ಬಳ್ಪ ತ್ರಿಶೂಲಿನೀ ದೇವಸ್ಥಾನ: ಬ್ರಹ್ಮರಥ ಆಗಮನ, ಸ್ವಾಗತ

Team Udayavani, Apr 2, 2018, 5:04 PM IST

2April-21.jpg

ಸುಬ್ರಹ್ಮಣ್ಯ: ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಬ್ರಹ್ಮರಥದ ಮೆರವಣಿಗೆ ನಿಂತಿಕಲ್ಲಿನಿಂದ ವಿಜೃಂಭಣೆಯಿಂದ ನಡೆಯಿತು. ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಬ್ರಹ್ಮರಥ ನಿರ್ಮಾಣದ ಬಳಿಕ ರವಿವಾರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಪುತ್ತೂರು ಮೂಲಕ ಬೆಳಗ್ಗೆ ನಿಂತಿಕಲ್ಲು ತಲಪಿದ ಬಳಿಕ ನೂರಾರು ಭಕ್ತರು ಹರ್ಷೋದ್ಗಾರದೊಂದಿಗೆ ಭಾವಪೂರ್ಣವಾಗಿ ಸ್ವಾಗತಿಸಿದರು. ನಿಂತಿಕಲ್ಲಿನಲ್ಲಿ ಕೆ.ಎಸ್‌. ಗೌಡ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಶೀನಪ್ಪ ಗೌಡ ಧ್ವಜ ಹಾರಿಸುವ ಮೂಲಕ ವಾಹನ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ ವಾಹನ ಮೆರವಣಿಗೆಯ ಮೂಲಕ ರಥವನ್ನು ಅಡ್ಡಬೈಲುವರೆಗೆ ತರಲಾಯಿತು. ಅಡ್ಡಬೈಲಿನಲ್ಲಿ ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್‌ ಕುಮಾರ್‌ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.  ಅನಂತರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತ್ರಿಶೂಲಿನೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತರಲಾಯಿತು.

ಮರುಕಳಿಸಿದ ವೈಭವ
ನೂರಾರು ವರ್ಷಗಳ ಬಳಿಕ ಇದೀಗ ಮತ್ತೆ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಹೀಗಾಗಿ ಭಕ್ತರು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು ರಥದ ಅಲಂಕಾರಕ್ಕೆ ಬೇಕಾದ ಪರಿಕರಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ನೂತನ ರಥ ಮೆರವಣಿಗೆಯ ಸಂದರ್ಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಪ್ರಮುಖರಾದ ಸದಾನಂದ ರೈ ಅರ್ಗುಡಿ, ಲಿಂಗಪ್ಪ ಗೌಡ ಕಟ್ಟ , ಶ್ರೀವತ್ಸ ಎಂ.ವಿ., ಮುರಳಿ ಕಾಮತ್‌ ಬಳ್ಪ, ಕರುಣ್‌ ರಾವ್‌, ವಿಶ್ವನಾಥ ರೈ ಸೇರಿದಂತೆ ಊರಿನ ಭಕ್ತರು ಭಾಗವಹಿಸಿದರು.

ಬ್ರಹ್ಮರಥ ಸಮರ್ಪಣೆ
ಎ. 4ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ ನಡೆದು ಸಂಜೆ ದಾನಿಗಳು ಮತ್ತು ಭಕ್ತ ಜನರಿಂದ ತ್ರಿಶೂಲಿನೀ ಅಮ್ಮನವರಿಗೆ ಬ್ರಹ್ಮರಥ ಸಮರ್ಪಣೆ ನಡೆಯಲಿದೆ. ಶ್ರೀ ಕ್ಷೇತ್ರ ಹನುಮಗಿರಿ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಅವರಿಂದ ಶ್ರೀ ಆಂಜನೇಯ ಸ್ವಾಮಿಗೆ ರಜತ ಕವಚ ಸಮರ್ಪಣೆ ನಡೆಯಲಿದೆ. ಬಳಿಕ ಎ. 5ರ ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ ನಡೆದು ಸಂಜೆ ಉತ್ಸವ ಬಲಿ ನಡೆದು ಎ. 6ರಂದು ಸಂಜೆ 9.30ಕ್ಕೆ ಬ್ರಹ್ಮರಥೋತ್ಸವ, ಸಿಡಿಮದ್ದು ಪ್ರದರ್ಶನ, ಉತ್ಸವ ಬಲಿ ನಡೆಯಲಿದೆ.

ಟಾಪ್ ನ್ಯೂಸ್

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡ ಸದೃಶ ಪ್ರಾಣಾಪಾಯದಿಂದ ಪಾರು

Mangaluru: ಕೆಪಿಟಿ ಬಳಿ ಅಪಘಾತ; ಬೈಕ್ ಸವಾರ ಪವಾಡಸದೃಶ ರೀತಿ ಪ್ರಾಣಾಪಾಯದಿಂದ ಪಾರು

River: ನದಿಯೇ ಜೀವನ ಸಾಕ್ಷಾತ್ಕಾರ!

River: ನದಿಯೇ ಜೀವನ ಸಾಕ್ಷಾತ್ಕಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Belthangady: ತೋಡಿಗೆ ಅಡಿಕೆ ಮರವೇ ಸಂಕ!

Belthangady: ತೋಡಿಗೆ ಅಡಿಕೆ ಮರವೇ ಸಂಕ!

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Chennai: ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ; ವೈಯರ್‌ ಸುತ್ತಿಕೊಂಡು ಟೆಕ್ಕಿ ಆ*ತ್ಮಹತ್ಯೆ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.