ಭವಿಷ್ಯ ಗೊತ್ತಿಲ್ಲ, ಈ ಕ್ಷಣಕ್ಕೆ ಖುಷಿಯಾಗಿದ್ದೇನೆ

Team Udayavani, Apr 1, 2018, 11:33 AM IST

manvitha-harish.jpg

ಮಾನ್ವಿತಾ ಹರೀಶ್‌ “ಟಗರು’ ಸಿನಿಮಾಕ್ಕೆ ಆಯ್ಕೆಯಾದ ದಿನದಿಂದಲೇ ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಅದರಲ್ಲೂ ಚಿತ್ರದ ಹಾಡುಗಳು ಹಿಟ್‌ ಆದಾಗ, ಮಾನ್ವಿತಾ ಕಾಣಿಸಿಕೊಂಡ ರೀತಿ ಬಗ್ಗೆ ಮೆಚ್ಚುಗೆ ಕೇಳಿಬಂದಾಗೆಲ್ಲಾ ಅವರ ಮುಖ ಅರಳುತ್ತಿತ್ತು. ಈಗ ಆ ಎಲ್ಲಾ ಖುಷಿ ಡಬಲ್‌ ಆಗಿದೆ. ಅದಕ್ಕೆ ಕಾರಣ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ.

ಇತ್ತೀಚೆಗೆ ಒರಾಯನ್‌ ಮಾಲ್‌ನಲ್ಲಿ “ಟಗರು’ ಸಿನಿಮಾ ನೋಡಿದ ರಾಮ್‌ಗೋಪಾಲ್‌ ವರ್ಮಾ, ಸಿನಿಮಾದ ಜೊತೆಗೆ ಮಾನ್ವಿತಾ ಹರೀಶ್‌ ನಟನೆಗೆ ಫೀದಾ ಆಗಿದ್ದಾರೆ. “ಮಾನ್ವಿತಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಆಕೆಯ ನಟನೆ ಇಷ್ಟವಾಯಿತು. ನನ್ನ ಮುಂದಿನ ಸಿನಿಮಾದಲ್ಲಿ ಆಕೆಗೆ ಅವಕಾಶ ನೀಡುವ ಜೊತೆಗೆ ಆಕೆ ಕೇಳುವುದಕ್ಕಿಂತ 10 ಲಕ್ಷ ರೂಪಾಯಿ ಹೆಚ್ಚು ಸಂಭಾವನೆ ಕೊಡುತ್ತೇನೆ’ ಎಂದು ಟ್ವೀಟ್‌ ಮಾಡಿದ್ದರು.

ಜೊತಗೆ ಎರಡು ಸಾವಿರ ರೂಪಾಯಿಯನ್ನು ಟೋಕಾನ್‌ ಅಡ್ವಾನ್ಸ್‌ ಆಗಿ ಆಕೆಗೆ ನೀಡಿದ್ದಾರೆ ಕೂಡಾ. ಇವೆಲ್ಲದರಿಂದ ಮಾನ್ವಿತಾ ಖುಷಿಯಾಗಿದ್ದಾರೆ. “ಈ ಕ್ಷಣಕ್ಕೆ ನಾನು ತುಂಬಾ ಖುಷಿಯಾಗಿದ್ದೇನೆ. “ಟಗರು’ ಚಿತ್ರದ ಯಶಸ್ಸಿನಲ್ಲಿ ನನಗೇನು ಸಿಗಬೇಕಿತ್ತು ಅದು ಸಿಕ್ಕಿದೆ. ಆ ತರಹದ ಮೆಚ್ಚುಗೆ ಒಬ್ಬ ದೊಡ್ಡ ನಿರ್ದೇಶಕನಿಗೆ ಸಿಕ್ಕಾಗ ಯಾರು ತಾನೆ ಖುಷಿಯಾಗಲ್ಲ ಹೇಳಿ.

ಫ್ರೇಮ್‌ ಟು ಫ್ರೇಮ್‌ ಅದ್ಭುತವಾಗಿ ಕಾಣಿಸಿಕೊಂಡಿದ್ದೀಯ ಎಂದು ಮೆಚ್ಚುಗೆ ಸೂಚಿಸಿದ್ದು ನನಗೆ ಸಿಕ್ಕ ದೊಡ್ಡ ಗೆಲುವು. ಈ ತರಹ ನನ್ನ ಬಗ್ಗೆ ಟ್ವೀಟ್‌ ಮಾಡಿರಲಿಲ್ಲ’ ಎಂದು ಆರ್‌ಜಿವಿ ಮೆಚ್ಚುಗೆಯ ಬಗ್ಗೆ ಮಾತನಾಡುತ್ತಾರೆ ಮಾನ್ವಿತಾ. ಇನ್ನು, ಮಾನ್ವಿತಾಗೆ ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿರುವ ಆರ್‌ಜಿವಿ, ಟೋಕಾನ್‌ ಅಡ್ವಾನ್ಸ್‌ ಕೂಡಾ ಕೊಟ್ಟಿದ್ದಾರೆ.

ಹಾಗಾದರೆ, ಸಿನಿಮಾ ಯಾವಾಗ ಶುರುವಾಗುತ್ತದೆ ಎಂದರೆ ಗೊತ್ತಿಲ್ಲ ಎಂಬ ಉತ್ತರ ಮಾನ್ವಿತಾರಿಂದ ಬರುತ್ತದೆ. “ನನಗೆ ಭವಿಷ್ಯದ ಬಗ್ಗೆ ಗೊತ್ತಿಲ್ಲ. ಈ ಕ್ಷಣಕ್ಕೆ ನಾನು ಆರ್‌ಜಿವಿಯವರ ಮೆಚ್ಚುಗೆಯಿಂದ ಖುಷಿಯಾಗಿರೋದಂತೂ ನಿಜ. ಎರಡು ಸಾವಿರ ರೂಪಾಯಿಯ ನೋಟಿನಲ್ಲಿ “ಮೈ ಫ‌ಸ್ಟ್‌ ಸೈನಿಂಗ್‌ ಅಮೌಂಟ್‌ ಟು ದಿ ಮೋಸ್ಟ್‌ ವಂಡರ್‌ಫ‌ುಲ್‌ ಆ್ಯಕೆಸ್‌’ ಎಂದು ಬರೆದಿದ್ದಾರೆ.

ಅದನ್ನು ಫ್ರೇಮ್‌ ಹಾಕಿಸಿಟ್ಟಿದ್ದೀನಿ. ನನಗೆ ದುಡ್ಡು ಎಷ್ಟು ಅನ್ನೋದು ಮುಖ್ಯವಲ್ಲ. ಆದರೆ, ದೊಡ್ಡ ನಿರ್ದೇಶಕರಿಂದ ಸಿಕ್ಕ ಮೆಚ್ಚುಗೆಯಷ್ಟೇ ಮುಖ್ಯ’ ಎನ್ನುವುದು ಮಾನ್ವಿತಾ ಮಾತು. ಸದ್ಯ ಮಾನ್ವಿತಾಗೆ ಕನ್ನಡದಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿದ್ದು, ಕಥೆ ಕೇಳುವುದರಲ್ಲಿ ಬಿಝಿಯಾಗಿದ್ದಾರೆ. 

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Maryade Prashne movie trailer out

Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

5

Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.