ಹೆಂಗಿದಿಯಪ್ಪ ಬೋರೇಗೌಡ,ನಾನ್ಯಾರ ಮಗ ಗೊತ್ತಾ?


Team Udayavani, Apr 1, 2018, 6:00 AM IST

Ban01041801Medn-REVISED.jpg

ಮೈಸೂರು: ನಂಸ್ಕಾರ ಬೋರೇಗೌಡ್ರೆ… ಹೆಂಗಿದ್ದೀರಿ, ನಿನ್ನೆ-ಮೊನ್ನೆ ಏನಾರ ಮಳೆ ಆಯ್ತ, ಏನಮ್ಮ ತಾಯಿ ನಂಸ್ಕಾರ ಕಣಮ್ಮ.. ಹಸ್ತದ ಗುರುತಿಗೆ ಓಟ್‌ ಹಾಕು..ನಾನ್ಯಾರ ಮಗಾ ಗೊತ್ತಾ ಹಂಗಿದ್ರೆ ನನ್ನೆಸರೇಲ್ಲಾ ಮಗಾ..

ಇವು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಇಲವಾಲ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ರೋಡ್‌ ಶೋ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಂದಿನ ಶೈಲಿಯಲ್ಲಿ ಗ್ರಾಮಸ್ಥರನ್ನು ಹೆಸರಿಡಿದು ಮಾತನಾಡಿಸಿ ಅವರ ಯೋಗಕ್ಷೇಮ ವಿಚಾರಿಸಿದ ಪರಿ.

ಗುರುವಾರ ರಮ್ಮನಹಳ್ಳಿ ಭಾಗದ ವಿವಿಧ ಗ್ರಾಮಗಳಲ್ಲಿ ರೋಡ್‌ ಶೋ ನಡೆಸಿದ್ದ ಸಿದ್ದರಾಮಯ್ಯ ಅಂದು ರಾತ್ರಿಯೇ ಬಂಡೀಪುರ ಸಮೀಪದ ಖಾಸಗಿ ರೆಸಾರ್ಟ್‌ಗೆ ತೆರಳಿ ಶುಕ್ರವಾರ ಇಡೀ ದಿನ ವಿಶ್ರಾಂತಿ ಪಡೆದಿದ್ದರು. ಶನಿವಾರ ಬೆಳಗ್ಗೆ ಮೈಸೂರಿನ ಟಿ.ಕೆ.ಲೇಔಟ್‌ ಬಡಾವಣೆಯ ಮನೆಯಿಂದ ಹೊರಟು ಮೈಸೂರಿನಲ್ಲಿ ಉಪಾಹಾರ ಸವಿದು ಮತಬೇಟೆಗೆ ಮುಂದಾದರು.

ಮೈದನಹಳ್ಳಿ, ಮೇಗಳಾಪುರ, ಮಲ್ಲೇಗೌಡನಕೊಪ್ಪಲು, ಉಂಡವಾಡಿ, ಚಿಕ್ಕನಹಳ್ಳಿ ಸೇರಿ 22 ಗ್ರಾಮಗಳಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು.

ಭವ್ಯ ಸ್ವಾಗತ: ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರ ದಂಡು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಎತ್ತಿ ಬರಮಾಡಿಕೊಂಡರೆ, ಯುವಕರು ಪಟಾಕಿ ಸಿಡಿಸಿ, ಜೈಕಾರ ಕೂಗಿ ಸ್ವಾಗತಿಸಿದರು. 12ವರ್ಷಗಳ ನಂತರ ಈ ಗ್ರಾಮಗಳಿಗೆ ಭೇಟಿ ನೀಡಿದ್ದರೂ ಪ್ರತಿಯೊಂದು ಗ್ರಾಮದಲ್ಲೂ ಅಲ್ಲಿನ ಕೆಲ ಹಿರಿಯ ಮುಖಂಡರನ್ನು ಹೆಸರಿಡಿದು ಮಾತನಾಡಿಸುವ ಮೂಲಕ ಸಿದ್ದರಾಮಯ್ಯ ಅವರು ಆಪ್ತತೆ ಮೆರೆದದ್ದು, ಮುಖಂಡರ ಸಂತಸಕ್ಕೆ ಕಾರಣವಾಗಿತ್ತು. ಆನಂದೂರಿಗೆ ಆಗಮಿಸಿದ ಸಿದ್ದರಾಮಯ್ಯ, ಗ್ರಾಮ ಪ್ರವೇಶಿಸುವ ಮುನ್ನ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ಬಳಿಕ ತಮ್ಮ ಕಾರನ್ನೇರಿ ಗ್ರಾಮಸ್ಥರತ್ತ ಕೈ ಬೀಸುತ್ತಾ ಮುನ್ನಡೆದರೆ, ಹಿಂದಿನಿಂದ ಮತ್ತೂಂದು ವಾಹನದಲ್ಲಿ ಸ್ಥಳೀಯ ಮುಖಂಡರು, ಘೋಷಣೆ ಕೂಗುತ್ತಾ ಸಾಗಿದರು.

ಬೇಡಿಕೆಗೆ ಪುರಸ್ಕಾರ:
ಆನಂದೂರಿನಲ್ಲಿ ಹಾಕಲಾಗಿದ್ದ ಶಾಮಿಯಾನದಡಿ ಸ್ಥಳೀಯ ಮುಖಂಡರೊಂದಿಗೆ ಕುಳಿತು ಮಾತನಾಡುವಾಗ, ಈ ಮಧ್ಯೆ ಗ್ರಾಮಸ್ಥರೊಬ್ಬರು “ಸಾರ್‌ ರಾಮೇಗೌಡ್ರು ನಿಮ್‌ ಪರವಾಗಿ ಹೋರಾಟ ಮಾಡ್ತಾ ಬಂದವೆ, ಅವರಿಗೇನಾರ ಮಾಡಿಕೊಡಿ’ ಎಂದು ಬೇಡಿಕೆ ಇಟ್ಟರು.

ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ರಾಮೇಗೌಡಂಗೆ ಅದೃಷ್ಟ ಬರೋವಂಗೆ ಈ ಸಾರಿ ಏನಾರ ಮಾಡನಾ ಬುಡು’ ಅಂದರು, ಅಷ್ಟರಲ್ಲಿ ಅವರಿಗೆ ವಯಸ್ಸಾಗೋಗಿರ್ತದೆ, ಎಂದು ಹೇಳಿದಾಗ,  “ರಾಮಗೌಡಂಗೆ ಎಂಥಾ ವಯಸ್ಸಾದದು, ನನಗಿಂತ ಚಿಕ್ಕವನು ಮುಂದೆ ವಿಶೇಷ ಗಮನ ಕೊಡ್ತೀನಿ ಬುಡು’ ಅಂದರು.

ಮತಯಾಚನೆ: “ಈ ಕಾಮನಕೆರೆ ಹುಂಡಿ ನರೇಂದ್ರ ಅವನೆಲ್ಲಿ ಹೋದಾನು, ಈ ಝಡ್‌ಪಿ ಮೆಂಬರು ಅರುಣ್‌ ಕುಮಾರ ಇವರೆಲ್ಲ ನನ್ನ ಪರ ಓಡಾಡ್ತಾರೆ, 12ನೇ ತಾರೀಖು ಎಲ್ಲರೂ ಮತಗಟ್ಟೆಗೆ ಹೋಗಿ ಹಸ್ತದ ಗುರುತಿಗೆ ಮತಹಾಕಿ ನನ್ನನ್ನು ಗೆಲ್ಲಿಸಿಕೊಡಿ’ ಎಂದು ಮನವಿ ಮಾಡಿದರು.

ಉಪಕಾರ ಸ್ಮರಿಸಿದ ಸಿದ್ದು
ಆನಂದೂರಿನಲ್ಲಿ ಹಾಕಲಾಗಿದ್ದ ಶಾಮಿಯಾನದಡಿ ಸ್ಥಳೀಯ ಮುಖಂಡರೊಂದಿಗೆ ಕುಳಿತು ಗ್ರಾಮದ ಹಿರಿಯರಾದ ಬೋರೆಗೌಡರನ್ನು ಉದ್ದೇಶಿಸಿ, “ನಮಸ್ಕಾರ ಬೋರೇಗೌಡ್ರೆ, ಹಿಂದೆಲ್ಲಾ ನನ್ನ ನೋಡಿದ್ದೀರಿ, ಏನಾರ ಬದಲಾಗಿದ್ದೀನಾ, ಆನಂದೂರಿಗೆ ಅನೇಕ ಸಾರಿ ಬಂದಿದ್ದೇನೆ. ಈಗ್ಗೆ ಕೆಲ ವರ್ಷಗಳಿಂದ ಬರಲಾಗಿಲ್ಲ. ನಮ್ಮ ರಾಮೇಗೌಡ ಮೊದಲಿಂದು ನಮ್ಮ ಜತೆ ಹೋರಾಟ ಮಾಡ್ತಾ ಅವೆ, ಬಾಳ ಜನ ಹಳಬ್ರು ನಮ್‌ ಜತೆ ಇಲ್ಲಾ, ಆದ್ರೂ ಕೆಲವ್ರ ಗುರುತು ಸಿಗುತ್ತೆ, ಏನಾ ಮಗ ನಿಮ್ಮಪ್ಪಗಂಗಣ್ಣ ಎಲೆಕ್ಷನ್‌ ಬಂದ್ರೆ ಸಾಕು ಮೋಟಾರ್‌ ಬೈಕ್‌ ಹಾಕ್ಕೊಂಡು ಊರೂರು ಸುತ್ತೋನು, ಈ ಚಿಕ್ಕೇಗೌಡ ಅವರಲ್ಲ 1983ರ ನನ್ನ ಮೊದಲನೆ ಎಲೆಕ್ಷನ್‌ ತಕ್ಕಡಿ ಗುರುತಿಂದ ನಿಂತಿದ್ನಲ್ಲ ಆಗ, 1985ರ ಎಲೆಕ್ಷನ್‌ನಲ್ಲೂ ಸಹಾಯ ಮಾಡವೆÅ, ಉಪಕಾರ ಮಾಡಿರೋವ್ರನ್ನ ಸ್ಮರಿಸದೆ ಇರೋಕಾಗುತ್ತಾ’ ಎಂದರು.

ಸಿದ್ರಾಮಯ್ಯ ಎಂದ ಮಗು
ಚಿಕ್ಕನಹಳ್ಳಿಯಲ್ಲಿ ಅಜ್ಜಿಯ ಸೊಂಟದ ಮೇಲಿದ್ದ ಪುಟ್ಟ ಬಾಲಕನನ್ನು ಕೈಹಿಡಿದು ನಾನ್ಯಾರಾÉ ಎಂದು ಮುಖ್ಯಮಂತ್ರಿ ಕೇಳಿದರು. ಆ ಮಗು ಥಟ್ಟನೆ ಸಿದ್ರಾಮಯ್ಯ ಎಂದಾಗ ಖುಷಿಯಿಂದ ಕೆನ್ನೆ ಸವರಿ ಮುನ್ನಡೆದರು.

– ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.