಲಾಗುತ್ತಿತ್ತು ಎಂದು ಹೇಳಲಾಗಿದೆ. ಬೆಂಗಳೂರಿನ ಈ ಇಬ್ಬರನ್ನು ಈಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ವಿಶಾಖಪಟ್ಟಣಂ ಬಳಿ ಶನಿವಾರ ಬೆಳಗ್ಗೆ ಬಂಧಿಸಲಾಗಿದೆ. ಇವರ ಬ್ಯಾಗ್‌ನಲ್ಲಿ ಒಟ್ಟು 510 ನೋಟುಗಳು ಇದ್ದವು.
ಖೂಬಾ ಇಂದು ರಾಜೀನಾಮೆ
ಜೆಡಿಎಸ್ ತೊರೆ ಯಲು ಸಿದ್ಧವಾಗಿರುವ ಶಾಸಕ ಮಲ್ಲಿಕಾರ್ಜುನ ಖೂಬಾ ಭಾನುವಾರ ಸ್ಪೀಕರ್‌ಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.ಬಳಿಕ ಪಕ್ಷ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀ ನಾಮೆ ನೀಡಲಿದ್ದಾರೆ. ಬಿಜೆಪಿ ವರಿಷ್ಠರು ಸೂಚಿಸುವ ಯಾವುದೇ ಸಮಯದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಲಾಗುವುದು. ಜೆಡಿಎಸ್‌ನ ಸುಮಾರು 15 ಸಾವಿರ ಕಾರ್ಯಕರ್ತರು ನನ್ನೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
Sushasana Day: ಕಾಂಗ್ರೆಸ್ ಆಡಳಿತದಲ್ಲಿ ಜಂಗಲ್ ರಾಜ್ ಸೃಷ್ಟಿ: ಬಿ.ಎಲ್.ಸಂತೋಷ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.