ತಾಳ್ಮೆಯಿಂದ ಸಾಧನೆ ಸುಲಭ 


Team Udayavani, Apr 2, 2018, 3:34 PM IST

2April-17.jpg

ಯಾವುದೇ ತೀರ್ಮಾನ ಮಾಡುವಾಗ ತಾಳ್ಮೆಯಿಂದ ಸಣ್ಣ ಸಣ್ಣ ಗುರಿಯನ್ನು ಇಟ್ಟುಕೊಂಡು ಮುಂದುವರಿದರೆ ದೊಡ್ಡ ಧ್ಯೇಯವನ್ನು ಸಾಧಿಸಬಹುದು.

ಸುಂದರ ಬದುಕು ದಿಢೀರೆಂದು ಅನುಭವಕ್ಕೆ ಬರುವುದಿಲ್ಲ. ಪ್ರೀತಿ, ಸಂತೋಷ, ನೆಮ್ಮದಿ, ಸಂಪತ್ತು, ಆರೋಗ್ಯ ಇತ್ಯಾದಿಗಳನ್ನು ನಾವೇ ಸಾಧಿಸಿಕೊಳ್ಳಬೇಕು. ಹಾಗಾಗಿ ತಾಳ್ಮೆ ಬಾಳಿಗೆ ಅತೀ ಅಗತ್ಯ. ಅದಕ್ಕಾಗಿಯೇ ‘ತಾಳಿದವನು ಬಾಳಿಯಾನು’ ಎನ್ನುವ ಗಾದೆ ಮಾತೇ ರೂಢಿಯಲ್ಲಿ ಬಂದಿದೆ. ತಾಳ್ಮೆ, ಸಹನೆ, ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಎಲ್ಲ ಉತ್ತಮ ಮೌಲ್ಯಗಳು ಅನುಸರಿಸುವುದು ಕಷ್ಟ, ಆದರೆ ಸಹಿಸಿಕೊಂಡು ಯಾರು ಬದುಕು ನಡೆಸ್ತಾರೋ, ಅವರು ನಿಜವಾದ ವಿಜಯಿಗಳಾಗುತ್ತಾರೆ. 

ತಂಗಾಳಿಯು ತನುವನ್ನು ತಂಪಾಗಿಸುವ ತೆರದಿ ತಾಳ್ಮೆಯು ಮನವನ್ನು ತಂಪಾಗಿಸಬಲ್ಲದು. ಯಶಸ್ಸಿನ ಶಿಖರವನ್ನೇರಲು
ಕೇವಲ ಛಲ ಮತ್ತು ಪರಿಶ್ರಮಗಳೆಂಬ ಸಲಕರಣೆಗಳಿದ್ದರೆ ಸಾಕಾಗದು, ಅವುಗಳೊಟ್ಟಿಗೆ ತಾಳ್ಮೆ ಎಂಬ ಸದ್ಗುಣವೂ ಅಗತ್ಯ.

ತಾಳ್ಮೆ ಎಂದರೆ ಕೇವಲ ಕಾಯುವಿಕೆ ಅಲ್ಲ, ಅದು ಕಾಯುವಿಕೆಯ ಪ್ರಕ್ರಿಯೆಯಲ್ಲಿನ ನಮ್ಮ ಉತ್ತಮ ನಡವಳಿಕೆ ಕೂಡ ಹೌದು. ಮೇಲ್ನೋಟಕ್ಕೆ ಅದು ಕಹಿ ಎಂದು ಕಂಡರೂ ನೀಡುವ ಫ‌ಲ ಮಾತ್ರ ಸದಾ ಸಿಹಿ. ಒಂದು ಕ್ಷಣದ ತಾಳ್ಮೆ, ಸಾವಿರ ಕ್ಷಣಕ್ಕಾಗುವಷ್ಟು ದುಃಖವನ್ನು ತಡೆಯಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಸಮಾಜದಲ್ಲಿ ವಿವಿಧ ಸಮುದಾಯದ, ವಿವಿಧ ಮನಃಸ್ಥಿತಿಯ ಮತ್ತು ವಿವಿಧ ಜೀವನಶೈಲಿಗಳನ್ನು ಹೊಂದಿರುವ ಜನರ ಜತೆಗೆ ಬಾಳಬೇಕು ಮತ್ತು ಬೆರೆಯಬೇಕಾಗುತ್ತದೆ.

ತಾಳ್ಮೆ, ಸಹನೆಯನ್ನು ದೌರ್ಬಲ್ಯ ಎಂದು ಹೇಳುವವರೂ ಇದ್ದಾರೆ. ಆದರೆ ಚಿಂತಿಸಬೇಕಿಲ್ಲ. ಅದುವೇ ನಮ್ಮ ಶಕ್ತಿ ಎಂದು ಭಾವಿಸಿ ಮುಂದುವರಿಯಬೇಕು ಯಶಸ್ಸು ಲಭಿಸುತ್ತದೆ, ಸಾಮರ್ಥ್ಯದ ಬಗ್ಗೆ ಭರವಸೆ ಮೂಡುತ್ತದೆ. ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರವಿದೆ ಎಂಬ ಭಾವನೆಯಿಂದ ಧೃತಿಗೆಡದೆ, ದೃಢವಾಗಿದ್ದು, ಸಮಸ್ಯೆಗಳನ್ನು ಶಾಂತಚಿತ್ತದಿಂದ ಪರಿಶೀಲಿಸಿ, ಪರಿಹರಿಸಲು ಪ್ರಯತ್ನಿಸಬೇಕು. ಆಗ ಯಶಸ್ಸು ತನ್ನಿಂದ ತಾನಾಗಿಯೇ ದೊರೆಯುತ್ತದೆ.

ಮಕ್ಕಳಿಗೆ ತಾಳ್ಮೆಯ ಮಹತ್ವ ತಿಳಿಸಿ
ಸಮಾಜದಲ್ಲಿ ವಿವಿಧ ಸಮುದಾಯದ, ವಿವಿಧ ಮನಃ ಸ್ಥಿತಿಯ ಮತ್ತು ವಿವಿಧ ಜೀವನಶೈಲಿಗಳನ್ನು ಹೊಂದಿರುವ ಜನರ ಜತೆಗೆ ಬಾಳಬೇಕು ಮತ್ತು ಬೆರೆಯಬೇಕಾಗುತ್ತದೆ. ಅದಕ್ಕಾಗಿ ಚಿಕ್ಕಂದಿನಲ್ಲೇ ಮಕ್ಕಳಿಗೆ ತಾಳ್ಮೆಯ ಮಹತ್ವ ತಿಳಿಸಬೇಕಾದದ್ದು ಅತೀ ಅಗತ್ಯ. ಅದು ಅವರಿಗೆ ಹೊಸ ವಿಚಾರಗಳನ್ನು ಸುಲಭವಾಗಿ ಕಲಿಯಲು ಸಹಾಯ ಮಾಡುತ್ತದೆ. ಮಕ್ಕಳು ತರಗತಿಯ ಹೊರಗೆ ಕೆಲವು ವಿಚಾರಗಳನ್ನು ಕಲಿಯುತ್ತಾರೆ. ಇದರಿಂದ ಜೀವನದಲ್ಲಿ ಏಳಿಗೆಯನ್ನು ಕಾಣುತ್ತಾರೆ.

ಗಣೇಶ ಕುಳಮರ್ವ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.