ಜಾನ್ ಇಸ್ನರ್ ಮಯಾಮಿ ಮ್ಯಾಜಿಕ್
Team Udayavani, Apr 3, 2018, 6:50 AM IST
ಮಯಾಮಿ (ಫ್ಲೋರಿಡಾ): ಅಮೆರಿಕದ ಬಿಗ್ ಸರ್ವರ್ ಖ್ಯಾತಿಯ ಜಾನ್ ಇಸ್ನರ್ “ಮಯಾಮಿ ಎಟಿಪಿ ಮಾಸ್ಟರ್’ ಟೆನಿಸ್ ಚಾಂಪಿಯನ್ ಕಿರೀಟ ಏರಿಸಿಕೊಂಡಿದ್ದಾರೆ.
ರವಿವಾರ ರಾತ್ರಿ ನಡೆದ ತೀವ್ರ ಪೈಪೋಟಿಯ ರ್ಯಾಕೆಟ್ ಸಮರದಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ 6-7 (4-7), 6-4, 6-4 ಅಂತರದಿಂದ ಗೆದ್ದು ಬಂದರು.
ಇದು ಜಾನ್ ಇಸ್ನರ್‌ಗೆ ಒಲಿದ ಮೊದಲ ಮಯಾಮಿ ಟೆನಿಸ್ ಪ್ರಶಸ್ತಿ ಎಂಬುದು ವಿಶೇಷ. ಇದಕ್ಕೂ ಮುನ್ನ 2012, 2013 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿಯೂ ಸೋಲನುಭವಿಸಿದ್ದರು. ಇದರೊಂದಿಗೆ ಪ್ರಸಕ್ತ ಋತುವಿನ ಮಯಾಮಿ ಪ್ರಶಸ್ತಿಗಳೆರಡೂ ಅಮೆರಿಕದ ಪಾಲಾದಂತಾಯಿತು. ವನಿತಾ ಸಿಂಗಲ್ಸ್‌ನಲ್ಲಿ ಸ್ಲೋನ್ ಸ್ಟೀಫನ್ಸ್ ಚಾಂಪಿಯನ್ ಆಗಿದ್ದರು. ಸ್ಟೀಫನ್ಸ್‌ಗೂ ಇದು ಮೊದಲ ಮಯಾಮಿ ಪ್ರಶಸ್ತಿ ಆಗಿತ್ತೆಂಬುದು ಉಲ್ಲೇಖನೀಯ.
ಇಸ್ನರ್ ಜಯದೊಂದಿಗೆ 2010ರ ಬಳಿಕ ಮಯಾಮಿ ಟೆನಿಸ್ ಪ್ರಶಸ್ತಿ ಅಮೆರಿಕದ ಆಟಗಾರನ ಪಾಲಾಗಿದೆ. ಅಂದು ಆ್ಯಂಡಿ ರಾಡಿಕ್ ಚಾಂಪಿಯನ್ ಆಗಿದ್ದರು.
ಅವಕಾಶ ಕೈಚೆಲ್ಲಿದ ಜ್ವೆರೇವ್
14ನೇ ಶ್ರೇಯಾಂಕದ ಜಾನ್ ಇಸ್ನರ್ ಜರ್ಮನ್ ಟೆನಿಸಿಗನ ವಿರುದ್ಧ 2 ಗಂಟೆ, 29 ನಿಮಿಷಗಳ ಹೋರಾಟ ನಡೆಸಿದರು. ಮೊದಲ ಸೆಟ್ ಅನ್ನು ಟೈ ಬ್ರೇಕರ್‌ನಲ್ಲಿ ವಶಪಡಿಸಿಕೊಂಡ ಜ್ವೆರೇವ್ ಉಳಿದೆರಡು ಸೆಟ್‌ಗಳಲ್ಲೂ ತೀವ್ರ ಪೈಪೋಟಿಯೊಡ್ಡಿದರು. ದ್ವಿತೀಯ ಸೆಟ್‌ನಲ್ಲೊಮ್ಮೆ 4-4 ಸಮಬಲ ಕಂಡುಬಂತು. ತೃತೀಯ ಸೆಟ್‌ನಲ್ಲಿ ಜ್ವೆರೇವ್ 5-4ರ ಮುನ್ನಡೆ ದಾಖಲಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಒಟ್ಟಾರೆ ಅಮೆರಿಕನ್ ಟೆನಿಸಿಗನ ಅದೃಷ್ಟ ದೊಡ್ಡದಿತ್ತು. ಈ ಸೋಲಿನೊಂದಿಗೆ ಜ್ವೆರೇವ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೇರಲು ವಿಫಲರಾದರು.
“ಇಡೀ ಕೂಟದಲ್ಲಿ ಮಿಸ್ ಮಾಡಿಕೊಂಡ ಶಾಟ್‌ಗಳಿಗಿಂತ ಹೆಚ್ಚಿನ ಶಾಟ್‌ಗಳನ್ನು ನಾನು ನಾನು ಫೈನಲ್‌ನಲ್ಲಿ ಕಾಣಬೇಕಾಯಿತು. ಅಷ್ಟೊಂದು ಕೆಟ್ಟದಾಗಿ ಆಡಿದೆ. ಆದರೆ ಇಸ್ನರ್ ಅವರನ್ನು ಎದುರಿಸುವುದು ಅಷ್ಟೊಂದು ಸುಲಭ ಸವಾಲಾಗಿರಲಿಲ್ಲ…’ ಎಂದು ಜ್ವೆರೇವ್ ನೊಂದು ನುಡಿದರು.
“ಈ ಗೆಲುವನ್ನು ವಿಶ್ಲೇಷಿಸಲಾಗುತ್ತಿಲ್ಲ. ಈ ವರ್ಷ ಕೇವಲ ಒಂದು ಎಟಿಪಿ ಪಂದ್ಯವನ್ನು ಗೆದ್ದು ಈ ಪಂದ್ಯಾವಳಿಗೆ ಆಗಮಿಸಿದ್ದೆ. ಅತ್ಯಂತ ಕೆಟ್ಟದಾಗಿ ಆಡುತ್ತ ಬಂದಿದೆ. ಆದರೆ ಮಯಾಮಿಯಲ್ಲಿ ಮ್ಯಾಜಿಕ್ ನಡೆಯಿತು’ ಎಂಬುದು ವಿಜೇತ ಜಾನ್ ಇಸ್ನರ್ ಪ್ರತಿಕ್ರಿಯೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.